ಗೆಳತಿ ನನ್ನ ಭಾವನೆಗಳನ್ನ ತುಂಬಿ
ಮನದಾಸೆಗಳನ್ನ ಮನಬಿಚ್ಚಿ
ಬರೆದೆ ನಿನಗಾಗಿ ಕವಿತೆ.
ನೀ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸೋತೆ.
ಅದೇ ಹತಾಶೆಯಲ್ಲಿ ನಾ ಸತ್ತೆ.
ಇಂದು ಪ್ರತಿ ಸಾಲುಗಳನ್ನ ಪದೇ ಪದೇ ಓದುತ್ತಿರುವೆ
ನಿನಗೆ ಅರ್ಥವಾದರೂ ನಾ
ಪ್ರಪಂಚವೇ ಬಿಟ್ಟು ಹೋಗಿರುವೆ.
ನಿನ್ನ ಮನದಾಸೆಗಳನ್ನ ಅಂದು ಬಚ್ಚಿಟ್ಟು
ಇಂದು ರೋಧಿಸುತ್ತಿರುವೆ.
ಮುಗಿದು ಹೋದ ಸಮಯದ
ಬಗ್ಗೆ ಚಿಂತಿಸಿ ಫಲವೇನು ಗೆಳತಿ.
ಅಂದೂ ನೀ ಸೋತೆ.
ಇಂದೂ ನೀ ಬದುಕಿದ್ದು ಸತ್ತೆ.
ನೀನು ಆಗಿರುವೆ ನನ್ನ ಪ್ರೀತಿಯ ಗೆಳೆಯ. ನನ್ನ ಮನದಂಗಳದಲ್ಲಿ ಕೀರ್ತಿಯ ಒಡೆಯ. ನೀನು ಕಬ್ಬಡ್ಡಿ ಯಲ್ಲಿ ಉಪಯೋಗಿಸಿವೆ ಚಾಣಕ್ಯನ ಪ್ರಮಯ. ನೀನು ಮಾಡುತ್ತಿಯ ಎಲ್ಲರನ್ನೂ ಮಾಯ. ಮಾಯೆಯನ್ನು ನೋಡಿ ಆಯಿತು ಹುಡುಗಿಯರಿಗೆ ಪ್ರೆಮದ ಗಾಯ. ನನ್ನೋಳಗಿನ ನೋವನು ಹೇಳಲು ನನಗೆ ಸ್ಪೂರ್ತಿಯ ಪ್ರಿಯ.
ಇದು ನನ್ನ ಗೆಳೆಯ ವಿಶ್ವನಾಥನ ಬಗ್ಗೆ ಇರುವ ಕಿರು ಸಾಲಿನ ಕವನದ ಚಾಯ...........
ಹಸಿರಿನ ರಾಶಿಗಳ ನಡುವಿನಲಿ
ಮಿಂಚಿನಂತೆ ಹೂಳೆದ ನಿನ್ನ ಕಂಗಳು
ಪರ್ವತಗಳಿಗೆ ದಾರಿ ತೋರಿಸುವಂತೆ
ನೀಳವಾದ ನಿಲುವು ನಿನ್ನದು
ಚಂದುಟಿಗಳಲಿ ನೀ ಬೀರುವ ಆ ನಸು ನಗು
ಅದು ನನ್ನ ಹೃದಯದ ಹೂಂಬೆಳಗು
ತಾಯಿಯಂತೆ ನಿನ್ನ ಮಮತೆ
ಗೆಳತಿಯಂತೆ ನಿನ್ನ ಆತ್ಮೀಯತೆ
ಸೋದರಿಯಂತೆ ನಿನ್ನ ಕಾಳಜಿ
ಹೋಲಿಸಲಾರೆ ನಿನ್ನ ಪ್ರೀತಿಯನ್ನು ಯಾರೊಂದಿಗು
ಇಷ್ಟೆಲ್ಲ ಗುಣವತಿ ನನ್ನ ಮಡದಿ ಇವರೇ ಭಾರತೀಯ ನಾರಿ ಹೇ ನಾರಿ ದಯಮಾಡಿ ಮುನಿಯದಿರು ಇನ್ನೂಂದು ಬಾರಿ
ನಾನು ನನ್ನದು ಎನ್ನುವುದು ಏನೂ ಇಲ್ಲ
ಪರಮಾತ್ಮನೇ ನೀನೆ ನನಗೆಲ್ಲ
ಬಾ ನನ್ನ ತಂದೆಯೇ ಸೇರಿಯಸು ನನ್ನ ಬಾಳ ದಡೆಗೆ ಅಲ್ಲಿದೆ ನನ್ನ ಮಮತೆಯ ತಾಯಿಯ
ಮಡಿಲು ಅದುವೆ ಎಲ್ಲಕ್ಕಿಂತ ಮಿಗಿಲು....
ಕಾಣೆಯಾಗಿರುವೆ ನನ್ನಿ ಮನದಿ
ಸಂಚಾರಿ ಸೂಚನೆ ತಿಳಿಸದೆ!
ಸ್ವಾಗತ ಕೋರುವ ಗೋಜಿರಲಿಲ್ಲ
ಅಂದು ಪ್ರೀತಿಯಲ್ಲಿ ಎಡವಲು.
ಕಣ್ಣಿನ ಸಲಹೆಯಲ್ಲಿ ಪ್ರಾರಂಭ....
ಕಣ್ಣಂಚಿಗು ಸಿಗುವ ಸೊಲ್ಲಿಲ್ಲವಿಂದು!
ಕನ್ನಡಿಯೆ ಬಿಂಬಿಸುತ್ತಿಲ್ಲ ಪ್ರತಿಬಿಂಬ
ನೀ ಇಲ್ಲದೆ ನನ್ನೊಂದಿಗೆ........
ನೀರಿಲ್ಲದ ಈ ಹೃದಯದ ಕೆರೆಯಲ್ಲಿ
ನಿನ್ನ ನೆನಪುಗಳ ಗೋಲಿಯಾಟ!
ಬಂದು ಬಿಡು ನನ್ನರಸಿ ಆದಷ್ಟು ಬೇಗ
ನನ್ನಿ ಹೃದಯದರಮನೆಗೆ
......................ಹಿಂತಿರುಗಿ