Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸುಗಾರನೋ... ? ಅಲೆಮಾರಿಯೋ ... ?

ನಾನೊಬ್ಬ ಕನಸುಗಾರ ಅಂದರೆ ಕನಸು ಕಾಣುವವ,
ನಾನೊಬ್ಬ ಅಲೆಮಾರಿಯೂ ಸಹ, ನನ್ನ ಮನಸ್ಸು ಕೂಡ
ನನ್ನ ಒಂದೊಂದೆ ಕನಸುಗಳನ್ನು ಕೂಡಿಟ್ಟು ಅವುಗಳಿಗೆ
ಸಿದ್ಧರೂಪ ಕೊಟ್ಟು, ಜೀವಶಕ್ತಿ ತುಂಬಿ ಅವುಗಳ
ಕಾಯ೯ಸಾಧ್ಯತೆಗಳ ಬಗ್ಗೆ ಅತ್ಯಂತ ಆಕಷ೯ಕ ಮಾತುಗಳಿಂದ ಕೊಳ್ಳುಗನಿಗೆ ಮನವರಿಕೆ ಮಾಡಿ ಕನಸುಗಳನ್ನು ಮಾರುತ್ತಿದ್ದೆ

ಒಮ್ಮೆ ಹೀಗೆ ಗ್ರಾಹಕರನ್ನು ಹುಡುಕಿಕೊಂಡು ದಿಕ್ಕು ದೆಸೆಯಿಲ್ಲದೆ ಎಲ್ಲೆಂದರಲ್ಲಿ ಅಲೆದು ಅಲೆದು ಸುಸ್ತಾಗಿ ಯಾವೂದೋ ನಾಡಿನ ದಟ್ಟ ಕಾನನದಲ್ಲಿ ಸಿಲುಕಿಕೊಂಡೆ
ಬಿಟ್ಟು ಬಿಡದೆ ಸುರಿವ ಧಾರಾಕಾರ ಮಳೆ ,ವರುಷಧಾರೆ, ಹರುಷದ ಧಾರೆ ಇಳೆಯ ಮನ ತಣಿಸುವOತ್ತಿತ್ತು
ಮಳೆಗಾಳಿ, ಗಾಳಿಯ ಜೊತೆ ಮಳೆ ಕ್ಷಣಕೊಮ್ಮೆ ದಿಕ್ಕುಬದಲಿಸುತ್ತಿತ್ತು ಪಾರಾಗಲೆಂದು ಮರವೊಂದರ ಆಸರೆಯಲ್ಲಿದ್ದೆ

ಅದೊಂದು ಅಪರೂಪದ ದೃಶ್ಯ ಆ ಗಿರಿಗಳ ಸಾಲುಗಳಲ್ಲಿ,
ಆ ಕಾಡಿನಲ್ಲಿ ,ಆ ಕಾಲುದಾರಿಯಲ್ಲಿ ಆ ಮಳೆಯಲ್ಲಿ
ಅವಳು ಒಬ್ಬಳೆ ಕೊಡೆ ಹಿಡಿದು ನಡೆದು ಬರುತ್ತಿದ್ದಳು
ಆಗೋಚರತೆಯಿಂದ ಗೋಚರತೆಯೆಡೆಗೆ
ಆಸ್ವಷ್ಟತೆಯಿಂದ ಸ್ವಷ್ಟತೆಯಡೆಗೆ ನಡೆದOತೆ
ಕೊಡೆಯಲ್ಲಾದ ರಂದ್ರಗಳು ಜಲಪಾತಗಳನ್ನೇ
ಮರುಸೃಷ್ಠಿ ಮಾಡಿದ್ದವು

ಪ್ರಕೃತಿ ತನ್ನದೇ ರಾಗ ಸಂಯೋಜನೆಯ ಸಂಗೀತ ಕಛೇರಿಯೊOದನ್ನು ಏಪ೯ಡಿಸಿತ್ತು ಗಿಡಮರ, ಎಲೆ,ಬಳ್ಳಿ
ಹಕ್ಕಿ ,ಪ್ರಾಣಿ, ಪಕ್ಷಿಗಳು, ಕ್ರಿಮಿ, ಕೀಟಗಳು ತಮ್ಮದೇ
ಆದ ರೀತಿಯಲ್ಲಿ ಶಬ್ದ ನಿಶ್ಯಬ್ದಗಳ ಜೊತೆ ದನಿಗೂಡಿಸಿದ್ದವು
ಕೆಲವೊಮ್ಮೆ ಇಂಚರದ ಇಂಪಿನoತೆ
ಕೆಲವೊಮ್ಮೆ ಭೀಕರತೆಯನ್ನು ಪಡೆದುಕೊಳ್ಳುತ್ತಿತ್ತು

ಅವಳು ನನ್ನ ಮುಂದೆ ಹಾಯ್ದು ಹೊಗುತ್ತಿರವಾಗ ಕೂಗಿ ಕರೆದು ನಾನು ಇಲ್ಲಿಗೆ ಅಪರಚಿತ ನಿಮ್ಮ ಜೊತೆ ಬರಬಹುದೆ ಎಂದು ಕೇಳಿದೆ ಸ್ವಲ್ಪ ದೂರ ಹೋಗಿ ತಿರುಗಿನೋಡಿ ಅಮಾಯಕನಂತೆ ನಿರಪಾಯಕಾರಿಯಂತೆ ಕಂಡಿದ್ದರಿಂದಲೋ ಏನೋ ಸಮ್ಮತಿಸಿದಳು

ಸ್ವಲ್ಪ ದೂರ ಹೊಗುತ್ತಿದ್ದಂತೆ ಮಳೆಯ ಆಭ೯ಟ ಕಡಿಮೆಯಾಯಿತು ಹಾಗೆ ಸಂಗೀತದ ಕಲರವ ಕೂಡ
ಮೋಡಗಳು ಚದುರಿ ಆಕಾಶ ತಿಳಿಯಾಯಿತು ನಾನು ನನ್ನ
ವೃತ್ತಿಜೀವನ, ಬದುಕು, ವ್ಯಾಪಾರದ ಸರಕು, ಉತ್ಪನ್ನಗಳು,
ಮಾರುವ ಬಗೆ, ಅವುಗಳನ್ನು ವಾಸ್ತವಕ್ಕಿಳಿಸಿ ಯಶಸ್ಸು ಗಳಿಸುವುದು ಹೇಗೆಂದು ಎಳೆ ಎಳೆಯಾಗಿ ವಿವರಿಸಿದೆ
ನನ್ನ ಮುಖ ನೋಡಿ ನಸುನಕ್ಕು ಎತ್ತಲೋ ನೋಡಿದಳು

ಅವಳು ತಾನು ಈ ಕಾಡಿನ ಮಗಳು ಇದರ ಆಳ ,ಆಗಲ, ವಿಸ್ತಾರ,ವಿಸ್ತೀಣ೯,ಖುತು ಋತುವಿಗೂ ಬದಲಾಗುವ ಈ ಕಾಡಿನ ಬಣ್ಣ ಇಲ್ಲಿನ ಜೀವ ಸಂಕುಲ,ಈ ಮಣ್ಣು, ಹೂವುಗಳು , ಈ ಪರಿಸರ ಇಲ್ಲಿನ ಅಪಾಯಗಳು
ತನ್ನ ಕಣ ಕಣಗಳಲ್ಲಿ ಬೆರೆತು ಹೋಗಿವೆ
"ಇದು ನನ್ನ ಜೀವನಕ್ರಮ, ಇದುವೇ ನನ್ನ ಜೀವನದ ಅಥ೯" ಬೇರೆಲ್ಲಿಯೂ ಹೊಂದಿಕೊಳ್ಳಲಾರೆನೆಂದೆನಿಸುತ್ತದೆ ಎಂದು ಹೇಳಿದಳು

ಆದುನಿಕತೆ ತರುವ ಸವಲತ್ತುಗಳು,ಸುಖ, ನೆಮ್ಮದಿ, ಸುರಕ್ಷತೆ ಮತ್ತು ಅದು ಒಡ್ಡುವ ಸವಾಲುಗಳು , ಕೆಡುಕುಗಳನ್ನು ಮೀರಿ ಬೆಳೆವ ಮಾನವ ಶ್ರೇಷ್ಠತೆ
ಹಾಗೆಯೇ ಪ್ರಕೃತಿ ವಿಕೋಪಗಳು ಅವನನ್ನು ವಿಧೇಯನನ್ನಾಗಿಸಿ ಕುಬ್ಜನ್ನನ್ನಾಗಿಸುವ ಪರಿ ಇತ್ಯಾದಿ ವಿಷಯಗಳ ಬಗ್ಗೆ ಸವಿವರವಾಗಿ ಹರಟುತ್ತ ಸಾಗಿದೆವು

.....................................

ಸಂಜೆ ಕವಿದು ಕತ್ತಲಾವರಿಸಲಾರಂಭಿಸಿತು..........
ಅದೊಂದು ಚಿಕ್ಕ ಹಳ್ಳಿ ಸುಮಾರು ಇಪ್ಪತ್ತರಿಂದ
ಮೂವತ್ತು ಮನೆಗಳು ಅಲ್ಲಿರುವವರೆಲ್ಲ ಅವಳ ಸಂಬಂದಿಗಳೆ ಆಗಿದ್ದರು ಮನೆಯಲ್ಲಿ ಇಳಿ ವಯಸ್ಸಿನ ರೋಗಗ್ರಸ್ಥ ಅಪ್ಪ,ಅಮ್ಮ,ಚಿಕ್ಕ ತಮ್ಮ ಮತ್ತುತಂಗಿ
ಮನೆಯ ಜವಾಬ್ದಾರಿ ಇವಳದೇ ಇರಬಹುದೆನಿಸಿತು ಊಟವಾದ ನಂತರ ಅಲ್ಲಿಯೇ ಜಗುಲಿಯ ಮೇಲೆ ಮಲಗಿದೆ

ಸೂರ್ಯ ಹುಟ್ಟಿ ಏಷ್ಟೋ ಹೊತ್ತಾದ ನಂತರ ಬೆಳಕಾಗುವ
ಸೂರ್ಯ ಮುಳುಗುವ ಏಷ್ಟೋ ಹೊತ್ತಿಗೆ ಮುಂಚೆಯೇ ಕತ್ತಾಲಾಗುವ ಇಲ್ಲಿ ನನ್ನ ಕನಸುಗಳಿಗೆ ಸರಿಯಾದ ಮಾರುಕಟ್ಟೆ ಸಿಗಲಾರದು ಎನಿಸಿತು .
ಮತ್ತೆ ನನ್ನ ಭವಿಷ್ಯತ್ತಿಗೆ ನನ್ನ ವಿಚಾರಗಳು ,ಆಲೋಚನೆಗಳು ಮುಖಾ-ಮುಖಿಯಾಗಲಾರಂಬಿಸಿದವು ಬಾವನೆಗಳ ತಾಕಲಾಟ ,ಉದ್ವೇಗಗಳು, ಮುಂದಿನ ಬದುಕು
ನಿದ್ರೆಯನ್ನು ದೂರ ಮಾಡಿದವು

ಚದುರಿ ಹೋದ ಮೋಡಗಳ ತಿಳಿ ಆಕಾಶದಲ್ಲಿಯ ಪರಿಚಿತ ನಕ್ಷತ್ರಗಳನ್ನು ಹುಡುಕ ತೊಡಗಿದೆ........ .........

*******************

- ಶಶಿಧರ ಹೆಚ್ ಎನ್

25 May 2020, 03:36 pm

ಪ್ರೀತಿಯ ಅರ್ಥದಲ್ಲಿ

ಪ್ರೀತಿಯಲ್ಲೇ ಉಸಿರು ಕಟ್ಟಿಸುವುದು
ಪ್ರೀತಿಯೇ ?
ಪ್ರೀತಿಯಲ್ಲೇ ಉಸಿರಾಡುವಂತೆ ಮಾಡುವುದು
ಪ್ರೀತಿ, ಅಲ್ಲವೆ?

ಹಿಂಬಾಲಿಸಲು ಹಂಬಲಿಸುವುದು
ಪ್ರೀತಿಯೇ ?
ನಂಬಿಕೆಯಲಿ ಜೊತೆ ನಡೆಯುವುದು
ಪ್ರೀತಿ, ಅಲ್ಲವೇ?

ಸಲ್ಲದ ಮಾತನಾಡಿ ಮನ ಕಹಿ ಮಾಡುವುದು
ಪ್ರೀತಿಯೇ?
ಸತ್ಯದ ಸವಿ ತಿಳಿದು ಕವಿಯಾಗುವುದು
ಪ್ರೀತಿ, ಅಲ್ಲವೇ?

- dvja

25 May 2020, 08:17 am

******* *ನಿರ್ಣಯ*

*ನಿರ್ಣಯ*
**************
*ತಿರುಗುತ್ತಿದೆ ನಭೋಮಂಡಲದ*
*ಗ್ರಹಗಳೆಲ್ಲವೂ ಒಂದರ ಹಿಂದೊಂದು*

*ಕೆಲವೊಮ್ಮೆ ವಿಕೋಪಗಳು*
*ಸುನಾಮಿ,ಭೂಕಂಪ,ಜ್ವಾಲಾಮುಖಿ,*
*ಕೊರೋಣ,ಏನೇನೋ,*
*ಇಲ್ಲಿ ಯಾರು ಸುಖಿ* *?*

*ಆದೆಷ್ಟೋ ಕನಸುಗಳು*
*ಮೋಡಗಳ ಸೀಳಿ ಮುಗಿಲಲ್ಲಿ ತೇಲಿ*
*ಹಾರುವ ಆ ಹಕ್ಕಿಯ ಹೊಟ್ಟೆಯೊಳಗೆ*
*ಭೂ ಸ್ಪರ್ಷಿಸಲು ಕೆಲವೇ ಕ್ಷಣ*

*ತಮ್ಮವರ ಕಾಣ ತವಕಿಸುತ್ತಿದ್ದ ಮನ*
*ವಿಧಿ ಬಗೆದದ್ದೇ ಬೇರೆ*
*ಸಾವು ಬೆನ್ನಿಂದ ಇರೋವಾಡಿಕೆ*
*ನಡುಗಿಸಿತಂದು ನರ ಹೃದಯವ*
*ಕಣ ಕಣವನ್ನೂ ಕಂಪಿ ಕರಗಿಸಿತು*

*ಕೆಂಜಾರುವಿನ ಮುರುಗುಟ್ಟುವ*,
*ಒಣಗಿದೆಲೆಗಳು ಸದ್ದಾಗುವುದರೊಂದಿಗೆ*
*ಕನಸುಗಳಿಗೆ ಕೊಳ್ಳಿಯಿಟ್ಟ 22.2010*
*ಬದುಕಿನಲಿ ಮರೆಯಲಾಗದ*
*ಅವೊಂದು ಕರಾಳ ದಿನ*
*ಜಗತ್ತಿನೆಲ್ಲೆಡೆ ಮಸಣ*
*******
*ಎಚ್ಚಾರ್ ಆರ್ಕುಳ*

- Haroon Rasheed

23 May 2020, 01:45 pm

ವಿಫಲ ಪ್ರೇಮ

ಒಂದು ನಕ್ಷತ್ರವನ್ನು ತಂದು ಕೊಡು...!
ಸಾವಿರ ಮುತ್ತುಗಳನ್ನು ಕೊಡುವೆ ಅಂದೆಯಲ್ಲಾ...ಗೆಳತಿ ..??
ಸಾವಿರ ನೆನಪುಗಳ ನಕ್ಷತ್ರಗಳನ್ನು ಬೊಗಸೆಯೊಡ್ಡಿ ಹಿಡಿದು ತಂದಿದ್ದೇನೆ ಬಾ ನೋಡು...!!
ನನ್ನ ಪ್ರೀತಿಯ...ಹುಡುಗಿ ಎಲ್ಲಿರುವೆ...ನೀ...ಹೇಗಿರುವೆ..?
ನನ್ನ ಪ್ರೀತಿಯ...ಹುಡುಗಿ ನೀ...ಇರದೆ ನಾ....ನೊಂದಿರುವೆ...!!
ಒಲವೇ....ನೀನೆಲ್ಲಿರುವೇ.....
rowdy

- Avinash Ramagonatti

23 May 2020, 12:48 pm

ಸ್ನೇಹ

ಸ್ನೇಹವೆಂಬುದು ಶುಭ್ರವಾದ
ನೀಲಿ ಅಗಸದಂತೆ
ಹರಿಯುವ ತಿಳಿ ನೀರಿನ ಕಲರವದಂತೆ
ಇಲ್ಲಿ ಕೊಂಕು ಬಿಂಕಗಳಿಲ್ಲ .

ಜಾತಿ ಮತಗಳಿಲ್ಲ
ನಾನು ತಾನು ಎಂಬುದಿಲ್ಲ.
ನವ ಚೇತನ ನಿತ್ಯ ನೂತನ
ಅನುದಿನ ವಸಂತಮಯ ಈ ಗೆಳೆತನ.
ಈ ಸ್ನೇಹಕ್ಕೆ ಎಲ್ಲೇ ಇಲ್ಲ

ಎರಡು ಜೀವಗಳ ಆತ್ಮ ಸಂಬಂಧವಿದು
ಎಲ್ಲೋ ಇರುವ ಒಂದು ಜೀವ
ಇನ್ನೆಲ್ಲೋ ಇರುವ ಇನ್ನೊ೦ದು ಜೀವದ
ನಡುವೆ ಬೆಸೆಯುವ ಆತ್ಮ ಸಂಯಮವಿದು
ಸುವರ್ಣ ಸೇತುವೆಯಿದು.

ನೋವು ನಲಿವಿಗೂ ಸ್ಪಂದಿಸುತ
ದಿಕ್ಕು ತಪ್ಪಿದಾಗ ದಾರಿ ತೋರುತ ನಿನ್ನ ಏಳ್ಗೆಯೇ ನನ್ನ ಏಳ್ಗೆ ಎಂಬುದೇ ನಿಜವಾದ ಸ್ನೇಹ
ಈ ಸ್ನೇಹ ಅಮೃತ ಜಲದಂತೆ ಸದಾ ಜೀವಂತಧಾರೆ.

rowdy

- Avinash Ramagonatti

23 May 2020, 12:44 pm

ಮನಸೋತ ಹೃದಯ

ನಿನಗಾಗಿ ಕಾಯುವ ಬದಲು,
ಕಲ್ಲ ಮುಂದೆ ಕಾದಿದ್ದರೆ, ಕಲ್ಲಿಗೆ ಜೀವ
ಬರುತ್ತಿತ್ತೋ ಏನೋ?
ನಿನಗಾಗಿ ಕಣ್ಣೀರ್ ಇಡುವ ಬದಲು,
ಕಲ್ಲ ಮುಂದೆ ಅತ್ತಿದ್ದರೆ, ನನ್ನ ಕಣ್ಣೀರ
ಓರುತ್ತಿತ್ತೋ ಏನೋ?
Rowdy..,.

- Avinash Ramagonatti

23 May 2020, 12:36 pm

ವೈಫ್-ನೈಫ್

ಸಂತಸದಿಂದಿರೆ
ಕಮಲವದನೆ
ನನ್ನ ವೈಫ್
ಕೋಪಗೊಂಡರೊ
ಆಕೆ ಆಗುವಳು
ಹರಿತ ಬಾಯಿಯ ನೈಫ್!!

- AnithaAnu

22 May 2020, 12:16 pm

ಅರಸುತಿರುವ ಆ ರತಿ

ಅರಸುತಿರುವೆ ಹರಸು ಹರಿಯೆ
ಹೆಸರ ತಿಳಿಸು ಮನಸ ಕೊಡುವೆ...

ಕಾಲ ಕಳೆದೆ ಕಾಯುತಿರುವೆ
ಕರುಣೆ ಇರಲಿ ಕರವ ಮುಗಿವೆ
ಹುಟ್ಟಲಿ ಪ್ರೇಮ, ಅವನ ನನ್ನ ನಡುವೆ ...

ಇನ್ನೂ ಅರಸುತಲೇ ಇರುವೆ
ಸಿಗುವೆಯಾ ಅರಸ ಎoದೆoದೂ
ಜೊತೆಯಾಗಿ ಇರುವೆ...

- dvja

22 May 2020, 11:53 am

ಹೇ ಕೊರೋನಾ

ಹೇ ಕೊರೋನಾ
ದಿನೇ ದಿನೇ ಹೆಚ್ಚಾಗುತ್ತಲೇ ಇದೆ
ನಿನ್ನ ರೌಧ್ರ ನರ್ತನ,
ಕೇಳಲಿಲ್ಲವೇ ನಿನಗೆ ಈ ಬಡ ಮಕ್ಕಳ ಆಕ್ರಂದನ,

ಹಸಿವಿನಿಂದ ಮಕ್ಕಳ ಚಿರಾಟ ನರಳಾಟ,
ನಿನ್ನಿಂದ ಪ್ರಾಣಾ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ
ಪ್ರತಿ ನಿತ್ಯ ಹೋರಾಟ,

ಹೊಟ್ಟೆಪಾಡಿಗಾಗಿ ಬದುಕು ಕಟ್ಟಿಕೊಳ್ಳಲು
ಬಂದಿದ್ದರು ನಗರಗಳತ್ತ,
ಬದುಕುಳಿದರೆ ಸಾಕು ಎಂಬಂತೆ
ಹೋಗುತ್ತಿದ್ದಾರೆ ಇಂದು ತಮ್ಮ ಊರುಗಳತ್ತ,

ಏನು ತಪ್ಪು. ಮಾಡಿದೆವೆಂದು ಈ ತರ ಶಿಕ್ಷೆ,
ಮಾಡಬೇಡ ನಮ್ಮ ತಾಳ್ಮೆ ಪರೀಕ್ಷೆ,

ಹೇ ಕೊರೋನಾ ಇನ್ನಾದರೂ ನಿಲ್ಲಿಸು
ನಿನ್ನ ಅಟ್ಟಹಾಸ,
ಮೂಡಿಸು ಇನ್ನಾದರೂ ಈ ಬಡಮಕ್ಕಳ ಮುಖದಲ್ಲಿ ಮಂದಾಹಾಸ,

:-ವೀಣಾ ಲಿಂಗಣ್ಣ
ರಾಯಚೂರು

- Veena

22 May 2020, 08:48 am

ಬರಿ ಎರಡಕ್ಷರ......

ಪ್ರೇಮ.... ಬರಿ ಎರಡಕ್ಷರ

ತಿಳಿದಿದೆಯಾ ಅದರಾಳದ ಅಂತರ
ಕಲ್ಪನಾ ಲೋಕದ ಮಧುರ ಆಗರ

ಮನಗಳ ಮಿಲನದ ಆ ವರ
ಅದೊ೦ದು ಅದ್ಭುತ ಸಾಗರ

ಅಲೆ ಅಲೆಯೂ ಕರದಂತೆ ಅಂಬರ
ಕ್ಷಣ ಕ್ಷಣವೂ ಮನೋಹರ

ಆಹಾ ..ಎಷ್ಟು ಸುOದರ
ಪ್ರೇಮ ಮನಸುಗಳ ಕನ್ನಡಿ ಪರಸ್ಪರ ......

- dvja

21 May 2020, 11:09 pm