Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳು

ತುಂಟಗಣ್ಣ ಕಾಡಿಗೆಯಂಚಿನ
ಕಿಡಿನೋಟದ ಬಿರುಬಾಣಕೆ
ಮೋಹಿತನಾಗಿ ಮರುಳನಾದ
ಸಮ್ಮೋಹಿತನ ಪ್ರೇಮಸಂಚಿಗೆ
ಮನಮಿಡಿದು ಕೈಪಿಡಿದು
ಹೃದಯದೂರ ಸಿಂಹಾಸನದ
ಅರಸೊತ್ತಿಗೆಯ ಭಾರ ಹೊರಿಸಿ
ನವ್ಯಕಾವ್ಯ ಬರೆದ ಸಮ್ಮೋಹಿನಿ

- ಶ್ರೀಕಾವ್ಯ

31 May 2020, 08:03 pm

ನೆನಪು ಮರೆಯದಂತಿರಲಿ

ಹಾಡುವ ನೆಪದಲ್ಲಿ ಕಿರುಚಾಡಬೇಡಾ
ದನಿಯಲ್ಲಿ ಶ್ರೀಮಂತಿಕೆ ಇರಲಿ
ಆಗಾಗ ದಾರಿದ್ರ್ಯ ಇಣುಕದಂತಿರಲಿ
ಜೀವನದ ಏರಿಳಿತಗಳಂತೆ ,
ಕಾಡುವ ಅವಳು ಕೈ ಕೊಟ್ಟು
ಹೋದ್ರು ಪರವಾಗಿಲ್ಲಾ
ಅವಳ ನೆನಪು ಮಾತ್ರ ಮರೆಯದಂತಿರಲಿ.

- VijaypratapRana

31 May 2020, 06:32 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೨

ಹಿಂದಿನ ಕಾರಿನಲ್ಲಿ ಇದ್ದಾತ, ಒಂದೇ ಸಮನೆ ಬಂದು,

"ರೀ ಕಿವಿ ಕೇಳಿಸ್ತಾ ಇಲ್ವಾ? ಸಿಗ್ನಲ್ ಪಾಸ್ ಆಗಿ ಎಷ್ಟೋತ್ ಆಯ್ತು. ಮೊದ್ಲು ಕಾರ್ ತೆಗೀರಿ ಅಷ್ಟು ಹಾರನ್ ಮಾಡಿದ್ರು ಕಿವಿಗೆ ಹತ್ತಿ ತುರುಕಿದಿರಾ?

ಎಂಬ ಕೂಗಿಗಿ ಎಚ್ಚರಗೊಂಡ ತಕ್ಷಣ ತನ್ನ ಗತದ ನೆನಪಿನಿಂದ ಓಡಿ ಬಂದ. ಆಗೆ ಒಮ್ಮೆ ನಿಟ್ಟುಸಿರು ಬಿಟ್ಟು,

"ಸಾರೀ ಸಾರೀ ಸರ್"
ಎಂದೇಳಿದ.

"ನಿಮ್ ಸಾರೀ ಯಾರಿಗ್ರಿ ಬೇಕು? ಕಾರ್ ತೆಗೀರಿ"

ಎಂದು ಜೋರಾಗೆ ಜಬರ್ದಸ್ತ್ ಮಾಡಿದ. ಮರುಮಾತಾಡದೇ  ಮುಂದೆ ಚಲಿಸಿದ್ದ.

ಈ ಹಾಡು ಅದೇನೋ ಮೋಡಿ ಮಾಡುತ್ತದೆ ಇವನಿಗೆ. ಈ ಹಾಡಿಗೂ ಇವನಿಗೂ ಅದೇನೋ ಒಂದು ನಂಟು ಅಡಗಿದೆ ಮುಂದೆ ತಿಳಿಯುತ್ತದೆ ಬಿಡಿ.


ಮುಂದುವರೆಯುತ್ತದೆ,,,,,,,


- ಹಂಸ ಕುಲಾಲ್✍️✍️✍️

- ಹಂಸವೇಣಿ

31 May 2020, 06:02 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ - ೧

ಹೃದಯವೆ ನಿನ್ನ ಹೆಸರಿಗೆ ಬರೆದೇ ನನ್ನೇ ನಾssss
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ
ಆಕಾಶ  ನಾನಾದೇ ನಾssss
ಹೃದಯದಿ ನಿನ್ನ ಹೆಸರಿಗೆ ಬರೆದೇ ನನ್ನೇ ನಾssss

ಇಪಾಂಗಿ ಕೇಳಿ ಬರುತ್ತಿದೆ ಈ ಹಾಡು. ತನ್ನ ಮನವನೇ ಅರ್ಪಿಸಿ ಕೇಳುತ್ತಾ ತನನ್ನೇ ಮರೆತು ಕುಳಿತಿರುವ ಲೋಕದ ಪರಿವೇ ಇಲ್ಲದೆ ಕೀರ್ತಿ ಸೌರಭ್.

ಕೀeeee
ಎಂದು ಕಾರಿನ ಶಬ್ಧ ಕೇಳಿ ಬರುತ್ತಿದ್ದರು, ಅದರ ಪರಿವೇ ಇಲ್ಲ ಇವನಿಗೆ.
ಮುಂದುವರೆಯುತ್ತದೆ,,,,,,,

- ಹಂಸ ಕುಲಾಲ್✍️✍️✍️

- ಹಂಸವೇಣಿ

31 May 2020, 06:01 pm

ನಮ್ಮ ಶಾಲೆ

ನಮ್ಮಸ್ಕೂಲ್ ಇದು,ನಮ್ಮ ಸ್ಕೂಲ್ ಇದು

ಓದುವ ದೇವಾಲಯವಿದು.

ನಮ್ಮ ಸ್ಕೂಲು ಅದೆಷ್ಟು ಕೂಲು

ಅದೇನಿಲ್ಲ ಅಷ್ಟೊಂದು ಕ್ರುಎಲ್ಲು

- shreeVidyaGs

31 May 2020, 02:51 pm

ಮೃತದೇಹ ಮನುಜನಿಗೆ ಹೇಳಿದ ಸಾಲು

ಬರುವೆ ನೀನು ಒಮ್ಮೆ
ನಾನಿರುವ ಜಾಗಕೆ
ಕಾದು ಕುಳಿತಿದೆ ಗುಂಡಿ
ನಿನ್ನಯ ಸ್ವಾಗತಕೆ

ನಿನ್ನ ಪ್ರಾಣ ನಿನ್ನದಲ್ಲ
ಓಡುವ ಕಾಲ ನಿಲ್ಲುವುದಿಲ್ಲ
ಬಂಧುಗಳೇಲ್ಲ ನಿನ್ನವರಲ್ಲ
ಬರುವೆ ಒಮ್ಮೆ ಈ ದಾರಿಯ ಹುಡುಕಿ
ಬರೆದುಕೋ ವಿಳಾಸವ
ಇರುವ ತನಕ ಅಲ್ಲಿ
ಮಾಡದಿರು ಮೋಸವ

ಬಂದಾಗ ನೀ ಇಲ್ಲಿ
ಲೆಕ್ಕ ನೋಡುವರು
ನೀ ಮಾಡಿದ ಅಸ್ತಿಯನ್ನಲ್ಲ
ನೀ ಮಾಡಿದ ಹಣವನ್ನಲ್ಲ
ನಿನ್ನಲ್ಲಿರುವ ಗುಣವನ್ನ
ನೀ ಮಾಡಿದ ಪುಣ್ಯವನ್ನ

ನೀ ಇಲ್ಲಿಗೆ ಬರುವಾಗ
ನಿನ್ನವರ ಕಣ್ಣಲ್ಲಿ ನೀರಾಗು
ನೊಂದವರ ಬಾಳಿಗೆ ಬೆಳಕಾಗು
ನಿನ್ನ ತಾಯಿಗೆ ಹೆಮ್ಮೆಯ ಕಂದನಾಗು
ತಂದೆಗೆ ತಕ್ಕ ಮಗನಾಗು
ಊರಿಗೆ ಹೆಸರಾಗು
ದೇಶವೇ ಹೊಗಳುವ ಪ್ರಜೆಯಾಗು

- ಸತೀಶ್ ಕುಮಾರ್ ಕಳುವರಹಳ್ಳಿ

31 May 2020, 02:16 pm

ಹುಡುಗಿ .

ಹುಡುಗಿ ಜೊತೆಯಲ್ಲಿದರೆ ನಂದೇ ಕಾರು ಬಾರು.
ಹುಡುಗಿ ಜೊತೆಯಲ್ಲಿದರೆ ನಂದೇ ಕಾರು ಬಾರು
ಆಕಿ ಕೈ ಕೊಟ್ರೆ ಅಕಿದ್ ಕಾರು ನಂದ್ ಬಾರು.

- Pavan Naidu

31 May 2020, 12:40 pm

ನನ್ನ ರಾಣಿ ಕಾವ್ಯ

ಚೆಲುವಿನ ಮುಖದ ರಾಜಕುಮಾರಿ
ನಲುಮೆಯ ಚಂದದ ಜೋಕುಮಾರಿ
ವನದಲ್ಲಿ ನರ್ತಿಸೋ ವೈಯ್ಯಾರಿ
ನಿನ್ನ ಮುಖದಲ್ಲಿ ನಗುವಿನ ತಯಾರಿ...


ರಾಣಿಯ ಮುಖದಲ್ಲಿ ಮಂದಹಾಸ
ಮನಸಲ್ಲಿ ಎಂದೆಂದೂ ಖುಷಿ ಉಲ್ಲಾಸ
ತುಂಬಿದೆ ಎದೆಯಲ್ಲಿ ಪ್ರೀತಿ ವಿಶ್ವಾಸ
ಈಗೆ ಇರಲಿ ಎಂದೆಂದೂ ಮುಖದಲ್ಲಿ ಸಂತೋಷ...

- raghu Chinni

30 May 2020, 11:01 pm

ಕಾವ್ಯ ನನ್ನ ಅಪ್ಸರೆ...

ಮಾತಿನಲ್ಲಿ ಚತುರೆ
ನಗುವಿನಲ್ಲಿ ಸಕ್ಕರೆ
ಕೋಪದಲ್ಲಿ ಅಪ್ಸರೆ
ಪ್ರೀತಿಯಲ್ಲಿ ಆಸರೆ...

ದಯಮಾಡಿ ಕ್ಷಮಿಸು
ಮಾಡಿದ ತಪ್ಪನ್ನು ಮನ್ನಿಸು
ಹೊಡೆದು ನನ್ನ ಶಿಕ್ಷಿಸು
ಆದರೆ ಬೆನ್ ಬಿಡದೆ ಪ್ರೀತಿಸು....

ಮಗುವಿನಂಥ ಮನಸ್ಸು
ತಾಯಿಯಂತ ಕನಸ್ಸು
ಅಪ್ಪನಂತ ಸೊಗಸ್ಸು
ತಂಗಾಳಿಯಂತ ತೇಜಸ್ಸು...

ನನ್ನದು ನೋಯಿಸೋ ಮನ
ನಿನ್ನದು ಕ್ಷಮಿಸೋ ಗುಣ
ನಾನು ನಿನ್ನ ಪ್ರೀತಿಸೋ ಜಾಣ
ನೀನು ನನ್ನ ಮುದ್ದಿಸೋ ಪ್ರಾಣ....

ತಾಯಿಯಂತೆ ನೀ ಶ್ರೇಷ್ಠ
ನಾನೊಬ್ಬ ಕಳ್ಳ ದುಷ್ಟ
ಭಲೇ ಕರಿಯಾ ಕೋಪಿಷ್ಟ
ನಿನ್ ಅಂದ್ರೆ ನಂಗೆ ತುಂಬಾ ಇಷ್ಟ...

- raghu Chinni

30 May 2020, 10:56 pm

ನನ್ನನ್ನೇ ನಾ ಮರೆತೆ

ಸಂಜೆಯ ಹೊತ್ತಿನಲ್ಲಿ,
ತಂಪಾದ ಗಾಳಿಯಲ್ಲಿ,
ತುಸು ನಕ್ಕು, ತುಸು ನಾಚಿ,
ನನ್ನನ್ನೇ ನಾ ಮರೆತೆ ನಿನ್ನ ಗುಂಗಿನಲಿ...!

- Megha

30 May 2020, 07:06 pm