Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಿಗ್ಗುತರಲಿ..

ಬರುವ ನಾಳೆಗಳು
ನಿನ್ನ ಬಾಳಲಿ ಹಿಗ್ಗುತರಲಿ..!!
ನಿನ್ನ ಸುಖ ಸಂತೋಷ
ನೆಮ್ಮದಿಯ ಜೀವನ ಹಿಗ್ಗುತಿರಲಿ..!!

- - ಸಿದ್ದು ಕನ್ನಡಿಗ

03 Jun 2020, 08:31 am

ಶುಭ ರಾತ್ರಿ

ನಕ್ಷತ್ರಗಳ ನಾಡಿನಲ್ಲೂ
ಕತ್ತಲಿನದೇ ಸಡಗರ !
ಹಣತೆಯೊಂದು ಹಚ್ಚಬೇಕು
ಒಳ ಬೆಳಕಿಗೆ ನಿರಂತರ !!

- Anil Dhulagonda

02 Jun 2020, 09:32 pm

ಹೃದಯದ ಬಾಗಿಲು....!

ನನ್ನ ಹೃದಯ ಒಂದು ದೇವರ ಮನೆ,
ಪ್ರೀತಿಯೆ ಅಲ್ಲಿ ದೇವರ ಕೋಣೆ .. 
ಅದು ನನ್ನವಳಿಗಾಗಿ ಮಾತ್ರ ಮೀಸಲು ,
ಅವಳಿಗಾಗಿ ತೆಗೆಯುವೆ ನನ್ನ ಹೃದಯದ ಬಾಗಿಲು ...!

- NaveenkumarK

02 Jun 2020, 07:57 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೫

ಸದ್ಯಕ್ಕೆ ಈಗ ಎಲ್ಲಾ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಇರೋದು. ಅಯ್ಯೋ ಇದೇನೋ ಫಸ್ಟ್ ಸೀನ್ ಇಲ್ಲಿ. ಯಾಕೆ ಅಂತಾ ಟೆನ್ಷನ್ ಬೇಡ.

ಆಕಾಶ್ ತಾಯಿ ರೂಪ ಅವರಾ ವೃತ್ತಿ ಮಾನಸಿಕ ರೋಗಿಗಳ ತಜ್ಞೆ. ತಂದೆ ನೀಲಾಂಜನ್ ಪ್ರಸಿದ್ಧ ವಕೀಲರು.

ಇವರ ಇಬ್ಬರೂ ಮಕ್ಕಳಲ್ಲಿ ಆಕಾಶ್ ಮೊದಲನೆಯವ ತಾಯಿಯ ವೃತ್ತಿಯಲ್ಲೇ ಮುಂದುವರೆದ. ಅಂದರೆ ಆಕಾಶ್ ಕೂಡ ಮಾನಸಿಕ ರೋಗಿಗಳ ತಜ್ಞ.
ಇವನ ಅರ್ಧಾಂಗಿ ಮನಸಿನ ಚೋರಿ ಅನನ್ಯ ಪೊಲೀಸ್ ಆಫೀಸರ್ ತುಂಬಾ ಚುರುಕು ಹುಷಾರ್ ಇರ್ಬೇಕು ಇವಳ ಜೊತೆ.

ಇನ್ನೂ ಶ್ರಾವ್ಯ ಎಲ್ಲಾರ ಮುದ್ದು ಕಂದ ಅಯ್ಯೋ ಕಂದ ಅಲ್ಲ ನಿಮಗೆ ಬಿಡಿ ಈ ಮನೆಗೆ ಮಾತ್ರ ಕಂದ. ಏನೋ ಆಕಾಶ್ ಗೂ ಇವಳಿಗೂ ಅಂತರ ಹೆಚ್ಚು ,ಆಗಾಗಿ ಸೋ ಜಾಸ್ತಿ ಪ್ರೀತಿ ಇವಳೆಂದರೆ. ಈ ಮನೆಯ ಮಗಳು.  ಅಣ್ಣಾ ತಾಯಿಯ ಅನುಸರಿಸಿದರೆ ಈಕೆ ತಂದೆಯ ಪಕ್ಷ
ಲಾ ಸ್ಟೂಡೆಂಟ್. ಆಕಾಶ್ ಈಕೆಗೆ ಅಣ್ಣಾ ಎನುವುದಕ್ಕಿಂತ ತಂದೆಯ ಸ್ಥಾನವನ್ನೇ ನೀಡಿರುವ. ಇವಳ ಒಂದು ಸ್ವಭಾವ ತಿಳಿಸಿಯೇ ಬಿಡುವೆ, ಎಲ್ಲಾರ ಪ್ರೀತಿ ಹೆಚ್ಚಾಗಿ ತುಂಬಾ ಹಠಮಾರಿ ಈಕೆ ಮುಂದೆ ನಿಮಗೇ ತಿಳಿಯುತ್ತದೆ.


ಇನ್ನೂ ಇಲ್ಲಿಗೆ ಬಂದಿರೋ ಉದ್ದೇಶ ಕೇಳಿ.
ನಮ್ಮ ಕ್ಯೂಟ್ ಜೋಡಿ ಪ್ರೀತಿಯ ಕುಸುರಿಗೆ ಇಂದು ಐದು ವರ್ಷದ ಸಂಭ್ರಮ. ಅಂದ್ರೆ ಆಕಾಶ್ ಅನನ್ಯ ಮುದ್ದು ಜೋಡಿಯ ಮುದ್ದು ಮಗಳು ಸ್ಪಂದನಾಳಿಗೆ ಐದು ವರ್ಷದ ಹುಟ್ಟು ಹಬ್ಬದ ಸ್ಪೆಷಲ್.   ಸೋ ವಿಶ್ ಮಾಡಿ ಎಲ್ಲಾ.

ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

02 Jun 2020, 10:18 am

ಅಧಿದೇವತೆ ನೀನಮ್ಮ....

ತಾಯಿ ನಿನ್ನ  ನೋಡಲೆಂದು ಅತ್ತಿ ಬಂದೆ ಮೆಟ್ಟಿಲು.
ನಾ ಏನು ಅಂತ ಕೂಗಲಿ ನಿನ್ನ ಕಿವಿಯ ಮುಟ್ಟಲು.
ನೋವನೆಲ್ಲ ಮರೆತುಬಿಟ್ಟೆ ನಿನ್ನ ಕಂಡ ಕೂಡಲೆ.
ನಾ ಏನು ಅಂಥ ಕೇಳಲಿ ನಿನ್ನ ಕರುಣೆ ಗೂಡಲಿ . !!


ತಾಯಿ ನಿನ್ನ ಪಾದ ಪೂಜೆಗೆ ಕಮಲವ ತಂದಿರುವೆ ಬಾರೆ .
ನಿನ್ನ ಪಾದ ಕಮಲವ ಸ್ಪರ್ಶಿಸುವ ಭಾಗ್ಯವನ್ನು ತಾರೇ . 
ಚಾಂಡ , ಮುಂಡರನು  ವಾಧಿಸಿ  ಚಾಮುಂಡಿ ಅದವಳೆ.
ಮಹಾಬಲಗಿರಿಯಲಿ  ಮಹಾತಾಯಿ ಅದವಳೆ . 
ಯಧುವಂಶದ ಕುಲ ದೇವಿ  ನೀನಮ್ಮ .
ಕರುನಾಡಿನ ಅಧಿದೇವತೆ  ನೀನಮ್ಮ...!

- NaveenkumarK

02 Jun 2020, 09:31 am

ಗೋತ್ತಿದ್ರು ಗೊತ್ತಾಗದಂಗೆ ಆಳದೆ..

ಅಯೋಯೂ  ಯಾಕಾದೆ ನಾ ಇoಗೆ ಆಳು 
ಆರಾಮಾಗಿ ಇದ್ನಲ್ಲ ನಾ  ಅಗಲಿರುಳು . 
ನೀನು ಕಣ್ಣಮುಂದೆ ಬಂದಾಗ ಇಂಗದೇ 
ನನ್ನಗೆ ಗೋತಿದ್ರು ಗೊತಾಗದಂಗೆ ಅಳದೆ ... 


ಚಂದಮಾಮನಿಗೆ ತುತ್ತು (ಬುಯ) ತಿನ್ನಿ ಸಲು ನಾನೊದೆ. 
ಅವನು ತಿನ್ನಲ ಅಂದಾಗ , ನಿನ್ನ ತೋರಿಸಿ ತಿನ್ನಿಸತ್ತಿದೆ. 
ಇದು ಯಾಕೋ ಅತೀಯ್ತು  ಅಂತ ಅಂದ್ಕೊಂಡೆ. 
ನಿನ್ನ ನಗು ನೋಡಿ , ಇದು ತಪ್ಪಿಲ್ಲವೆಂದು ನಾಚ್ಕೊಂಡೆ... 

....ನವೀ...

- NaveenkumarK

01 Jun 2020, 06:58 pm

ನಾ ನಿನ್ನ ಪರವಾಗ...

ನಾ ಬಾಯಾರಿ ಕುಂತಾಗ 
ಮೈ ಮಾರೆತು ನಾ ನಿಂತಾಗ 
ನೀ ತುಸು ನಕ್ಕು ಹೋದಾಗ ....!
ನಾ ನಿನ್ನ ನೋಡಲು ಬರುವಾಗ 
ಬರಿಗಾಲಿನಲ್ಲಿ ನೆಡೆವಾಗ 
ಕಲ್ಲು ಮುಳ್ಳೆಲ್ಲ ಹೂವಾಯ್ತು ನನಗಾಗ ...!
ನೀ ಕೈ ತಾಕಿಸಿ ನೆಡೆದಾಗ 
ಕಣ್ಣು ಮಿಟಿಕಿಸಿ ನೋಡಿದಾಗ 
ನಿಂತಲ್ಲೇ ಕಳೆದೋದೆ ನಾನಾಗ ...!
ನೀ ಹೆದುರು ನಿಂತಾಗ 
ನನ್ನ ಮಾತು ಬಾರದಾಗ
ಮೌನಕ್ಕೆ ಶರಣು ನಾನಾಗ ...!
ನಿನ್ನ ಕಣ್ಣ ಗುಡ್ಡೆಯ ನೋಡದಾಗ 
ನನ್ನ ಗುಂಡಿಗೆಯಲಿ ಏನೋ ಉದ್ವೇಗ 
ಉಸಿರಾಡಲು ಭಯವಾಗ ...!
ಅಗೋಯ್ತು ನಿನ್ನ ಮೇಲೆ ಅನುರಾಗ 
ನಾ ನಿನ್ನ ಪರವಾಗ ...!
....ನವೀ....


 

- NaveenkumarK

01 Jun 2020, 01:51 pm

ಪ್ರೀತಿ

ಪ್ರೀತಿಯ ಸಲುಗೆ
ಪ್ರೀತಿಲಿ ನೀನೇ ಎಲ್ಲ ನನ್ನ ಪಾಲಿಗೆ
ನಿನ್ನ ಜೊತೆ ಆಗಿದೆ ನನ್ನ ಬೆಸುಗೆ
ನೀ ಬೈದರು, ಸಿಟ್ಟಾದರು, ದುಃಖ ನನಗೆ
ನೀನು ಖುಷಿಂದಿದ್ದರೆ ಅದುವೇ ನನಗೆ ಉಡುಗೊರೆ

- Sheela

01 Jun 2020, 12:33 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೪

ಗಮನಿಸಿದ ಅನನ್ಯ,

"ಏನ್ ಹುಡುಕ್ತಾ ಇದ್ದೀರಾ?"

" ಹದ್ದಿನ ಕಣ್ಣು ನಿಂದು. ಸ್ಪಂದನಾ , ಶ್ರಾವ್ಯ ಎಲ್ಲಿ?"

"ಹುಡ್ಕೊಂಡು, ಹಿಡ್ಕೊಂಡು ಬರ್ತೀನಿ ವೇಟ್ ಮಾಡಿ"
ಎಂದು ಕಣ್ಣ ಮುಂದೆ ಕೈ ಆಡಿಸಿದ್ದಳು. ಅವಳ ವರ್ತನೆಗೆ ನಕ್ಕ ಆಕಾಶ್,

"ಎಷ್ಟೇ ಆದ್ರೂ ತಾವು ಪೊಲೀಸ್ ಅಲ್ವಾ ಹಿಡ್ಕೊಂಡೇ ಬನ್ನಿ"

ಎಂದ. ಅವಳು ನಗುವಿನ  ಪ್ರತ್ಯುತ್ತರ ನೀಡಿದ್ದಳು.

        ***************

ಯಾರಪ್ಪ ಈ ಜೋಡಿ ಅಂತಾ ಜಾಸ್ತಿ ಥಿಂಕ್ ಮಾಡ್ತಾ ಇದ್ದೀರಾ?
ಎಲ್ಲಾರ ಒಂದು ಕಿರಪರಿಚಯ ಕೇಳಿ.

ಇವ್ರೆ ಈ ಹೃದಯದ ಬ್ಯೂಟಿಫುಲ್ ಅಂಡ್ ಕ್ಯೂಟ್ ಪೇರ್ ಪಾತ್ರನ್ನ ನಿರ್ವಹಿಸೋ ಜೋಡಿ
ಆಕಾಶ್ - ಅನನ್ಯ.

ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

01 Jun 2020, 07:20 am

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೩

"ಆಕಾಶ್ ಆಕಾಶ್"
ಅರಸುತ್ತಾ ನಿಂತಳು ಅನನ್ಯ.

"ಹಲೋ ಸ್ವಲ್ಪ ಹಿಂದೆ ತಿರುಗಿ ನೋಡ್ರಿ"
ನಗು ಮೊಗದಿ ಅವಳ ಭುಜ ಹಿಡಿದು ತನ್ನೆಡೆಗೆ ತಿರುಗಿಸಿಕೊಂಡು.

"ಇಲ್ಲೇ ಇದ್ದೀರಾ ನೀವು, ಆವಾಗ್ಲಿಂದ ಹುಡುಕ್ತಾ ಇದೀನಿ ಎಲ್ ಮಾಯಾ ಆಗಿದ್ರಿ?"

"ಹೋಗಿ ಸಿಸಿಟಿವಿ  ನೊಡ್ಬೇಕಿತ್ತು"

"ಸಾಕು ತಮಾಷೆ ಸ್ವಲ್ಪ ನನ್ ಮಾತ್ ಕೇಳ್ತೀರಾ?"

"ನೀವ್ ನಿಮ್ ಮಾತ್ ಹೇಳ್ತೀರಾ?"
ಎಂದು ನಾಟಕೀಯವಾಗಿ ನುಡಿದ. ಮುನಿಸಿನಿಂದ ಅನನ್ಯ ತನ್ನ ಕೈ ಕಟ್ಟಿ ನಿಂತಳು. ಅವಳನ್ನ ಮುದ್ದು ಮಾಡಿ ಅದೇನೆಂದು ಹೇಳುವಂತೆ ಕೇಳಿದ.

" ಮಾವ ಹೇಳಿದ್ರು ಕೀರ್ತಿ ಫಂಕ್ಷನ್ ಗೆ ಬರ್ತಾ ಇದ್ದಾನೆ ಅಂತಾ, ನೀವ್ ಹೇಳಿದ್ರಂತೆ?"

"ಆ,,, ಬರ್ತಾ ಇದ್ದಾನೆ"

"ಸುಮ್ನೆ ಸುಳ್ ಹೇಳ್ಬೇಡಿ"

"ನಾನ್ಯಾಕೆ ಸುಳ್ ಹೇಳ್ಲಿ ಬರ್ತಾನೆ, ನೀನೇ ನೋಡ್ತೀಯ. ಕೀರ್ತಿ ಸೌರಭ್ ಬರ್ತಾ ಇದ್ದಾನೆ"
ಎಂದು ಅತ್ತ ಇತ್ತ ಕಣ್ಣಾಡಿಸುತ್ತಾ ಆಕಾಶ್ ನಿಂತ. ಗಮನಿಸಿದ ಅನನ್ಯ,


ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

31 May 2020, 09:29 pm