ಕೀರ್ತಿ ಸೌರಭ್ ಕೈಯಲ್ಲೊಂದು ಮುದ್ದಾದ ಬಾರ್ಬಿ ಗೊಂಬೆ ಹಿಡಿದು ಆಸ್ಪತ್ರೆ ಎದುರು ನಿಂತ. ಕಣ್ಣಿಗೆ ಕಂಡದ್ದು ನೀಲಾಂಜನ್ ಅವರು. ಅದೇ ಸಮಯಕ್ಕೆ ಅವರ ನೋಟ ಸಹ ಇವನ ಮೇಲೆ, ಕಂಡೊಡನೆ ನಗುತ್ತಾ ಇಬ್ಬರೂ ಸನಿಹಿಸಿದ್ದರು
"ಸರ್ಪ್ರೈಸ್ ಕೀರ್ತಿ ವೆಲ್ಕಂ ಮೈ ಬಾಯ್ ವೆಲ್ಕಂ"
ಎಂದಾಗ ಆತ್ಮೀಯವಾಗಿ ನಗೆ ಬೀರಿದರು. ಅವನ ಹೆಗಲ ಬಳಸಿ ಜೊತೆಗೆ ಕರೆದಕೊಂಡು ನಡೆದರು. ಆಸ್ಪತ್ರೆ ಒಳ ನಡೆಯುತ್ತಿದ್ದಂತೆ, ಎಲ್ಲರನ್ನ ಕಂಡು ಅವರೆಡೆಗೆ ಕರೆದು ಬಂದರು.
"ಇವ್ನೇ ನನ್ ಫ್ರೆಂಡ್ ಸಂಪತ್ ಸೌರಭ್ ಮಗ
ಕೀರ್ತಿ ಸೌರಭ್. ನೋಡೋ ಆಕಾಶ್ ಇವ್ನು ಅವರಪ್ಪ ಮಾತ್ ಕೇಳಿ ಲಾಯರ್ ಆದ. ಅದು ನನ್ನನೇ ಮಿರಿಸೋ ಮಟ್ಟಿಗೆ ಬಂದಿದ್ದಾನೆ. ಐಎಂ ಸೋ ಪ್ರ್ವೌಡ್ ಆಫ್ ಯು ಮೈ ಬಾಯ್"
ಎಂದು ಬೆನ್ನು ತಟ್ಟಿದರು.
"ಮತ್ತೆ ಕೀರ್ತಿ ಇದು ನನ್ ಫ್ಯಾಮಿಲಿ ಇವ್,,,
ಮಾತು ಪೂರ್ಣಗೊಳ್ಳುವ ಮುನ್ನವೇ ಆಕಾಶ್,
"ಡ್ಯಾಡಿ ಡ್ಯಾಡಿ ಸ್ವಲ್ಪ ಸ್ಟಾಪ್ ಮಾಡ್ತೀರಾ. ಮಾ,,, ನಮ್ ಹಾಸ್ಪಿಟಲ್ಗೆ ಹೊಸ ಪೇಶೆಂಟ್ ಸಿಕಿದ್ರು, ಯಾರ್ ಗೊತ್ತಾ? ನಮ್ ಡ್ಯಾಡಿನೇ"
" ನಿಜ ಆಕಾಶ್ ಟ್ರೀಟ್ಮೆಂಟ್ ಶುರು ಮಾಡೋದೇ"
ಎಂದು ರೂಪ ಅವರು ನಕ್ಕರು.
ಮುಂಜಾನೆ ನಿದ್ರೆಯಲಿ ನಿನದೇನೆ ಕನಸ್ಸಲ್ಲಿ.
ಮುಸ್ಸಂಜೆ ನಡೆಯಲ್ಲಿ ನಿನದೇನೆ ನೆನಪಲ್ಲಿ.
ಮುಂಜಾನೆಯ ಮಂಜನ್ನು ಕಣ್ಣಲ್ಲಿ ತುಂಬಿಕೊಂಡು.
ಗೋಧೂಳಿಯ ಕೆಂಪನ್ನು ಮೈ ಬಣ್ಣ ಮಾಡ್ಕೊಂಡು.
ತಂಗಾಳಿ ತರ ಬರುತಿದ್ದರೆ ನೀನು ನನ್ನ ಕಡೆಗೆ.
ಕಾಲನೇ ಕಳೆದೋಗೋಹಾಗಿದೆ, ನೋಡಿ ನಿನ್ನ ನಡಿಗೆ...!
ಎಷ್ಟೋ ಬಾರಿ ಮನವು ಸತ್ತಿದೆ
ಅದೆಷ್ಟೋ ಬಾರಿ ತನುವು ಅತ್ತಿದೆ
ನೋವಂತೂ ಎಡೆಬಿಡದೆ ಕಾಡಿದೆ..!
ಅಂಜಲಿಲ್ಲ ಅಳುಕಲಿಲ್ಲ
ನೋವಲ್ಲಿ ಮಣಿದು ಹೊಸ ಆಸೆ ತೊನೆದು
ಪುನಃ ತುಟಿಗಳಲಿ ಹುಸಿನಗುವು ಮೂಡಿದೆ..!
- ಸಿದ್ದು ಕನ್ನಡಿಗ