Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮನ ಪ್ರೀತಿ ಹಾಗೂ ಅಮ್ಮನ ಮಹತ್ವ

ನಮಗೆ ಎಲ್ಲರಿಗಿಂತಲೂ ಅಮ್ಮನೇ ಮಿಗಿಲು
ನಾವು ಎಲ್ಲಾದರೂ ಹೊರಗಡೆ ಹೊರಟರೆ ಅಮ್ಮನಿಗೆ ನಮ್ಮ ಮೇಲೆಯೇ ದಿಗಿಲು
ಆದರೆ ನಾವು ಅಮ್ಮನನ್ನು ಮರೆತರೆ ಮುಂದೆ ಆಗುವುದು ನಾವು ಮೆಂಟಿಲು.

- srinivas hanur

06 Jun 2020, 04:54 pm

ನೆನಪು

ಬುದ್ದಿ, ಮನಸ್ಸು ವಿಚಿತ್ರ ವರ್ತಿಸುತಿತ್ತು
ಆಗ ಪರಿಸ್ಥಿತಿ ತುಂಬಾ ಚೆನ್ನಾಗಿತ್ತು!
ಬುದ್ದಿ ,ಮನಸ್ಸು ಏಕಾಂತದಲ್ಲಿತ್ತು
ಆದರೂ ಪರಿಸ್ಥಿತಿ ತುಂಬಾ ಕೆಟ್ಟಿತ್ತು!
ಕಂಡರೂ ಕಾಣದಂತೆ ಇತ್ತು
ಕಾಣದಿದ್ದರೂ ಬರಿ ನೆನಪಾಗೆ ಕಾಡುತಿತ್ತು
ಮರೆಯಾದ ಕ್ಷಣವೆ ಕತ್ತಲಾಗ ತೊಡಗಿತ್ತು!
ಶಾರೀರಿಕ ಯಾತನೆ ಬುದ್ದಿ ಮನಸ್ಸು ಎಲ್ಲಾವನ್ನು ಹಿಂಸಿಸುತಿತ್ತು!
ಕ್ಷಣ ಕ್ಷಣಕ್ಕೂ ಜೀವನದ ಮೌಲ್ಯಗಳನ್ನ ಪ್ರಶ್ನಿಸುತಿತ್ತು!
ಕಳೆದುಹೋದದ್ದನ್ನೆ ಪ್ರತಿಕ್ಷಣವೂ ಚಿಂತಿಸುತಿತ್ತು!
ದಾರಿನೂರಿದ್ದರೂ ದುಃಖದ ಮಡುವಿನಲ್ಲಿ ಮುಳುಗುತ್ತಿತ್ತು!
ಎಲ್ಲವನ್ನೂ ತಿಳಿಯದೆ ತೇಲಿ ತೆಗಳುತಿತ್ತು!
ಕೊನೆಗೂ ತನನ್ನು ತಾನೆ ತಿಳಿಯದೆ ದೋಣಿ ಮುಳುಗಿತ್ತು!
ಅಂಬಿಗನಿಗೆ ಗುರಿಯೆ ಬಾರದೆ ಹೋಗಿತ್ತು!

- Shivakumara S

05 Jun 2020, 11:04 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ - ೭

ಅದೇ ಏನು ಎಂಬ ಪ್ರಶ್ನೆ ಅವನಿಗೆ ಕಾಡುತ್ತಿದೆ.

ಆ ಕಣ್ಣು ಅದೇ ಅವನ ಹೃದಯದ ಕಣ್ಣಿಗೆ ಕಾಣುತ್ತಿದೆ. ತನ್ನ ಬಡಿತದ ಮರುಸ್ವರ ಇಲ್ಲೇ ಇದೆ ಎಂಬುದಾ ಹೇಳುತ್ತಿದೆ.' ಕೀರ್ತಿ ನೋಡು ಒಮ್ಮೆ ನಿನ್ನ ಕಣ್ಣಾ ತೆರೆದು' ಎಂದು ಆದರೆ ಅವನಿಗೆ ತಿಳಿಯುತ್ತಿಲ್ಲವೇ. ಒಂದು ಗೊಂದಲದ ಭಾವ ಮನಸ್ಸು ಅಲ್ಲಿಂದ ಮುಂದೆ ಚಲಿಸಲು ಬಿಡುತ್ತಿಲ್ಲ. ಆದರೂ ಒಂದಿಂಚು ಕದಳಿದ್ದ. ಕ್ಷಣಕ್ಕೆ ಕಾಲು ಎಡವಿತ್ತು. ತಕ್ಷಣ ಅಲ್ಲೇ ಇದ್ದ ರೂಮ್ ಬಾಗಿಲು ಅವನಿಗೆ ನೆರವಾಯಿತು. ಅವನು ಜೋರಾಗಿ ಹಿಡಿದಿದ್ದರಿಂದ ಬಾಗಿಲು ಸ್ವಲ್ಪ ತೆರೆಯಿತು. ಇನ್ನೂ ಸ್ವಲ್ಪ,,,,

(ಅವನು ನೋಡಲೇ ಬೇಕು ಅವನ ಜೀವನದ ಅರ್ಥ ಇಲ್ಲೇ ಅಡಗಿದೆ. ಹೋಗು ಕೀರ್ತಿ ನೋಡು ಒಂದು ಸಾರಿ.)

"ಕೀರ್ತಿ ಅಲ್ಲೇ ಏನ್ ಮಾಡ್ತಾ ನಿಂತಿದ್ದೀಯಾ? ಬಾ ಬೇಗ"

ಎಂದು ಅನನ್ಯ ಕೂಗಿದ್ದಳು.

"ಅಕ್ಕ ಅದು,,, ನಾನ್"
ತಡವರಿಸಿದ. ಉತ್ತರ ಹೇಳಲು ಪದ ಸಿಗುತ್ತಿಲ್ಲ. ಅದೇನು ಭಾವ ಅರಿಯದಾದ.

"ಈಗ್ಲೇ ತುಂಬಾ ಲೇಟ್ ಆಗಿದೆ. ಎಲ್ಲಾ ವೇಟ್ ಮಾಡ್ತಾ ಇದ್ದಾರೆ, ಇನ್ನೂ ಲೇಟ್ ಆಗೋದು ಬೇಡ"

"ಒನ್ ಮಿನಿಟ್ ಅಕ್ಕ ಅದು,,,"

" ಈಗೆಲ್ಲಾ ಹೇಳಿದ್ರೆ, ಕೇಳಲ್ಲ ನೀನು"

ಸನಿಹ ಬಂದಾಕೆ ಅವನ ಕೈ ಹಿಡಿದು ಎಳೆದುಕೊಂಡು ನಡೆದಳು.

ಅರಿಯದ ನೋವು ಹೃದಯದ ಮನಕ್ಕೆ.
ಒಂದು ಕೊರಗು ಯಾಕಿಗೇ?
ಅವನ್ನೇ ತನಗೆ ತಾನೇ ಪ್ರಶ್ನಿಸಿಕೊಂಡ.
ಹೃದಯದ ಉಸಿರಿನಿಂದ ದೂರ ಬಂದೆ ಬಿಟ್ಟ.

ಛೇ ಒಂದು ಕ್ಷಣ ತಡವಾಗಿ ಬರಬಾರದಿತ್ತಾ ಈ ಅನನ್ಯ. ಅವನ ಜೀವನದ ಅವಿಭಾಜ್ಯ ಪ್ರಶ್ನೆಗೆ ಉತ್ತರ ಅಲ್ಲೇ ಇರುವಳು. ಹೌದು ಸೌರಭನ ಹೃದಯದ ಹೆಸರು ಅವನ ಸನಿಹವೇ ಇದ್ದಾಳೆ. ಕೊಠಡಿಯ ಒಳಗೆ ಬೆಚ್ಚನೆಯ ನಿದ್ರೆಯಲ್ಲಿ. ಇವನ ಅರಿವೇ ಇಲ್ಲದೆ.


ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

05 Jun 2020, 03:41 pm

ಗಂಧರ್ವನ ಮಗಳು...

ತುಸು ನಕ್ಕು ಸುಮನೆ ಇರಳು.
ಆ ಚಂದ್ರನ ಹೋಲುವ ಗಂಧರ್ವನ ಮಗಳು.
ಈ ಮಣ್ಣಿನ ಸಂಸ್ಕೃತಿಯ ನೆಲೆ ಅವಳು.
ಕಲ್ಲನ್ನು ಕರಗಿಸೋ ಕಣ್ಣಿನ ಕಲೆ ಅವಳು.
ಮರುಭೂಮಿಯಲ್ಲಿ ನೀರಿನ ಸೆಲೆ ಅವಳು ...
ಅತಿಯಾಗಿ ಕಾಡುವ ಕಿನ್ನರಿ ಕುಲದವಳು.
ಅವಳು ಯಕ್ಷನ ಮಗಳದರು, ನನಗೆ ಎಂದೆಂದಿಗೂ ಅವಳು ಗಂಧರ್ವನ ಮಗಳು...

- NaveenkumarK

05 Jun 2020, 01:11 pm

ಹೃದಯ ಸೇರೆಹಾಯಿತು...

ದಾರಿಯ ಕವಲಿನಲಿ ನಿಂತು ದೂರ ದೃಷ್ಟಿ ಬಿರಿದಳು ,
ಮನಸಿನ ಮೂಲೆಯಾಲಿ ಕೂಳಿತು ಮಂದಹಾಸ ಚಲ್ಲಿದಳು . 
ಹೃದಯದ ತಾಪಕ್ಕೆ ಪ್ರೀತಿ ಹಣ್ಣಾಯಿತು ,
ಕಣ್ಣಿನ  ಸೇಳೆತಕ್ಕೆ ಹೃದಯ ಸೇರೆಹಾಯಿತು .... !

- NaveenkumarK

05 Jun 2020, 12:54 pm

ಮುಗ್ಧ ಪ್ರಾಣಿಯ ಆಕ್ರಂದನ

ಆತುರ ಆತುರದಿ ಹಸಿವು ನೀಗಿಸಿಕೊಳ್ಳಲು
ಹೋದೆಯಮ್ಮ ಆ ಊರೋಳಕ್ಕೆ,
ತಳ್ಳಿ ಬಿಟ್ಟರಮ್ಮ ನಿನ್ನ ಆ ಕ್ರೂರಿಗಳು ಮೃತ್ತು ಕೂಪಕ್ಕೆ,

ಬೆಳಕಿನ ಲೋಕವ ನೋಡಲು ಆ ಕಂದ
ಕಟ್ಟಿತೋ ಅದೇಷ್ಟೋ ಕನಸುಗಳು,
ತಾಯಿಯ ಗರ್ಭದ ಕತ್ತಲೆ ಲೋಕದಿ ಕಮಾರಿ ಹೋದವು ಆ ಕಂದನ ಆಸೆಗಳು,

ಆ ತಾಯಿಯ ನರಳುವಿಕೆಯ ಶಾಪ ಬಿಡದು ಎಂದಿಗೂ ನಿಮ್ಮನ್ನು,
ತಪ್ಪದೇ ಅನುಭವಿಸುವಿರಿ ಮುಂದೊಂದು ದಿನ ನರಕವನ್ನು,
:-ವೀಣಾ ಲಿಂಗಣ್ಣ
ರಾಯಚೂರು

- Veena

05 Jun 2020, 11:38 am

ಗೆಳೆತನ

ನಾ ಹೇಗೆ ಇರಲಿ ಗೆಳತಿ ನಿನ್ನ ಮರೆತು
ನೀ ನನ್ನ ಜೀವಾ. ನೀ ನನ್ನ ಜೀವನ
ನೀ ಮರೆತರೂ ನಾನೆಂದೂ ಮರೆಯಲಾರೆ ನನ್ನ ಕಣ್ಣ ರೆಪ್ಪೆ ಗಳಂತೆ ಕಾಯುಟ್ಟಿನಿ
ನನ್ನ ಹೃದಯದಲ್ಲಿ ನಿನ್ನ ಬಚ್ಚಿಟ್ಟು ಕಾಪಡುತ್ತಿನಿ.
ದೇವರು ನನಗೆ ಅಂತ ಕೊಟ್ಟಿರೋ ವರಕಣೆ ನೀನು
ನನ್ ಮುದ್ದು

- Nandini Nandini

05 Jun 2020, 11:05 am

ಹವಣಿಸಿದೆ ಹಂಬಲವು

ಕನಸುಗಳ ಕಾವಲಲಿ
ಅಪೇಕ್ಷೆಗಳ ಅನುಮತಿಯಲಿ
ಹವಣಿಸಿದೆ ಹಂಬಲವು
ಹಸಿಯಾಗಿ ಹಸಿರಾಗಿ
ಚಿಗುರೊಡೆದು ಚಿಮ್ಮಲು
ಬೆಳದಿಂಗಳು ಬೆರಗಾಗುವಂತೆ ಮಾಡಲು
ಹವಣಿಸಿದೆ ಈ... ಹಂಬಲವು
ಕಂಡುಕೊಳ್ಳಲು ಬರಿ ನಿನ್ನ ಒಲವು...

- dvja

05 Jun 2020, 09:21 am

ಮನಸಾರೆ ಅತ್ತು ಬಿಟ್ಟೆ...

ಗಟ್ಟಿಯಾಗಿ ಅತ್ತುಬಿಟ್ಟೆ
ನನ್ನದೆಯಲಿ ಇರುವ ನೋವಿಗೆ...!
ಕಂಬನಿ ಕೆನ್ನೆ ಮುಟ್ಟೋ ಮುಂಚೆ
ಮಾಯವಾಯ್ತು ಒಡಲಾಳದ ಕಾವಿಗೆ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

04 Jun 2020, 11:03 pm

ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೭

"ಎಲ್ಲಾ ಮರಿತ್ತೀರ ಆದ್ರೆ ಕೋರ್ಟ್ ನಲ್ಲಿ ಮಾತ್ರ ಎಲ್ಲಾ ನೆನಪಲ್ಲೇ ಇರುತ್ತೆ ಅಲ್ವಾ? (ಎಂದು ನಕ್ಕು ಕೀರ್ತಿ ಕಡೆ ತಿರುಗಿ)
ಕೀರ್ತಿ ನಾನ್ ಎಕ್ಸಿಪ್ಟ್ ಕೂಡ ಮಾಡಿರ್ಲಿಲ್ಲ, ಐಎಂ ಸೋ ಹ್ಯಾಪಿ"

ಮತ್ತೆ ಮುಗುಳು ನಗೆ ಅಷ್ಟೇ ಸೌರಭ್ ಉತ್ತರ.

"ಕೀರ್ತಿ ಇವತ್ತೇನಾದ್ರು ಸೂರ್ಯ ಪಶ್ಚಿಮದಲ್ಲಿ ಉದಾಯಿಸಿರಬಹುದಾ?"
ಅನನ್ಯ ಪ್ರಶ್ನಿಸಿದಳು. ಅರ್ಥವಾಗದ ನೋಟದಲ್ಲಿ ಸೌರಭ್,

"ಅಕ್ಕ,,,"
ಎಂದು ಅವರನ್ನೇ ನೋಡಿದ.

"ಇಷ್ಟು ದಿನಕ್ಕೆ ಇವತ್ತು ಬರ್ಬೇಕು ಅಂತಾ ಮೂಡ್ ಬಂದಿದಿಯಲ್ಲ ನಿಂಗೆ"
ನಕ್ಕಳು. ಅವನು ಜೊತೆಯಾದ.

ಅನನ್ಯ ಕೀರ್ತಿ ವೃತ್ತಿ ಜೀವನದಿಂದ ಸ್ವಲ್ಪ ಹತ್ತಿರ. ಆಗಾಗಿ ಪ್ರೀತಿಯಿಂದ ಅಕ್ಕ ಎಂದು ಕರೆಯುವ. ಆಕಾಶ್ ಆಗೊಮ್ಮೆ ಈಗೊಮ್ಮೆ ನೋಡಿ ಅಷ್ಟೇ ಆತ್ಮೀಯರಾದರು. ಅದೆಷ್ಟೋ ಬಾರಿ ಸೌರಭ್ ಗೆ ಆಹ್ವಾನ ನೀಡಿದರೂ ಒಮ್ಮೆಯೂ ಹಾಜರಿ ನೀಡಲಿಲ್ಲ. ಯಾವುದೇ ಫಂಕ್ಷನ್ ಗಳಿಗೂ ಸಹ. ಆಗಾಗಿ ಇವನ ಸ್ವಭಾವ ಅರಿವಿದ್ದರಿಂದ ಸುಮ್ಮನಾಗಿದ್ದರು.

"ಅಕ್ಕ ಸ್ಪಂದನಾ ಎಲ್ಲಿ"
ಕಾತುರದಿಂದ ಕೇಳಿದ. ಪ್ರತಿಯಾಗಿ ಆಕಾಶ್,

"ಅವ್ಳು ಕೇಕ್ ಕಟ್ ಮಾಡೋಕ್ಕೆ ಕಾಯ್ತಾ ಇದ್ದಾಳೆ, ನಿನ್ ಬರ್ತೀನಿ ಅಂತ ಮೆಸೇಜ್ ಮಾಡಿದ್ದು ನೋಡಿ ವೇಟ್ ಮಾಡ್ತಾ ಇದ್ದೀವಿ. ಎಲ್ಲಾ ಹೊರಡೋದೆ ಈಗ"

ಎಂದು ಮುಂದೆ ನಡೆದ. ಹಿಂಬಾಲಿಸಿ ಎಲ್ಲಾ ನಡೆದರು.
ಸೌರಭ್ ಮನಸ್ಸೇಕ್ಕೊ ಅವನಿಗೆ ತಿಳಿಯದೆ ಹರುಷ ನೀಡುತ್ತಿದೆ, ಯಾಕಾಗಿ? ಅದೇಕೋ ಅವನ ಹೃದಯ ಬಡಿತದ ಏರಿಳಿತ ಹೆಚ್ಚಾಗುತ್ತಿದೆ. ಅದ್ಯಾವುದೋ ಸೂಚನೆ ನೀಡುತ್ತಲಿದೆ. ಅದೇ ಏನು ಎಂಬ ಪ್ರಶ್ನೆ ಅವನಿಗೆ ಕಾಡುತ್ತಿದೆ.


ಮುಂದುವರೆಯುವುದು,,,,,
- ಹಂಸ ಕುಲಾಲ್ ✍️✍️✍️

- ಹಂಸವೇಣಿ

04 Jun 2020, 03:21 pm