ಅವಳ್ಯಾರು?
ಇಲ್ಲಿ ಇರುವುದಾದರೂ ಯಾಕೆ?
ಅದೇನು ವಿಧಿಯ ನಿರ್ಧಾರ?
ಮತಷ್ಟು ಅವನ ಪ್ರೀತಿಗೆ ಇದು ಪರೀಕ್ಷೆ ಇರಬಹುದು
ಕೀರ್ತಿ ಬರುತ್ತಿದ್ದಂತೆ
ಎದುರಲ್ಲೇ ಓಡಿ ಬಂದಳು ಆ ಪುಟ್ಟ ಪೋರಿ ಸ್ಪಂದನಾ. ಒಂದೊಮ್ಮೆ ಹಿಂದೆ ನೋಡಿ ಮತ್ತೊಮ್ಮೆ ಮುಂದೆ ನೋಡುತ್ತಾ ಓಡಿ ಬರುತ್ತಿದವಳ, ಹಿಡಿಯಲು ತನ್ನ ಮಂಡಿ ನೆಲಕ್ಕೆ ತಾಗಿಸಿ ಕುಳಿತ್ತಾ. ಎರಡು ಕೈಗಳಿಂದ ಬಾಚಿ ತಬ್ಬಿದ ಹಣೆಗೊಂದು ಮುತ್ತಿಟ್ಟು ಮೇಲೆ ಎದ್ದು ನಿಂತ.
"ಮಾಮ ಬಿಡಿ ಬಿಡಿ"
ಎಂದು ಮುದ್ದು ನುಡಿಯಲ್ಲಿ ಕೆಳಗಿಳಿಸಲು ಕೇಳಿದ್ದಳು. ಬಿಡದೇ ಅವಳ ಚಬ್ಬೀ ಕೆನ್ನೆಗೆ ಮುತ್ತಿಟ್ಟ. ತನ್ನ ಮುದ್ದು ದುಂಡು ಪುಟ್ಟನೆಯ ಕೈಗಳಿಂದ ತನ್ನ ಕೆನ್ನೆ ಸವರಿ ಕೊಂಡು. ಅವನ ಹಣೆಗೆ ಮುತ್ತ ನೀಡಿದ್ದಳು. ಸೌರಭ್ ತನ್ನ ಕೆನ್ನೆ ತೋರಿಸಿದ ಅವುಗಳಿಗೂ ಸಿಹಿ ಮುತ್ತುಗಳು ದೊರಕಿತ್ತು.
ಶ್ರಾವ್ಯಳ ಆಗಮನ. ಸ್ಪಂದನಾಳನ್ನ ಅರಸುತ್ತಾ ಬಂದಳು. ಅವಳ ಮಾತು ಕೇಳಿ, ಬೇರೆ ಅರಿವು ಇಲ್ಲದೆ ಹತ್ತಿರ ಬಂದು ಅವಳ ಕಾಲು ಹಿಡಿದು ಬೇಡ ಎಂದು ಹಠ ಮಾಡಿದ್ದರೂ, ಬಿಡದೇ ಪುಟ್ಟ ಕಾಲುಗಳಿಗೆ ಶೂಸ್ ಹಾಕಿದಳು.
" ಕೃಷ್ಣ,,,, ಎಷ್ಟು ಹಠ ನಿಂದು ಶೂ ಬಿಚ್ಚಿದ್ರೆ ಎರಡು ಕೊಡ್ತೀನಿ"
ಎಂದಳು ನಗುತ್ತಾ.
ಶ್ರಾವ್ಯಳಿಗೆ ಸೌರಭ್ ಗಮನಕ್ಕೆ ಬಾರಲೇ ಇಲ್ಲ. ಸ್ಪಂದನಾಳನ್ನ ಮುದ್ದು ಮಾಡುತ್ತಾ ನಿಂತಳು.
ಆಗಲೂ ಗಮನಿಸದೆ.
ಕ್ಷಣಕ್ಕೆ ಸೌರಭನಿಗೆ ಯಾವುದೋ ಪುಟ್ಟ ಕೋಗಿಲೆ ಮುದ್ದು ಮಾಡುತ್ತಿರುವಂತೆ ಕಂಡಿತು. ಶ್ರಾವ್ಯ ಸ್ವಭಾವ , ಹಠದಲ್ಲಿ ಮಕ್ಕಳಂತೆ ಹೇಗೋ ಅವಳ ಧ್ವನಿ ಕೂಡ ಪುಟ್ಟ ಮಕ್ಕಳಂತೆ. ಒಂದೊಂದು ಪದಕ್ಕೂ ಪೂರ್ಣವಿರಾಮ ನೀಡಿ ಮಾತನಾಡಿದ್ದಾರೆ ಕನ್ನಡ ಪದಕ್ಕೆ ಒಂದು ಅಲಾಂಕರ ಅನಿಸುತ್ತದೆ.
ಇಳಿಸೂರ್ಯನ ಜೊತೆಗೆ
ಸಂಜೆ ಬಾನ ದಿಕ್ಕಲ್ಲೇ ನೋಟ
ಸಾಗರದ ನಡುವೆ ಕೂತು
ಅಲೆಗಳು ಹೇಳೋ ಸಂಗೀತಾ
ಕೇಳಿ ಮನ ಹೇಗೆ ಇರುತ್ತದೆ, ಒಮ್ಮೆ ಕಣ್ಣು ಮುಚ್ಚಿ ಈ ಕ್ಷಣ ಅಲ್ಲಿ ನಾವಿರುವೇವು ಎಂದು ಭಾವಿಸಿ ಆ ಅಲೆಯ ಸಂಗೀತಾ ಆಲಿಸುತ್ತಿರುವೇವು.
ಹೇಗನಿಸಿತ್ತು?
ಇಲ್ಲಿ ಮೂಡಿದ ಭಾವವೇ
ಶ್ರಾವ್ಯಳ ಧ್ವನಿಯಲ್ಲಿ ಅಡಗಿದೆ.
ತುಂಬ ನೋವಲಿದ್ದ ಮನಕ್ಕೆ
ನಗುವಾಗಿ ಬಂದೆ ನೀನು.
ಕಾಣದ ಪ್ರೀತಿಯ ನೀ
ಕಣ್ಮುಂದೆ ತೋರಿಸಿದವಳು ನೀ.
ಬೇಜಾರಲ್ಲಿ ಕೂತಾಗೆಲ್ಲಾ
ನನ್ನ ಮೊಗದಲ್ಲಿ ನಗುವ ತರಿಸಿದವಳು ನೀ.
ಕಷ್ಟವೆಂದಾಗಲೆಲ್ಲಾ ನನ್ನ
ಕಷ್ಟಕ್ಕೆ ನಾ ಸ್ಪಂದಿಸುವೆ ಎಂದವಳು ನೀ.
ಅಂದು ದುಖ:ದಲ್ಲಿದ್ದಾಗಲೆಲ್ಲಾ ಸಮಾಧಾನಿಸಿದವಳು ನೀ.
ಇಂದು ನಿನ್ನ ನೆನಪಲ್ಲಿ ನಾ
ಕಣ್ಣೀರ ಸುರಿಸುತ್ತಿದ್ದರೂ
ಒಂಟಿಯಾಗಿ ನರಳುತ್ತಿದ್ದರೂ
ನೀ ಏಕೆ ಬರುತ್ತಿಲ್ಲಾ ನನ್ನ ಸನಿಹ.
ನಾ ಏಕೆ ಬೇಡವಾದೆ ನಿನಗೆ.
ಪ್ರತಿ ಬಾರಿ ಮೋಸವಾಗುವುದು
ಏಕೆ ನನಗೆ.
ಈ ಪ್ರೀತಿ ಮಾಯೆಯೋ
ಇಲ್ಲಾ ಪ್ರೀತಿಯ ನಾಟಕ ಮಾಡುವವರು ಮಾಯಯೋ
ತಿಳಿಯದಾಗಿದೆ ಈ ಮನಕೆ.