Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಳೆಯು ಸುರಿಯಿತು ಇತ್ತ ಬಾರದೆ
ಎತ್ತ ಹೋದೆಯೋ ರೈತನೆ?
ಸುತ್ತ ಮುತ್ತಲು ನೀರು ಹರಿದಿದೆ
ಬಂದು ಉಳುವೋ ಬೇಗನೇ
ಮುನ್ನ ಮಳೆಯೇ ಇಲ್ಲ ಎಂದು
ನಿನ್ನ ಕಾಯಕ ಮರೆತೆಯಾ
ತನ್ನ ಮನವ ಮುದವಗೊಳಿಸಲು
ಪೇಟೆಯೊಳು ನೀ ನಡೆದೆಯಾ
ಹತ್ತು ಹಲವು ದಿನವು ಕಳೆದು
ನೆಲವು ನಯ-ಹದವಾಗಿದೆ
ಕಳೆದ ಸಮಯ ಮತ್ತೆ ಸಿಗದು
ಬೀಜ ಬಿತ್ತೋ ಬೇಗನೆ
ಬೀಜ ಬಿತ್ತಿ ನೀರ ಹಾಯಿಸಿ
ಹಸಿರು ಸೀರೆಯನುಡಿಸೆಯಾ
ಕಳೆಯ ತೆಗೆದು ಬೆಳೆಯ ಬೆಳೆದು
ನನ್ನ ಒಡಲು ತುಂಬೆಯಾ
ಬೆಳೆಯು ಬಲಿಯಿತು
ಕಟಾವು ಮುಗಿಯಿತು
ನಾ ಬಂಜೆಯಾದೆನು ರೈತನೆ!
ಬಿಸಿಲತಾಪಕೆ ನೀರು ಇಂಗದೆ
ಮತ್ತೆ ಕಾಯುವೆ ಮಳೆಯನೆ
- ಕುಂತೂರು ತ ಸುಬ್ರಹ್ಮಣ್ಯ
ಶೃಂಗೇರಿ
9482119447
- Subramanya K T
17 Jun 2020, 08:39 am
ಚುಕ್ಕಿ ತಾರೆ ನಾನಲ್ಲ,
ಚುಕ್ಕಿಗಳ ಎಣಿಸುವ ಪ್ರಯತ್ನಪಟ್ಟಿಲ್ಲ
ಅತಿಲೋಕ ಸುಂದರಿ ನಾನಲ್ಲ,
ಸುಂದರವಾಗಿ ಕಾಣಬೇಕೆಂಬ
ಹಂಬಲವೂ ನನಗಿಲ್ಲ,
ಹಾಡಿ ಕೊಳ್ಳುವವರು ಹಾಡಿ ಕೊಳ್ಳಲಿ,
ನನ್ನ ಪಯಣವು ಯಶಸ್ಸಿನತ್ತ ಸಾಗುತಿರಲಿ.
:-ವೀಣಾ ಲಿಂಗಣ್ಣ
ರಾಯಚೂರು
- Veena
15 Jun 2020, 08:49 pm
ಸುಳ್ಳು ಸತ್ಯವಾಗುವುದು
ಸಂದಭ೯ಕ್ಕೆ ತಕ್ಕ oತೆ
ಅದೇ ಸತ್ಯ ಸುಳ್ಳಾಗುವುದು
ಸಂಬಂಧಗಳಿಗೆ ತಕ್ಕಂತೆ
ಸುಳ್ಳಾದ ಸತ್ಯವನ್ನು ಒಪ್ಪದೆ
ಸತ್ಯವಾದ ಸುಳ್ಳನ್ನೂ ಒಪ್ಪದೆ
ಕಂಗಾಲಾದ ಮನಸು
ಮೌನವಾದರೂ
ಮತ್ತೆದೇ ಮೌನವನ್ನು
ಹುಡುಕುತ್ತಿದೆ...
- dvja
15 Jun 2020, 07:00 pm
ಮೆರವಣಿಗೆ ಸಾಗಿದೆ
ಮಸಣದ ಹಾದಿಯಲ್ಲಿ
ಮರದ ತೇರು ಸಿಂಗರಿಸಿದೆ
ಹೂ.. ಬಿಡಿಗಾಸು ಚೆಲ್ಲಿ
ಎಲ್ಲರ ನಕ್ಕು ನಗಿಸಿ
ಮಲಗಿಹನು ಬಾನತ್ತ ಮುಖ ಮಾಡಿ
ಸಾಗಿಹರು ಸಾವಿರಾರು ಜನ
ಅವ ನಕ್ಕ ತಿರುಗಿ ನೋಡಿ
ಇರುವಾಗ ಕೊಂದವರು
ಸತ್ತಾಗ ಕೊರುಗುವರು
ಬಣ್ಣದ ಈ ಬದುಕಿನಲಿ
ಯಾರಿಹರು ಯಾರಿಗೆ ಇಲ್ಲಿ
ಶಾಂತವಾಯಿತೇ ಆ ಹೃದಯ
ಸು-ಶಾಂತನ ನಗು ಈಗ ಮಾಯ
ಕಾಡಿದೆ ಅವನ ನಿರ್ಗಮನ
ಸಾಕಾಯಿತೇ ಈ ಜೀವನ ಯಾನ
- Tribhuvan
15 Jun 2020, 12:27 pm
ನಿನ್ನೊಂದಿಗೆ
ಹೆಚ್ಚು ಸಮಯ
ಕಳೆದಾಗಲೆಲ್ಲಾ ಹಿತವೆನಿಸುವುದು..
ನಿನ್ನ ಅಪ್ಪ ನೋಡಿದರೆ
ನಾನು ಆಗಲೇ ಹತನೆನಿಸುವುದು...
- - ಸಿದ್ದು ಕನ್ನಡಿಗ
14 Jun 2020, 06:53 pm
ಬಾನಿಂದ ಬಿದ್ದ ಸ್ವಾತಿ ಹಾನಿಯೂ , ಮುತ್ತಾಗಿ ಹೂಳೆಯುವಹಾಗೆ .
ಬಾನಲ್ಲಿ ಕಾಣುವ ಚಂದ್ರನು ತುಸು ನಕ್ಕು , ನಾಚಿಕೊಂಡ ಹಾಗೆ.
ಮಳೆಯಲಿ ಮಿಂದರು ನೆನೆಯದ ಹಾಗೆ.
ಬಿಸಿಲಲಿ ಬೆಂದರು ಬೆವರದ ಹಾಗೆ .
ಜೋತೆಯಲ್ಲಿ ಬರುವೆ ದಣಿಯದ ಹಾಗೆ .
ಪ್ರೀತಿಯ ಸ್ಪರ್ಶವಾಗಿದೆ ನನ್ನಗೆ ತಿಳಿಯದ ಹಾಗೆ..
ಉಬ್ಬೆರಿಸುವ ನನ್ನ ಕಣ್ಣಗಳು , ನಿನ್ನ ನೋಡಿ ತಾಬಿಬ್ಬು ಗೊಂಡಿದೆ.
ಈ ಅಂಜದ ಎದೆಯಲಿ , ಅಂಜಿಕೆಯೂ ಮನೆ ಮಾಡಿದೆ.
ತಂಗಾಳಿ ಸುಸೂ ತಂಪಲ್ಲಿ ನಿನ್ನ ಮಾತೆ ಕೇಳುತಿದೆ .
ಹೋವು ಸುಸೂ ಕಂಪಲ್ಲಿ ನಿನ್ನ ನೆನಪೆ ಕಾಡುತ್ತಿದೆ..
ನಿನ್ನ ಅನುಸರಿಸಿ ಬಂದ ಅನಾಮಿಕ ನಾನು.
ನಿನ್ನ ಅಪರೂಪದ ಚಲುವಿಗೆ ಅಪರಾಧಿ ಅಗಲೇನು.
ಸೂರ್ಯನ ಕಿರಣಕೆ ಬಾಗಿದೆ ಸೂರ್ಯಕಾಂತಿ.
ನೀ ನನ್ನ ನೋಡುವ ಕ್ಷಣವೆಲ್ಲ ನನಗೆ ಸಂಕ್ರಾಂತಿ ..!
...ನವೀ....
- NaveenkumarK
14 Jun 2020, 10:24 am
ಬೆಳಕು ಹರಿಯಿತು ಗುಡಿಯು ತೆರೆಯಿತು
ಭಕ್ತಿ ಸಾಗರ ಸೇರಿತು
ದೀಪ ಬೆಳಗಿಸಿ ಪಾಪ ಕಳೆಯಲು
ಶಾರದೆ ಸನಿಹಕೆ ಬಾರೆಯಾ
ತಾಯೇ ತುಂಗೆಯು ಶಾಂತಿ ತೋರಿ
ಸಕಲ ಜಲಚರ ಬದುಕಿಸಿ
ಅಳುವ ಕಂದಗೆ ಹಾಲನುಣಿಸುವ
ತಾಯಿ ನಲಿವಳು ಮುದ್ದಿಸಿ
ಮಂದಹಾಸದಿ ಭಕ್ತರ ಹರಸುವ
ಕಠಿಣ ತಪಸ್ಸಿನ ಸದ್ಗುರು
ಮಿನುಗು ತಾರೆಯ ನಡುವೆ ಶಶಿಯು
ಹೊಳೆವ ಹೊಳಪಿನ ಹಂದರು
ತಾಯೇ ಶಾರದೆ ಲೋಕಪೂಜ್ಯಳೇ
ನಿನ್ನ ಶಿಷ್ಯರ ವೇದ ಪಠಣವು
ಉದಯ ಕಾಲದಿ ರವಿಯ ಕಿರಣವು
ಭುವಿಯ ಮುಟ್ಟುವ ತವಕವು
ತುಂಗಾ ತಟವು ಹಸಿರು ವನವು
ಸುತ್ತ ಮುತ್ತಲು ಸುಂದರ
ವಿದ್ಯಾಮಾತೆಯ ಸನಿಹ ಕಳೆದ
ಶಾಂತ ಸಮಯ ಪಾವನ
- ಕುಂತೂರು ತ ಸುಬ್ರಹ್ಮಣ್ಯ
ಶೃಂಗೇರಿ
9482119447
- Subramanya K T
13 Jun 2020, 08:34 pm
ಮುದ್ದು ಮೊಗದ ನನ್ನರಸಿ
ಹುಣ್ಣಿಮೆಯ ಚಂದ್ರನಂತಾ
ಮುತ್ತತಂದಿರುವೆ ನನ್ನರಸಿ
ನೋಡು ನಿ ಮೊಗವರಳಿಸಿ
ಹುಣ್ಣಿಮೆ ಚಂದ್ರಮನೆ ಮುಗುತಿಯಾದ
ನಿನ್ನರಿಸಿ
ಬಾ ಬಾಳ ಗೆಳತಿ ಹುಣ್ಣಿಮೆಯ ಚಂದ್ರನಂತೆ
- ಸುಬ್ರಹ್ಮಣ್ಯ ಶಾಸ್ತ್ರಿ
13 Jun 2020, 07:00 pm
ಜೀವನದ ಪಯಣದಲ್ಲಿ
ಜೊತೆಯಾದ ಜೊತೆಗಾತಿ
ಪ್ರೀತಿಯ ಪಯಣದಲಿ
ಪ್ರೀತಿಯ ಜೊತೆಗಾತಿ
ಕೋನೆಯಾಗದ ಬಾಳ ಪಯಣದಲಿ
ಪ್ರೀತಿಯಿಂದಿರು ಬಾ ನನ್ನ ಜೀವನದ ಜೊತೆಗಾತಿ............
- ಸುಬ್ರಹ್ಮಣ್ಯ ಶಾಸ್ತ್ರಿ
13 Jun 2020, 10:25 am
ನನ್ನ ಮನಸಿನ ಭಾವನೆಯನ್ನೆನೋ ಇಂದು ನೀ ಕಾಲಡಿಯಲ್ಲಿಟ್ಟು ನಗುತ್ತಿರಬಹುದು....ಆ ದೇವರಲ್ಲಿ ಬೇಡುವೆ ನನ್ನ ಸ್ಥಿತಿ ಮುಂದೊಂದು ದಿನ ನಿನಗೆ ಬರದಿರಲಿ ಎಂದು...
....✍️ ರಾಮ್.
- ರಾಮ್
13 Jun 2020, 12:02 am