Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಸ ಅಧ್ಯಾಯಕ್ಕೆ ಒಂದು ವಿದಾಯ.....???
ನಿನ್ನ ಖುಷಿಗೆ ನಾನ್ನಿಲ್ಲದ ಸಮಯ,,,,,
ಸಿಕ್ಕಂತಾಗಿದೆ ನನಗೆ ವಿದಾಯ,,,,
ಸಾಕಲ್ಲವೇ ನನ್ನ ಬದುಕಿನ ಮುಕ್ತಾಯ,,,,,
ಕೊನೆ ಆಗಿದೆ ನಾ ಕೂಡಿಟ್ಟ ಸಮಯದ ಆದಾಯ,,,,
ನಾನಿಲ್ಲದ ಖುಷಿ ನಿನ್ನ ಹೃದಯದ ಸಮಯ,,,,,
ಖುಷಿ ಇರಲಿ ನಿನ್ನ ಹೊಸ ಬದುಕಿನ ಅಧ್ಯಾಯ.......!!??

insta:- unique_abhyaa

- abhi.s.j

23 Oct 2025, 08:42 pm

ಗೆಳತೀ,..ಎಲ್ಲೆಲ್ಲೋ ಹುಡುಕಿದೆ ನಿನ್ನ ..ದೂರದಲ್ಲಿ ಅದೆಲ್ಲೋ ನೀನು ಕಣ್ಣಿಗೆ ಕಾಡಿಗೆ ತೀಡಿರಬೇಕು…!!
ಇಲ್ಲಿ ಆಗಸದ ತುಂಬೆಲ್ಲ..ಕಾರ್ಮೋಡ…!!
ಕಣ್ಣಾಗಿ ನಾನೂ..ಆ ಕಣ್ಣಲ್ಲಿ ಕಣ್ಣೀರಾಗಿ ನಿನ್ನ ನೆನಪುಗಳು ..!! ಅಳಲಾರೆ ನಾನು….ಎಂದಿಗೂ.!!
ಆ ಕಣ್ಣೀರು ಕೂಡ ನನ್ನಿಂದ ದೂರವಾಗುವುದು ನನಗಿಷ್ಟವಿಲ್ಲ…!!
ಅದು ನೀ ನನಗೆ ಕೊಟ್ಟ ಕೊನೆಯ ಉಡುಗೊರೆ !!
ಇಂದು.. ನನ್ನ ಮೇಲೆ ನೀನಿತ್ತ ಗುಲಾಬಿ ಮಾತ್ರ ಸಾಕು ನಾನು ಪುನರ್ಜನ್ಮಿಸಲು…!!

insta:- unique_abhyaa

- abhi.s.j

21 Oct 2025, 11:07 pm


ನಿನ್ನ ಜೊತೆ ಕುಣಿಯೋ ಆಸೆ ,
ಆದ್ರೆ ನನಗೆ ಕುಣಿಯೋದಿಕ್ಕೆ ಬರೋಲ್ಲ
ಎಂಬುದೇ ನಿರಾಸೆ ,....
ನಿನ್ನ ಅಪ್ಪಿಕೊಂಡು ಮುದ್ದಾಡೋ ಆಸೆ ,
ಆದ್ರೆ ನನ್ನ ಸತಾಯಿಸಿ
ಮಾಡ್ತಿಯಲ್ಲೇ ನಿರಾಸೆ ......
ನೀ ಮಾಡೋ ಬಿರಿಯಾನಿ ತಿನ್ನುವ ಆಸೆ
ಆದರೆ ನಿನಗೆ ಮ್ಯಾಗಿ ಬಿಟ್ಟರೆ ಬೇರೆ
ಏನು ಮಾಡೋಕೆ ಬರಲ್ಲ
ಅನ್ನೋದೇ ನಿರಾಸೆ ....
ನಿನ್ನ ಜೊತೆಗೂಡಿ ಬಾಳೋ ಆಸೆ ,
ಆದರೆ
ನಾ ಇಲ್ಲಿಯವರೆಗೂ ಕಂಡಿದ್ದು ಕನಸು ಎಂಬುದೇ ನಿರಾಸೆ .....

insta:- unique_abhyaa

- abhi.s.j

21 Oct 2025, 11:02 pm

ಅವಳಿಲ್ಲದ ಮೊದಲನೇ ದೀಪಾವಳಿ ?

insta:- unique_abhyaa

- abhi.s.j

21 Oct 2025, 10:49 pm



ಮನದಾಳದ ಗರ್ಭದಲಿ
ನೊಂದ ನೆನಪುಗಳ ಚಿತ್ತಾರವು
ಸಣ್ಣ ಬೆಳಕಿಗೂ ಬಾರದೆ ಯಾರಿಗೂ ಕಾಣದೆ
ಅಡಗಿ ಕೂತಿದೆ ಯಾರಲು ಸೇರದೆ

ಕಡಲಾಳದಿಂದ ಉಕ್ಕಿ ಅಲೆಗಳಾಗಿ ಅಪ್ಪಳಿಸಿದಂತೆ
ನೊಂದು ಬೆಂದಾ ನೋವುಗಳು
ಮನದಾಳದಲ್ಲಿ ಕೊರಗಿ ಕೊರಗುತಲಿ
ಕಣ್ಣ ಹನಿಗಳಾಗಿ ಮೌನದಿ ಜಾರಿವೆ

ಸಾಗರದಂತಿದ್ದ ಪ್ರೀತಿಯೂ ಕೈ ಸರಿದು
ಮುಗಿಲೊಂದಿಗೆ ಮುಚ್ಚಿದಂತೆ
ಇದ್ದಕಿದ್ದಂತೆ ಕಂಡಾ ಸುಂದರ ನನಸು
ಕನಸಾಗಿ ಮಾಯವಾಗಿ ಮನಸ್ಸು ಮೂಕವಾಗಿದೆ

ಮುಸ್ಸಂಜೆ ಸರಿದು ಇರುಳ ಬಯಸಿದಂತೆ
ತಡೆಯಲಾಗದ ಮನದ ಮಾತುಗಳು
ಹೃದಯ ಸೇರದೇ ಮೂಕವಾಗಿ
ಕತ್ತಲೆಯ ಆಸರೆ ಬಯಸಿ ಕಾರಾಳ ಇರುಳಲ್ಲಿ ನೆಲಸಿದೆ

ತುಂಬಿದ ನದಿಗಳು ಹರಿಯುವುದ
ತಡೆಯಲಾಗದಂತೆ
ಮನಸ್ಸಿನಲ್ಲಿ‌ ಚಿಗುರಿದಾ ಆಸೆಗಳೆಲ್ಲಾ
ಬಂದಿಸಲಾಗದೆ
ದುಖಃದ ಒಡಲಿನಲ್ಲಿ ಸೇರಿ ಕಂಬನಿಯಾಗಿ
ಮೆಲ್ಲನೆ ಜಾರುವುದನ್ನು ತಡೆಯಲಾಗದಾಗಿದೆ

ಹೃದಯವು ಪ್ರೀತಿಯಾ ಸೇರದೆ ಮೌನವಾಗಿ ಮಿಡಿಯುತಾ
ಕಾಣದ ಪ್ರೀತಿಯೂ ಸಿಗಲಾರದೆ ವೇದನೆಯೂ ಹೆಚ್ಚಾಗಿ
ಮನಸ್ಸನು ತೊರೆದು ಮನಸಾರೆ ಹರಿಯುವುದೆ
ಕಾಣದ ಮಮತೆಯ ಪ್ರೀತಿಯ ಕಡಲ ಸೇರಲು

insta:- unique_abhyaa

- abhi.s.j

21 Oct 2025, 05:40 pm


ನನ್ನ ಜೀವನದ ಅನುಭವ ಮಾತನ್ನ ಹೇಳ್ತಾ ಇದೀನಿ...


ಯಾವುದೇ ವಸ್ತುವಾಗಲಿ ಸಂಬಂಧವಾಗಲಿ ಇದ್ದಾಗಲೇ ಜೋಪಾನ ಮಾಡಿ ಕಳೆದು ಹೋದ ಮೇಲೆ ಹುಡುಕಿದರು ಮತ್ತೊಂದು ಪಡೆಯಲು ಸಾಧ್ಯವಿಲ್ಲ.

insta:- unique_abhyaa

- abhi.s.j

21 Oct 2025, 05:03 pm

ನನ್ನಯ ಕಥೆಯೊಂದು?


ಜೀವವು ಇರದ ಜೀವನದಲ್ಲಿ
ಬದುಕೇ ಇಲ್ಲದ ಕಾಯಕದಲ್ಲಿ
ಕಥೆಯ ಒಂದನು ಹೇಳುವೆ
ಎನ್ನ ಕಥೆಯ ಒಂದನು ಹೇಳುವೆ |೧|

ನಲಿಯುತ ಹಾಡುತ ಕುಣಿಯುತಲಿದ್ದೆ
ಸಮಯಕ್ಕೆ ತಕ್ಕಂತೆ ಬರುತ್ತಿತ್ತು ನಿದ್ದೆ
ಪ್ರೀತಿಯೆಂದರೇನು? ಅರಿಯದೆ
ಒಂದು ಹುಡುಗಿಯ ಪ್ರೀತೀಲಿ ಬಿದ್ದೆ |೨|

ಜೂನು ತಿಂಗಳು ವಾರವೇ ಗೊತ್ತಿಲ್ಲ
ಮೊದಲ ಬೇಟಿಯು ಅಂದೇ ಆದೆನಲ್ಲ
ಹೃದಯವು ತಡವರಿಸಿ ಪ್ರೀತೀಲಿ ಬಿತ್ತಲ್ಲ
ಅವಳ್ಯಾರೋ? ಅಂತ ಒಂದೂ ಗೊತ್ತಿಲ್ಲ |೩|

ಅವಳ ನೋಟಕ್ಕೆ ಹೃದಯವೇ ಗಾರುಡಿಗ
ಮನಸ್ಸಿಗೆ ಅವಳ ನೆನಪೇ ಸೋಜಿಗ
ಪ್ರೀತಿಯೇ ಮಾಯಾ ಜಾಲದ ಅಂಬಿಗ
ಹುಟ್ಟು ಇಲ್ಲದೆ ಸಾಗಿದ ನಾವಿಕ |೪|

ದಿನವು ಉರುಳಿದಂತೆ ಒಲವು ಹೆಚ್ಚಿತು
ನಿನ್ನೊಲವ ಭೇದಕೆ ಹೃದಯ ಬೆಚ್ಚಿತು
ಯಾವ ವಿಷದ ಜಂತುವು ಕಚ್ಚಿತು
ನನಗೆಂದೂ ತೆರೆಯದೆ ಬಾಗಿಲು ಮುಚ್ಚಿತು |೫|

ಮಾತಿನ ಇರಿತದಲಿ ನಾನು ನೊಂದೆ
ಮರುಮಾತ ಆಡದೆ ಒಳಗೆ ಬೆಂದೆ
ತಪ್ಪನು ಮಾಡದೆ ನೀನೇಕೆ? ಅಂದೆ
ನನ್ನಯ ನೋವು ನಿನ್ನರಿವಿಗೆ ಬಾರದೆ |೬|

ನನ್ನಯ ಕಥೆಯ ಕೇಳಲು ಗೋಳು
ಹೃದಯದ ಅಂತರದಲಿ ತುಂಬಿಹೆ ಅವಳು
ಕಾರಣವ ಹೇಳದೇ ಬಿಟ್ಟೇ ಹೋದಳು
ಎಂದಾದರೂ ಮತ್ತೆ ಸಿಗಬಹುದೇ! ಅವಳು |೭|

insta:- unique_abhyaa

- abhi.s.j

20 Oct 2025, 06:51 pm



ಆಕಾಶ ಬಿಕ್ಕುತಿದೆ
ಮುಗಿಲ ಮುಸುಕ ಮರೆಗೆ
ಮಾತಿರದ ತಾರೆಗಳು
ಅಡಗಿ ಕುಳಿತ ಗಳಿಗೆ...

ಸೂರ್ಯ ಚಂದ್ರರಿರದೆ
ಸುರಿದ ಕಪ್ಪು ಸುತ್ತ ಚೆಲ್ಲಿ
ಹಸಿರ ಉಸಿರು ಅಡಗಿ ಹೋಗಿ
ಹೊಳೆವ ದಾರಿಯಲ್ಲಿ...

ಕುದಿವ ಕಡಲು ಹೊರಳುತ್ತಿದೆ
ಒಡಲ ಆಳದುರಿಗೆ
ಬದಿಯ ಒಂಟಿ ದೀಪದಿಂದ
ಮಬ್ಬು ಸುರಿವುದಿಳೆಗೆ...

ಮಸುಕು ಮಸುಕು ಆಕೃತಿಗಳು
ಚಲಿಸಿದಂತೆ
ಕವಿದ ತೆರೆಯ ಅಚೆಯಿಂದ
ಏನೋ ಹೊಳೆದಿದೆ


insta:- unique_abhyaa

- abhi.s.j

20 Oct 2025, 06:49 pm

ಹೆಣ್ಣು ಮಕ್ಕಳನ್ನು ಪಡೆದಿರುವ ಎಲ್ಲಾ ಅದೃಷ್ಟವಂತ ಅಪ್ಪಂದಿರಿಗೆ ಇದು ಸಮರ್ಪಣೆ..??

ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯದಾಗಿ ” ನಿನಗೇನೂ ಆಗಲ್ಲ ಚಿನ್ನೂ , ಏನೂ ಹೆದರಬೇಡ ” ಅಂತ ಒಳಗೊಳಗೆ ಅಳುತ್ತಿದ್ದರೂ , ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿಯಿಂದ ಸವರುತ್ತಾ, ಆಕೆಯ ಹಣೆಗೆ ಮುತ್ತಿಕ್ಕಿ ಸಾಂತ್ವನ ಹೇಳುತ್ತಾ ಕಳುಹಿಸಿಕೊಡುವಾಗ – ” ಓ ದೇವರೇ ತಾಯಿ ಮಗುವನ್ನು ನೀನೇ ಕಾಪಾಡು ” ಎಂಬ ಪ್ರಾರ್ಥನೆಯಾಗಿರುತ್ತದೆ ಗಂಡನಾದವನ ಮನಸಲ್ಲಿ….

ನಿಮ್ಮ ಪತ್ನಿ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದಾಳೆ ತಾಯಿ ಮಗು ಚೆನ್ನಾಗಿದ್ದಾರೆ… ಅಂತ ಡೋರ್ ತೆರೆದು ಬಂದ ನರ್ಸ್ ಹೇಳುವಾಗ ಆತನ ಕಣ್ಣುಗಳಲ್ಲಿ ಆತಂಕ ಮತ್ತು ಮನದೊಳಗೆ ಸಂತೋಷವೂ ಕಾಣಿಸುತ್ತದೆ ಆ ತಂದೆಯಲ್ಲಿ….

ನಂತರದ ದಿನಗಳಲ್ಲಿ ಆ ಮುದ್ದು ಮಗಳ ಉತ್ತಮ ಭವಿಷ್ಯವನ್ನು ರೂಪಿಸುವ ತಯಾರಿಯಲ್ಲಿ ಮಾತ್ರ ಬ್ಯುಸಿಯಾಗಿರುತ್ತಾರೆ ಆ ತಂದೆ…..

ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹಿ, ಸಂತೋಷದ ದಿನಗಳುರುಳುತ್ತಿದ್ದಂತೆ ಒಂದು ದಿನ ಆಕೆ ಋತುಮತಿಯಾದಾಗ , ಮೊದಲು ಆ ತಂದೆಯ ಮನಸೊಮ್ಮೆ ಮರುಗಿತಾದರೂ , ಈ ಕ್ರಿಯೆಯು ಯಾವತ್ತಾದರೂ ಹೆಣ್ಣೊಬ್ಬಳಿಗೆ ಆಗಲೇ ಬೇಕಲ್ಲವೇ ಅಂತ ತನ್ನನ್ನು ತಾನೇ ಸಂತೈಸುವ ಮನಸಾಗಿರುತ್ತದೆ ಆ ತಂದೆಯದ್ದು….

ವಯಸಿಗೆ ಬಂದ ಮಗಳ ಶರೀರ ಭಾಗಗಳಲ್ಲಿ ಬೆಳವಣಿಗೆಯ ಬದಲಾವಣೆಯಾದಾಗ ಆ ತಂದೆಯ ಮನಸಲ್ಲಿ ಭಯವೆಂಬ ಕಪ್ಪುಛಾಯೆ ನೆಲೆಯೂರುತ್ತದೆ….

ನಂತರದ ದಿನಗಳಲ್ಲಿ ಮಗಳ ಪ್ರಯಾಣ ಮತ್ತು ವಸ್ತ್ರಧಾರಣೆಯು ತಂದೆ ಹೇಳುವ ಪ್ರಕಾರವೇ ಆಗಿರುತ್ತದೆ….

ದಿನನಿತ್ಯ ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸುವಾಗ ಖರ್ಚುಗಳನ್ನು ಕಡಿಮೆ ಮಾಡಿಯೂ , ಸಾಮಾನುಗಳ ಬೆಲೆಯನ್ನು ಚರ್ಚೆ ಮಾಡಿಯೂ ಮಗಳ ಮದುವೆ ಖರ್ಚಿಗಾಗಿ ಒಂದೊಂದು ರುಪಾಯಿಗಳನ್ನು ಒಟ್ಟುಗೂಡಿಸುತ್ತಿರುತ್ತಾರೆ ಆ ತಂದೆ….

ತಡ ರಾತ್ರಿಯವರೆಗೂ ಮಗಳ ಕೋಣೆಯಲ್ಲಿ ಲೈಟ್ ಆನ್ ಮತ್ತು ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕುಳಿತಿರುವ ಮಗಳನ್ನು ನೋಡುವಾಗ ಆ ತಂದೆಯ ಮನಸಿನಲ್ಲಿ ಒಂದೇ ಪ್ರಾರ್ಥನೆಯಾಗಿರುತ್ತದೆ – “ದೇವರೇ ಮಗಳು ದಾರಿತಪ್ಪದಿರಲಿ… ಮಗಳ ನಡೆ ಒಂದು ಅವಗಡಕ್ಕೆ ಕಾರಣವಾಗದಿರಲಿ…..”

ಮಗಳನ್ನು ಕಾಣಲು ಬಂದ ವರನ ಮುಂದೆ ಮಗಳನ್ನು ಕರೆತಂದು ನಿಲ್ಲಿಸುವಾಗ ಆ ತಂದೆಯ ಮುಖದಲ್ಲಿ ಮುಗುಳ್ನಗುವಿದ್ದರೂ, ಆ ಮನಸಲ್ಲಿ ಒಂದು ನಡುಕ ಉಂಟಾಗುವುದು….. ತನ್ನ ಮುದ್ದು ಮಗಳನ್ನು ಅಪರಿಚಿತನೊಬ್ಬನ ಮನೆಗೆ ಕಳುಹಿಸಿಕೊಡುವುದನ್ನು ನೆನೆದು ಉಂಟಾದ ನಡುಕ….

ಮದುವೆ ನಿಶ್ಚಯವಾದರೆ ದಿನಗಳು ಬೇಗಬೇಗ ಉರುಳುತ್ತಿರುವಂತೆ ಅನಿಸುತ್ತದೆ ಆ ತಂದೆಗೆ…. ಮನೆಯಲ್ಲಿ ಒಂದು ಕಪ್ ಟೀಯನ್ನು ಕೂಡಾ ನೆಮ್ಮದಿಯಿಂದ ಕುಡಿಯಲು ಸಾಧ್ಯವಾಗದಷ್ಟು ಅಲ್ಲೋಲಕಲ್ಲೋಲವಾಗಿರುತ್ತದೆ ಆ ತಂದೆಯ ಮನಸು…..

ಮದುವೆ ದಿನದಂದು ಆ ಅಪರಿಚಿತನ ಕೈಗೆ ತನ್ನ ಮಗಳ ಕೈಯನ್ನು ಜೋಡಿಸಿ ಹಿಡಿಯುವಾಗ ಆ ತಂದೆಯ ತುಂಬಿದ ಕಣ್ಣುಗಳು ಮತ್ತು ದುಃಖ ತಡೆಯಲಾಗದೆ ನಡುಗುತ್ತಿರುವ ತುಟಿಗಳು ಕಾಣುವುದು…

ಮನೆಯ ಮೆಟ್ಟಿಲುಗಳನ್ನು ಇಳಿದು ಹೋಗುವಾಗ ತನ್ನ ಎದೆಯ ಮೇಲೆ ಮಲಗಿದ ಮುದ್ದು ಮಗಳ ಬಾಲ್ಯದ ನೆನಪುಗಳಾಗಿರುತ್ತದೆ ಆ ತಂದೆಯ ಮನಸಲ್ಲಿ…..

ಮದುವೆಯ ಕಾರ್ಯಕ್ರಮವೆಲ್ಲಾ ಮುಗಿದ ನಂತರದ ದಿನಗಳಲ್ಲಿ ಮದುವೆಯ ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲು ಆ ತಂದೆಯು ಕಷ್ಟಪಡುವ ದಿನರಾತ್ರಿಗಳಾಗಿರುತ್ತದೆ….

ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆಕಟ್ಟಲಾಗದು…..

insta:- unique_abhyaa

- abhi.s.j

20 Oct 2025, 06:46 pm


ಒಂದು ದಿನ ಪ್ರತಿ ಕ್ಷಣ
ನನ್ನ ಮನ ನಿನ್ನ ಕೆಳದಿರದು,
ಯಾಕೆಂದು ನಾ ಕೇಳ ಹೊರಟೆ
ಆಗ ನನ್ನ ಮನಸ್ಸು ಹೇಳಿದ್ದು ಒಂದೇ ಗುಡಿಯನ್ನೇ ಕಟ್ಟಿರುವೆ ಪೂಜಿಸದಿರುವೆಯಾ

- manjunatha

19 Oct 2025, 10:31 pm