Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಗಳಿಗೆ ಜನುಮದಿನದ ಶುಭಾಶಯಗಳು

ಪ್ರಥಮ ಅಳುವಿನ ನಿನ್ನ ಆ ದಿನ
ಎನ್ನ ಜೀವನದ ಸುವರ್ಣ ದಿನ
ತೊದಲು ಮಾತು ಅಂಬೆಗಾಲಿಡುತ್ತಾ
ನೀ ಬೆಳೆದೆ ಎನ್ನಲ್ಲಿ ಹೊಸ ಹುರುಪು ತುಂಬುತ್ತಾ
ನಿನ್ನ ಆಟ ತುಂಟಾಟಗಳ ನೋಡುತ್ತಾ
ಮರೆತೆ ನಾನು ದುಃಖ ದುಮ್ಮಾನಗಳ
ದೀಪಾವಳಿ ಇರಲಿ ಯುಗಾದಿಯೇ ಬರಲಿ
ಎಲ್ಲಕ್ಕಿಂತ ಮಿಗಿಲು ನನಗೆ ಈ ದಿನ
ಸೂರ್ಯಚಂದ್ರರ ಮರೆಮಾಚಿ
ಎನ್ನ ಮನದ ಮನೆಯ ಬೆಳಕಾದೆ ನೀ
ಎಷ್ಟು ಕೊಂಡಾಡಿದರು ಮುದ್ದಾಡಿದರು
ಸಾಲದು ಓ ಎನ್ನ ಮುದ್ದು ಮಗಳೇ
ಇದೋ ನಿನಗೆ ಜನುಮದಿನದ ಶುಭಾಶಯಗಳು
ಬಾಳು ನೀನು ನೂರಾರು ವರ್ಷ
ನಕ್ಕು ನಲಿಯುತ ಪ್ರೀತಿಯ ಹಂಚುತ

- santhoshkumar

21 Jun 2020, 08:50 am

ಸಾವು ಸಾವು

ಸಾಗಿಹುದು ಮೆರವಣಿಗೆ
ಮಸಣದ ಹಾದಿಯಲ್ಲಿ
ಸುಮಭರಿತ ಪುಷ್ಪಗಳ
ಸಿಂಗರಿಸಿದೆ ಮರದ ತೇರು
ನಲಿಸಿ ಅಳಿಸಿ ಮಲಗಿಹನು
ಧೀರ್ಘಕಾಲದ ನಿದಿರೆಲೀ
ಜೀವನವಿಡೀ ಕೊಂದವರೆಲ್ಲ
ನಡೆ ನುಡಿ ಕಾರ್ಯಗಳೊಲ್
ಹೋದಾಗ ಕೊರಗುವರಯ್ಯ
ಬಣ್ಣದ ಲೋಕದ ಬದುಕಲ್ಲಿ
ಯಾರೂ ಇಲ್ಲ ಒಡನಾಡಿಗಳು
ಎಲ್ಲ ಭವಬಂಧನ ತೊಡೆದು
ಶಾಂತವಾಗಿಹುದು ಹೃದಯ...!!

- Yashaswi Gowda

20 Jun 2020, 08:25 pm

ಭಗವಂತನ ಆಟ...

ದಿನಕ್ಕೆಷ್ಟೋ ಜನನ
ದಿನಕ್ಕೆಷ್ಟೋ ಮರಣ
ಅರೆ ಕ್ಷಣವೂ ನಿನಗಿಲ್ಲ ಸೂಟಿಯು..
ಸ್ನೇಹ ಕೊಟ್ಟೆ ಪ್ರೀತಿ ಕೊಟ್ಟೆ
ಬದುಕುವ ಆಕಾಂಕ್ಷೆ ಕೊಟ್ಟೆ
ರೀತಿ ಕೊಟ್ಟೆ ನೀತಿ ಕೊಟ್ಟೆ
ಕಟ್ಟಕಡೆಗೆ ಸಾವನಿಟ್ಟೆ..
ಓ ಭಗವಂತ ನಿನಗೆ ನೀನೆ ಸಾಟಿಯು..
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

20 Jun 2020, 07:20 pm

ಬೆಳದಿಂಗಳೇ ಶೀರ್ಷಿಕೆ..!

ಅ ಚಂದ್ರನ ಹೋಲಿಕೆ.
ಬೆಳದಿಂಗಳೇ ಶೀರ್ಷಿಕೆ . 
ಹೃದಯದ ಬಯಕೆ ಸಾವಿರ.
ಕನಸು ಕಾಣುವೆ ನಿರಂತರ . 
ನೋಡುತಲಿ ನಿನ್ನ ಸೂಗಸು.
ಹದಗೆಟ್ಟಿದೆ ನನ್ನ ಮನಸ್ಸು....!

ಬಾರೆ ಬೆಳದಿಂಗಳಾಗಿ.
ನಾ ಬರುವೆ ನಿನ್ನ ನೆರಳಾಗಿ . 
ನೀ ಬಂದೆ ನನ್ನ ಬೆಳಕಾಗಿ.
ನಾ ನಗುವೆ ನಿನ್ನ ಬದಲಾಗಿ . 
ನೀನಿಲ್ಲದ ಜಗವೆಕೆ.
ಮಾತು ತಿರುಗಿದೆ ಮೌನಕ್ಕೆ.
ನೀರಿಲದ ಕಡಲಲ್ಲಿ ಸಾಗುತಿದೆ ನೌಕೆ.
ನಿನ್ನ ನೋಡಿ ಮನಸ್ಸು ಹಾಕುತಿದೆ ಕೇಕೆ..!

- NaveenkumarK

20 Jun 2020, 05:36 pm

ನಮ್ಮ ಸಮಾಜದಲ್ಲಿ..

ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಅವರ ಕನಸುಗಳು ಕಣ್ಣಲ್ಲೇ ಉಳಿದು ಕಣ್ಣೀರಾಗಿ ಹೋಗಬೇಕೆ ಹೊರೆತು ನನಸಾಗಿ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಲು ಯಾವ ತಂದೆ ತಾಯಿಯೂ ಬಿಡುವುದಿಲ್ಲ ಕಾರಣ ಸಮಾಜ, ವಯಸ್ಸು, ಆರ್ಥಿಕ ಬಿಕ್ಕಟ್ಟು, ಬಂಧುಗಳು ಮತ್ತು ಸ್ನೇಹಿತರು.

ಈ ಮಧ್ಯಮ ವರ್ಗದ ಜನರಿಗೆ ತಮ್ಮ ನೋವು ನಲಿವುಗಳಿಗಿಂತ ಸಮಾಜದಲ್ಲಿ ತಮ್ಮ ಗೌರವ ಮರ್ಯಾದೆ ಹೆಚ್ಚು ತಮ್ಮ ಮಕ್ಕಳ ಆಸೆ ಕನಸುಗಳಿಗಿಂತ ಇತರರ ಬಾಯಲ್ಲಿ ಒಂದು ಮಾತು ಕೇಳದೆ ಬದುಕಿಬಿಟ್ಟರೆ ಸಾಕು ಜೀವನ ಧನ್ಯ.
ಅದರಲ್ಲೂ ಹೆಣ್ಣು ಎಂದರೆ ಋಣಾತ್ಮಕ ಗಂಡು ಎಂದರೆ ಧನಾತ್ಮಕ ಭಾವನೆ ಇವರಲ್ಲಿ ಹೆಣ್ಣನ್ನು ಹೆಚ್ಚಿಗೆ ಓಡಿಸಿದರೆ ನಮಗೇನು ಸಿಗುತ್ತದೆ ಅವಳ ಅತ್ತೆ ಮನೆಯವರಿಗೆ ದುಡಿದು ಹಾಕುತ್ತಾಳೆ ಹೋಗುವುದು ನಮ್ಮ ದುಡ್ಡು ಅದೇ ಮಗನನ್ನು ಓದಿಸಿದರೆ ಜೀವನ ಪೂರ್ತಿ ನಮಗೆ ಉಳಿಯುತ್ತದೆ ಎನ್ನುವ ಆಲೋಚನೆಯೇ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಲು ಮೊದಲ ಕಾರಣ.

ನೀವು ಹೇಳಿದಂತೆ ಅತ್ಯಾಚಾರ ಅನಾಹುತಗಳು ಬರಿ ಹೆಣ್ಣಿಗೆ ಸೀಮಿತ ಮಾಡಿರುವುದು ನಮ್ಮ ಸಮಾಜವೇ ಅಲ್ಲವೇ ಅದೇ ಸಮಾಜ ಒಂದೆಜ್ಜೆ ಮುಂದಾಕಿ ಇವನ್ನೆಲ್ಲಾ ನಿಲ್ಲಿಸಲು ಪ್ರಯತ್ನ ಮಾಡಿದರೆ ನಿಲ್ಲುವುದಿಲ್ಲವೇ?
ಪುರುಷ ಪ್ರಧಾನ ಪ್ರಪಂಚದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ನನ್ನ ನಂಬಿಕೆ ಏಕೆಂತದರೆ ತನಗೆ ಆದದ್ದು ತನ್ನ ಮಗಳಿಗೆ ಆಗಬಾರದೆಂದು ಅವಳು ಸ್ವತಂತ್ರಳಾಗಬೇಕೆಂದು ಒಂದು ತಾಯಿ ಅಂದುಕೊಳ್ಳದ ಹೊರೆತು ಯಾವ ಹೆಣ್ಣು ಸ್ವತಂತ್ರಳಲ್ಲ.

- ಚುಕ್ಕಿ

20 Jun 2020, 11:13 am

ದೇಹ ಆತ್ಮದ ನಂಟು

ಅವಿನಾಭಾವ ಸಂಬಂಧ
ಆತ್ಮಕ್ಕೂ ಅನಿಲಕ್ಕೂ
ಕೈಗಳಿಗೂ ನಿಲುಕದೇ
ಕಣ್ಣುಗಳಿಗೂ ಕಾಣಿಸದು
ಮೈಮನಕಷ್ಟೇ ಸೀಮಿತ
ಪ್ರೀತಿಯೋ ಅನಿವಾರ್ಯವೋ
ಶರೀರವು ಆತ್ಮದ ನಂಟು
ಧರಣಿಯು ದೇಹದ ಬೆಸುಗೆ
ಶರೀರ ರಹಿತ ಆತ್ಮವು
ವಾಯುವಲ್ಲಿ‌ ಲೀನವು
ಜೀವ ರಹಿತ ದೇಹವು
ಧರಿತ್ರಿಲೀ ವಿಲೀನವಯ್ಯ....!

- Yashaswi Gowda

19 Jun 2020, 10:43 pm

ನನ್ನ ನೆನಪಿರಲಿ .....!

ಮಲೆನಾಡಿನ ಹುಡುಗಿ ನನವಳು.
ಮಲೆನಾಡಿನ ಚಲುವನು ಪಡೆದವಳು .
ಕಾವೇರಿ ತಾಯಿಯ ಮಡಿಲಲ್ಲಿ ಬೆಳೆದವಳು . 
ನನ್ನ ಹುಡುಗಿ ಹಾಡೂ ಮಾತು ಮಗುವಿನ ತರಹ.
ನುಡಿ ಮುತ್ತು ಪೂಣಿಸಿದಂತೆ ನನ್ನ ನಲ್ಲೆಯ ಬರಹ ....!

ಅತಿಯಾಗಿ ಹುಚ್ಚನಗುವ ಬಯಕೆ.
ನಿನ್ನ ನಗುಮುಖವ ನೋಡಿದ ಕ್ಷಣಕೆ.
ನನ್ನ ನಲ್ಲೆಯ ಮುಖದಲ್ಲಿ ಯಾವಗಲು ನಗುವಿರಲಿ ,
ಆ ನಗುವಿನಲ್ಲಿ ನನ್ನ ನೆನಪಿರಲಿ .....!

- NaveenkumarK

19 Jun 2020, 08:47 pm

ದಯಮಾಡಿ ಕರುಣಿಸು ಭಗವಂತ.....

ದಯಮಾಡಿ ಕರುಣಿಸು ಭಗವಂತ, ಕೋರೋನ

ಓಡಿಸು ಭಗವಂತ.

ಏನಾದರೂ ತಪ್ಪಾಗಿದ್ದರೆ ನಮ್ಮನ್ನು ಕ್ಷಮಿಸಿಬಿಡು ಭಗವಂತ,ಭಾರತ ನೋವನ್ನ ನಿವಾರಿಸು ಭಗವಂತ.

ಯಾಕೆ ಈ ಪರೀಕ್ಷೆ ಭಗವಂತ ,ಇದರಿಂದ ಭಾರತದಲ್ಲಿ ಎಷ್ಟೋ ಅಮಾಯಕ ಜನ ಮೃತಪಟ್ಟಿದ್ದಾರೆ .

ದಯವಿಟ್ಟು Corona ಓಡಿಸು ,ಭಾರತ ದೇಶ ಉಳಿಸು

- shreeVidyaGs

19 Jun 2020, 12:01 am

ಕಣ್ಣಾ ಮುಚ್ಚಲು  ನೀನದೆ  ಯೋಚನೆ....

ಕಣ್ಣಾ ಕಡಲಲ್ಲಿ ಕನಸಿನ ಸೇಳೆತ.
ಮನಸ್ಸ ಮುಗಿಲಲಿ ಪ್ರೀತಿಯ ಮೀಡಿತ.
ಕಣ್ಣಾಲ್ಲಿ ಪ್ರೀತಿ ಕರಗಿ ನೀರಾಗುತೆ.
ಮನಸಲ್ಲಿ ಪ್ರೀತಿ ಕೂಡಿ ಜೇನಗುತೆ.
ಕಣ್ಣಾ ಮುಚ್ಚಲು  ನೀನದೆ  ಯೋಚನೆ.
ಮನಸ್ಸು ನೀಡಿದೆ ಪ್ರೀತಿಯ ಸೂಚನೆ ...! 

----ನವೀ....

- NaveenkumarK

18 Jun 2020, 10:36 pm

ನನ್ನವಳ ನೆನಪು....

ಮುಂಜಾನೆ ಇಬ್ಬನಿಯ ಮಂಜಿನಲಿ ಬಂದು ಮದ್ಯಾಹ್ನ ಸುಡು ಬಿಸಿಲಿನಲಿ ಎದೆಯ ಸುಟ್ಟು ಸಂಜೆ ಕಾಫಿ ಬಟ್ಟಲು ಕೈಯಲ್ಲಿಟ್ಟು ರಾತ್ರಿ ಕಣ್ಣೀರಲ್ಲಿ ಜಾರಿ ಹೋಗುವಳು....

...✍️.ರಾಮ್.

- ರಾಮ್

18 Jun 2020, 10:21 pm