Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮುಂಗಾರು ಮಳೆ ಹನಿಯ ಸಿಂಚನ
ಭುವಿಗೆ ಆಗಮಿಸಿದ ಮಳೆರಾಯನ
ಪಯಣ.........
ಭುವಿಗೆ ತಂಪಾದ ವಾತಾವರಣ
ಎಲ್ಲಾ ಮನಸುಗಳ ರೋಮಾಂಚನ
ತಲೆದೂಗಿದ ಮರ ಬಳ್ಳಿಯ ತೋರಣ
ಅಂಗಳದಲ್ಲಿ ನೀರು ಗುಳ್ಳೆಗಳ ಚೆಲ್ಲಾಟ
ನಲ್ಲೆ ನಲ್ಲೆಯರ ಜೊತೆ ಪ್ರೇಮದಾಟ
ಮುಂಗಾರುಮಳೆ ಏನು ವರ್ಣಿಸಲಿ
ನಿನ್ನ ಬರುವಿಕೆಗೆ, ಅಂದಕೆ ಬೆರಗಾದೆ
ಎಲ್ಲರಿಗೂ ಬೇಕಾಗುವ ಉತ್ಸಾಹದ ಚಿಲುಮೆಯಾದೆ.....
ಬದಲಾವಣೆಯ ಸಂಕುಲಕ್ಕೆ ಸಾಕ್ಷಿಯಾದೆ
- M S Yadav
22 Jun 2020, 09:06 am
ನಿನ್ನ ನಾ ಮರೆಯಲೆಂದು
ನನ್ನ ಎದೆಯ ಕಲ್ಲಾಗಿ ಮಾಡಿ ಕೊಂಡರೆ
ಕಲ್ಲೇ ಶಿಲೆಯಾಗಿ ಶಿಲೆಯೇ
ನಿನ್ನ ಪ್ರತಿ ರೂಪವಾದರೇ
ನಾ ಹೇಗೆ ಮರೆಯಲಿ ಗೆಳತಿ
ನಿನ್ನ ಆ ನೆನಪುಗಳನ್ನಾ....
- Jaya Kumar
22 Jun 2020, 08:41 am
ಕಾದು ಕುಳಿತಿರುವೆ ಗೆಳತಿ
ನಾನು ನಿನ್ನ ನೋಡಲು ಅಲ್ಲ
ಸಿಗದ ನಿನ್ನ ಪ್ರೀತಿಯ ತುಸು ಮಾತಿಗೆ
ಹುಚ್ಚು ಪ್ರೀತಿಯ ಪೆದ್ದು ಮನಸ್ಸು
2337
- Parashuram2337
21 Jun 2020, 09:16 pm
ದಿನಕ್ಕೊಂದು ಕವನ
ನಿನ್ನ ನೆನಪೇ ಅದಕ್ಕೆ ಕಾರಣ,
ಬರೆದು ಹೇಳುವೇ ನಮನ,
ನಿನ್ನ ಪ್ರೀತಿಸುವುದು ನನ್ನ ಮನ,
ನನ್ನ ಪ್ರತಿ ಕ್ಷಣ ನಿನದೇ ಗಮನ
- Ananda J U
21 Jun 2020, 08:23 pm
ನೀನು ಕಾಣದೆ
ಏಕೆ ಮರೆಯಾದೆ
ಸದ್ದಿಲ್ಲದೆ ನಾನು ಮೌನವಾದೆ
ನೋವಿನ ಅಂಚಿನಲ್ಲಿ ಸೆರೆಯಾದೆ
ಪ್ರತಿ ಕಾರ್ಯದಲ್ಲೂ ನಿಶಕ್ತನಾದೆ
ಪ್ರತಿನಿತ್ಯವೂ ಚಂಚಲಾನಾದೆ
ಏಕೆ ಹೀಗೆ ಆದೆ
ನಿಜಕ್ಕೂ ನಾನು ಇದ್ದು ಕಾಣೆಯಾದೆ
ಬದುಕಲ್ಲಿ ನಿಷ್ಕ್ರಿಯವಾದೆ
- Shivakumara S
21 Jun 2020, 06:42 pm
ಸಿರಿವಂತನಲ್ಲ ಎನ್ನ ತಂದೆ
ಇದ್ದುದರಲ್ಲಿ ಬದುಕಲು ಹೇಳಿಕೊಟ್ಟ ಧೀಮಂತನು
ಸ್ವಾಭಿಮಾನಿತ್ವ ಮನದಲ್ಲಿ ಬೆಳೆಸಿದ ಮಹನೀಯನು
ಕನಸುಗಳ ರೂವಾರಿಯಾದವನು
ಪ್ರಥಮ ಹೆಜ್ಜೆ ಗುರುತಿನ ಜೊತೆ ನಿಂತವನು
ಅತ್ತು ಸೋತಾಗ ಧೈರ್ಯ ತುಂಬಿದ ಅಗಾಧ ಶಕ್ತಿ
ಆಕಾಶ ಚುಂಬನ ಪ್ರೀತಿಯಿರೆ
ಮೊಗದಲ್ಲಿ ಗಂಭೀರತೆಯ ಪರದೆ ಇರಿಸಿದವರು
ಮೌನವಾಗಿ ನೋವನ್ನೆಲ್ಲ ತನ್ನ ಮನದಲ್ಲಿ ಇಟ್ಟವನು
ಕಂಡು ಕಾಣದ ತ್ಯಾಗಮಯೀ
ಜೀವನವೆಲ್ಲ ತನ್ನವರಿಗಾಗಿ ದುಡಿದ ಕಾಯಕಯೋಗಿ
ಶಿಸ್ತಿನ ಪಾಠದ ಮೊದಲ ಗುರು ಅಪ್ಪ......!!
- Yashaswi Gowda
21 Jun 2020, 03:33 pm
ಚೈತ್ರ ಮಾಸದ ಹಸಿರಂಗ್ವಾಳೇ.
ಮಾಘ ಮಾಸದ ಚಳಿಯoಗ್ವಾಳೇ.
ಸುಗ್ಗಿ ಕಾಲದ ಬೆಳೆಯಂಗ್ವಾಳೇ.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..
ರಾಗಿಯ ಪೈರಂಗೆ ಹಚ್ಚಗವಳೇ.
ಮನೆಮಂದಿಯಲ್ಲ ಒಪ್ಪಿ ಮೆಚ್ಚನ್ಗೆಗ್ವಾಳೇ.
ಗದ್ದೆ ಸಾಲಲ್ಲಿ ಬುತ್ತಿ ಹೋತುತರುತ್ತಾಳೆ.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..
ಮಳೆ ಬಿಲ್ಲನ್ನು ಕೈಯಲ್ಲಿ ಹಿಡ್ಕೊಂಡು.
ಆ ಚಂದ್ರನ ಕಾಲಲ್ಲಿ ತುಳ್ಕೊಂಡು.
ಆ ನಕ್ಷತ್ರದ ನಗುವನ್ನು ಊರೆಲ್ಲ ಚಲ್ಲಿಕೊಂಡು.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..
ಮುಂಗುರುಲು ಬಿಟ್ಟಕೊಂಡು.
ಕೆನ್ನೆಗೆ ಕೆಂದವರೆ ಬಣ್ಣ ಬಳ್ಕೊಂಡು.
ಕಣ್ಣಿಗೆ ಕಡಿಗೆಯ ಬರ್ಕೊಂಡು.
ಬರುತ್ವ್ಳೆ ಈಗ. ಬರುತ್ವ್ಳೆ ಈಗ..
ಅವಳು ಭೂಲೋಕದ ಕಿನ್ನರಸಿ.
ಅವಳು ನನವಳೇ ಉಪಚರಿಸಿ.
ನನ್ನನ್ನು ಕಣ್ಣಲ್ಲೇ ಸಂಹರಿಸಲು .
ಬರುತ್ವ್ಳೆ ಈಗ. ಬರುತ್ವ್ಳೆ ಈಗ..
- NaveenkumarK
21 Jun 2020, 01:35 pm
ನಾವು ಮಗುವಾಗಿ ಅತ್ತಗ..
ಲಾಲಿ ಹಾಡಿ ಮಲಗಿಸುವ ಕೈ ಅಮ್ಮದಾದರೆ.
ನಮ್ಮನ್ನು ನಗಿಸಲು ಶ್ರಮ ಪಟ್ಟು ಖುಷಿ ಪಡುವ ಕೈ ಅಪ್ಪನದು.
ನಾವು ನಡೆಯುವುದ ಕಲಿವಾಗ..
ನಮ್ಮ ಕೈ ಹಿಡಿದು ನಡೆಸುವ ಕೈ ಅಮ್ಮದಾದರೆ.
ನಮ್ಮ ಕೈ ಬಿಟ್ಟು ನಡೆಸುವ ಕೈ ಅಪ್ಪನದು.
ನಾವು ತಪ್ಪು ಮಾಡಿ ಅತ್ತಗ..
ಬುದ್ದಿ ಹೇಳಿ ಕಣ್ಣು ವರೆಸುವ ಕೈ ಅಮ್ಮದಾದರೆ.
ಒಡೆದು ಸರಿ ದಾರಿ ತೋರಿಸುವ ಕೈ ಅಪ್ಪನದು.
ಮಮತೆಯ ಜವಾಬ್ಧಾರಿ..
ಪ್ರೀತಿ ಮಮತೆಯ ಕಣ್ಣಂಚಿನ ಕೈ ಅಮ್ಮದಾದರೆ.
ಮಮತೆಯ ಜೊತೆಗೆ ಜವಾಬ್ಧಾರಿ ಒತ್ತ ಕೈ ಅಪ್ಪನದು.
ನಾವು ಗೆದಾಗ..
ಖುಷಿ ಪಟ್ಟು ಸಿಹಿ ಮಾಡಿ ಹಂಚುವ ಕೈ ಅಮ್ಮದಾದರೆ.
ಮನಸ್ಸಲ್ಲೇ ಸಂಭ್ರಮಪಟ್ಟು ಕಣ್ಣೀರು ಸುರಿಸುವ ಕೈ ಅಪ್ಪನದು.
ಜೀವನದಲ್ಲಿ ತೆರೆಯ ಇಂದೇಯೇ ಇದ್ದು ನಮ್ಮನು ಜೀವನದ ತೆರೆಯ ಮೇಲೆ ಮಿಂಚುವ ಹಾಗೆ ಮಾಡುವ ಏಕೈಕ ಕೈ ಅಪ್ಪನದು.....
- NaveenkumarK
21 Jun 2020, 12:05 pm
ಒಂದು ಗೆಲುವಿನ ಹಿಂದೆ
ನೂರು ನೋವಿನ ಕಥೆಯುಂಟು
ಬೆಂಬಿಡದ ಸೋಲುಗಳ ಸಾಲುಂಟು
ಅವಿರತ ಪ್ರಯತ್ನದ ಪರಿಶ್ರಮವುಂಟು...!
- Yashaswi Gowda
21 Jun 2020, 11:07 am
ಅಪ್ಪ ನೀನೆಷ್ಟು ತ್ಯಾಗಮಯಿ..
ಆದರೂ ಬರೆದಿಲ್ಲ ಯಾರು ನಿನ್ನ ಕಥೆಯ
ರಚಿಸಲಿಲ್ಲ ನಿನ್ನ ಬಗ್ಗೆ ಕವಿತೆಯ..
ಭಾರವೆಲ್ಲಾ ಹೆಗಲಮೇಲುಹೊತ್ತು
ಒತ್ತಡ ಕಷ್ಟಗಳ ನುಂಗಿ
ಮುಖದಲ್ಲಿ ಮಂದಸವಿರಿಸಿ
ತನ್ನ ತನ್ನವರಿಗೆ ಮೀಸಲಿರಿಸಿ
ತೇಯುತ್ತಿರುವ ಶ್ರೀಗಂಧ ಅಪ್ಪ..
ಮಮತೆಯ ಮೂರ್ತಿ
ಪ್ರೀತಿಯ ಸಾಗರ..
ನಾಮಾಂಕಿತ ಬಿರುದ
ತಾಯಿಗೆ ದಕ್ಕಿಸಿದ ಸಾಧಕ.
. ಅಪ್ಪಕಂಡಿಯೇ ಇಂದು
ಬೈಕ್ ಕಾರ್ ಆಟೋಗಳ ಮೇಲೆ
ತಾಯಿಯ ಆಶೀರ್ವಾದ..
ಅಮ್ಮನ ಪ್ರೀತಿ
ಮೊದಲಾದ ಸುಂದರ ಬರಹ
ಎಲ್ಲೂ ಕಾಣೆನು ತೆಗಿಸಿಕೊಟ್ಟ
ಅಪ್ಪನ ಹೆಸರನ್ನ..
ದುಡಿಮೆಯ ದಣಿವ ಬದಿಗಿರಿಸಿ
ಮಡದಿ ಮಕ್ಕಳ ನಗುವಿನಲ್ಲಿ
ತನ್ನಯ ಖುಷಿ ಕಂಡ...
ಆದರೂ ಮನೆಯಲ್ಲಿ ಬೈಗಳ ತಿಂದ.. ಅಪ್ಪ
ಅಪ್ಪ ನೀನು ಅಮ್ಮನ ಪ್ರೀತಿಯ
ಹಿಂದಿನ ಅಗೋಚರ ಶಕ್ತಿ. ..
- santhoshkumar
21 Jun 2020, 08:51 am