ಓ ಮಳೆಗಾಲದ ಮಳೆರಾಯ ನೇ
ಮೆಲನೋಟದ ನೀಲಿ ಬಾನಲಿ ಕರಿ ಬಿಳುಪಿನ
ಮೊಡವ ಹರಡಿಸಿ ಗಾಳಿಯ ಅಲೆಗೆ ಘಷ೯ಣೆ ಗುಡಿಸಿ
ಮಿಂಚು ಸಿಡಿಲಿನ, ಹೊಳಪಿನ ಗುಡುಗನು ಫಳಫಳಿಸಿ ಮಂಜಿನ ರೂಪದ ಮೊಡವ ಕರಗಿಸಿ ನೀರನು ಸುರಿವೆ
ಸನ-ಸನ, ಧನ-ಧನ, ಟಿಪ-ಟಿಪ, ಭರ-ಭರ, ಗಳ-ಗಳ
ಮಳೆರಾಯ ಅಲಂಕಾರದ ಹನಿಗಳಾಗಿ ಧರೆಗೆ ಬರುವೆ.
ಓ ಮಳೆಗಾಲದ ಮಳೆರಾಯ ನೇ
ಭೂಮಿಯಒಡಲ ಬೆರೆತು ನಿಸಗ೯ದ ತವಕವತಣಿಸುವೆ
ಭೂ-ಅಂತಜ೯ಲ ಹೆಚ್ಚಿಸಿ ವಿಕಾಲಕ್ಕೆ ನಿರಾಗಿಸುವೆ
ಭೂ- ವೈವಿಧ್ಯಮಯ ಜೀವಿಗಳಿಗೆ ನವಜಿವವಾಗುವೆ
ಭೂಮಿಯ ಉಳುವ ರೈತನಿಗೆ ಉಸಿರಾಗುವೆ ನೀರಾಗಿ,
ಭೂಮಿಗೆಬಿದ್ದಬಿಜ ಮೋಳಕೆಒಡೆಸಿ ಸಸಿ ಗಿಡವಾಗಿಸುವೆ ಭೂಮಿಪದರು ಹಸಿರಾಗಿಸಿ ಕಂಗೊಳಿಸುವಂತಾಗಿಸುವೆ
ಓ ಮಳೆಗಾಲದ ಮಳೆರಾಯ ನೇ
ವಾತಾವರಣದ ವನ- ಬನದ ಗಿಡ-ಮರ ಚಿಗುರಿಸುವೆ
ವಿವಿಧ ಸಸ್ಯಗಳ ಸವಿ ಹೂ-ಕಾಯಿ ಗೊಂಚಲಿಸುವೆ
ವಲಯ ವಿವಿಧ ಜೀವಿ ಪಾೃಣಿ-ಪಕ್ಷಿಗಳ ವಾಸವಾಗಿಸುವೆ
ಬೆಟ್ಟ ಗುಡ್ಡಗಳಿಂದ ಆ-ಇಕಡೆಯಿಂದ ನೀರು ಹರಿಸುವೆ
ಹರಿದು ಹಳ್ಳ-ಕೊಳ್ಳ ಕೇರೆ-ನದಿ ಸಾಗರಕೆ ಜಲ ಸೆರಿಸುವೆ
ಮಳೆರಾಯ ಭೂಮಿಯ ಹೊಗಳಿಕೆ ನೀ- ಬೆಳೆಸುವೆ
-:ಮಳೆಗಾಲದ ಮಳೆ ರಾಯ:
: -
ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ....
ಅವಳನ್ನು ನೋಡಿ ಯಾರು ಕೆಮ್ಮಾಗಿಲ್ಲ.
ಅವಳು ಯಾರಿಗೂ ಕಮ್ಮಿಯಿಲ್ಲ.
ಬಟ್ಟಲ ಕಣ್ಣವಳು, ನೋಡಿ ಇಟ್ಟೇನು ಬಲಗಾಲು.
ತಾವರೆ ಮೊಗದವಳು, ನೋಡಿ ಹೃದಯ ಕಂಗಾಲು..
ಸೂರೆಯಾದೆನು ನಿನ್ನ ನೋಡಿದ ದಿವಸ.
ನಿನ್ನ ನೋಡೋದು ಬಿಟ್ಟು ನನಗೆ ಬೇರೇನೂ ಕೆಲಸ.
ನನ್ನ ಪ್ರೀತಿ ನಿನಗೆ ಕಣ್ನಗಾವಲು, ನನ್ನಗೆ ನೀ ಮೀಸಲು.
ನನ್ನ ಎದೆಯ ಬಾಗಿಲು ತೆರೆದಿದೆ ನಿನಗೆ ಯಾವಾಗಲು.
ನನ್ನ ಮನಸ್ಸಿನ ಪುಸ್ತಕಕ್ಕೆ ಇಟ್ಟಿಹಯ್ತು ನಿನ್ನ ಶ್ರೀಷಿಕೇ.
ನನ್ನ ಕನಸಲು ಕೂಡ ನಿನ್ನದೇನೆ ಕನವರಿಕ್ಕೆ...
ಗುರುವಿನ ಆರಾಧನೆ ನೀಡುವುದು ಮನಸಿಗಾನಂದ
ಗುರುವಿನ ಬೋಧನೆ ತಿಳಿಸುವುದು ಜೀವನದ ಅರ್ಥವನ್ನು
ಅವರ ಆರ್ಶೀವಾದ ವಚನಗಳು ಬಾಳಿಗೆ ದಾರಿ ದೀಪಗಳು
ಆ ದೀಪದ ಬೆಳಗಿನಿಂದಲೇ ಬೆಳಗಬೇಕು ಮನುಕುಲದ ಜೀವನ...
ಅಮ್ಮನೇ ಮೊದಲ ಗುರು ಮೊದಲ ದೈವ
ಶಿಕ್ಷಕರು ಬುನಾದಿ ಹಾಕುವರು ನಮಗೆ
ಆದರ್ಶ ವ್ಯಕ್ತಿಯಿಂದ ನಮಗೆ ಅಡಿಪಾಯಗಳು
ಗುರುವೇ ನಮ್ಮ ಪಾಲಿನ ಆಸ್ತಿ
ಬರಡು ಜೀವನದಲ್ಲಿ ಜ್ಞಾನ ಎಂಬ
ಬೀಜ ಬಿತ್ತಿ ಚಿಗುರು ಹೊಡೆಯುವಂತೆ ಮಾಡಿ, ಸಮಾಜಕ್ಕೆ ಹೂ,ಹಣ್ಣು, ನೆರಳು
ನೀಡುವಂತೆ ಮಾಡಿ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿದ
ಏಲ್ಲಾ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು.
ದೀಪಾ.. ಕತ್ತಲೆಯಲ್ಲಿ ಬಿಕ್ಕಳಿಸಿ ಅಳುತ್ತಿತ್ತು.
ಇನ್ನು ಕತ್ತಲೆ... ದೀಪದ ಸುತ್ತ ವಿಕೃತ ನಗೆ ಬೀರಿ ಕುಣಿಯುತ್ತಿತ್ತು.
ಮಾತುಗಳು... ಮೌನದ ಸಂಧೂಕದ ಸಂಧಿಯಲ್ಲಿ ಬಿಕ್ಕಳಿಸುತ್ತಿದ್ದವು.
ಮೌನದ ಕುಹಕದ ಮಾತುಗಳು ಗಂಟಲನ್ನು ಹಿಚಕುತ್ತಿದ್ದವು.
ದು:ಖವು.. ಸಂತೋಷದ ಒಡಲು ಬಗೆದು ದುಃಖದ ಘೋರಿ ಕಟ್ಟುತ್ತಿತ್ತು.
ಸಂತೋಷವು ತೀರ ತಲುಪಲು ಆಗದೇ ಕೈ ಸೋತು ದುಃಖದ ಸುಳಿವಿನಲಿ ಸಿಲುಕಿ ಒದ್ದಾಡುತ್ತಿತ್ತು.
ನಿಜ ಮತ್ತು ಸುಳ್ಳುಗಳ ಹೋರಾಟದಲ್ಲಿ ಸುಳ್ಳು ತನ್ನ ಬಗ್ಗೆ ಎದೆ ಎದೆ ಬಡೆದುಕೊಂಡು ಕರಪತ್ರ ಹಂಚುತ್ತಿತ್ತು.
ಸುಳ್ಳು.. ನಿಜದ ನೆತ್ತಿಯ ಮೇಲೆ ಕುಳಿತು ಸುಳ್ಳೆಂಬ ಸುತ್ತಿಗೆಯಿಂದು ಹೊಡೆಯುತ್ತಿತ್ತು.
ಇಂತಿಪ್ಪ ಗದ್ದಲದಲ್ಲಿ.....
ಬೆಟ್ಟ-ಗುಡ್ಡ ಗಳ ಮೌನದ ರಾಗ ಕೇಳುವವರಾರ?
ಜುಳು- ಜುಳು ಹರಿಯುವ ನದಿಗಳ ನೀನಾದ ಕೇಳುವವರಾರು?
ಗಿಡ-ಗಂಟೆ, ಟೊಂಗೆ- ಎಲೆಗಳ, ಹೂ-ಬಳ್ಳಿಗಳ ಪಿಸುಮಾತು ಕೇಳುವವರಾರು?
ಹಕ್ಕಿ-ಪಿಕ್ಕಿಗಳ ಗುಜು ಗುಜು ಮಾತಗಳ ಕೇಳುವವರಾರು?
ಕತ್ತಲು- ಬೆಳಕಿನ ಜೊತೆ ಲಗೋರಿ ಆಟ ಆಡುವವರಾರು?.