ನಕ್ಕಾಗ ನೋಡಿ ಖುಷಿ
ಪಡುವ ಮನಸೊಂದಿದ್ದರೆನೆ ಚೆಂದ
ಅತ್ತಾಗ ನೊಂದು ತಬ್ಬಿ ಸಾಂತ್ವನ ಹೇಳುವ ಮನಸೊಂದಿದ್ದರೆನೆ ಚೆಂದ
ಅಸಿವಾದಗ ಮುದ್ದಿಸಿ
ತಿನ್ನಿಸುವ ಕೈಗಳಿದ್ದರೇನೆ ಅಂದ
ಯಾರು ಬೇಡವೆನಿಸಿದಾಗ ನಾನಿರುವೆ ಹೆದರದಿರು ಎಂದು ನಿನಗಾಗಿ ಎಂದು ಹೇಳುವ ಒಂದು ಪ್ರೀತಿ ಇದ್ದರೇನೆ
ಈಡಿ ಜೀವನಕ್ಕೆ ಬಲು ಚೆಂದ......
ಕಣ್ಣ ಮುಚ್ಚಿದರು ನಿಮ್ಮ ಕಾಣುವೆ
ಕಾದಿರುವೆ ನಿಮಗಾಗಿ ಎಂದು ಬರುವಿರಿ?
ನವಮಾಸ ಸಾಗುವುದೆಂತೋ..
ನಿಮ್ಮ ತೋಳಲಿ ಪಡೆಯುವೆನೆಂತೋ..
ಇಬ್ಬರ ಪ್ರೀತಿಯ ಪ್ರತೀಕ
ಮನೆಯವರೆಲ್ಲರ ಸಂತಸದ ದ್ಯೋತಕ
ಚಿಂತೆ ಯಾಕೆ ರನ್ನ
ನಿತ್ಯ ನೋಡಿರುವೆ ಹಗಲು ಇರುಳನ್ನ
ನನ್ನಲ್ಲಿ ಇಲ್ಲ ಆಸ್ತಿ ,ಪಾಸ್ತಿ ಚಿನ್ನ
ಯಾಕೆ ಧ್ಯಾನಿಸುವೆ ನನ್ನ
ಯೋಚಿಸದೆ ಮರೆತುಬಿಡು ಇನ್ನ
ಆಗೂಯ್ತು ಅಂತ ತಿಳಿದಿಕೊ ಪ್ರೀತಿ ಮನ್ನ
ನಗುವಿನ ಸಾಗರದಲ್ಲಿ ನೋಡಬೇಕು ನಿನ್ನ
ಕಟ್ಟಿಕೊ ನೀನು ಸುಂದರ ಜೀವನವನ್ನ
ನಾ ಮರೆಯಾಗೊ ಮುನ್ನ
ಸಮುದ್ರದಲ್ಲಿ ಒಂಟಿ ಪಯಣಿಗ ನಾನು
ದಿಕ್ಕಿಲ್ಲದಿದ್ದರು ಚಲಿಸಬೇಕು ಇನ್ನು!
ಹುಟ್ಟು ಇಲ್ಲದಿದ್ದರು ತೇಲಬೇಕು ನಾನು!
ತೇಲುವ ಪರಿಯಲ್ಲಿ ಚಿಂತೆ ಇದ್ದರು ನಗುತಾ ಇರಬೇಕು ನಾನು!
ಕಡೆಯವರೆಗೂ ದಿಕ್ಕಿಲ್ಲದೆ ಮೌನದಿ ತೆಲುತ್ತ ಇರುವ ದೋಣಿಯ ಪಯಣಿಗ ನಾನು!
ಬಿಸುವ ಬಿರುಗಾಳಿಗೆ ಇಷ್ಟ ಆಗುವೆನೆ ನಾನು
ತಬ್ಬಿ ಬಾಚಿ ದಡ ಸೇರಿಸುವುದೆ ಅದು ನನ್ನನ್ನು!
ಬೊರ್ಗರೆವ ಚಂಡಮಾರುತಕ್ಕೆ ಇಷ್ಟ ಆಗುವೆನೆ ನಾನು
ಇಡಿದು ಹೊತ್ತುವಯ್ದು ದಾರಿತೊರಬಹದೆ ನನಗಿನ್ನೂ!
ಕಲ್ಪನೆ ಪರಿಕಲ್ಪನೆಗಳಿಗೆ ರೂಪ ಕೊಡಬಾರದು ನಾನು!
ಪ್ರತಿ ಕ್ಷಣವನ್ನು ಸೃಷ್ಟಿಸಿವವನೂ ದೇವನೂ
ಅವನ ಅಣತಿಯಂತೆ ತೇಲುವ ಪಯಣಿಗ ನಾನು!
ಪರಿಸರ ಎಷ್ಟೆ ಕೊರೆದರೂ ನಿಟ್ಟುಸಿರಿನೊಂದಿಗೆ
ಚಲಿಸುವ ಪಯಣಿಗ ನಾನು!
ಮುಳುಗುವ ಕೊನೆಯಲ್ಲು ಶ್ರಮ ಪಟ್ಟು ತೇಲ ಬಯಸುವೆ ನಾನು!
ಶ್ರಮದ ನೆರಳೆ ಗೆಲುವು ಆಗ ಬೇಕು ಇನ್ನು!
ಆಸಿರ್ವಾದ ಮಾಡುವನೆ ಆ ಶಿವನು!