ನಾಟ್ಯ ಮಾಡುತ್ತೀವೆ
ನಿನ್ನ ನೆನಪುಗಳು
ನನ್ನ ಮನದಲ್ಲಿ....
ನನ್ನ ಛೇಡಿಸಬೇಡ
ನನ್ನ ಪರಿಕ್ಷಸಬೇಡ
ನಾ ಕಾದು ಸುಸ್ತಾಗಿರುವೆ
ನಿನ್ನ ಬರುವೆಕೆಗಾಗಿ
ಪ್ರಯಾಣ ಮುಗಿಯುವ ಮುನ್ನ
ಬಂದು ಅಪ್ಪಿಕೊ ನೀ ನನ್ನ
ನಲುಮೇಯ ಗೆಳತಿ...
ಮನಸ್ಸು ನೀನೇಕೆ ಬಯಸಿದೆ..
ನಿನ್ನ ನೆನಪುಗಳೇ ನನ್ನ ಹೃದಯದ ವ್ಯಾಪ್ತಿಯ ವ್ಯಾಪಿಸಿದೆ..
ಒಂದು ಘಳಿಗೇನು ಯೋಚಿಸದೆ .
ನನ್ನ ಮನಸ್ಸಿಗೆ ನಿನ್ನ ಮೇಲೆ ಒಲವಾಗಿದೆ ಎಂದು ಅನಿಸುತ್ತಿದೆ..
ನೀ ದೂರಾದಲ್ಲಿ ಇದ್ದರು ಹತ್ತಿರ ಅನಿಸಿದೆ.
ಆಗಸ ಎತ್ತರದಲಿದ್ದರು ಕೈ ತಾಕುವಹಾಗಿದೆ..
ಮನಸ್ಸಿನ ಭಾವನೆ ನಾಚಿಕ್ಕೆ ತಂದಿದ್ದೆ.
ಮೌನದ ಭಾಷೆಲಿ ನೂರೆಂಟು ಮಾತಿದೆ...
ನೀ ಬೈಯುವ ಮಾತ್ತೆಲ್ಲಾ ನಿಶಬ್ಧವಾಗಿದೆ.
ಮನಸ್ಸು ಆ ಮಾತುಗಳ ಕೇಳಿ ಸಭ್ರಮಪಡುತ್ತಿದೆ..
ಬೈಯುವ ನೆಪದಲ್ಲಾದರು ನನ್ನ ಮಾತಾಡಿಸಿದೆ.
ನೀ ಬೈದು ತಿರುಗುವ ಭರದಲ್ಲಿ ನಿನ್ನ ಇಂಗುರುಳು ತಾಕಿದೆ....
ಸಾಗರದ ಆಳದಷ್ಟು ನಮ್ಮ ಪ್ರೀತಿ
ಸಮುದ್ರದ ಅಲೆಗಳಂತೆ ಅಪ್ಪಳಿಸುತಿದ್ದೆ ಮನಃ
ಅಲೆಗಳ ಬಡಿತವೆ ಜೀವನದ ಪಾಠಗಳು
ಈ ಪಾಠಗಳಲ್ಲಿ ನೋವು-ನಲಿವಿನ ಸಂಗತಿಗಳು
ಸಮಯ ಸಿಕ್ಕಾಗಲೆಲ್ಲಾ ನೆನಪಿಸುವೆ ಈ ಪಾಠಗಳ ಪರಿಪಾಠ
ಒಟ್ಟಿನಲ್ಲಿ ಅನುಭವ ನೀಡಿದೆ ಆಯುಧಗಳಿಗಿಂತ ಅರಿತವಾಗಿ
ಮೌನವಾಗಿ ಬಿಡು ಎಲ್ಲವ ಸಹಿಸಿ
ನಿನ್ನಾಸೆ ಗಳಿಗಿಲ್ಲ ಇಲ್ಲಿ ಒಂದಿಷ್ಟು
ಪ್ರೀತಿ........
ನೀ ಕೊಟ್ಟ ಪ್ರೀತಿಗೆ ಒಂದಿಷ್ಟು
ಬೆಲೆ ಇಲ್ಲ ಇಲ್ಲಿ.....
ಒಂದಾದ ಮನಸಿಗೆ ಬೇಕಾಗಿಲ್ಲ
ಇಂದು ನಿನ್ನಯ ಒಲವು........
ಕಂಡರು ಕಾಣದಂತ ಮನಸು
ಮುಖವಾಗುತಿದೆ ಇನ್ನೆಂದು ತನ್ನತ್ತ
ತಿರುಗಿ ನೋಡದಿರೆಂದು.....
ಮೌನವಾಗಿದೆ ಇಂದೇಕೊ ನನ್ನವನ ಮನಸು........
ನೀ ಬಂದೆ ಗೆಳತಿ ಚಿತ್ತ ಮಳೆಯಂತೆ
ಪ್ರತಿ ಹನಿಯಲ್ಲಿ ಸಿಹಿ ಮುತ್ತಿನಂತೆ
ನಾ ಸವಿಯುತ್ತಿದೆ ಹುಚ್ಚನಂತೆ
ಚಿತ್ತ ಮಳೆ ಬಂದಾಗಲೆಲ್ಲ ನಿನ್ನ ಚಿಂತೆ
ಈಗ ಪ್ರತಿ ಹನಿ ಸವಿಯುತ್ತಿರಲು
ಕಂಡದೆಲ್ಲಾ ಹಾಲು ಎನ್ನಬೇಡ ಹುಚ್ಚಎಂದು
ದಬದಬನೇ ಸುರಿಯುತ್ತಿವೆ ಹನಿಗಳು ಹಾಸ್ಯಮಯವಾಗಿ......
ಬರಿ ಸವಿ ನೆನಪು ಮಾತ್ರ ಗೆಳತಿ
ನನ್ನ ಮೌನವು ಮಾತನಾಡಿದೆ ಇಂದು ನಿನ್ನ ಕಂಡು
ಮನವಿಂದು ತಂಪಾದ ಗಾಳಿಯ ಸಿಹಿಯ ಉಂಡು
ಬರೆಯಲು ಪದಗಳು ಸಾಲದು ನಿನ್ನ ಕಂಡು
ಬರೆಯಬೇಕೆನಿಸಿದೆ ನಿನ್ನ ಸೌಂದರ್ಯ ಕಂಡು
ಈ ಪ್ರಕೃತಿ ಸೌಂದರ್ಯದ ಗಣಿ
ರೆಕ್ಕೆ ಪುಕ್ಕವಿಲ್ಲದ ಬಂಗಾರದ ಗಿಣಿ
ನೋಡಲು ಸಾಲದು ಎರಡು ನಯನ
ಓ ವಸುಂದರೆ ನಿನ್ನ ನೋಡಲು ಶಾಂತವಾಗುವುದು ಮನ
ಜಾರಿಬಿದ್ದ ಕೂಡಲೆ ಹಾರಿಹೋಗುವ ಹಕ್ಕಿಗಳು
ಹಚ್ಚಹಸಿರಾಗಿ ತೂಗಾಡುತ್ತಿರುವ ಗಿಡಮರಗಳು
ರೆಕ್ಕೆ ಬಿಚ್ಚಿ ಕುಣಿಯುವ ನವಿಲುಗಳು
ನಾದಸ್ವರದಿ ಹಿತನೀಡುವ ಕೋಗಿಲೆಗಳು
ಓ ಮನುಕುಲವೇ ನಾಶವಾಗುತ್ತಿದೆ ಪ್ರಕೃತಿ ನಿನ್ನ
ಹುಚ್ಚಾಟತನದಿಂದ
ಮುರುಕಲು ಮನಸ್ಸಿನ ಹರಕು ಮಾನವರೆ
ಉಸಿರು ಕೊಡುವ ಹಸಿರಿಗೆ ಕೊಡಲಿ ಏಟು ಹಾಕುವಿರಿ
ಜೀವಜಲಕ್ಕೆ ವಿಷವ ಬೆರಿಸಿ ಸಾಧನೆಯೆಂದು ಮೆರೆವಿರಿ
ಸಹನಾಮೂರ್ತಿ ವಸುಂದರೆ ವಿಷವನುಂಡು ಅಮೃತ ನೀಡುವಳು ತಿಳಿಯಿರಿ
ಸಮೀಪಿಸುತ್ತಿದೆ ಕೇಡುಗಾಲ ಇದನ್ನರಿತು ನಡೆಯಿರಿ
Written By :- M.S Yadav
ನನ್ನತ್ತ ನಾ ಹೊರಟಾಗ
ಗುಲಾಬಿ ಹೂ ಒಂದಕಂಡೆ
ಗುಲಾಬಿ ಸುತ್ತಲೂ ಮುಳ್ಳುಗಳಿರುವದನ್ನ ಲೆಕ್ಕಿಸದೆ
ಮೈ ಮರೆತು ಮಂಕಾದೆ
ಗುಲಾಬಿ ಮುಳ್ಳು ಚುಚ್ಚಿ ಚುಚ್ಚಿದಾಗಲೊಮ್ಮೆ
ರಕ್ತದ ಕಣಗಳು ಪ್ರಶ್ನಿಸುತ್ತಿವೆ
ಉತ್ತರಿಸದೇ ಮೂಖನಾಗಿ ಸುಮ್ಮನೆ ಕೂಳಿತಿರುವೆ