Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರೀತಿ ಸಿಗಬೇಕು ಎಂಬ ಆಸೆ ಇರಬೇಕು
ಆದರೆ ಹಠ ಇರಬಾರದು
ಹಠದ ಪ್ರೀತಿ ಚಟ ಏರಿಸುತ್ತದೆ
- PAVITHRA SP MANDYA
07 Aug 2020, 10:21 pm
ತಂದವರಾರೋ ಈ ಲೇಖನಿನ
ಮಾಡಿರಬಹುದೆ ಇದು ಪ್ರೀತಿನ
ಕಾಗದದ ಮೇಲೆ ಚುಂಬಿಸುವ
ಪ್ರತಿಯೊಂದು ಅಕ್ಷರ
ಹೇಳುತಿದೆ ಪ್ರೆಮಗವನ
- HussainSab
07 Aug 2020, 08:33 am
ನಿನ್ನ ಪ್ರೀತಿಯ ಅಲೆಯಲ್ಲಿ
ಅಂದು ಬರೆದನು ಅಂದಗಾತಿಯೆಂದು
ನಿನ್ನ ಮೋಸದ ಪ್ರೀತಿಗೆ
ಇಂದು ಬರೆದನು ಮೋಸಗಾತಿಯೆಂದು
ನಾವು ಇದ್ದರೂ ಸತ್ತರು
ಪ್ರೀತಿ ಪ್ರೀತಿಯಾಗಿರುವುದೆ ವಿನಃ
ಆಟದ ಗೊಂಬೆಯಲ್ಲ
ಕ್ಷಮಿಸಿಬಿಡು ನನ್ನ ಗೆಳತಿ
- ರಾಜು ಹಾಸನ
07 Aug 2020, 12:43 am
ಪ್ರೀತಿಸಿ ಮುದ್ದಿಸಿದ
ಜೀವಾ ಬಿಟ್ಟು ಹೋದೆಯ
ಪಂಜರದ ಗಿಳಿಯಾಗಿ
ಪ್ರೀತಿಗಾಗಿ ಸುತ್ತಿದೆ
ನಿನ್ನ ಹಿಂದೆ ಹಿಂದೆ
ನೀ ಹಾಕಿದೆ ನನಗೆ ಬೆನ್ ಹಿಂದೆ ಚೂರಿ
ಏ ಮೋಸಗಾತಿಯೇ ನೀ ಇಲ್ಲದೆ
ಬದುಕಲು ಸಾಧ್ಯವಿಲ್ಲದಿದ್ದರೂ
ನಾ ಬದುಕುವೇ ಜನ್ಮ ಕೊಟ್ಟ ಜೀವಗಳಿಗಾಗಿ
- ರಾಜು ಹಾಸನ
07 Aug 2020, 12:00 am
ನಡೆದಷ್ಟು ದಾರಿ ಚಂದ
ನುಡಿದಷ್ಟು ಮಾತು ಅಂದ
ಬರೆದಷ್ಟು ಕಾವ್ಯ ಚಂದ
ಬಣ್ಣಿಸಲು ಪದಗಳೆ ಅಂದ..
- KIRAN SIDDANATH
06 Aug 2020, 08:13 pm
ಕಿಲ ಕಿಲ ನಗುವ ಕಣ್ಗಳೇ
ಏನು ನಿಮ್ಮ ಆರ್ಭಟ
ಎಲ್ಲೋ ಹಾರಿದಂತಿದೆ
ಈ ಮನಸ ಗಾಳಿಪಟ
ಎತ್ತರವಾಗಿರುವಳೂ
ಏನ್ ಚೆಂದ ಕಾಣುವಳು
ಕೆಂಪಾಗಿರುವಳು
ಕಣ್ಣನ್ನೇ ಕುಕ್ಕುವಳು
ಮಗುವಾಗಿ ಮನಸಾಗಿ
ಮಾವಿನ ಸಿಹಿಯಾಗಿ
ಮನದಾಳದ ಮಾತಿಗೆ
ಮುತ್ತನೆರೆವಳು
ನೀಳ ನಾರಿ
ಕನಸಿಗಾಕ್ಯಾಳ ಚೂರಿ
ಅವಳ ಸಿರಿಯ ನಾಲೆಯಲಿ
ಕವಿಯ ಪದಗಳೇ ಹೋಗಿವೆ
ಹಾರಿ ಹಾರ್ಯಾರಿ
ಆಸೆಯ ಅಮಲಿನಲಿ
ಕಣ್ಣ ರೆಪ್ಪೆಯಾಗಿ
ಪ್ರತಿ ಮುತ್ತಿಗೂ ಸೆರೆಯಾಗಿ
ತೋಳಬಂದಿಲಿ ಕಳೆದೋಗುವೆ
- HussainSab
06 Aug 2020, 02:11 pm
ಪ್ರೀತಿಸುವಾಗ ತಿಳಿಯಲಿಲ್ಲ
ನಿನ್ನ ಮಾತಿನ ಮೋಡಿ
ನಿನ್ನ ಮಾತಿಗೆ ಮರುಳಾಗಿ
ಸುತ್ತಿದೆ ನಿನ್ನ ಹಿಂದೆ ಹಿಂದೆ
ದುಂಡು ಮಲ್ಲಿಗೆಯೆಂದು
ಅಪ್ಪಿಕೊಂಡೆನು ನಿನ್ನ ಪ್ರೀತಿಯ
ಮುಳ್ಳಾಗಿ ಚುಚ್ಚಿದೆ
ಈ ನನ್ನ ಮನವ
- ರಾಜು ಹಾಸನ
05 Aug 2020, 12:08 am
ನನ್ನ ಪಿಸುಮಾತು ಕೇಳು ನೀ ಒಮ್ಮೆ..!
ಕೇಳದೆ ಹೋದೆ ನೀ ಎಲ್ಲಿಗೆ..?
ನಾ ಇಲ್ಲಿ ಕುಳಿತಿರುವೆ ಒಬ್ಬಳೇ...!
ಕಾಯುತ ನಿನ್ನ ದಾರಿಯೇ..!
- Chaithra
03 Aug 2020, 09:17 pm
ಕಂದಮ್ಮ ಕೇಳೆ...!
ಮುಗ್ಗುರಿಸಿ ಬಿದ್ದು ಸಾಯಬಾರದೆ
ರೋಧನೆ ಮರೆಯಲ್ಲಿ ಮಣ್ಣಾಗಬಾರದೆ//
ಕಂದಮ್ಮ ಕಳೆ ತರುವನೆಂದು
ಕನಸು ಕಟ್ಟಿದ್ದೆ ಸೃಷ್ಠಿಕರ್ತನೆದುರು
ಬಂಜೆಯೆಂಬ ಬರಸಿಡಿಲು ಬಡಿದಿತೆ
ಸಾವೇ ಬರಬಾರದೆ ಬದುಕಿನ ಎದುರು//
ಬಯಕೆಯಿರದ ಬಸುರಿಯಾಗದ ಜನ್ಮಕ್ಕೆ
ಇದ್ದು ಸತ್ತಂತೆ ಯಾರ ಮುಂದೆ ಹೇಳಲಿ
ಅವ್ವ- ಅಪ್ಪನಿರದ ಪರದೇಶಿ ಬದುಕಲ್ಲಿ
ದೇವರ ಪರೀಕ್ಷೆಯ ನಿರೀಕ್ಷೆಗಳೆ ಅಧಿಕವಿಲ್ಲಿ//
ಕಣ್ಣೀರ ಕಡಲಲ್ಲಿ ಕರುಳು ಬತ್ತಿವೆ
ಮನಸಲಿ-ಕನಸಲಿ ಕಂದಮ್ಮ ಕಾಡುತಿದೆ
ಅತ್ತು- ಅತ್ತು ಕಣ್ಣೀರೇ ಬಸವಳಿದಿದೆ
ಎದೆ ತಬ್ಬಿ ಮುದ್ದಾಡುವೆ ಮಗು ನೆನಪಲ್ಲಿ//
ಒಲವಿಲ್ಲದ ಬದುಕಲ್ಲಿ ಅಸುನಿಗಿದೆ ನಲಿವು
ತಬ್ಬಲಿ ಕೂಗು ಕೇಳುವವರಾರು ಓ ಆತ್ಮವೆ
ಚುಚ್ಚು ಮಾತಿಗೆ ಹೆಚ್ಚಿಗೆ ಬದುಕಲಾರೆ ಮಗುವೆ
ಬಂಜೆಸಲ್ಲ ಅಡಗಲು ಜನ್ಮವೆತ್ತಿ ಬಾರೊ ಮಗುವೆ//
ಸದಾಶಿವ ಎಂ. ಮರಡಿ
ಬಾದಾಮಿ.
- SADASIVAMARADI
02 Aug 2020, 06:34 pm
ಪರರ ಸುಖ ನೋಡಲಾಗುವುದಿಲ್ಲ..
ತನ್ನ ಸಂತೋಷ ಹಂಚಲಾಗೋದಿಲ್ಲ..
ಇನ್ನೊಬ್ಬರ ಕೆಡುಕಿನೆಡೆಗೆ ಇವರ ಪಯಣ..
ಮನದಲ್ಲಿ ಯಾವಾಗಲೂ ಬೇಡದ ಚಿಂತೆ..
ಕೊಡಲು ಮನಸಾಗದು..
ಕೊಟ್ಟರೆ ಅವರ ಆಳಾಗಬೇಕೆಂಬ ದುರಾಸೆ..
ತಾನೇ ಎಲ್ಲಾ ತನ್ನಿಂದಲೇ ಎಲ್ಲಾ ಎಂಬ ಅಹಂಕಾರ..
ಇನ್ನೊಬ್ಬರ ಕಂಡು ಹಾಸ್ಯವಾಡೊ ಮಾತುಗಳು..
ಮನದ ತುಂಬಾ ಕಲ್ಮಷ..
ಬೇರೆಯವರ ಮಾತ ಕೇಳಲಾಗದು..
ತನ್ನನ್ನೇ ಎಲ್ಲರೂ ಗುರುತಿಸಬೇಕೆಂಬ ಕೆಟ್ಟ ಹಠ..
ಇದೆಲ್ಲಾ ತನ್ನ ಪಾಪದ ಕೊಡ ತುಂಬುವ ತನಕ..
ನಂತರ ಎಲ್ಲನೂ ದೇವರಿಚ್ಛೆ..
ಇವಾಗ ನಿನ್ನಿಚ್ಛ...
@ಮೇಘ ಗಣೇಶ್
- Megha s
02 Aug 2020, 03:31 pm