Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಗೊಮ್ಮೆ ಈಗೊಮ್ಮೆ..

ಹಾಗೊಮ್ಮೆ ಹೀಗೊಮ್ಮೆ ನೆನಪಿನಂತೆ ನನ್ನನೊಮ್ಮೆ ನೋಡಿ ಹೋಗುವೆ ಆಯಾಸವಾಗುವುದಿಲ್ಲವೇನೋ ಹುಡುಗ ನಿನಗೆ! ಬಿಗಿದ ತುಟಿಗಳ ಸಡಲಿಸಿ ಚೇಷ್ಟೆ ಮಾಡಿ ನಗಿಸುವೆ ಸುತ್ತಲಿರುವ ಗೆಳತಿಯರಿಗೆ ಏನೆಂದು ಹೇಳಲಿ ಮಾಯಾವಿ ನೀನು ಮನಸಲ್ಲೇ ಇರುವಾಗ.

ಜಾರು ಯವ್ವನ ಜೀಕಿದ ಜೋಕಾಲಿ ನೀನು ತುಸುವೇ ತಂಪಾಗಿ ಮಲಗುವೆ ಕಮ್ಮನೆಯ ಕನಸಾಗಿ ಕಣ್ಸೇರು ನಿದುರೆಯಲ್ಲೇ ನಿನ್ನವಳಾಗುವೆ ಹಗಲು ಮೂಡವ ಮುನ್ನ ಮಗುವಾಗಿ.

ಸಾವಿರಾರು ಮಾತುಗಳಿವೆ ಹುಡುಗ ಮನಸಲ್ಲಿ ಕೇಳಲು ಸಮಯವೇ ಇಲ್ಲ ನಿನ್ನಲ್ಲಿ ಒಂದೆರಡು ಸಾಲು ಹಾಗೆ ಗೀಚುವೆ ತುಟಿಯಂಚಿನ ನಗುವಿನೊಂದಿಗೆ ಓದಿಬಿಡು ಬಿಡುವು ಮಾಡಿಕೊಂಡು ನಿನ್ನ ಎದೆಗಪ್ಪಿಕೊಂಡಿದ್ದ ಈ ನೀಲಿ ಲೇಖನಿ ಜನ್ಮ ಸಾರ್ಥಕವಾದರೂ ಆಗಲಿ ನಾ ಕದ್ದ ಪುಣ್ಯಕೆ.

ಅಕ್ಷರಗಳು ಮೇಲು ಕೀಳು ಆಗಿರಬಹುದು ಕ್ಷಮಿಸಿಬಿಡು ಹುಡುಗ ತಡವರಿಸಿ ಬಂದ ಭಾವಗಳಿಗೆ ನಿನ್ನ ಪರಿಚಯ ಮಾಡುವಲ್ಲಿ ನಿಮಗ್ನಳಾಗಿದ್ದೆ ನಾನು. ಪ್ರೇಮದ ಪರಿಯು ಹೊಸತೇನಿಸಬಹುದು ಆದರೆ ನಮ್ಮ ಪ್ರೀತಿ ಹಳೆಯದಲ್ಲವೇ ಹುಡುಗ ಆ ಬಾನಿನಿಂದೆ ಅಡಗಿರುವ ಚುಕ್ಕಿಗಳ ಆಯಸ್ಸಿನಷ್ಟು.

- ಚುಕ್ಕಿ

15 Aug 2020, 07:38 pm

ಸ್ವಾತಂತ್ರ್ಯ

ಆಗಸದಿ ಹಾರಾಡುತಿಹ ನಮ್ಮ ರಾಷ್ಟ್ರಧ್ವಜಕ್ಕೂ ಹೃದಯಲಿ ಹರಿಯುತಿಹ ದೇಶಭಕುತಿ ಎಂಬ ರುಧಿರಕ್ಕೂ ಇರುವ ನಂಟು ಸ್ವಾತಂತ್ರ್ಯ.

ಹೆಮ್ಮೆಯಿಂದ ತಲೆಯೆತ್ತಿ ವಂದಿಸೋಣ ನಮ್ಮ ಉಸಿರು ಕಾಯಲು ತಮ್ಮ ಉಸಿರು ನೀಡುತ್ತಿರುವ ಪ್ರತಿಯೊಬ್ಬ ಯೋಧನಿಗೂ ನಮ್ಮ ಉಸಿರು ಇರುವವರೆಗೂ.

ವೈದ್ಯರಾಗಿಲಿ ಇಂದು ಗಡಿ ಕಾಯುವ ಸೈನಿಕನಾಗಲಿ, ಮನೆಯ ಮಾಲಿನ್ಯ ತೆಗೆದು
ಊರ ಕಾಯುವ ಉದ್ಯೋಗಿಗಳಾಗಲಿ, ಪ್ರಪಂಚಕೆ ಅನ್ನವಿಡುವ ರೈತನಾಗಲಿ.

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ತಿಳಿಸೋಣ ಮೇಲೆಂಬ ಅಹಂಕಾರವಿಲ್ಲದೆ ಕೀಳೆಂಬ ತಿರಸ್ಕಾರ ತೋರದೆ, ಒಗ್ಗೂಡಿ ಬಾಳೋಣ ಒಂದಾಗಿ ನಡೆಯೋಣ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

- ಚುಕ್ಕಿ

15 Aug 2020, 02:04 pm

ಭಗ್ನಪ್ರೇಮಿ

ಪ್ರೀತಿಸಲು
ನೂರಾರು ಮಾತುಗಳು ಬೇಕು
ದೂರಾಗಲು ಒಂದೇ ಮಾತು ಸಾಕು
ಪ್ರೀತಿಸುವಾಗ ಮಾತುಗಳೆ ಮುತ್ತಾಗುವುದು
ದೂರವಾದರೆ ಮಾತುಗಳೆ ಮುಳ್ಳಗುವುದು
ನೂರಾರು ಕನಸುಗಳು ಸಾವಿರರು ಆಸೆಗಳಿದ್ದರು
ಮೂಕನಾಗಿರುವೆ ಕೊಟ್ಟ ಮಾತು ಇಟ್ಟ ನಂಬಿಕೆ
ಸುಳ್ಳಗಾದಿರಲ್ಲಿ ಎಂದು ಈ ನನ್ನ ಪ್ರೀತಿಯಲ್ಲಿ

- ರಾಜು ಹಾಸನ

12 Aug 2020, 11:15 pm

ತವರು

ಮನವು ಹಾಯಾಗಿ ತೇಲುತಿಹುದು..
ಈ ತಂಪಾದ ಗಾಳಿಯಲಿ..
ನೆನಪಾಗುವುದು ಕಳೆದೋದ ದಿನಗಳು..
ಮರುಕಳಿಸುವುದು ಅಪ್ಪ ಅಮ್ಮ ನ
ಪ್ರೀತಿಯ ಮಮಕಾರ..
ಅಮ್ಮನೊಂದಿಗಿನ‌ ಪ್ರೇಮ...
ಅಪ್ಪನೊಂದಿಗಿನ ಧೈರ್ಯ
ತಮ್ಮನ ವಾತ್ಸಲ್ಯ...
ಅಣ್ಣ‌ತಂಗಿಯರ‌ ಪ್ರೀತಿ...
ಸಂಬಂಧಿಕರ ಕರುಣೆ..
ಮನವ ಉಲ್ಲಾಸಿಸುವವ ಗಾಳಿಯ ಹಾಗೆ
ಈ ನೆನಪುಗಳು ಹೃದಯಕೆ ತಂಪೆರೆದಂತಿದೆ..
ಅವಾಗವಾಗ ಬಂದು‌‌‌ ಹೋಗುತ್ತಿರು
ಮನವನು‌ ಶಾಂತವಾಗಿರಿಸಲು..
@ಮೇಘ ಗಣೇಶ್

- Megha s

11 Aug 2020, 01:26 pm

ಗುರು

ನಿನಗೆ ನೀನೇ ಗುರು,
ನಿನಗೆ ನೀನೇ ಶಿಷ್ಯ,
ನಿನಗೆ ನೀನೇ ಆತ್ಮಬಲ,
ನಿನ್ನನ್ನು ಅರಿತರೆ ನೀನೇ ಗುರು

- Praveena kumara Nadalmani

10 Aug 2020, 11:52 pm

ಅಗ್ಗದ ಸಂತೆ

ಅಗ್ಗದ ಸಂತೆಗೆ ಹಿಗ್ಗಿಂದಾ ಹೋಗಿ
ಮುದುಕಿ ಮುಗ್ಗರಿಸಿ ಬಿದ್ದಿತ್ತಾ
ಹುಗ್ಗಿಯಂತಾ ಹುದಲಾಗ ಸಿಕ್ಕೊಂಡು
ಮುದುಕಿ ಸುದ್ಯಾಗಿ ಹೋಗಿತ್ತ

ಸರ್ರೆಂದು ಬಂದು ಸುಂಟರ ಗಾಳಿ
ಮುದುಕಿಯ ಸುತಗೊಂಡು ಬಿಟ್ಟಿತ್ತ
ಬರ್ರೆಂದು ಬಂದ ರಪ - ರಪಾ ಮಳೆ
ಬಿಡದ ಹೊಡೆಯುತಾ ನಿಂತಿತ್ತಾ

ಸಂತೆ ಚೀಲವು ನೀರಲಿ ಮುಳುಗಿ
ತೇಲುತ ಮಾಯ ವಾಗಿ ಹೋಗಿತ್ತ
ಜಿಗಟಾದ ಮಣ್ಣು ಬೀಡಲಾರ್ದೆ
ಮುದುಕಿಯ ಕಾಲನು ಹಿಡಿದಿ ತ್ತ

ಕಾಲನು ಕಿಳ ದೆ ಜೀವವ ಉಳಿಸಲು
ಮುದುಕಿ ಒದ್ದಾಡ್ತ ನಿಂತಿತ್ತಾ
ಅಗ್ಗದ ಸಂತೆಗೆ ಚೀ ಥೂ ಅಂತಾ
ಮುದುಕಿ ಉಗಿಯುತ ನಿಂತಿತ್ತಾ

ಪಡ್ಡೆ ಹುಡುಗರ ಸಹಾಯದಿಂದ
ಮುದುಕಿ ಪಾರಾಗಿ ಬಂದಿತ್ತಾ
ಪ್ರಾಣ ಉಳಿಸಿದ್ರಿ ಪರಮಾತ್ಮ
ನಿವೆಂದು ಹೋಗಳುತಾ ಕುಂತಿತ್ತ


ಕಲ್ಮೇಶ ಬಡಿಗೇರ
9743539657
..........ಬಾದಾಮಿ........

- Kalmesh Badiger

10 Aug 2020, 12:04 pm

26/11

ಬಾಂಬೆ ಎಂಬ ಹೆಸರು ನೆನೆದರೆ
ಬಹಳ ಬಯವಾಗುವುದಲ್ಲ
ಮುಗ್ಧ ಜನಗಳ ಪ್ರಾಣವ ಕೀಳುವ
ಮಹಾ ಮುಂಬೈ ಎನುವರಲ್ಲ. //

ಕ್ರೂರ ರಾಕ್ಷಸರು ನೀರಿಂದ ಬಂದು
ಮುಂಬೈ ಊರೊಳಗೆ ಹೊಕ್ಕರಲ್ಲ
ಸಿಕ್ಕವರನ್ನು ಗುಂಡಿಟ್ಟು ಕೊಲ್ಲುತಾ
ಹೆಣಗಳ ರಾಶಿ ಹಾಕಿದರಲ್ಲ. //

ಹೊತ್ತಿ ಉರಿಯಿತು ತಾಜ್ ಹೋಟೆಲ್
ಒತ್ತಿ ಯಾಯಿತೋ ನಾರಿಮನ್ ಹೌಸ್
ಸುಟ್ಟ ಹೆಣಗಳ ಕೆಟ್ಟ ವಾಸನೆಯು
ಹೊರ ಹೊಮ್ಮಿ ಬಂದಿತಲ್ಲಾ. //

ಉಗ್ರರ ಮಣಿಸಲು ದಿಟ್ಟ ಪೊಲೀಸರ
ದಂಡೆ ಸೇರಿತಲ್ಲ, ಹಗಲಿರುಳೆಲ್ಲಾ
ಹೋರಾಡಿ ಉಗ್ರರ ಮೆಟ್ಟಿ ನಿಂತರಲ್ಲ
ಸ್ವತಃ ತಾವೇ ಪ್ರಾಣ ಕೊಟ್ಟರಲ್ಲಾ. //

ಹೇಮಂತ್ ಕರ್ಕರೆ ವಿಜಯ ಸಾಲಸ್ಕರ್
ಹೋರಾಡುತ್ತಾ ಪ್ರಾಣ ಬಿಟ್ಟರಲ್ಲ
ಅಶೋಕ್ ಕಾಮ್ಟೆ ಉನ್ನಿಕೃಷ್ಣ ಕಮಾಂಡರ್
ಹೊರಾಡ್ತ ವೀರ ಮರಣ ಹೊಂದಿದ ರಲ್ಲ. //


ಕಲ್ಮೇಶ ಬಡಿಗೇರ
9743539657
. ......ಬಾದಾಮಿ.....

- Kalmesh Badiger

10 Aug 2020, 11:35 am

ತಣ್ಣನೆಯ ಗಾಳಿಯಲಿ...ತುಂತುರು ಮಳೆ...ಹಕ್ಕಿಗಳ ಚಿಲಿಪಿಲಿ..

ತಣ್ಣನೆಯ ಗಾಳಿಯಲಿ...ತುಂತುರು ಮಳೆ...ಹಕ್ಕಿಗಳ ಚಿಲಿಪಿಲಿ...!!
ಗಾಢವಾದ ರಾತ್ರಿಯೊಂದು...ಕಳೆದು ಹೊಸತೊಂದು...ದಿನದ ಆರಂಭದಲಿ...*
ಬಾರವಾದ ಮನಸು..ಹಗುರವಾದಂತೆನಿಸಿರಲು....*
ಬೆಚ್ಚನೆಯ ಸ್ಪರ್ಶವೊಂದು...ಮೈತಾಗಿ ಕಣ್ತೆರೆದರೆ..ಎದುರಿನಲಿ ನೀನು….!!
ಬೆಚ್ಚಿ ಎದ್ದವನಿಗೆ...ತನ್ನ ಹೆಗಲಾಸರೆ...ನೀಡಿ ಎದೆಗೊರಗಿಸಿಕೊಂಡಿರಲು...*
ನಿನ್ನೆಯ ಬೇಸರವ ನೆನೆದು...ಕಣ್ಣಂಚಿನಲಿ ಜಾರಿದ ನೀರ..ನೋಡಿ...*
ನಿನ್ನ ಕಣ್ಣಲೂ...ಮೂಡಿದ ನೀರು...ನನ್ನ ಕೆನ್ನೆಯ...ಮೇಲೆ ಜಾರಿ ಬಿದ್ದಿರಲು...!
ಬಿಕ್ಕಿ ಬಿಕ್ಕಿ ಅತ್ತವನಾ...ಹಣೆಯ ಮೇಲೊಂದು...ಪ್ರೀತಿಯ ಮುತ್ತನಿತ್ತು...!!
ಕ್ಷಮೆಯಾಚಿಸಿ ಎಲ್ಲಿ..ಮರೆಯಾಗಿರುವೆ...ನನ್ನ....ಗೆಳತೀ...!!
dhanu

- Dinesh hosalli dhanu

09 Aug 2020, 10:26 pm

ವಿಶ್ವಾಸ

ಮನದಲ್ಲಿರುವ ಅಂಜಿಕೆಯನು ಹಿಮ್ಮೆಟ್ಟಿನಿಲ್ಲುವ ಸಮಯವಿದು..
ಛಲದಿಂದ ಸಾಧಿಸುವ ದಾರಿ‌ಯಿದು..
ಮನಸ್ಸಲ್ಲಿ‌ ಗುರಿಯಿರಲಿ..
ಕಣ್ಣಲ್ಲಿ‌ ನಂಬಿಕೆ‌ ಇರಲಿ..
ದೃಷ್ಟಿಗಿಂತ ದೃಷ್ಟಿ ಕೋನ‌ ಸರಿಯಾಗಿರಲಿ..
ಎಲ್ಲರೂ ನಮ್ಮವರೆಂಬ ಭಾವನೆಯಿರಲಿ..
ಎಲ್ಲಾ ಒಳ್ಳೆಯದಾಗುವುದೆಂಬ ವಿಶ್ವಾಸವಿರಲಿ..
ಬಿಡಬೇಡ ಪ್ರಯತ್ನವ ಎಂದಿಗೂ..
ನೆರವಾಗುವುದು ಇವೆಲ್ಲಾ ನಿನ್ನ ಗುರಿ ಸೇರಲು..
ದೇವರ ಮೇಲೆ ಭಕ್ತಿ ಇರಲಿ..
ಬಾಳು ಬಂಗಾರವಾಗುವುದು..
@ಮೇಘ ಗಣೇಶ್

- Megha s

09 Aug 2020, 07:07 pm

ಭಾನು

ಕವಿದ ಅಜ್ಞಾನದ ಮೋಡವ
ಸರಿಸಿ ಮೂಡಿದನಾ ಭಾನು
ಆಗಸದಿ ಮೂಡಿದನಾ ಭಾನು
ಗಗನದಲ್ಲಿ ಮೂಡಿದನಾ ಭಾನು

ಚಿಗುರಿದ ಚಿಗುರೆಲೆಗಳ ಹಿಂದೆ
ಕುರಿಗಳ ಮಂದೆಯ ಮುಂದೆ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಕರುವಿನ ಅಂಬಾ ಧ್ವನಿಗೆ
ಕೊರಳಿನ ಹಾರವ ಧರಿಸಿ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಹಕ್ಕಿಯ ಚಿಲಿ - ಪಿಲಿ ಹಾಡಿಗೆ
ಚಂದ್ರನ ತವರಿಗೆ ಕಳಿಸಿ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಕರಿ ಕಾರ್ಮೊಡದ ಹಿಂದೆ
ಕಡುಗೆಂಪು ಮುಖ ತೋರಿ
ಮೂಡಿದನಾ ಭಾನು ಆಗಸದಿ
ನಗುತಲಿ ಮೂಡಿದನಾ ಭಾನು

ಕಲ್ಮೇಶ ಬಡಿಗೇರ
9743539657
. ......ಬಾದಾಮಿ.......

- Kalmesh Badiger

09 Aug 2020, 02:10 pm