Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೆಂಪಾದ ಚೆಂದುಟಿಗಳೆ
ನಿಮ್ಮ ಕಂಪನದಲಿ ಜಾರುವ ಜೇನಿಗೆ
ಈ ಮನಸ್ಸು ಮನಸಾರೆ ಸೋತಿದೆ
ಮೌನದಿ ಮೆಲ್ಲನೆ ಕರೆದು
ಮನವನ್ನು ದೊಚುವ ಕಂಗಳೆ
ನಿನ್ನ ಆಸೆಗಳ ಮಾತುಗಳಿಗೆ
ಆಸೆಯೂ ಜೊತೆಯಾಗಿದೆ
ಮಳ್ಳಿಯಂಗೆ ಸೆಳೆಯುವ ನಗುವೆ
ನಿನ್ನಾ ಸಂತಸಕ್ಕೆ ಅರಳೊ
ಸೌಂದರ್ಯಕ್ಕೆ .....
ನನ್ನೆ ನಾ ಕಳೆದೊಗಿರುವೆ
ನಾಚೀ ರಂಗಾದ ಕೆನ್ನೆಗಳೆ
ನಿಮ್ಮನು ಏನು ಮಾಡಲಿ ಎಂದು
ತುಟಿಗಳು ಯೋಚಿಸುತ್ತಿವೆ
ಬರಸೆಳೆಯುವ ಮುದ್ದಾದ ಭಾವನೆಗಳೆ
ನಿನ್ನ ಸಲುಗೆಗೆ ಹೊಸದೊಂದು
ಅನುರಾಗವು ಅರಳಿ
ಹೊಸ ಹೊಸ ಆಸೆಗಳು
ಕೈ ಬೀಸಿ ಕರೆದಂತಿವೆ

insta:- unique_abhyaa

- abhi.s.j

07 Nov 2025, 10:21 pm


ನನ್ನಾಸೆಯ ಮಲ್ಲಿಗೆ??

ಮಲ್ಲಿಗೆ ಮುಡಿದವಳೆ
ಮಲ್ಲಿಗೆಯಂತ ಮನಸವಳೆ
ನಿನಂದವ ನೋಡುತಲಿ
ನನ್ನ ಮನಸ್ಸೊಳಗೆ ನೆಲಸಿದೆ
ದುಂಡು ಮಲ್ಲಿಗೆಯ ಕಂಪನ್ನು
ಹರಡುತಲ್ಲಿ ಮುದಾಗಿ ಕರೆದವಳೆ
ನಿನ್ನ ಕರೆಗಾಗಿ ಓಡೊಡಿ ಬಂದು
ಕಂಗಳ ಮಾತಿಗೆ ಮನಸ್ಸು
ಮೌನಿಯಾಗಿ ನಿಂತಿದೆ
ನಿನ್ನ ಮುಗ್ದ ಮನಸಿನ‌ ಅನುರಾಗಕೆ
ಪುಟ್ಟ ಪುಟ್ಟ ಹೆಜ್ಜೆಯ ಹಾಕುತ
ಹೃದಯದ ಬಳಿಯಲಿ ಸಾಗುತಲಿ
ಹೊಸದಾದ ಆಸೆಗಳಲ್ಲಿ
ಪ್ರೀತಿಯು ಚಿಗುರಿಸಿದೆ
ದುಂಡು ಮಲ್ಲಿಗೆ ಮೊಗದವಳೆ
ನೀ ಎನೆ ಆಗಿರು ಯಾರೆ ಆಗಿರು
ಮುದ್ದಾದ ಪ್ರೇಮವು ಅರಳಿದೆ
ನೀ ಎನು ಅನ್ನದಿದ್ರೆ
ನಾ ನಿನ್ನ ಪ್ರೀತಿಸಿ ನಿನ್ನ ಒಪ್ಪಿಗೆಯಿದ್ದರೆ
ಮದುವೆಯ ಬಂದನವನ್ನು ಬೆಸೆದು ಜೀವನದಲಿ ಹಾಯಾಗಿರುವ
ನನ್ನಾಸೆಯ ಮಲ್ಲಿಗೆಯೇ
ನಿನ್ನೊಲವಿಗಾಗಿ
ನನ್ನ ಕನಸಿನಾಸೆಗಳ ಧಾರೆ ಎರೆದು
ನಿನ್ನ ಉತ್ತರಕ್ಕಾಗಿ ಕಾಯುತಿರುವೆ

insta:- unique_abhyaa

- abhi.s.j

07 Nov 2025, 10:18 pm

ಹೆಣ್ಣೆ ಹೊವ ಮುಡಿದು
ಮಲ್ಲಿಗೆ ಕಂಪನು ಪಸರಿಸಿ
ನನಗಾಗಿಯೇ ಎದುರು ನಿಂತೆ
ಹೆಣ್ಣೇ ಕಂಗಳಲಿ ಹೊಳೆದು
ಸುಂದರವಾಗಿ ಅರಳಿ
ಮೆಲ್ಲನೆ ಸೆಳೆದೇ ನನ್ನನೇ
ಹೆಣ್ಣೆ ನಿನ್ ಮುಗುಳ್ ನಗುವಲಿ
ಸೆಳೆದು ಪ್ರೀತಿಯಿಂದ
ಕಣ್ಣಂಚಲೆ ಕರೆದೇ ನನ್ನೇ
ಹೆಣ್ಣೆ ಮನಸಲಿ
ಹೊಚ್ಚ ಹೊಸ ಆಸೆಗಳ ಚಿಗುರಿಸಿ
ಹೊಸದಾದ ಭಾವನೆಗಳಲಿ
ಒ‌ಂದಾದೆ ನನ್ನಲಿ
ಹೆಣ್ಣೆ ಕಾಲ್ ಗೆಜ್ಜೆಯಾ
ಸದ್ದು ಮಾಡುತ
ಕದ್ದು ನೋಡಿ
ಪ್ರೀತಿಯಾಸಾಗರದಲ್ಲಿ ಬೆರೆತೆ
ನನ್ನಾಸೆಯಾ
ಒಲವಿನ ಕಲ್ಪನೆಯೇ
ಸುರಸುಂದರಾಗಿಯೇ
ಕರೆ ಹೇಳಾ ನೀನ್ಯಾರೆ......

insta:- unique_abhyaa

- abhi.s.j

03 Nov 2025, 06:54 pm

ನನ್ನೋಳಗಿರುವ ಪ್ರೀತಿಯ ವ್ಯಾಕರಣ ...
ಹೇಳುತ್ತಿದೆ ನೀ ನನ್ನ ಜೀವನದ ಹೋಂಗಿರಣ....
ನೆನಪಿನ ನೌಕೆಯಲ್ಲಿ ಸಾಗಿದೆ ನನ್ನೀಪಯಣ...
ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ ನಿನಗಾಗಿ
ಕಾದಿದೆ ನನ್ನ ಆಮಂತ್ರಣ...
ನೀ ಬಂದರೆ ಆಗುವುದು ಈ ಜೀವನ
ನವೀಕರಣ...
ಬರದಿದ್ದರೆ ಆಗುವುದು ನನ್ನ ಸಂತಸದ ಅಪಹರಣ..
ನಿನಗೆ ಮಾಡಿಕೊಡಲೇ ಆ ಗಗನದ ತಾರೆಗಳ ಆಭರಣ...
ನಿನ್ನ ನೋಡುತ್ತಲೇ ಕಳೆದೋಗುವೆನು ನಾ ಅನುಕ್ಷಣ...
ಈಗಲಾದರು ಯೋಚಿಸಿ ಬಂದುನೋಡು ಒಂದು ಕ್ಷಣ ...
ನಾ ನಿನ್ನನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುವೆ ಪ್ರತಿ ಕ್ಷಣ.. .❤❤❤❤❤

insta:- unique_abhyaa

- abhi.s.j

03 Nov 2025, 06:53 pm



ಹುಬ್ಬಳ್ಳಿ ಎಂಬ
ಹೂ ಬಳ್ಳಿಯಲ್ಲೊಂದು
ಹೂ ಸೆಳೆಯುತಿದೆ ನನ್ನನ್ನು,

ಮಲ್ಲಿಗೆಯ ಅಂದದಿ
ಸಂಪಿಗೆಯ ಚಂದದಿ
ಮೆಲ್ಲಗೆ ಬಂದಿಸುತಿದೆ ನನ್ನನ್ನು,

ಸೇವಂತಿಯ ತಂಪಿಂದ
ಜಾಜಿಯಾ ಕಂಪಿಂದ
ಮೋಹದಿ ಕಟ್ಟುತ್ತಿದೆ ನನ್ನನ್ನು,

ಮೆಚ್ಚುವ ಬಣ್ಣದಿ
ಚುಚ್ಚುವ ಮುಳ್ಳನು
ಮರೆಸಿ ಬಳಿ ಎಳೆಯುತಿದೆ ನನ್ನನ್ನು,

ಸೊಕ್ಕಿನ ಹುಡುಗಿಯ
ಬೆಕ್ಕಿನ ನಡಿಗೆಯ ಒನಪು ಮಾಯದಿಂದ ಅವರಿಸುತಿದೆ ನನ್ನನ್ನು...

insta:- unique_abhyaa

- abhi.s.j

29 Oct 2025, 07:28 pm



ಅಷ್ಟೇ ಹುಡುಗಿ

ನನ್ನ ಬಾಹುವಿನಲ್ಲಿ ನಿನ್ನ ಬೆಚ್ಚಗಿನ ದೇಹವನ್ನು ಬಂದಿಸುವುದಕ್ಕಿಂತ
ತಿರುಗದೆ ಇರುವ ನೋಟವನ್ನು ಸೆಳೆಯುವುದೇ ನನ್ನ ಸಂತೋಷ ಹುಡುಗಿ..!!


ಉಬ್ಬುಗಳನ್ನು ಎದೆ ರೋಮಕ್ಕೆ ಘರ್ಷಿಸುವುದಕ್ಕಿಂತ
ಜಡಿದಿಟ್ಟಿರುವ ಮೌನವನ್ನು ಸ್ಪೋಟಿಸುವುದೇ ನನ್ನ ಗುರಿ ಹುಡುಗಿ..!!


ಹಕ್ಕಿಕತ್ತಿನ ವಿಷಯದಲ್ಲಿ ನನ್ನ ನಿಜವನ್ನು ಮಂಡಿಸುವುದಕ್ಕಿಂತ
ಇಶ್ಕನ ತಿಲಾಂಜಲಿಗಿರುವ ನಿನ್ನ ಮಿಥ್ಯದ ಬೆತ್ತಲಾಗಿಸುವುದೇ ನನ್ನ ಗೆಲವು ಹುಡುಗಿ..!!


ಶಿಖರದಂತಿರೋ ಕೇಶರಾಶಿಗೆ ಮಲ್ಲಿಗೆ ಮೊಗ್ಗು ಮುಡಿಸುವುದಕ್ಕಿಂತ
ಬಾಡಿ ಹೋದ ಹೃದಯ ತೋಟಕ್ಕೆ ನಿರಾಕುವುದೇ ನನ್ನ ಕೆಲಸ ಹುಡುಗಿ..!!
ನನ್ನಲ್ಲಿ ಹುದುಗಿ ಹೋಗಿರುವ ಪ್ರೇಮಾಗ್ನಿಯನ್ನು ಶ್ರವಿಸುವುದಕ್ಕಿಂತ
ನನ್ನ ಬಗೆಗಿನ ಕೋಪಾಗ್ನಿಯನ್ನು ತನಿಸುವುದೇ ಅವಶ್ಯ ಹುಡುಗಿ..!!


insta:- unique_abhyaa

- abhi.s.j

28 Oct 2025, 10:38 pm



ಮುಂಗುರುಳು ಹುಬ್ಬನ್ನು ಮುತ್ತುವಾಗ ನನ್ನ ಸಾಚಾತನ ಕಟ್ಟೆ ಒಡೆಯಬೇಕೆಂದೇನಿಸುತ್ತದೆ

ಕಪ್ಪು ಕಾಡಿಗೆ ಇನ್ನು ಸೆಳೆಯಿತಿರಲು ಮತ್ತೊಮ್ಮೆ ಮೌನಿಯಾಗುತ್ತೇನೆ

ವಕಾಲತ್ತಿಗೆ ಕಣ್ಣ ಭಾಷೆಗಳು ಬರುವಾಗ ವಯಸ್ಸಿನ ಪರದೆ ತೆರೆ ಎಳೆದು ಬಿಡುತ್ತದೆ

ಏಕಾಂತಕ್ಕೆ ಒಲವೆಂದು ನಾಮಕರಣ ಮಾಡಿದ್ದೂ ನಾನೆ ಅವಳಂತೆ ಹೊಸತು

ಮೊದಲ ವಾರೆ ನೋಟ ಅನಾಮಿಕ ಸೆಳೆತ ಮುಂಗುರುಳು ಬೀರಿದ ಮಲ್ಲಿಗೆ ಹೇಳದೆ ಕೊಲ್ಲುವ ಆಯುಧ

ಅರ್ಥವೇ ಆಗದ ಹಲ್ಕಾ ಕವನ ಭಾಷೆ ಕೇಳದ ಜಾಣ ಕಿವಿ ಮತ್ತು ಅವಳು

ಪರಿಮಿತ ಆಸೆಯವನು ಅನಂತದೆಡೆಗೆ ನೋಡುವಾಗ ದುಂಬಿಯಗುತ್ತಾಳೆ

ಕಡಲಾಚೆಯ ಅದಿರು ನಾಡಿನವಳು ಉಪ್ಪೆಂದರೆ ಇಷ್ಟವಿರಬೇಕು

ಬೇಕಾಬಿಟ್ಟಿ ಮನಮೋಡಿಯಂತೆ ಕಣ್ಣಿನೊಳಗೆ ತುರುಕಿಸಿ ಹೊರಟಿದ್ದಾಳೆ

ಬ್ರಹ್ಮಚರ್ಯ ಕೊನೆಯಗಿಸುವ ತಂತ್ರ ಹೆನೆದದ್ದು ಅವಳೇ

ಕೌಮರ್ದನ ಎದೆಯಲ್ಲೊಂದು ಸಣ್ಣ ಮಟ್ಟಿನ ಕಂಪನ ಆಗೂ ಹೀಗೂ ಪ್ರಥಮ ಸೋಲು

ಅಂದಿನಿಂದ ವಿಹರದ ಹೊತ್ತಗೆಯಲ್ಲಿ ಹಾಳೇ ವದ್ದೆಯಾಗಲು ಶುಭಾರಂಭ...


insta:- unique_abhyaa

- abhi.s.j

28 Oct 2025, 10:19 pm

ನಾನು ಯಾವಾಗಲು ಅವಳ ಕೈಯನ್ನು ಹಿಡಿದಾಗ, ನನ್ನ ಕೆನ್ನೆಯನ್ನೆ ಮುಟ್ಟಿದಂತಾಗುತ್ತದೆ. 
ಏಕೆಂದರೆ ಅವಳು ಯಾವಾಗಲು ನನ್ನ ಕೆನ್ನೆಗೆ ಬಾರಿಸುತ್ತಾಳೆ.

insta:- unique_abhyaa

- abhi.s.j

28 Oct 2025, 10:01 pm

ಅವಳ ಕೂದಲೇ ಕುಂಚವಾಗಿ,
ಅವಳ ನೋಟವೇ ಬಣ್ಣವಾಗಿ,
ಅವಳ ಮುಖ ಕಮಲವೇ ಹಾಳೆಯಾಗಿ,
ಕಂಡಳು, ಸೌಂದರ್ಯಕೇ ರೂಪು ಕೊಟ್ಟ ಚಿತ್ರವಾಗಿ,
ಆ ಚಿತ್ರಕೆ ಜೀವ ಹುಡುಕಲು ನಾ ಹೋಗಿ,
ನಿಂತೆ ಅವಳ ಮನದ ಬಾಗಿಲಲಿ ಅಥಿತಿಯಾಗಿ,
ಆ ಬಾಗಿಲ ತೆರೆದಾಗ ನಿಂತಿದ್ದೆ ನಾ ಬಿಂಬವಾಗಿ,
ಅವಳ ಮನದ ಅರಮನೆಯ ದೊರೆಯಾಗಿ..!
ಅರಮನೆ ಏನೋ ಕಟ್ಟಾಗಿದೆ,
ರಾಜ ನಾ ರಾಣಿ ಅವಳೆಂದಾಗಿದೆ,
ಸಮರಸದ ಮುನ್ನ ಸೂತಕದ ಛಾಯೆ ಮೂಡಿದೆ,
ಜಾತಿ ನೀತಿಗಳು ಅಡ್ಡ ಗೊಡೆಗಳಾಗಿದೆ,
ಪೂರ್ವಿಕರ ಪುರಾಣ ಪ್ರಾಣ ಹಿಂಡಿದೆ,
ಅವರ ಮಾತು ಮೀರಲಾರದೆ,
ಚಿತ್ರ ಪಟದಲಿ ಇಬ್ಬರ ಜೀವ ಉಸಿರುಗಟ್ಟಿದೆ...,
ಚಿತ್ರಪಟದಲೇ ಎರಡು ಜೀವ ಒಂದಾಗಿದೆ...!

insta:- unique_abhyaa

- abhi.s.j

28 Oct 2025, 10:00 pm


ಬರೆದ ಬರಹವನ್ನು ಪದೇ ಪದೇ ಅಳಿಸಿ ಬರೆಯುವುದು ಎಲ್ಲರ ರೂಡಿ ಆದರೆ
ಆ ಭಗವಂತ ಬರದಿಯನು ಯಾರು ಅಳಿಸಲಾಗದ ಒಂದು ಬರಹ
ಹನಿಯ ಪಟ್ಟಿ "ಹಣೆಯ ಬರಹ".

- manjunatha

28 Oct 2025, 09:30 pm