Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಮ್ಮಾ ಅಮ್ಮಾ ಹೇಳಮ್ಮ
ಚಂದ್ರನು ಹಾಗಿರುವನೇಕಮ್ಮ..!
ಬೆಳ್ಳನೆ ಮೈಯ್ಯನು ನೋಡಮ್ಮ
ಕಪ್ಪು ಮಚ್ಚೆ ಇರುವದು ಯಾಕಮ್ಮ..?
ಹಗಲಲ್ಲಿ ಕಾನಲ್ಲ ಯಾಕಮ್ಮ
ಇರುಳಿಗೆ ಬೆಳಗುವ ನೋಡಮ್ಮ
ಹುಣ್ಣಿಮೆಯಂದು ಪೂರ್ಣವಾಗಿ
ಕಣ್ಣಿಗೆ ಕಾಣುವುದು ಯಾಕಮ್ಮ..?
ಬೇಳ್ದಿಂಗಳ ಹಾಡು ಹಾಡಮ್ಮ
ಬೆರಗಾಗಿ ನೋಡುವಂತೆ ಮಾಡಮ್ಮ
ಚುಕ್ಕೆ ಚಂದ್ರಮರ ಅಕ್ಕರೆ ಮಾತಿನ
ಕಥೆಯನು ಹೇಳು ನನ್ನಮ್ಮ
ಚಂದ್ರನ ಹೊಟ್ಟೇಲಿ ಚಿಗಿರಂತೆ
ಹಾಡನು ಹೇಳುವರು ಕೆಳಮ್ಮ
ವರ್ಷಕ್ಕೊಮ್ಮೆ ಚಂದ್ರಮನನ್ನು
ಹಾವು ನುಂಗುವುದು ನಿಜವೇನಮ್ಮ..?
ಅಮ್ಮಾ ಅಮ್ಮ ಇಲ್ಲಿ ಕೇಳಮ್ಮ
ಈ ಚಂದ್ರಮ ನಾರು ಹೇಳಮ್ಮ..!
ಕತ್ತಲೆಯಲ್ಲಿ ನಲಿಯುತ ಬರುವ
ಈತನ ಮನೆಯಲ್ಲಿದೆ ಹೆಳಮ್ಮ ..?
ಕಲ್ಮೇಶ ಬಡಿಗೇರ
9743539657
........ಬಾದಾಮಿ....,
- Kalmesh Badiger
29 Aug 2020, 07:49 am
ಕರುಳು ಬಳ್ಳಿಯ ತೊಟ್ಟಿಲಲ್ಲಿ
ಹುಟ್ಟಿದೆವು ಅಣ್ಣ ತಂಗಿಯಾಗಿ
ಆಟವಾಡುತ್ತಾ ಬೆಳದೆವು
ತಾಯಿಯ ಮಡಿಲಲ್ಲಿ
ಚಡ್ಡಿ ದೋಸ್ತಿನಂತೆ
ಜಗಳವಾಡುತ್ತಿದ್ದೆವು ಶತ್ರುವಿನಂತೆ
ಒಂದಾಗುತ್ತಿದೆವು
ಬಾನಂಗಳದ ಹಕ್ಕಿಯಂತೆ
ಇಂದು ಬರಿದಾಗಿದೆ ಗೂಡು
ನಿನ್ನ ಪುಟ್ಟ ಗೆಜ್ಜೆಯ ಸದ್ದಿಲ್ಲದೆ
ಜಿನುಗುತ್ತಿದೆ ಕಣ್ಣೀರು
ಧುಮ್ಮಿಕ್ಕಿ ಹರಿಯುತ್ತಿದೆ
ಮನದ ನೋವು
ಬಾಲ್ಯದ ನೆನಪು ಕಂಡು
ಮರೆಯೋದುಂಟೆ
ಒಡಹುಟ್ಟಿದವಳನ್ನು
ನನ್ನ ಪುಟ್ಟ ತಂಗಿ
- ರಾಜು ಹಾಸನ
29 Aug 2020, 12:10 am
ಜೀವನದ ಪಯಣದಲ್ಲಿ
ಮುಗಿಯಾದ ಕನಸುಗಳು
ಕೊನೆಯೇ ಇಲ್ಲದ ಆಸೆಗಳು
ಹರಿಯುವ ನದಿಯಲ್ಲಿ
ನಿಲ್ಲದ ನೀರಗುಳ್ಳೆಗಳು
ಎಷ್ಟೇ ಕಾದು ಕುಳಿತರು
ಮತ್ತೆ ಬಾರದು ಹೋದ ಜೀವಾ
ಕಳೆದ ಸಮಯ
- ರಾಜು ಹಾಸನ
28 Aug 2020, 07:57 pm
ರೆಲ್ವೆಯ ಆಟ ಮನೆಯಲಿ ಕಾಟ
ಹೋಗುವ ನಾವು ಹೊರಗಕ್ಕಾ
ಒಬ್ಬರಿಗೊಬ್ಬರು ಅಂಗಿಯ ಹಿಡಿದು
ಆಡುವ ರೈಲಿನ ಆಟವ ಬಾ ಅಕ್ಕ //
ಅಕ್ಕಾ ಅಕ್ಕಾ ಇದೋ ನೋಡು
ನಾ ಚಿಕು ಬುಕು ಎನ್ನುತ ಓಡುವೇನು
ಅಂಗಿಯ ಹಿಡಿದು ಸಾಲಾಗಿ ಬಣ್ರಿ
ಒಬ್ಬರ ಹಿಂದೆ ಮತ್ತೊಬ್ರು //
ಸಂದಿ ಗೊಂದಿಯಲಿ ಹಾಯದೆ ನಾವು
ಗೋಧಿಯ ಹೋಲದಲಿ ಓಡೋಣ
ಅಣ್ಣನ ಕರೆದುಕೊ ಬೇಕಾದಾಗ
ಬಣ್ಣದ ಕೊಲ್ ಮುರಿದು ತರೋಣ //
ಸಣ್ಣ ತಮ್ಮನ ಸುಣ್ಣದ ಕಟ್ಟೆಯ
ಮೇಗಡೆ ಕೂಡ್ರಿಸಿ ಸುತ್ತೋಣ
ಹರುಷ ವಾಗಲು ಕೈ ಕೈ ಕುಲುಕಿ
ಕೇಕೆಯ ಹಾಕುತ ನಲಿಯೋಣ //
ಅಮ್ಮನು ಕೂಗಲು ಸರಪಳಿ ಹರಿದು
ರೈಲಿನ ಆಟವಾ ಮುರಿಯೋಣ
ಕೈಯ್ಯನ್ನು ತೊಳೆದು ತಟ್ಟೆಯ ಹಿಡಿದು
ಊಟವ ಮಾಡಲು ಕುಡೋಣ //
. ಕಲ್ಮೇಶ ಬಡಿಗೇರ
9743539657
.......ಬಾದಾಮಿ........
- Kalmesh Badiger
28 Aug 2020, 07:36 pm
ಚಿನ್ನದ ಗೂಡಲ್ಲಿರುವ ನನ್ನ
ಸಣ್ಣ ಮುದ್ದಿನ ಬಣ್ಣದ ಗಿಳಿಯೆ
ಹಣ್ಣನ್ನು ತಿನ್ನದೆ ಗಿನ್ನವ ಕುಡಿಯದೆ
ಏತಕೆ ಹೀಗೆ ಸೊರಗಿರುವೆ //
ಬಿಟ್ಟರೆ ನೀನು ಬಾಗಿಲು ತೆರೆದು
ಬಾನೆತ್ತರಕ್ಕೆ ಹಾರುವೇನು
ಚಂದ್ರನಲ್ಲಿ ಗೆ ಹೋಗಿ ನಿನಗೆ
ಚಿನ್ನದ ಚಂಡು ತರುವೆನು //
ಬಂದರೆ ನೀನು ಎನ್ನಯ ಜೊತೆಗೆ
ಬಣ್ಣದ ಬಿಲ್ಲು ತೋರಿಸುವೆ
ಚಿನ್ನ ರನ್ನ ಎನ್ನುತಾ ನಲಿವಾ
ಚುಕ್ಕೆಗಳಾಚೆ ತೆಲಿಸುವೆ //
ಅನ್ಯ ಗ್ರಹಗಳಿಂದಾಚೆಗೆ ಸಾಗಿ
ಚಿಣ್ಣರ ಲೋಕಕೆ ಹೋಗೋಣ
ಜೇನನು ಸವಿದು ಜಿಗಿದು ಕುಣಿದು
ನಮ್ಮಯ ಊರಿಗೆ ಮರಳುವ //
ಪಯಣದ ಬೇಸರ ಕಳೆಯಲು
ತಂಪಾದ ವನದಲಿ ಇಳಿಯೋಣ
ಹಣ್ಣನು ತಿಂದು ಹರುಷದಿ ನಾವು
ನಿದ್ರೇಯಲಿ ಮೈ ಮರೆಯೋಣ //
ಕಲ್ಮೇಶ ಬಡಿಗೇರ
9743539657
...........ಬಾದಾಮಿ........
- Kalmesh Badiger
28 Aug 2020, 07:04 pm
ಅಮ್ಮಾ ಅಮ್ಮಾ ಬಂದೇನಮ್ಮಾ
ಎಲ್ಲಿಗೆ ಹೋಗಿದ್ದೆ ಇಷ್ಟೋತ್ತು
ಕಟ್ಟಿಹಾಕಿ ದ ಕೊಟ್ಟಿಗೆಯನ್ನೆ
ನೋಡುತಲಿರಲಿ ನಾ ಎಷ್ಟೊಟ್ಟು //
ಹೊಟ್ಟೆಯ ಹಸಿವನು ತಾಳದೆ
ನೋಡು ಸೊಪ್ಪನ್ನು ತಿನ್ನದೆ ಒದ್ದಾಡ್ಡೆ
ದಡ್ಡಿಯ ಬಾಗಿಲು ಮುರಿದು ಓಡಿದೆ
ಕಟ್ಟಿರೋ ಹಗ್ಗದಿ ಗುದ್ದಾಡಿ //
ಅತ್ತಿತ್ತೆಲ್ಲಾ ಜನಗಳ ಜಂಗುಳಿ
ಹಿಡಿಯಲು ಬಂದರು ಸುತ್ತಾಗಿ
ಕಟ್ಟೆಯ ಒಡೆದೆ ,ಬಟ್ಟೆಯ ಹರಿದೆ
ಕೆರೆಯಲಿ ಹಾರಿದೆ ಹೌಹಾರಿ //
ಅಂಬಾ ಅಮ್ಮಾ ಎಂದರು ನಿನಗೆ
ಕೆಳಿಸಲೆ ಇಲ್ಲವೆ ನನ್ನಮ್ಮಾ
ಹಾಲುಣಿಸೇನಗೆ ಕಣ್ಣನ್ನು ಮುಚ್ಚಿ
ಅಮೃತ ಹಿರುವೆ ಅಮ್ಮಾಮ್ಮಾ//
ಬಾಲವ ನಿಮಿರಿಸಿ ಕಾಲನು ಕೆದರಿ
ಛಂಗನೆ ಹಾರುವೆ ನಾನಾಗಮ್ಮ
ನಿನ್ನಯ ಪ್ರೀತಿಗೆ ಸಮನಾರಿಲ್ಲ
ಜೊತೆಯಲಿ ಇರು ನೀ ಹೀಗಮ್ಮ //
ಕಲ್ಮೇಶ ಬಡಿಗೇರ
9743539657
. .....ಬಾದಾಮಿ......
- Kalmesh Badiger
28 Aug 2020, 06:19 pm
ಅಪ್ಪ ಚಿಕ್ಕಪ್ಪ ನೋಡ ಬಾರಪ್ಪ
ಆನೆ ಬಂದೈತಪ್ಪ
ಪುಸ್ತಕದಲ್ಲಿ ನೋಡಿದ್ದಕಿಂತ
ಎಷ್ಟು ದೊಡ್ಡದು ಐತೆಪ್ಪ !
ಕಾಲುಗಳೆಲ್ಲ ನಮ್ಮನೆ ಮುಂದಿನ
ಮರದಂತಿಹುದಪ್ಪಾ!
ಖ್ವಾರಿಯ ಮೇಲೆ ಏರಿ ಕುಳಿತರೆ
ಮುರಿಯುತ್ತವೇನಪ್ಪ ?
ಹೆಜ್ಜೆಯ ನಿಟ್ಟರೆ ನೆಲವೆಲ್ಲ
ಗಡ ಗಡ ನಡುಗುತ ಲಿಹುದಪ್ಪಾ
ಗಲ್ಲದ ಕೆಳಗೆ ಸಣ್ಣನೆ ಬಾಯಿಯು
ಕಾಣುತ ಲಿಹುದಪ್ಪ
ಸೊಂಡೆಯ ನೇಕೆ ಮೇಲಕ್ಕೆ
ಕೆಳಕ್ಕೆ ಮಾಡುತಲಿಹುದಪ್ಪಾ !
ಕೈಗೆ ಸಿಕ್ಕರೆ ನಮ್ಮನ್ನೆಲ್ಲಾ
ತಿನ್ನಬಹುದಾ ಹೆಳಪ್ಪಾ ?
ಆನೆ ಎಂದರೆ ಹಿಗಿರುತ್ತಂತಾ
ಇವತ್ತು ತಿಳಿತಪ್ಪಾ
ಚಿತ್ರಕ್ಕಿಂತ ನೋಡಲು
ಈ ತರ ಆನೆ ಸಾಕಪ್ಪಾ
ಕಲ್ಮೇಶ ಬಡಿಗೇರ
9743539657
........ಬಾದಾಮಿ......
- Kalmesh Badiger
28 Aug 2020, 06:03 pm
ಮುಂದೆ ಸಿಕ್ಕರೆ
ಮಾತನಾಡುವರು ಗೋವಿನಂತೆ
ಹಿಂದೆ ಹೋಗಿ ತಳ್ಳುವರು
ಗೋಮುಖ ವ್ಯಾಘ್ರನಂತೆ
ಸ್ನೇಹದಲ್ಲಿ ತಿಳಿಯಾದು ಮಾತಿನ ಬಣ್ಣ
ಪ್ರೀತಿಯಲ್ಲಿ ತಿಳಿಯಾದು ಮನಸ್ಸಿನ ಬಣ್ಣ
ಕೊಳದಲ್ಲಿ ತಿಳಿಯಾದು ನೀರಿನ ಬಣ್ಣ
ಬದುಕಿನಲ್ಲಿ ತಿಳಿಯಾದು ಮುಖವಾಡದ ಬಣ್ಣ
- ರಾಜು ಹಾಸನ
28 Aug 2020, 10:40 am
ಬಯಸಿದ್ದನ್ನು
ದೇವರು ಕೊಡುವನೆಂದು
ಭಜನೆ ಮಾಡುತ್ತಾ ಕುಳಿತರೆ
ಆಗುವುದು ವಯಸ್ಸು
ಮುಗಿಯುವುದು ಯೌವನ
ಬರುವುದು ಮುಪ್ಪು
ನೆಡೆಯುವುದು ವೈಕುಂಠ ಸಮಾರಾಧನೆ
- ರಾಜು ಹಾಸನ
28 Aug 2020, 10:17 am
ನೀನು ನಗುತಿದ್ದರೆ ಹೊಳೆ ಬೋರ್ಗರೆತ ಎದೆಯಲ್ಲಿ ಕಾಮನೆಗಳ ಕಾನನಸುತ್ತಿ
ಬಯಕೆ ಬೆಟ್ಟದೆಗಲ ಮೇಲೆ ಕೈ ಚಾಚಿ
ಮುಖ ವಾಲಿದಾಗೊಮ್ಮೆ ಜಾರಿದ ಜೋಗದಂತಾ ಝಳಪು.
ಅಲ್ಲಿ.... ಬಿರುಬಿಸಿಲು ಮಳೆಗೆ ಮೂಡಿದ ಕಾಮನಬಿಲ್ಲು
ಕುಳಿತ ಹುಡುಗ ಚಿತ್ರ ಅಳಿಸಿ ರಬ್ಬರನಿಂದ....ಎಳೆದು ಹೊಸ ಮುಖ ರೇಖೆ
ಮಾಗಿದ ಬದುಕಿಗೆ ಒಡಲಾಳ ಒರತೆ ನೀರು ನಿನ್ನದು .....ನನಗೇನಿದ್ದರೂ ಬೊಗಸೆ ತುಂಬ ಅಲ್ಲದಿದ್ದರೂ ಮುಷ್ಟಿ ತುಂಬ ....ಇರಲಿ ಬಿಡು .....
ಹಾದ್ಯಾಗಿನ ಅವರೆಹೂ ಯಾರ ಮುಡಿಗೇರಿದೆ ಹೇಳು?
ಯಾರಾದರೂ ಮುಟ್ಟಿದ್ದಾರೆಯೇ ಹೇಳು?
ಯಾರಾದರೂ ದಿಟ್ಟಿಸಿದ್ದಾರೆಯೇ ಹೇಳು
ಪಾಡುಗಳು ಅವರವರಿಗೆ ಅವರದೇ ದೊಡ್ಡವು.
ಹಾಡುಗಳು ಅವರವರಿಗೆ ಅವರದೇ ನಾದಗಳು.
ನಾದ ಲಯ ಸ್ವರದೇರು ತೇರು ಭಂಗಿ ನಾನು-"ಭಾವ ನೀನು".
- prakaveri
28 Aug 2020, 07:28 am