Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹುಟ್ಟಿದಾಗ ಮಾಡುವರು ಹುಟ್ಟು ಹಬ್ಬ
ಸತ್ತಾಗ ಮಾಡುವರು ಪುಣ್ಯ ತಿಥಿ
ಇದ್ದಾಗ ಒಗೆಯುವರು ಬಟ್ಟೆಯಂತೆ
ಸತ್ತಾಗ ಹಾಕುವರು ಹಾರ ತುರಾಯಿ
ತಿಂಡಿ ತಿನಿಸು ಮಾಡಿಡುವರು
ಗೊಡೆಯಲ್ಲಿನ ಫೋಟೋಕ್ಕೆ
ತಂದಿಟ್ಟು ತಮಾಷೆ ಮಾಡುವರು
ತಿನ್ನು ತಿನ್ನೆಯೆಂದು ಹೇಂಗೆ ತಿನ್ನಲಿ ಹೇಳಿ
ನಾ ಇರುವುದು ಗೊಡೆಯ ಫೋಟೋದಲ್ಲಿ
ತಿನ್ನುವುದು ಮಾತ್ರ ಅವರು
ಹೇಳುವುದು ಮಾತ್ರ ನನ್ನ ಹೆಸರು
ಏಕೆಂದರೆ ತಿಥಿ ಊಟ ನನ್ನದು ಅಲ್ಲವೇ
- ರಾಜು ಹಾಸನ
31 Aug 2020, 12:14 am
ನಮ್ಮ ಉತ್ತರ ಕರ್ನಾಟಕ ಬಯಲು ಸೀಮೆ ಎಂದೇ ಪ್ರಸಿದ್ಧಿಯನ್ನ ಪಡೆದ ನಾಡು...
ಬಾದಾಮಿ ಚಾಲುಕ್ಯರ, ಜಕಣಾಚಾರ್ಯರರ ವಾಸ್ತು ಶಿಲ್ಪಿಯ ನಾಡು....
ಕಲೆ ಸಂಸ್ಕೃತಿಯ ದೇವಾಲಯಗಳ ತಾಯಿನಾಡು ಇದು....
ನವ ದಾನ್ಯಗಳ ನಾಡು ಜೋಳದ ಖಡಕ್ ರೋಟಿಗೆ , ಪ್ರಸಿದ್ಧಿಯನ್ನ ಪಡೆದ ನಾಡು...
ಮಾತು ಒರಟು , ಮನಸ್ಸು ಮೃದು..
ನಮ್ಮ ಕನ್ನಡ ಭಾಷೆ ರೀ ಎಂದೇ ಪ್ರಸಿದ್ಧಿ .. ಬರ್ರೀ, ಆರಾಮ ರೀ ಬೇರೆಯವರ ಮನಸ್ಸಲ್ಲಿ ಅಚ್ಚು ಹೊಳೆದ ಭಾಷೆ ನಮ್ಮದು...
ಬಯಲು ಸೀಮೆ ಗಂಡು ಮೆಟ್ಟಿದ ನಾಡು ನಮ್ಮದು....
✍️ಸಾವಿತ್ರಿ.....
- ಸವಿ
30 Aug 2020, 05:50 pm
ಸಾರಾಯಿ ಕುಡಿದಾಗ ಆಡುವರು
ಶುರರು ಧೀರರಂತೆ
ಸಾರಾಯಿ ಕುಡಿಯದೆ ಇರುವಾಗ ಇರುವರು
ಸನ್ಯಾಸಿಯಂತೆ
ಸಾರಾಯಿ ಕುಡಿದರೆ ಮನೆಯಾಳು
ಸಾರಾಯಿ ಕುಡಿಯದಿದ್ದರೆ ತಲೆಯಾಳು
ಕುಡಿದರು ಹಾಳು ಕುಡಿಯದಿದ್ದರು ಹಾಳು
ಒಟ್ಟಿನಲ್ಲಿ ಜೀವನವೇ ಹಾಳು ಹಾಳು
ಸಾರಾಯಿ ಕುಡಿಯುವ ಮುನ್ನಾ
ಹೇಳುವರು ಸುಳ್ಳು ಸುಳ್ಳು
ಸಾರಾಯಿ ಕುಡಿದ ನಂತರ
ಹೇಳುವರು ಸತ್ಯ ಸತ್ಯ
ಸಾರಾಯಿ ಕುಡಿಯದೆ ಇರುವಾಗ
ಬರುವುದು ಸಿದಾ ಸದಾ ಮಾತು
ಸಾರಾಯಿ ಕುಡಿದಾಗ ಬರುವುದು
ಸಂಸ್ಕೃತ ತೊದಲು ಮಾತು
ಸಾರಾಯಿ ಕುಡಿಯದೆ ಇರುವಾಗ
ನೆಡೆಯುವರು ಸಿದಾ ಸದಾ ನೆಡೆ
ಕುಡಿದಾಗ ನಡೆಯುವರು
ಅಂತಿಂಥ ನೆಡೆಯಲ್ಲ ಭರತ ನಾಟ್ಯ ನೆಡೆ
- ರಾಜು ಹಾಸನ
30 Aug 2020, 01:59 am
ಕರುಳು ಬಳ್ಳಿಯ ತೊಟ್ಟಿಲಲ್ಲಿ
ಹುಟ್ಟಿದೆವು ಅಣ್ಣ ತಂಗಿಯಾಗಿ
ಆಟವಾಡುತ್ತಾ ಬೆಳದೆವು
ತಾಯಿಯ ಮಡಿಲಲ್ಲಿ
ಚಡ್ಡಿ ದೋಸ್ತಿನಂತೆ
ಜಗಳವಾಡುತ್ತಿದ್ದೆವು ಶತ್ರುವಿನಂತೆ
ಒಂದಾಗುತ್ತಿದೆವು
ಬಾನಂಗಳದ ಹಕ್ಕಿಯಂತೆ
ಇಂದು ಬರಿದಾಗಿದೆ ಗೂಡು
ನಿನ್ನ ಪುಟ್ಟ ಗೆಜ್ಜೆಯ ಸದ್ದಿಲ್ಲದೆ
ಜಿನುಗುತ್ತಿದೆ ಕಣ್ಣೀರು
ಧುಮ್ಮಿಕ್ಕಿ ಹರಿಯುತ್ತಿದೆ
ಮನದ ನೋವು
ಬಾಲ್ಯದ ನೆನಪು ಕಂಡು
ಮರೆಯೋದುಂಟೆ
ಒಡಹುಟ್ಟಿದವಳನ್ನು
ನನ್ನ ಪುಟ್ಟ ತಂಗಿ
- ರಾಜು ಹಾಸನ
29 Aug 2020, 10:45 pm
ವಿರಹ ವೆಂದರೆ ಏನು
ಎಂತೆಂದು ನಾನರೀತೆ
ನಾ ಮೆಚ್ಚಿದ ಹುಡುಗಿ
ನನ್ನಗಲಿ ಹೋದಾಗ //
ಒಡಲ ಪ್ರೀತಿಯ ಒಳಗೆ
ಉರಿವ ಪ್ರೇಮದ ಜ್ವಾಲೆ
ಹೊರ ಹೊಮ್ಮಲೇತ್ನಿಸಿ
ತಾ ಮೋಗಾಚಿ ಬಿದ್ದಂತೆ //
ವಿರಹ ಹರವಿಯ ನಡುವೆ
ಎನಿಹಿದು ವ್ಯೇತ್ಯಾಸ
ಹರವಿಯೋಳಗಿನ ನೀರು
ವಿರಹದ ಕಣ್ಣೀರು ಎಲ್ಲ ಒಂದೆ //
ವರುಷ ಉರುಳಿದರೆನು
ಹರುಷ ವಿಲ್ಲದ ಮನಕೆ
ಮರುಜೀವ ನೀಡಿ
ನಡೆಸಲು ಬರುವಳೇನು //
ವಿರಹದ ಕಟ್ಟೆ ಓಡೆದರೊಮ್ಮೆ
ಕೊಚ್ಚಿ ಹೋಗರು ಯಾರು
ಹುಚ್ಚಾಗಿ ಹೊಯ್ದಾಡಿ ಬಿಚ್ಚಲೆ
ಬೇಕಲ್ಲವೇ ಮನದಾಳವನ್ನು //
ಕಲ್ಮೇಶ ಬಡಿಗೇರ
9743539657
......ಬಾದಾಮಿ......
- Kalmesh Badiger
29 Aug 2020, 09:33 pm
ನೀಲ ಆಗಸದಲ್ಲಿ
ನೂರೊಂದು ಬಣ್ಣ
ಅದರಾಚೆಗೆ ಇರುವುದು
ಚಾಕೊಲೇಟ್ ನ ಬಂಗ್ಲ //
ಸೂರ್ಯ ಚಂದ್ರಮರೆ
ಅದರ ದ್ವಾರಗಳು
ಸುತ್ತೋ ಗ್ರಹಗಳೇ
ಅದಕೆ ಕಾವಲಿಗರು //
ಬಣ್ಣದ ಕಾಮನ ಬಿಲ್ಲೆ
ಮನೆಯ ಅಂಗಳವು
ಅರಳುವ ಮಲ್ಲಿಗೆಯಂತೆ
ಆ ಹೊಳೆವ ಚುಕ್ಕಿಗಳು //
ಉಕ್ಕುವ ಜಲಧಾರೆಯ
ಆ ಧೂಮ ಕೇತುಗಳು
ಮಂಜಿನ ಹನಿಗಳಂತೆ
ಉಲ್ಕೆಯ ಸುರಿಮಳೆಯೋ //
ಆಗಸ ವೆಂಬುವುದೆ
ಆನಂದದ ಮಡಿಲೋ
ವಡಿಲಿನಂತಿರುವ ಆ
ದೇವರ ದೇವನ ಕಡಲೋ //
ಕಲ್ಮೇಶ ಬಡಿಗೇರ
9743539657
.......ಬಾದಾಮಿ.......
- Kalmesh Badiger
29 Aug 2020, 09:18 pm
ಕೈಯಲಿ ಕೋಲನು ಹಿಡಿದು
ಬಂದನು ಕರಡಿ ಆಡಿಸಾವಾ
ಬಗಲಲಿ ಚೀಲ ಬಲಗಡೆ
ಕೈಯಲಿ ಕರಡಿ ಹಿಡಿದಾವ //
ತಕ ತಕಾ ಕುಣಿವ ಕರಡಿಗೆ
ಅಳುತಾ ಕೂತ್ಕೋ ಆನ್ನಾವ
ತವರಿನ ದುಃಖ ತರುಣಿಯ
ಸೋಗನು ಮಾಡಿಸಿ ತೋರ್ಸಾವ //
ಮೂಗಿಗೊಂದು ದಾರವ ಹಾಕಿ
ಕರಡಿಯ ಮೂಗುದಾರ ಹೀಡಿದಾವ
ಬೆನ್ನಿನ ಮೇಲೆ ಸಣ್ಣ ಹುಡುಗರ
ಕೂಡಿಸಿ ಮಂತ್ರಿಸಿ ಹರಸಾವ //
ಕರಡಿಯ ಕೂದಲು ಕಿತ್ತು ಮಗುವಿಗೆ
ತಾಯತ ಕಟ್ಟಾವ ಇವನು
ದೇವ್ವವ ಕಂಡರೆ ಹೆದರಲ್ಲಂತಾ
ಬರವಸೆ ಕೊಡುತಾ ಹೊಂಟಾವ //
ಬೇಸತ್ತ ಜನರಿಗೆ ಖುಷಿಯನ್ನು ಕೊಟ್ಟು
ತಾನೆಂದು ಬೇಜಾರ್ ಆಗದಾವ
ಬಂದ ಬಿಕ್ಷೆಯ ತೆಗೆದುಕೊಂಡು
ಮುಂದಿನ ಊರಿಗೆ ಹೊಗಾವ //
ಕಲ್ಮೇಶ ಬಡಿಗೇರ
9743539657
........ಬಾದಾಮಿ......
- Kalmesh Badiger
29 Aug 2020, 09:02 pm
ಬಣ್ಣದ ತೆರನು ನೋಡಲು
ಬನಶಂಕರಿ ಜಾತ್ರೆಗೆ ಹೋಗ್ತೀವಿ
ಬದಾಮಿ ಐಹೊಳೆ ಪಟ್ಟದಕಲ್ಲು
ಸುತ್ತಾಡಿ ನೋಡ್ಕೊಂಡು ಬರ್ತೀವಿ //
ಚಾಲುಕ್ಯರು ಆಳಿದ ನಾಡಿನಲ್ಲಿ
ನಾವು ನಲಿಯುತ ಲಿರತಿವಿ
ಕನ್ನಡ ನಾಡಿನ ಹೆಮ್ಮೆಯ ಮಕ್ಕಳು
ನಾವೆಂದು ಹೇಳುತ ಲಿರುತಿವಿ. //
ಶಿವಯೋಗ ಮಂದಿರದಲ್ಲಿ
ಸಂಗೀತ ಪಾಠ ವ ಕೇಳ್ತಿವಿ
ಮಹಾಕೂಟದಲ್ಲಿ ಮಹಿಮರೇಲ್ಲರ
ದಿವ್ಯ ದರುಶನ ಪಡಿತಿವಿ //
ಬಣ್ಣದ ಸಿನೆಮಾ ನೋಡಲು
ಬದಾಮಿ ಬಸ್ ಗೆ ಹೋಗ್ತೀವಿ
ಬಂಡೆಗಲ್ಲಿನ ಚಿತ್ರವ ನೋಡಿ
ಮನದಲಿ ಉಲ್ಲಾಸ ಪಡತಿವಿ. //
ಅಂತೂ ಇಂತೂ ಬಾದಾಮಿ ಅಂದ್ರ
ಎಷ್ಟ ಚೆಂದ ಐತೆ ನೋಡ್ರೀ
ಬರುವ ಜನರಿಗೆ ಸುಂದರ ಶಿಲ್ಪವು
ಕೈ ಮಾಡಿ ಕರಿತಾವರಿ //
ಕಲ್ಮೇಶ ಬಡಿಗೇರ
9743539657
........ಬಾದಾಮಿ.......
- Kalmesh Badiger
29 Aug 2020, 06:21 pm
ಬಾಂಬೆ ಸರ್ಕಸ್ ಬಂದಿತ್ತೊಮ್ಮೆ
ಬನಶಂಕರಿ ಜಾತ್ರಿ ಒಳಗ
ಬಾದಾಮಿ ಜಾತ್ರೆಗೆ ಬಂದ ಜನರಿಗೆ
ಖುಷಿ ತಂದು ಕೊಡಲಾಕ//
ಬಣ್ಣದ ಟೋಪಿ ಹಾಕ್ಕೊಂಡು
ಬಂದಾ ಜೋಕಾರ್ ಅನ್ನಾವ
ಚಡ್ಡಿಯ ಕಸಿಯನು ಕೈಯಲಿ
ಹಿಡಿದು ನಗಿಸುತ ನಿಂತಾವ//
ಆನೆಯ ಮೇಲೆ ಕುಣಿಯುತ
ನೆಗೆಯುತಾ ನರ್ತನ ಮಾಡೋರು
ಒಂಟೆಯ ಬೆನ್ನಿಗೆ ಗಂಟೆಯ ಕಟ್ಟಿ
ಬಾರಿಸಿ ಲಗಾ ಹೊಡೆಯೋರು//
ಹುಲಿ ಚಿರತೆಗಳ ಸಂಘವ ಮಾಡಿ
ಆಟವ ಆಡಿಸಿ ತೊರಸವರು
ಗಿಳಿಯ ಬಾಯಿಗೆ ಕಡ್ಡಿಯ ಇಟ್ಟು
ಬಂದೂಕು ಹಾರಿಸಿಯೆ ಬಿಟ್ಟಾರು//
ಒಂಟೆಗಾಲಲಿ ನಿಲ್ಲಲು ಆನೆಗೆ
ಪಾಠವ ಕಲಿಸಿಯೆ ಬಿಟ್ಟಾರು
ಗಂಟೆ ಗಟ್ಟಲೆ ಜೀಕವ ಹೊಡೆಯಲು
ಗೊರಿಲ್ಲಾ ಬಿಟ್ಟಾರ ಎಲ್ಲರ ನಗಿಸ್ಯಾರು //
ಕಲ್ಮೇಶ ಬಡಿಗೇರ
9743539657
.........ಬಾದಾಮಿ.......
- Kalmesh Badiger
29 Aug 2020, 08:21 am
ಮಳೆ ಬಂತೋಮ್ಮೆ ಮಳೆ
ತುಂಬಿ ಬಂತೋ ಹೊಳೆ
ದೋಣಿಯ ಮಾಡಿದೆ ಖಾಗದದಿ
ತೇಲಲು ಬಿಟ್ಟೇನು ಮಳೆ ನಿರಿನಲಿ //
ಬಿರುಸಿನ ಗಾಳಿಯು ಬೀಸಿತ್ತು
ಜಿಟಿ ಜಿಟಿ ಮಳೆಯು ಸುರಿದಿತ್ತು
ರಬಸಧಿ ನೀರು ಹರಿದಿತ್ತು
ಕಪ್ಪೆಯು ಗೋಟರು ಹಾಕಿತ್ತು//
ಹಕ್ಕಿಗಳೇಲ್ಲ ಗೂಡನು ಸೇರಿತು
ಮೇವಿನ ಬಂಡಿಯು ತೆಲೋಯ್ತು
ತೇರಿನ ಗಾಲಿಯು ತೊಯ್ದಿತ್ತು
ಮಾವನ ವಲ್ಲಿಯು ಹರಿದಿತ್ತು//
ತಿಪ್ಪೆ ಕೊಂಪೆಯು ತುಂಬೊಯ್ತು
ಕೆರೆ ನೀರೆಲ್ಲಾ ಕೆಂಪಾಯ್ತು
ಕೊಲ್ಮಿಂಚು ಒಂದು ಮಿಂಚಿತ್ತು
ಕಡೆಮನಿ ಗಿಡವು ಮುರಿದಿತ್ತು//
ಚೆಂದದ ಊರಿಗೆ ಕಳೆ ಬಂತು
ಅಮ್ಮನ ಕೈಯಲಿ ಉಂಡಿಯಿತ್ತೋ
ತಂಡಿಯು ಹಾರಿ ಹೋಗಿತ್ತು
ತಕ ತೈ ಚಿಣ್ಣರ ಕುಣಿಸಿತ್ತು //
ಕಲ್ಮೇಶ ಬಡಿಗೇರ
9743539657
.........ಬಾದಾಮಿ......
- Kalmesh Badiger
29 Aug 2020, 08:06 am