ನಿನ್ನ ಅಂಗೈಯ ತಾಕಿ ಮದರಂಗಿಗೂ, ಮುದ್ದಾದ ರಂಗು ಬಂದಿದೆ.
ನಿನ್ನ ಅಂಗಾಲ ಪಾದ ಪದ್ಮ ತಾಕಲೆಂದೇ ಈ ಧರಣಿ, ಧರಣಿ ಕುತ್ತಿದೆ.
ನೀನು ಅಂಗಳದಲ್ಲಿ , ತಿಂಗಳ ಬೆಳಕಿನಲಿ ಆಡುತ್ತಿದ್ದಾರೆ ಇಂಗೆ.
ಒಟ್ಟೊಟ್ಟಿಗೆ ಎರಡೆರಡು ಚಂದ್ರನ್ನ ನೋಡದಂಗೆ ಅಗೋಯ್ತು ನಂಗೆ.
ನಿನ್ನ ಕಾಡುವ ಕಣ್ಣುಗಳು ಅವಳದು ಹರಳುಗಳು.
ನಿನ್ನ ತೂಗುವ ಉಬ್ಬುಗಳು ಕಮನಬಿಲ್ಲುಗಳು.
ನಿನಾಡುವ ಮಾತುಗಳು ಸಿಹಿ ಜೇನಿನ ಬಿಂಧುಗಳು.
ಕಣ್ಣಿನ ನೋಟಗಳು ತಲೆ ತಿರುಗಿಸೋ ರಾಟೆಗಳು.
ನಿನ್ನ ನೋಡಿ ಬಾಗುತೈತೆ ಅ ಸೂರ್ಯಕಾಂತಿ.
ನಿನ್ನ ನೋಡುವ ಕ್ಷಣವೆಲ್ಲ, ನನಗೆ ಸಂಕ್ರಾಂತಿ.
ಜೂಲಿಯ ಕಟ್ಟಿ ನಿನಗೆ, ಲಾಲಿಯ ಹಾಡಲೇನು.
ನೂರಾರು ಕಥೆಯ ಕಟ್ಟಿ, ನಿನ್ನ ನಾ ಕೊಂಡದಲೇನು.
ಕನಸ್ಸಿನ ಕೋಟೆಯಲ್ಲಿ, ನಿನ್ನ ನಾ ಮೆರಸಲೇನು.
ನಿನ್ನನ್ನು ಮೆರಸಿ ಮೇರಸಿ, ನನ್ನ ನಾ ಮರೆತೇ ನಾನು.
ಕಣ್ಣಿನ ಹಂಚ್ಚಿನಲೇ , ಚುಚ್ಚಿ ಚುಚ್ಚಿ ಕೊಲ್ಲುವೆ ನೀನು.
ಹೃದಯದ ಆಳಕ್ಕೆ ಇಳಿದು, ಪ್ರೀತಿ ಸಸಿಯ ನೆಟ್ಟೆ ನೀನು.
ನೀ ಕೊಟ್ಟಂತ ಮುತ್ತಾನೆಲ್ಲ ಬಚ್ಚಿಟ್ಟು ಕೊಂಡೆ ನಾನು.
ನಿನ್ನ ಈ ಮಾಡಿಲಿನಲೇ ಜೀವವ ಬಿಡಲೇ ನಾನು..
ಇದ್ದಾಗ ಹೊಟ್ಟೆಗೆ ಊಟ
ಮೈ ತುಂಬಾ ಬಟ್ಟೆ ಕೊಡದೇ
ವರ್ಷಕ್ಕೊಮ್ಮೆ ಬರುವ
ಪಿತೃ ಪಕ್ಷಕ್ಕೆ ಗುಂಡು ತುಂಡು
ಬಟ್ಟೆ ಬರಿ ತಂದಿಟ್ಟು ಪೂಜಿಸಿದರೆ
ಸತ್ತವರು ಮತ್ತೆ ಎದ್ದು ಬರುವರೇ
ಬಂದು ತಿನ್ನುವರೇ ಗುಂಡು ತುಂಡು
ಗುಂಡು ತುಂಡು ತಿಂದು ತೆಗುತ್ತಾ
ಬಟ್ಟೆ ಬರಿ ತೊಟ್ಟು ಸಂಭ್ರಮಿಸುತ್ತಾ
ಬಂಧು ಬಾಂಧವರ ಕರೆದು
ಪಿತೃ ಪಕ್ಷವಾ ಮಾಡುವರು ಸತ್ತವರಿಗಾಗಿ
ಪಿತೃ ಪಕ್ಷ ಸತ್ತವರಿಗಾಗಿ
ಗುಂಡು ತುಂಡು ನಮ್ಮಗಾಗಿ
ಮೌನಾಚರಣೆ ಬದಲು
ಸಂಭ್ರಮಾಚರಣೆ ಮಾಡುವರಯ್ಯ
ಓ ನನ್ನ ನಲ್ಲೆ ಓಡುವೇ ಎಲ್ಲಿಗೆ
ನೀ ನಿಲ್ಲೆ ಇಲ್ಲೇ ನಾ ಇರುವೇ ಇಲ್ಲೇ
ನಾಚುವೆ ಏಕೆ ನಾನೇ ನಿನ್ನ
ಪ್ರೀತಿಯ ನಲ್ಲ ಮಾತಿನ ಮಲ್ಲ
ನೀನೇ ನನ್ನ ಪ್ರೀತಿಯ ನಲ್ಲೆ ಮಾತಿನ ಮಲ್ಲಿ
ಬಾ ನನ್ನ ನವಿಲೇ ನೀ ಮೆಲ್ಲ ಮೆಲ್ಲಗೆ
ನೀನೇ ನನ್ನ ದುಂಡು ಮಲ್ಲಿಗೆ ಸೂಜಿ ಮಲ್ಲಿಗೆ