Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ನಾ ಮರೆತೇ...

ಜೂಲಿಯ ಕಟ್ಟಿ ನಿನಗೆ, ಲಾಲಿಯ ಹಾಡಲೇನು.
ನೂರಾರು ಕಥೆಯ ಕಟ್ಟಿ, ನಿನ್ನ ನಾ ಕೊಂಡದಲೇನು.
ಕನಸ್ಸಿನ ಕೋಟೆಯಲ್ಲಿ, ನಿನ್ನ ನಾ ಮೆರಸಲೇನು.
ನಿನ್ನನ್ನು ಮೆರಸಿ ಮೇರಸಿ, ನನ್ನ ನಾ ಮರೆತೇ ನಾನು.
ಕಣ್ಣಿನ ಹಂಚ್ಚಿನಲೇ , ಚುಚ್ಚಿ ಚುಚ್ಚಿ ಕೊಲ್ಲುವೆ ನೀನು.
ಹೃದಯದ ಆಳಕ್ಕೆ ಇಳಿದು, ಪ್ರೀತಿ ಸಸಿಯ ನೆಟ್ಟೆ ನೀನು.
ನೀ ಕೊಟ್ಟಂತ ಮುತ್ತಾನೆಲ್ಲ ಬಚ್ಚಿಟ್ಟು ಕೊಂಡೆ ನಾನು.
ನಿನ್ನ ಈ ಮಾಡಿಲಿನಲೇ ಜೀವವ ಬಿಡಲೇ ನಾನು..

- NaveenkumarK

14 Sep 2020, 10:54 pm

ಎಚ್ಚರಿಕೆ

ಕುಡುಕ ಕುಡುಕ
ನಾ ಕುಡಿಯುವುದು
ಒಂದು ನೈಂಟಿ
ವಾಲಾಡುವುದು ಜಾಸ್ತಿ

ನೈಂಟಿ ಕುಡಿದರೆ
ಪಲ್ಟಿ ಹೋಡೆಯುವೆ
ಆದರೂ ಹೇಳುವೆ ಸತ್ಯ

ನೀ ಇಲ್ಲದಿದ್ದರೆ ಬರುವುದು
ಹಾಳೆ ಲವ್ವರ್ ನೆನಪು
ಹಾಗಾಗಿ ಬಿಟ್ಟುಕೋಳ್ಳುವೆ
ಒಂದೊಂದು ನೈಂಟಿ

ದಿನ ಕುಡಿಯುತ್ತಿದ್ದೆ
ಒಂದೊಂದು ನೈಂಟಿ
ನೈಂಟಿ ಹೋಗಿ ಕ್ವಾಟ್ರು ಬಂದು
ಚಟ್ಟವೆರಿಸಿತು ಸ್ಮಶಾನದ ಕಡೆಗೆ

ಸಮಸ್ಯೆಗಳು ಸಾವಿರ ಇದ್ದರೂ
ಇಂದು ಬಂದು ನಾಳೆ ಹೋಗುತ್ತೆ
ಯಾವುದಕ್ಕೂ ಅಂಜದೆ ಅಳುಕದೆ
ಧೈರ್ಯದಿಂದ ಎದುರಿಸಿ
‌. ದುಶ್ಚಟಗಳಿಗೆ ಬಲಿಯಾಗಬೇಡಿ

- ರಾಜು ಹಾಸನ

14 Sep 2020, 10:36 pm

ಅಮ್ಮ

ಸಿಹಿ ಮುತ್ತನ್ನ
ಜೊತೆಗೆ ಕೈ, ತುತ್ತನ್ನ...
ಪ್ರೀತಿ,ಮಮತೆ, ಮಾನವೀಯತೆ
ಧಾರೆ ಏರೆವ ದೇವತೆ..


ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

14 Sep 2020, 01:18 pm

ಪಿತೃ ಪಕ್ಷ

ಇದ್ದಾಗ ಹೊಟ್ಟೆಗೆ ಊಟ
ಮೈ ತುಂಬಾ ಬಟ್ಟೆ ಕೊಡದೇ
ವರ್ಷಕ್ಕೊಮ್ಮೆ ಬರುವ
ಪಿತೃ ಪಕ್ಷಕ್ಕೆ ಗುಂಡು ತುಂಡು
ಬಟ್ಟೆ ಬರಿ ತಂದಿಟ್ಟು ಪೂಜಿಸಿದರೆ
ಸತ್ತವರು ಮತ್ತೆ ಎದ್ದು ಬರುವರೇ
ಬಂದು ತಿನ್ನುವರೇ ಗುಂಡು ತುಂಡು

ಗುಂಡು ತುಂಡು ತಿಂದು ತೆಗುತ್ತಾ
ಬಟ್ಟೆ ಬರಿ ತೊಟ್ಟು ಸಂಭ್ರಮಿಸುತ್ತಾ
ಬಂಧು ಬಾಂಧವರ ಕರೆದು
ಪಿತೃ ಪಕ್ಷವಾ ಮಾಡುವರು ಸತ್ತವರಿಗಾಗಿ
ಪಿತೃ ಪಕ್ಷ ಸತ್ತವರಿಗಾಗಿ
ಗುಂಡು ತುಂಡು ನಮ್ಮಗಾಗಿ
ಮೌನಾಚರಣೆ ಬದಲು
ಸಂಭ್ರಮಾಚರಣೆ ಮಾಡುವರಯ್ಯ

- ರಾಜು ಹಾಸನ

14 Sep 2020, 12:11 am

ಸೂಜಿ ಮಲ್ಲಿಗೆ

ಓ ನನ್ನ ನಲ್ಲೆ‌ ಓಡುವೇ ಎಲ್ಲಿಗೆ
ನೀ ನಿಲ್ಲೆ ಇಲ್ಲೇ ನಾ ಇರುವೇ ಇಲ್ಲೇ
ನಾಚುವೆ ಏಕೆ ನಾನೇ ನಿನ್ನ
ಪ್ರೀತಿಯ ನಲ್ಲ ಮಾತಿನ ಮಲ್ಲ
ನೀನೇ ನನ್ನ ಪ್ರೀತಿಯ ನಲ್ಲೆ ಮಾತಿನ ಮಲ್ಲಿ
ಬಾ ನನ್ನ ನವಿಲೇ ನೀ ಮೆಲ್ಲ ಮೆಲ್ಲಗೆ
ನೀನೇ ನನ್ನ ದುಂಡು ಮಲ್ಲಿಗೆ ಸೂಜಿ ಮಲ್ಲಿಗೆ

- ರಾಜು ಹಾಸನ

13 Sep 2020, 10:21 pm

ಒಂಟಿ ಹಕ್ಕಿಯ ಹಾಡು

ನಾ ಬರೆವ ಕವನವಿದು
ಬರಿಯ ಸಾಲುಗಳಲ್ಲ
ಅಂತರಾಳದ ನೋವಿದು ಗೆಳತಿ
ಇಂದು ನಿನ್ನೆಯದಲ್ಲ....

ಕಳೆದ ದಿನಗಳೆಲ್ಲಾ
ಬರಿಯ ನೆನಪುಗಳಲ್ಲ
ಸಿಹಿ-ಕಹಿಯ ಅನುಭವವದು
ಹುಡುಗಿ ನಾ ನಿನ್ನ ಮರೆತಿಲ್ಲ...

ಹಾರುತ್ತಿದ್ದ ಮನಸದು
ಹರೆಯದ ಕನಸದು
ಹುಚ್ಚು ಕುದುರೆಯಬೆನ್ನೇರಿಹೋದ
ಮರೆಯಲಾಗದ ಕ್ಷಣವದು...

ಎಲ್ಲಾ ನೆನಪಿದೆ ನನಗೆ
ನಿನ್ನೆ ಮೊನ್ನೆಯವರೆಗೆ
ಒಂಟಿ ಹಕ್ಕಿಯ ಬದುಕು
ಈ ಪ್ರೀತಿಯ ಗೂಡಿನೊಳಗೆ....

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

13 Sep 2020, 09:30 pm

ನುಡಿ ಮುತ್ತು

ತಾಯಿ ಸಾಕುವಳು
ತನ್ನ ಒಡಲು ಹೊತ್ತು
ತಂದೆ ಸಾಕುವನು
ಹೆಗಲ ಮೇಲೆ ಹೊತ್ತು
ನಾ ಪೂಜಿಸುವೇನು
ನಿಮ್ಮಿಬ್ಬರನ್ನು ಸಾದಾ ಕಾಲ
ನನ್ನೆದೆಯ ಗುಡಿಯಲ್ಲಿಟ್ಟು

- ರಾಜು ಹಾಸನ

13 Sep 2020, 07:51 pm

ಸುಪ್ರಭಾತ

ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ

- ರಾಜು ಹಾಸನ

13 Sep 2020, 07:13 pm

ಜ್ಞಾನೋದಯ

ತಲೆ ಕೆಡಿಸಿಕೊಂಡು
ಯೋಚಿಸುತ್ತಾ ಕುಡಿದೆ
ಒಂದು ಬಾಟಲ್ ಎಣ್ಣೆ
ಹುಟ್ಟು ಸಾವು ಏಕೆಯೆಂದು

ಎಷ್ಟೇ ಕುಡಿದು ಯೋಚಿಸಿದರೂ
ಅರ್ಥವಾಗಲಿಲ್ಲ ಕೊನೆಯತನಕ
ಖಾಲಿಯಾಗಿದ್ದು ಮಾತ್ರ
ಎಣ್ಣೆ ಬಾಟಲ್ ಗಳು
ಒಂದರ ನಂತರ ಮತ್ತೊಂದರಂತೆ

ಆಗ ಅರ್ಥವಾಯಿತು
ಒಂದು ಖಾಲಿಯಾದರೆ
ಮತ್ತೊಂದು ಬರುವುದು
ಹುಟ್ಟು ಸಾವು ಹೀಗೆ ಎಂದು
ಆದರೂ ತಿಳಿಯಾದು
ಹುಟ್ಟು ಸಾವಿನ ಅಂತರ

- ರಾಜು ಹಾಸನ

13 Sep 2020, 06:57 pm

ಕನಸು....❤️

ತುಂಬಾ ಕನಸನ್ನು ಒತ್ತು
ನಿನ್ನ ಜೀವನದ ಸಂಗತಿಯಾಗಿ ಬರುವೆ
ತುಂಬಾ ಆಸೆ ಇದೆ ,
ಮದುವೆಯಂಬ ಮಿಲನದಲ್ಲಿ...
ನಿನ್ನೆದುರು ನಿಂತು ನಿನ್ನ ಕೈ ಇಂದ
ನನ್ನ ಹಣೆಗೆ ಅರಿಶಿನ ಕುಂಕುಮವನ್ನು ಇಡಿಸ್ಕೊಳಲ್ಲು...
ಆ ನಿನ್ನ ಕೈ ಇಂದ
ತಾಳಿ ಕಟ್ಟಿಸಿಕೊಳಲ್ಲು...
ನೀ ಮುಂದೆ, ನಾ ನಿನ್ನ ಇಂದೆ
ಬರುತ ಆ ಸಪ್ತಪದಿಯನು ತುಳಿಯಲು
ಮತ್ತೆ ಕಾಣದ ಆ
ಅರುಂಧತಿ ನಕ್ಷತ್ರವನು ನೋಡಲು......❤️
.....

- Bhavyashree K.G1

13 Sep 2020, 07:08 am