Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನಾಕಿ...

ಅವಳ ಕಣ್ಣುಗಳಲ್ಲಿ ಬೆಳದಿಂಗಳ ಲೋಕ...
ಅವಳ ಮುಖದಲ್ಲಿ ಮುಗುಳ್ನಗೆಯ ಪಾಕ...
ಅವಳ ಮಾತಲ್ಲೇ ಸಪ್ತಸ್ವರ ಕೇಳಿದಂಗ ಆಗುತ್ತೆ ಯಾಕ...
ಅವಳ ನಾಸಿಕ ಸಂಪಿಗೆ
ಬಿಳಿಗೆಂಪು ಬಣ್ಣ ಬೆಣ್ಣೆಯಂತ ಹೆಣ್ಣ ಅವಳ ಕಂಡಾಗ ನಾನಾದೆ ಮೂಖ ವಿಸ್ಮಿತ ಅದಕ್ಕೆ
ಅನ್ಸುತ್ತೆ ಅವಳು ತುಂಬಾ ಕಲಾತ್ಮಕ...
ಅವಳ ಅಂದ ಚಂದ್ರ ಕಳೆಯ ರೂಪಕ...
ಅವಳ ಮನಸ್ಸು ಹೂವಿನಂತೆ ನಾಜುಕ...
ಅವಳು ನಕ್ಷತ್ರ ಲೋಕದ ನಾಯಕಿ ಅಕಿ ನನ್ನಾಕಿ ನನ್ನಾಕಿ..



ಭಾವನೆಗಳ ಬಾಹು ಬಂದನದಲ್ಲಿ ಬಂದಿಸುವೆ ನನ್ನವಳನ್ನು..
ಅವಳ ಭಾವನೆಗಳಿಗೆ ಬಣ್ಣ ತುಂಬುವೆ ಆಕಾಶಡೆತ್ತರದ ಅವಳ ಆಸೆಗಳನ್ನು ನಕ್ಷತ್ರಗಳಾಗಿ ತಂದು ಅವಳ ಪಾದದಡಿ ಇಡುವೇ..
ಅವಳ ಭಾವನೆಗಳ ಜೊತೆ ನನ್ನ ಭಾವನೆ ಸೇರಿಸಿ ಈ ಜೀವಮಾನವೆಲ್ಲ ಸಾಗುವೇ
ಅವಳ ಜೊತೆ ಜೊತೆಯಲಿ...



ತಂಗಾಳಿಯಾಗಿ ಅವಳ ಮುಂಗುರುಳು ಜೊತೆ ಆಡುವಾಸೆ..
ಸುಮಧುರ ಅವಳ ಸಂಗೀತವಾಗಿ ಧ್ವನಿಯಲ್ಲೇ ಗುಣಗುವಾಸೆ..
ಮಳೆ ಹನಿಯಾಗಿ ಅವಳ ನೆನಸಿ ಮನಸೆಲ್ಲಾ ಕುಣಿಸುವಾಸೆ..
ಕನಸಾಗಿ ಅವಳ ಕಣ್ಣಲ್ಲಿ ತುಂಬುವಾಸೆ..
ಖುಷಿಯಾಗಿ ಅವಳ ಹೃದಯದಲ್ಲಿ ಮುಳುಗುವಾಸೆ..

insta:- unique_abhyaa

- abhi.s.j

11 Nov 2025, 07:54 pm

ಹೆಂಡತಿ : ನೀವು ಕನ್ನಡಕ ತೆಗೆದು ಬಿಟ್ಟರೆ ತುಂಬಾ ಚೆನ್ನಾಗಿ ಕಾಂತೀರಾ .
ಗಂಡ : ಹೌದು ಡಿಯರ್ , ನನಗು ಹಾಗೆ ಅನ್ಸುತ್ತೆ . ನಾನು ಕನ್ನಡಕ ತೆಗೆದಾಗಲೆಲ್ಲ ನೀನು ತುಂಬಾ ಚೆನ್ನಾಗಿ ಕಾಂತೀಯ .

insta:- unique_abhyaa

- abhi.s.j

10 Nov 2025, 11:18 pm




ಮಗ: ಅಪ್ಪಾ ಒಂದು ಮಾತು ಹೇಳಲಾ?
ತಂದೆ: ಹೇಳು.
ಮಗ: ಪೇಸ್ ಬುಕ್ ಲಿ ನನ್ನ ಹದಿನೈದು ಫೇಕ್ ಖಾತೆಗಳಿವೆ.
ತಂದೆ: ಹರಾಮ್ ಖೋರ್ ಇದನ್ನೆಲ್ಲ ನನಗೆ ಯಾಕೆ ಹೇಳ್ತಿದ್ದೀಯಾ?
ಮಗ: ನೀವು ಹತ್ತು ದಿನಗಳಿಂದ ಟಿ ಕುಡಿಯಲು ಕರಿತಾ ಇದ್ದಿರಲ್ಲ ಆ ಮೋನಿಕಾ
ಬೇರೆ ಯಾರು ಅಲ್ಲ ನಾನೆ ???

insta:- unique_abhyaa

- abhi.s.j

10 Nov 2025, 11:15 pm

ನಿನ್ನ ಕಾಡಿಗೆ ಕಣ್ಣಿನಲ್ಲಿ
ಮಾತು ಹರಿದು ಬರಲಿ
ಒಣಗಿದ ನನ್ನೇದೆಗೆ ಜೀವತುಂಬಲಿ
ನಿನ್ನ ನೋಟ ಹರಿದುಬಂದು
ನನಗೆ ದಾರಿ ದೀಪವಾಗಲಿ
ಕನಸು ಕಂಡ ನನ್ನ ಮನಕೆ ನೆಮ್ಮದಿ ನೀಡಲಿ
ಹಿಂದೆ ಸರಿದ ನಿನ್ನೆಗಳು ಮತ್ತೆ ಕಾಡದಿರಲಿ
ನಿನ್ನ ಮುಗುಳು ನಗು ನನ್ನ ಬಾಳಿಗೆ ಬೆಳಕು ಬೀರಲಿ
ಸ್ವಾತಿ ಮಳೆಯ ಮುತ್ತು ಹನಿಗೆ ಪ್ರೀತಿ ಚಿಗುರಲಿ
ಬಳಲಿ ಬೆಂಡಾದ ನನ್ನ ಜೀವನದಲ್ಲಿ
ಒಲವಿನ ತೆನೆ ಒಡಮೂಡಲಿ
ನನ್ನ ಬಯಕೆ ಒರತೆಗಳು ತುಂಬಿ ತುಳುಕಲಿ
ಕವಲು ಒಡೆದ ನನ್ನ ದಾರಿಗೆ ದಿಕ್ಕು ತೋರಲಿ
ನನ್ನ ನಿನ್ನ ಹೆಜ್ಜೆ ಗುರುತು ಒಂದೇ ದಿಕ್ಕಿಗೆ ಸಾಗಲಿ
ನನ್ನ ಹೃದಯ ಬಯಲಿನೊಳಗೆ
ನಿನ್ನ ಪ್ರೀತಿ ಹುಟ್ಟಿ ಬರಲಿ.........

insta:- unique_abhyaa

- abhi.s.j

10 Nov 2025, 11:13 pm



ಅಡ್ಡಲಾಗಿ ಬಿದ್ದಿದೆ ನನ್ನೀ ಅನಾಥ ಕವನ,
ಕಾಯುತ್ತಾ ನಿನ್ನ ಆಗಮನ.

insta:- unique_abhyaa

- abhi.s.j

10 Nov 2025, 11:11 pm

ಪರದೆಯ ಹಿಂದೆ
ಸರಿದು ಹೋಗಿರುವೆ ನಾ
ಹೊರಗೆ ಬರುವ ಆಸೆ
ಕರೆಯುತಿದೆ ನನ್ನ

ಏಕೆ ಬಂಧಿಸುವಿರಿ
ನನ್ನ ಬಯಕೆಗಳ
ಬಾಳುವ ಆಸೆ ಇದೆ
ನಿಮ್ಮಂತೆ ನನಗೂ
ಕಲ್ಲಂತೆ ಇರಲಾರೆ ಹೇಳದೆ

ಅರಳುವ ಕನಸಿದೆ
ಮಲ್ಲಿಗೆಯ ಹೂವಂತೆ
ಏಕೆ ನೋಡುವಿರಿ
ಪಂಜರದ ಗಿಳಿಯಂತೆ

ನಾಲ್ಕು ದಿಕ್ಕಿನಲೂ
ನೂರು ಕಣ್ಣುಗಳು
ಕುಕ್ಕಿ ತಿನ್ನುವ ಹದ್ದುಗಳಂತೆ
ಹಾರಲು ಬಿಡಿ
ಸ್ವಚ್ಚಂದವಾಗಿ ಹಕ್ಕಿಯಂತೆ

insta:- unique_abhyaa

- abhi.s.j

10 Nov 2025, 11:09 pm

ಗೆಳತಿ...
ನಾಳೆಯ ನಿನ್ನ ಭೇಟಿಗೆ
ಇಂದು ಮನವು ತವಕಿಸುತ್ತಿದೆ..!
ನಾಳೆ ಮಾತನಾಡಬೇಕಿದ್ದ
ಮಾತುಗಳೆಲ್ಲವೂ
ಇಂದು ತಾಲೀಮಿನಲ್ಲಿ ತೊಡಗಿವೆ...!

insta:- unique_abhyaa

- abhi.s.j

10 Nov 2025, 11:08 pm

ಆಗಸದಲ್ಲಿ ಚಂದ್ರ ಮೂಡಿದಾಗ , ಮನವು ಉಲ್ಲಸಿತವಾದಾಗ , ತಂಗಾಳಿ ತರುವ ತಂಪಿನಲ್ಲಿ ನಿನ್ನದೇ ಕಂಪು ಎಲ್ಲಿಂದ ಬಂತು ? ನೀನೆಲ್ಲಿ ಇಲ್ಲೆಯೆ ಇರುವೆಯ ಅಥವಾ ನನ್ನ ಮನಸ್ಸಿನ ಹುಚ್ಚು ಕಲ್ಪನೆಯ?

insta:- unique_abhyaa

- abhi.s.j

10 Nov 2025, 11:05 pm

ಗುರು

ಜ್ಞಾನವು ಸಾಗರದಂತೆ
ವಾಚನಾಲಯವೇ ನಡೆದಾಡಿದಂತೆ
ಕಲಿಸುವುದರಲ್ಲಿ ನಿಸ್ಸೀಮರಂತೆ
ಸರಳತೆಯೇ ಎದೆ ಬಡಿತವಂತೆ
ಪುಟಾಣಿಗಳ ಅಚ್ಚು ಮೆಚ್ಚಿನ ವೈದ್ಯ ಇವರಂತೆ


ಧನಾತ್ಮಕತೆ ಇವರ ಆಪ್ತಸ್ನೇಹಿತನಂತೆ
ಹಾಸ್ಯ ತುಂಟತನ ಇವರ ಗೆಳತಿಯಂತೆ
ನಗುವೇ ಇವರ ಪರಿಚಯವಂತೆ
ಸಹಾಯಕೆ ಸದಾ ಸಿದ್ದರಂತೆ
ಜೀವನವೊಂದು ಮೇರುಕೃತಿಯೊಂದ ಓದಿದಂತೆ
ಅನುಮಾನವಿಲ್ಲ ಇವರೊಂದು ದಂತಕತೆ










- anil

09 Nov 2025, 10:11 pm

ಋಣ
ಪ್ರತಿಕ್ಷಣವೂ ಮಗುವಿಗೆ ಒಳಿತಾಗಲಿ ಎಂಬ ಹರಕೆ
ಹಗಲು ರಾತ್ರಿಯ ಪರಿವಿಲ್ಲದೆ ಮಗುವಿನ ಹಾರೈಕೆ
ಎಂಜಲು ಹೇಸಿಗೆ ಎನ್ನದೇ ಸದಾ ಶುಚಿಯಿಡುವಿಕೆ
ಕೆಡುಕೆಲ್ಲಾ ತನಗಿರಲಿ ಒಳಿತೆಲ್ಲ ಮಗುವಿಗೆ ಎಂಬ ಬಯಕೆ

ಜ್ವರ ಬಂದರೆ ಏರುವುದು ಹೆತ್ತವರ ಎದೆ ಬಡಿತ
ಮಗುವಿಗಿಂತ ಹೆಚ್ಚಿನ ನೋವುಣುವುದು ಖಚಿತ
ದುಡಿಮೆಯ ಬಹುಪಾಲು ಮಗುವಿನ ವೆಚ್ಚಕೆ ಸೀಮಿತ
ಮಗುವಿನ ಸುಖದಲ್ಲಿ ತಮ್ಮ ದುಃಖವನ್ನು ಮರೆಮಾಚುತ
ತ್ಯಾಗದಲಿ ತಂದೆ ತಾಯಿಯ ಮೀರಿಸನೂ ಭಗವಂತ

ಸರ್ವಸ್ವವನೂ ಕೊಟ್ಟವರ ಋಣದ ಭಾರ ಅಪಾರ
ಇಳಿವಯಸ್ಸಲ್ಲಿ ಅವರನ್ನು ಮಕ್ಕಳಂತೆ ಕಾಣುವುದು ಧರ್ಮ
ಸಲಹಿದವರನು ಸಂತಸದಿ ಹಾರೈಕೆ ಮಾಡುವುದೇ ಪುಣ್ಯ
ಅವರ ನೋವಿಗೆ ವ್ಯಯಿಸದ ಹಣ ಹೆಣಕ್ಕೆ ಸಮ
ಹೆತ್ತವರು ಕಣ್ಮುಚ್ಚಲು ಸಾರ್ಥಕತೆಯ ಭಾವದಲಿ ಆಗಲೇ ನಿನಗೆ ಮೋಕ್ಷ

ಡಾ. ಅನಿಲ್

- anil

09 Nov 2025, 10:09 pm