Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬದುಕು ಪಯಣದ ಹಾದಿ
ಕಳೆದ ದಿನಗಳೆಲ್ಲ
ನೆನಪುಗಳ ಅಡಿ ಸಮಾಧಿ...
ಸಾಗುತ್ತಿರಲಿ ಸದಾ ನಿನ್ನ ನಡಿಗೆ
ತಲುಪುವೆ ನೀ ಕೊನೆಗೆ
ಗುರಿಯ ಕಡೆಗೆ....
ಕೃಷ್ಣ ಬಿಲ್ಲಾಡಿ ಮೇಲ್ ಬೈಲು
- krishna Billadi melbailu
17 Sep 2020, 11:07 am
ಹಾಗೊಮ್ಮೆ ಹೀಗೊಮ್ಮೆ ನೆನಪಿನಂತೆ ನನ್ನನೊಮ್ಮೆ ನೋಡಿ ಹೋಗುವೆ ಆಯಾಸವಾಗುವುದಿಲ್ಲವೇನೋ ಹುಡುಗ ನಿನಗೆ! ಬಿಗಿದ ತುಟಿಗಳ ಸಡಲಿಸಿ ಚೇಷ್ಟೆ ಮಾಡಿ ನಗಿಸುವೆ ಸುತ್ತಲಿರುವ ಗೆಳತಿಯರಿಗೆ ಏನೆಂದು ಹೇಳಲಿ ಮಾಯಾವಿ ನೀನು ಮನಸಲ್ಲೇ ಇರುವಾಗ.
ಜಾರು ಯವ್ವನ ಜೀಕಿದ ಜೋಕಾಲಿ ನೀನು ತುಸುವೇ ತಂಪಾಗಿ ಮಲಗುವೆ ಕಮ್ಮನೆಯ ಕನಸಾಗಿ ಕಣ್ಸೇರು ನಿದುರೆಯಲ್ಲೇ ನಿನ್ನವಳಾಗುವೆ ಹಗಲು ಮೂಡವ ಮುನ್ನ ಮಗುವಾಗಿ.
ಸಾವಿರಾರು ಮಾತುಗಳಿವೆ ಹುಡುಗ ಮನಸಲ್ಲಿ ಕೇಳಲು ಸಮಯವೇ ಇಲ್ಲ ನಿನ್ನಲ್ಲಿ ಒಂದೆರಡು ಸಾಲು ಹಾಗೆ ಗೀಚುವೆ ತುಟಿಯಂಚಿನ ನಗುವಿನೊಂದಿಗೆ ಓದಿಬಿಡು ಬಿಡುವು ಮಾಡಿಕೊಂಡು ನಿನ್ನ ಎದೆಗಪ್ಪಿಕೊಂಡಿದ್ದ ಈ ನೀಲಿ ಲೇಖನಿಯ ಜನ್ಮ ಸಾರ್ಥಕವಾದರೂ ಆಗಲಿ ನಾ ಕದ್ದ ಪುಣ್ಯಕೆ.
ಅಕ್ಷರಗಳು ಮೇಲು ಕೀಳು ಆಗಿರಬಹುದು ಕ್ಷಮಿಸಿಬಿಡು ಹುಡುಗ ತಡವರಿಸಿ ಬಂದ ಭಾವಗಳಿಗೆ ನಿನ್ನ ಪರಿಚಯ ಮಾಡುವಲ್ಲಿ ನಿಮಗ್ನಳಾಗಿದ್ದೆ ನಾನು. ಪ್ರೇಮದ ಪರಿಯು ಹೊಸತೇನಿಸಬಹುದು ಆದರೆ ನಮ್ಮ ಪ್ರೀತಿ ಹಳೆಯದಲ್ಲವೇ ಹುಡುಗ ಆ ಬಾನಿನಿಂದೆ ಅಡಗಿರುವ ಚುಕ್ಕಿಗಳ ಆಯಸ್ಸಿನಷ್ಟು.
- ಚುಕ್ಕಿ
17 Sep 2020, 09:49 am
ನಮ್ಮ ನಿಮ್ಮೆಲ್ಲರ ಸೃಷ್ಟಿಕರ್ತ
ಬ್ರಹ್ಮಾಂಡ ಸೃಷ್ಟಿಕರ್ತ ದೇವರೆಂದಾರೆ
ಗಂಡು ಹೆಣ್ಣಿನ ಸೃಷ್ಟಿ ಯಾಕೆ
ಗಂಡು ಹೆಣ್ಣಿಗೆ ಮದುವೆಯಾಕೆ
ಇಡೀ ಬ್ರಹ್ಮಾಂಡವೇ
ದೇವರ ಕೈಯಲ್ಲಿದ್ದರೆ
ಇಡೀ ದೇವಲೋಕವೇ
ಜನರ ಕೈಯಲ್ಲಿದೆ
ದೇವರೆಂಬುಹುದೇ
ಜಗತ್ತಿನ ಮಾದಲ ಸುಳ್ಳು
ದೇವರಿದ್ದಾನೆಂದು
ಹೇಳುವವನೇ ಮಾದಲ ಮೋಸಗಾರ
ದೇವರನ್ನು ಪೂಜಿಸಿದಷ್ಟು
ಬರುವುದು ಬಡತನ
ಖಾಲಿಯಾಗುವುದು ಜೇಬು
ಮೈ ಬಗ್ಗಿಸಿ ದುಡಿದಾರೆ
ಬರುವುದು ಸಿರಿತನ
ತುಂಬುವುದು ಜೇಬು
- ರಾಜು ಹಾಸನ
16 Sep 2020, 11:46 pm
ಅಮ್ಮನೆಂದರೆ ಪ್ರೀತಿ
ಅಪ್ಪನೆಂದರೆ ಧೈರ್ಯ
ಇವರೆ ನನಗೆ
ಬಂಧು ಮಿತ್ರರು
ಕಿತ್ತು ತಿನ್ನುವ ಬಡತನವಿದ್ದರೂ
ಗುರಿ ಮುಟ್ಟುವ ತನಕ
ಅಂಜದೆ ಅಳುಕದೆ ಕುಗ್ಗದೆ ಜಗ್ಗದೆ
ಧೈರ್ಯದಿಂದ ಎದುರಿಸುವ
ಛಲವೊಂದೆ ನಮ್ಮ ಬಲ
- ರಾಜು ಹಾಸನ
16 Sep 2020, 10:27 pm
ನಾ ಕಣ್ತೆರದು
ನಾ ಕಾಣದ ಲೋಕವ
ನಾ ಕಂಡಾಗ
ನನ್ನ ಕಣ್ಣೆದುರು ನಿಂತವಳೇ
ನನ್ನ ಅಳುದನಿಯ ಇಂಗಿತವನ್ನರಿತು
ತನ್ನೆದೆಯಾಲಮೃತವನಿತ್ತು
ಎನ್ನೊಡಲ ಹಸಿವನ್ನೀಗಿದವಳೆ
ಚುಂಬಕ ಚಳಿಯ ಶೀತವ ತಾನೋದ್ದು
ಎನಗೆ ಮಮತೆಯ ಮಾತೃತ್ವದ
ಬೆಚ್ಚನೆಯ ಹಿತವನ್ನಿತ್ತವಳೆ
ನನಗಾಗಿ ತನ್ನ ಸರ್ವಸ್ವ ಧಾರೆಯೆರೆದವಳೆ
ತನಗಾಗಿ ಎಂದು ಮರುಗದವಳೆ
ನೀ ನನ್ನ ಹೆತ್ತು ಹೊತ್ತು ಸಲಹಿ
ದೈವಕ್ಕೂ
ಮಿಗಿಲಾಗಿ ನಿಂತವಳೇ
ನೀ ನನ್ನ ನಿಜವಾದ ದೇವರೆ
- HarishKumarm
16 Sep 2020, 06:23 pm
ನನ್ನ ಹೃದಯದ ಬಡಿತವ
ನನ್ನ ಮನದ ಓಟವ
ಮೊದಲ ಭೇಟಿಯ ನೋಟದಲಿ
ಸೆರೆಹಿಡಿದು ಹೊರಟವಳೆ
ಯಾರೆ ನೀ ಯಾರೆ
ದುಂಡು ಮೊಗದ
ಕಿರುಗಣ್ಣ ನೋಟದ
ಕೆಂದುಟಿಯ ಮಾಟದ
ಗುಳಿಗೆ ಚೆಲುವೆ
ಯಾರೇ ನೀ ಯಾರೇ
ಸುರಸುಂದರ ನಾಸಿಕವ
ಬಂಗಾರದರಳಲಿ ಸಿಂಗರಿಸಿ
ಕಾಮನಬಿಲ್ಲೋಂಬಣ್ಣವ ಅದರಕೆ ಲೇಪಿಸಿ
ತುಸು ಮುಗುಳ್ನಕ್ಕು
ಆನಂದದ ಮಂಪರಿನಲ್ಲಿ ತೇಲುತಾ ಕೋಲ್ಮಿಂಚಿನಂತೆ ಹೊಳೆಯುವ
ದಂತಗಳನ್ನು ಪ್ರದರ್ಶಿಸಿ
ನನ್ನ ಮನದಂಗಳಕೆ ಬೆಳಕನ್ನು ಚೆಲ್ಲುತ್ತಿರುವ ಆಶಾಕಿರಣವೇ
ಯಾರೆ ನೀ ಯಾರೆ
ತಂಗಾಳಿಯ ತನ್ಮಯತೆಯಲ್ಲಿ
ತನ್ನ ಕರ್ಣಾಲಂಕರಿತ ಆಭರಣಗಳ
ಝೇಂಕಾರವ ಕೇಳಿಸುತ್ತಾ
ಬಿರಿದ ಸುಮದ ಸುಗಂಧವ ಬೀರುತ
ತನ್ನೆಡೆಗೆ ನನ್ನ ಮನದ ಗಮನವ ಸೆಳೆಯುತ್ತಿಹ
ನಲ್ಮೆಯೇ
ಯಾರೆ ನೀ ಯಾರೆ
ನನ್ನ ಮನದ ನಿಶಬ್ದ
ಭಾವಗಳ ಕರ್ಣಾತರಂಗಕ್ಕೆ ತನ್ನ ಮನದೊಳಗಿವಿಯನ್ನೋತ್ತಿ
ಏಕಾಗ್ರತೆಯಿಂದ ಆಲಿಸಿ ಅರಿತು
ಎನ್ನೆಡೆಗೆ ಒಮ್ಮೆಲೆ ತಿರುಗಿ ನೋಡಿ ಮುಗುಳ್ನಕ್ಕು ತನ್ನ ಮುಂಗುರುಳ ತುಂಟಾಟವ ಆನಂದಿಸುತ್ತಾ ಹೋರಟ
ಪ್ರೀತಿ ಅಂಕುರವೆ
ಯಾರೆ ನೀ ಯಾರೆ
ನನ್ನಲ್ಲಿ ನನ್ನತನವನ್ನೇ
ಸೂರೆಗೊಂಡವಳೆ
ನನ್ನಲ್ಲಿ ನನ್ನ ಮನಕೆ
ನನ್ನನ್ನೇ ಮರೆಸಿ
ಮೆರೆಯುತ್ತಿರುವ ವಳೆ
ಯಾರೇ ನೀ ಯಾರೇ
ನನ್ನ ಹೃದಯದ ಬಡಿತ
ಮಿಡಿತ ತುಡಿತ ಕೆ
ನಿನ್ನ ಪ್ರೀತಿಯ ಅಮಲ್ಲನ್ನೇರಿಸಿ
ನಿನ್ನೆಸರ ನನ್ನುಸಿರಾಗಿಸಿ
ನಗುತ್ತಿರುವ ವಳೆ
ಯಾರೆ ನೀ ಯಾರೆ
- HarishKumarm
16 Sep 2020, 05:33 pm
ಜೀವನದಲ್ಲಿ
ನಾ ಬಡವನದರೂ
ಅಪ್ಪ ಅಮ್ಮನ ಪ್ರೀತಿಯಲ್ಲಿ
ನಾ ಸಾಹುಕಾರ
ಎಷ್ಟೇ ಎತ್ತರಕ್ಕೆ ಬೆಳೆದರು
ಕಣ್ಣಿಗೆ ಕಾಣುವ ದೇವರು
ಅಪ್ಪ ಅಮ್ಮನ ಮುಂದೆ ನಾವು ಚಿಕ್ಕವರು
ತಗ್ಗಿಸಿ ನೆಡೆಯಬೇಕು ತಲೆ
ನಯಾ ವಿನಯವೇ ನಮ್ಮ ಬೆಲೆ
ನಾವು ಎಷ್ಟೇ ಏನೇ
ಸಂಪಾದನೆ ಮಾಡಿದರು
ಕೊನೆಗಾಲದಲ್ಲಿ ಅಪ್ಪ ಅಮ್ಮನಿಗೆ
ಪ್ರೀತಿ ಮಮತೆ ಕೊಡದ ಹೃದಯ
ಇದ್ದರೂ ಒಂದೇ ಸತ್ತರು ಒಂದೇ
ನಾವು ಹೇಂಗೆ ಬೆಳದ್ವಿ
ಅನ್ನೋದೂ ಮುಖ್ಯ ಅಲ್ಲ
ಅಪ್ಪ ಅಮ್ಮ ನಮ್ಮ ಹೇಂಗೆ
ಬೆಳಸಿದ್ರು ಅನ್ನೋದೂ ಮುಖ್ಯ
- ರಾಜು ಹಾಸನ
16 Sep 2020, 12:56 pm
ಹಣ
ನೆಮ್ಮದಿಯನ್ನ
ಕಿತ್ತುಕೊಂಡ್ರೆ
ಪ್ರೀತಿ
ಹೃದಯವನ್ನು
ಕಿತ್ತುಕೊಳ್ಳುವುದು
ಚಿಂತೆ
ಖುಷಿಯನ್ನೆ
ಕಿತ್ತುಕೊಳ್ಳುವುದು
ಅತಿಯಾದ ಆಸೆ
ಅತಿಯಾದ ನಂಬಿಕೆ
ಒಳ್ಳೆಯದಲ್ಲ ಜೀವನಕ್ಕೆ
ನೆನಪಿರಲಿ
ಯಾವುದು ಕೆಟ್ಟದ್ದು ಅಲ್ಲ
ಯಾವುದು ಒಳ್ಳೆಯದು ಇಲ್ಲ
ಹಿತ ಮಿತವಾದ
ಆಲೋಚನೆಗಳೇ
ಜೀವನಕ್ಕೆ ದಾರಿ ದೀಪ
- ರಾಜು ಹಾಸನ
16 Sep 2020, 09:59 am
ವಿಶ್ವಕರ್ಮ ದೇವನೇ ನಿನಗೆ ವಂದನೆ
ಜಗದ ಸೃಷ್ಠಿಕರ್ತನೇ ನಿನಗೆ ವಂದನೆ
ದೇವಶಿಲ್ಪಿ ದೇವನೇ ನಿನಗೆ ವಂದನೆ
ದಿವ್ಯ ಜ್ಞಾನ ದೇವನೇ ನಿನಗೆ ವಂದನೆ //
ಪುತ್ರಿ ಸನ್ಯಾದೇವಿ ಯ ಧಾರೆಯೆರೆದು
ಸೂರ್ಯದೇವನಿಗೆ ಮಾವನಾದೆ
ಸೂರ್ಯತಾಪವನ್ನು ತಾಳುವಂತೆ
ಛಾಯಾ ದೇವಿ ಯನ್ನು ಸೃಷ್ಠಿಸಿದೆ //
ವಿಶ್ವ ಕಲ್ಯಾಣಕ್ಕಾಗಿ ಶನಿದೇವನನ್ನು
ಕಾಪಾಡಲು ದಿವ್ಯಸ್ತ್ರವನ್ನು ನೀಡಿದೆ
ಇಂದ್ರದೇವನೋಮ್ಮೆ ಬೆಡಿಕೊಳಲು
ಸ್ವರ್ಗ ಲೋಕವನ್ನೇ ನಿರ್ಮಿಸಿದೆ //
ದೇವ ಮಹಾದೇವನಿಗೆ ತ್ರಿಶೂಲ ಸೃಷ್ಠಿ
ವಿಷ್ಣು ದೇವನಿಗೆ ಸುದರ್ಶನ ಚಕ್ರ ಸೃಷ್ಠಿ
ಪರಶುರಾಮನಿಗೆ ಶಿವದನಸ್ಸು ಮಾಡಿತ್ತೆ
ದ್ವಾರಕೆ, ಆಯ್ಯೋದ್ದೆಯನ್ನು ನಿರ್ಮಿಸಿದೆ //
ಕುಭೇರನ ಆಸೆ ಆಣತಿಯಂತೆ ನೀನು
ಸ್ವರ್ಣ ಲಂಕೆಯನ್ನು ಸೃಷ್ಠಿಸಿದೆ ದೇವ
ಲೋಕ ಸುತ್ತಲವಗೆ ಪುಷ್ಪಕ ವಿಮಾನ
ವನ್ನೇ ನಿರ್ಮಿಸಿ ಕರುಣಿಸಿದೆ ದೇವಾ //
ವಸುಂಧರೆಯ ತುಂಬಾ ಸಕಲ ಕಲೆಗೆ
ಜೀವತುಂಬಿ ಬೆಳೆಸಿ ಹರಸಿರುವೆ ದೇವ
ಸುರ - ಅಸುರ ರೆಲ್ಲರಿಗು ಭವನಗಳನು
ನಿರ್ಮಿಸಿತ್ತು ಕೀರ್ತಿ ಮೇರೆಸಿರುವೆ //
ವಿಜ್ಞಾನ,ಆವಿಷ್ಕಾರ ಕಲಾ ಸಂಗೀತದಲ್ಲಿ
ವಿಶ್ವಕರ್ಮ ದೇವನ ಹೆಸರು ಹೊಮ್ಮಲಿ
ಜೈ ಜೈ ಕಾರಗಳ ದೂಪ ದೀಪ ಗಂಟೆಗಳ
ನಿನಾದವೆಲ್ಲ ಭುವಿಯ ತುಂಬಾ ಹರಡಲಿ //
ಬದಾಮಿ ಐಹೊಳೆ ಪಟ್ಟದಕಲ್ಲು ದೇಗುಲ
ಬೇಲೂರು ಹಳೇಬೀಡು ಹಂಪಿಯ ವೈಭವ
ಅಜಂತಾ ದಿಂದಾ ದಿಗಂತದೊರೆಗು ನಿಂತ
ತಂದೆ ವಿಶ್ವಕರ್ಮ ದೇವ ನಮೋ ನಮಃ //
ಕಲ್ಮೇಶ ಬಡಿಗೇರ
9743539657/9353980778
.......ಬಾದಾಮಿ........,
ಸರ್ವ ವಿಶ್ವಕರ್ಮ ಭಾಂದವರಿಗೆ
ವಿಶ್ವಕರ್ಮ ಜಯಂತಿಯ ಹಾರ್ಧಿಕ
ಶುಭಾಶಯಗಳು
- Kalmesh Badiger
16 Sep 2020, 09:36 am
ಕನ್ನಡಿಗ ಯಂಭು ವುದು ಒಂದು ರಾಜ್ಯ ದ ಜನ್ನ ರಲ್ಲ ❤ ಬದಲಾಗಿ ಒಂದು ಶಕ್ತಿ ಧೈರ್ಯ ಅಂಬಂತೆ ವೀರರು ಗಂಡರ ಗಂಡರು ಅದು ಏಳು ವುದು ನನಗೆ ಒಂದು ಹೇಮೆಯ ವಿಷಯ
- Krishna D Krishna D
16 Sep 2020, 08:31 am