Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಮಧುರ ಸಂಗೀತ

ಅಳ್ತಾನೊ ನನ್ನ ಗೆಳೆಯ ಬಿಕ್ಕಿ ಬಿಕ್ಕಿ
ಬೈತನೋ ನನ್ನ ಗೆಳೆಯ
ತನಗೆ ತಾನೇ ಬೈದುಕೊಂಡು
ಬೀದಿ ಬೀದಿ ತಿರುಗುತ್ತಾನೋ
ನಗ್ತಾನೊ ನನ್ನ ಗೆಳೆಯ
ಒಬ್ಬ ಒಬ್ಬನೇ ಮಧ್ಯೆ ರಾತ್ರಿ ಎದ್ದು
ಕುಣಿತನೋ ನನ್ನ ಗೆಳೆಯ
ಕುಡಿದು ಕುಣಿತನೊ ಹೇಳಿದ್ರೇ ಕೇಳಲ್ಲ
ಹಿಡ್ಕೊಂಡರೆ ಒದೆಯುತ್ತಾನೆ

ಬಿಟ್ಟುಬಿಟ್ಟೆ ಬಿಟ್ಟು ಹೋಗ್ಬಿಟ ನಮ್ಮೂರು
ಎಲ್ಲವನೋ ಹೇಂಗವನೋ
ಗೋತ್ತಿಲ್ಲ ನನ್ನ ಗೆಳೆಯ
ಬರುತ್ತವನೊ ಮತ್ತೆ ಬಂದು
ಕೇಳುತ್ತಾನೋ ಎಲ್ಲವಳೊ
ಹೇಂಗಾವಳೊ ನಮ್ಮ್ ಹುಡುಗಿ
ಕೂಯುತ್ತಾನೋ ನನ್ನ ಗೆಳೆಯ ಪೀಟಿಲು
ಹಾಡ್ತನೋ ಹಾಳೆ ರಾಗ
ಬಿಟ್ಟು ಹೋದ್ದೆಲೇ ಗೆಳತಿ ನೀ ನನ್ನ ಬಿಟ್ಟು
ಮರೆತು ಹೋದ್ದೆಲೇ ಗೆಳತಿ
ನೀ ನನ್ನ ಪ್ರೀತಿ ಮರೆತು
ಸಾಕಪ್ಪಾ ಸಾಕು ಇವನ ಸಹವಾಸ

- ರಾಜು ಹಾಸನ

26 Sep 2020, 11:11 pm

ಸ್ಮಶಾನದ ಹೂವು

ದುಡಿದು ತಿನ್ನುವ ಬಡವ
ದುಡಿಸಿಕೊಂಡು ತಿನ್ನುವ ಶ್ರೀಮಂತ
ಬಿಟ್ಟು ಹೋಗುವರು
ಒಂದಲ್ಲ ಒಂದು ದಿನ ಸ್ಮಶಾನದ ಹೂವಾಗಿ
ಹುಟ್ಟಿದಾಗ ತಂದಿದ್ದು ಆಸೆ ಅಂತಸ್ತದರೂ
ಸತ್ತಾಗ ಬಿಟ್ಟು ಹೋಗಬೇಕು ಎಲ್ಲವನ್ನೂ
ಶಾಶ್ವತವಲ್ಲದ ಈ ಜೀವಕ್ಕೆ
ಸಿರಿತನವಾದರೇನು ಬಡತನವಾದರೇನು
ಇದಷ್ಟು ದಿನ ಮಾನವನಾಗಿ ಬದುಕಿ
ಸತ್ತ ಮೇಲೆ ಹೇಣವಾಗಿ ಹೋಗಬೇಕು ಅಷ್ಟೇ
ಈ ಮನುಷ್ಯ ಜೀವನ ಇಷ್ಟೇ

- ರಾಜು ಹಾಸನ

25 Sep 2020, 12:20 pm

ಮರಳಿ ಬಾರದು

ಸ್ಮಶಾನದ ಹೆಣವ
ಮಣ್ಣು ನುಂಗಿಕೊಂಡರೆ
ತಟ್ಟೆಗೆ ಬಿದ್ದ ಹಣವನ್ನು
ಪೂಜಾರಿ ನುಂಗಿಕೊಳ್ಳುವನು
ಒಟ್ಟಿನಲ್ಲಿ ಸ್ಮಶಾನಕ್ಕೆ ಹೋದ ಹೇಣ
ಪೂಜಾರಿ ತಟ್ಟೆಗೆ ಬಿದ್ದ ಹಣ
ಎರಡು ಒಂದೇ
ಮತ್ತೆ ಮರಳಿ ಬಾರದು

- ರಾಜು ಹಾಸನ

25 Sep 2020, 10:15 am

ನಮ್ಮ ಹಳ್ಳಿ

ನೋಡಲು
ಬಲು ಸೊಗಸು
ಹಚ್ಚ ಹಸಿರಿನ
ಶಾಂತಿಯ ಹೂದೋಟ
ನಮ್ಮ ಹಳ್ಳಿ
ಕಾಯಕವೇ ಕೈಲಾಸವೆಂದು
ಬುದುಕುವ ಜನರ
ಬಂಗಾರದ ಗುಡಿ ನಮ್ಮ ಹಳ್ಳಿ
ಶರಣ ಸಂತರ ನಾಡು
ದಾಸ ಸಾಹಿತಿಗಳ ಬೀಡು ನಮ್ಮ ಹಳ್ಳಿ
ಹಬ್ಬ ಹರಿದಿನ
‌ ಮದುವೆ ಮುಂಜಿಯೆಂದರೆ
ಶೃಂಗಾರವಾಗುವುದು
ಸ್ವರ್ಗದಂತೆ ನಮ್ಮ ಹಳ್ಳಿ

- ರಾಜು ಹಾಸನ

25 Sep 2020, 01:39 am

ಬದಲಾದರೂ ಬದಲಾಗದು

ಬಣ್ಣ ಬದಲಾದರೂ
ಮನಸ್ಸು ಬದಲಾಗದು
ಜನರು ಬದಲಾದರೂ
ಜಗತ್ತು ಬದಲಾಗದು
ದಿನ ಬದಲಾದರೂ
ಕಾಲ ಬದಲಾಗದು
ಪ್ರೀತಿಸೋರು ಬದಲಾದರೂ
ಪ್ರೀತಿ ಬದಲಾಗದು
ಮಾತು ಬದಲಾದರೂ
ನಂಬಿಕೆ ಬದಲಾಗದು
ಎಲ್ಲವು ಬದಲಾದರೆ
ನಾವು ನಿವು ಮನ್ನ

- ರಾಜು ಹಾಸನ

25 Sep 2020, 12:43 am

ಮೂಕ ಪ್ರಾಣಿ

ದೇವರ ಹೆಸರಿನಲ್ಲಿ ಮುಕ್ತಿ ಮೋಕ್ಷಕ್ಕಾಗಿ
ಬಲಿಕೊಟ್ಟು ತಿನ್ನುವರು ಮಾಂಸದ ಎಡೆಯಿಟ್ಟು
ಮಾತು ಬಾರದ ಮೂಕ ಪ್ರಾಣಿಗಳ ಕಡಿದು
ಮುಟ್ಟದಿರುವುದೇ ಮೂಕ ಪ್ರಾಣಿಗಳ ಗೋಳು
ತಟ್ಟದಿರುವುದೇ ಮೂಕ ಪ್ರಾಣಿಗಳ ಶಾಪ

ದೇವರಿಗಾಗಿ ಪ್ರಾಣಿಗಳ ಬಲಿಕೊಡುವ ಬದಲು
ನಿಮ್ಮನ್ನು ನೀವೇ ಬಲಿಕೊಟ್ಟು ನೋಡಿ
ಆಗಲಾದರೂ ತಿಳಿಯುವುದೇನೂ
ನಿಮ್ಮಗೆ ಪ್ರಾಣಿಗಳ ಜೀವದ ಬೆಲೆ
ತಿಳಿದು ಬದುಕೋ ಮನುಜ ಮೂಕ ಪ್ರಾಣಿಗಳ
ಜೀವವು ನಮ್ಮ ಜೀವದ ಹಾಗೆಯೇ

ಯಾವ ದೇವರು ಕೂಡ ಯಾವ ಪುಸ್ತಕದಲ್ಲೂ
ಬರೆದಿಟ್ಟು ಹೋಗಿಲ್ಲ ಮೂಕ ಪ್ರಾಣಿಗಳ
ಕೊಂದು ತಿಂದರೇ ಮೋಕ್ಷ ಫಲಿಸುವುದೆಂದು
ಎಲ್ಲವು ನಮ್ಮ ಭ್ರಮೆಯಾಷ್ಟೆ ತಿಳಿಯೋ ಮನುಜ

ಪ್ರೀತಿಸಿ ಸಂರಕ್ಷಿಸಿ ಮೂಕ ಪ್ರಾಣಿಗಳನ್ನು

- ರಾಜು ಹಾಸನ

24 Sep 2020, 11:27 pm

ಕಲ್ಲು ಬಂಡೆ

ಹುಟ್ಟಿನಿಂದ ಸಾಯುವವರೆಗೂ
ಎಡೆಬಿಡದೆ ಎಡೆಯಿಟ್ಟು ನೆಡೆಸುವರು
ಹಬ್ಬ ಹರಿದಿನಗಳ ಸಡಗರ ಸಂಭ್ರಮಾಚರಣೆ
‌ ಆದರೂ ಒಂದು ದಿನವು ಬಂದು ಹೋಗಲಿಲ್ಲ
ಕಂಡು ಮಾತಡಿಸಲಿಲ್ಲ ಇಲ್ಲಿಯ ತನಕವೂ
ಬಂದು ಕೇಳಲಿಲ್ಲ ದುಃಖ ದುಮ್ಮಾನಗಳನ್ನು
ಆದರೂ ತಪ್ಪಲಿಲ್ಲ ನಾನು ಕಲ್ಲು ಬಂಡೆಯ
ದೇವರೆಂದು ಪೂಜಿಸುವುದು

- ರಾಜು ಹಾಸನ

24 Sep 2020, 01:38 pm

ನನ್ನವಳ ನೆನಪು

ಏ ಚೆಲುವೆಯೇ
ನೀ ಮರೆತು ಬಿಡು ಎಂದಾಕ್ಷಣ
ನಿನ್ನ ಪ್ರೀತಿಯ ನೆನೆದು
ಹಾಗೆ ಸುಮ್ಮನಾಗಲು ಬಿಡುತ್ತಿಲ್ಲ
ಒಂದೊಂದು ಕ್ಷಣಕ್ಕೂ
ನಿನ್ನ ನೆನಪುಗಳು ಬಂದು
ಬಡಿದೆಬ್ಬಿಸಿ ನೆನಪಿಸುವುದು
ನಿನ್ನಲ್ಲಿರುವುದು ನಿನ್ನ ಹೃದಯವಲ್ಲ
ಎಂದಾಕ್ಷಣ ಗಾಬರಿಗೊಂಡು
ಹುಡುಕಿದೆ ಒಂದು ಕ್ಷಣ
ಹುಡುಕಿದರು ಕೈಗೆ ಸಿಗದಂತೆ
ಅಲೆದಾಡುತ್ತಿದ್ದೆ ನಿನ್ನ ಹಿಂದೆ ಹಿಂದೆ
ಬೇಡವೆಂದು ಬೇಡಿಕೊಂಡರು
ಕೇಳುತ್ತಿಲ್ಲ ನನ್ನ ಮಾತು ಈ ಹೃದಯ
ಮುನಿಸುಕೊಂಡು ಓಡುತ್ತಿದೆ
ಅವಳೊಂದಿಗೆ ಅವಳಿರುವಲ್ಲಿಗೆ
ಯಾರಿಗೆ ಹೇಳೋದು
ಈ ಒಂಟಿ ಹೃದಯಾದ ಗೋಳು

- ರಾಜು ಹಾಸನ

24 Sep 2020, 11:43 am

ಕಳೆದು ಹೋದೆ ನಾ,

ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸುಂದರ ಸೊಬಗನಲಿ.
- ಜ್ಯೋತಿ ಫರ್ನಾಂಡಿಸ್

- ಜ್ಯೋತಿಫರ್ನಾಂಡಿಸ್

24 Sep 2020, 10:09 am

ಕಳೆದು ಹೋದೆ ನಾ,

ಕಳೆದು ಹೋದೆ ನಾ, ಹಸಿರಿನ ತಾಣದಲಿ.
ಕಳೆದು ಹೋದೆ ನಾ, ಮಳೆ ಹನಿಗಳ ಜೊತೆಯಲಿ.
ಕಳೆದು ಹೋದೆ ನಾ, ಆ ಬೆಟ್ಟ-ಗುಡ್ಡಗಳ ಸುಂದರ ದೃಶ್ಯಗಳಲ್ಲಿ.
ಕಳೆದು ಹೋದೆ ನಾ, ಹಕ್ಕಿಗಳ ಚಿಲಿಪಿಲಿ ಹಾಡಿನಲಿ.
ಕಳೆದು ಹೋದೆ ನಾ, ನಮ್ಮ ಮಲೆನಾಡಿನ ಸೊಬಗಿನಲಿ.
- ಜ್ಯೋತಿ ಫರ್ನಾಂಡಿಸ್

- ಜ್ಯೋತಿಫರ್ನಾಂಡಿಸ್

24 Sep 2020, 10:03 am