Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿಜವಲ್ಲವೇ

ಸತ್ತ ಪ್ರಾಣಿಯ
‌‌ ಮಾಂಸವೆಂದು ತಿನ್ನುವ ಜನ
ಸತ್ತ ವ್ಯಕ್ತಿಯ
ಹೆಣವೆಂದು ಸುಡುವ ಜನ
ಸತ್ತವನ ಸುಟ್ಟು ಬರಿ
ಬೂದಿ ಬಿಡುವರಯ್ಯ ನೀರಿಗೆ
ಸತ್ತವನು ಬಿಟ್ಟು ಹೋದ
ಆಸ್ತಿ ಅಂತಸ್ತು ಸಿರಿ ಸಂಪತ್ತನ್ನು
ಸುಡದೆ ಬಿಡದೆ ಎಡಬಿಡದೆ
ಮುಕ್ಕಿಬಿಡುವರಯ್ಯ ಈ ಜನ

- ರಾಜು ಹಾಸನ

08 Oct 2020, 08:15 am

ಜನರ ಆಟ

ಮಾತಿನಲ್ಲಿ ಮುತ್ತು
ಮನಸ್ಸಿನಲ್ಲಿ ಹೊಲಸು
ತುಂಬಿಕೊಂಡು
ದೇವಾಲಯದ ಸುತ್ತ ಸುತ್ತಿ
ಜಪ ತಪವೆಂದು
ಕಲ್ಲು ಮುಂದೆ ಮೌನವಾಗಿ
ಕುಳಿತರೇನು ಬಂತಯ್ಯ
ಮುಕ್ತಿ ಮೋಕ್ಷಕ್ಕಾಗಿ
ಜಪ ತಪವೆಂದು
ದೇವರ ಭಜನೆ ಮಾಡುತ್ತ ಕುಳಿತರೆ
ವ್ಯರ್ಥವಾಗುವುದು ಸಮಯ
ತುಂಬದಿರುವುದು ಹಸಿದ ಹೊಟ್ಟೆ
ಆದರೂ ನಿಲ್ಲದಿರುವುದು
ದೇವರ ಹಿಂದೆ ಓಡುವ ಜನರ ಆಟ

- ರಾಜು ಹಾಸನ

08 Oct 2020, 12:27 am

ಮಾಯಾ ಜಿಂಕೆ

ತನ್ನ ನೆರಳನ್ನು
ತಾನು ಹಿಡಿಯಲಾಗದ
ಈ ಮನುಜ ಓಡುವನಯ್ಯ
ಕಣ್ಣಿಗೆ ಕಾಣದ ದೇವರೆಂಬ
ಮಾಯಾ ಜಿಂಕೆಯ ಹಿಂದೆ
ಕಂಡು ಕಾಣದಂತೆ ಅಲೆದಾಡಿ
ಹಳ್ಳಕ್ಕೆ ಬೀಳುವನಯ್ಯ
ಹರಕೆಯ ಕುರಿಯಂತೆ
ಈ ಮಂಗ ಮನುಜ

- ರಾಜು ಹಾಸನ

07 Oct 2020, 09:42 am

ಕನ್ನಡ ನುಡಿ ವಿಶ್ವ ನುಡಿ

ಕಲಿ ಕನ್ನಡ
ನುಡಿ ಕನ್ನಡ
ಬರೆ ಕನ್ನಡ
ಸದಾ ಮೊಳಗು
ನೀ ಕನ್ನಡದ ಕಹಳೆ
ಇದರಿಂದಲೇ ಪಡೆ
ನೀ ಸದ್ಗತಿ.

ಹಿಡಿ ನೀ ಕನ್ನಡದ ಕನ್ನಡಿ
ಕಾಣುವೆ ನೀ ವಿಶ್ವದ ಗಡಿ
ಮೇರೆಯಿಲ್ಲದ ಗಡಿ ಯಾಗಲಿ ಕನ್ನಡದ ಗಡಿ
ಪ್ರತಿ ಮನೆದಲ್ಲಿ ಚಿಗುರಿದ ಕುಡಿಯ
ಎಲ್ಲೆಡೆ ಮಾತನಾಡುವ ಭಾಷೆ ಯಾಗಲಿ
ನನ್ನೀ ಕನ್ನಡ ಭಾಷೆ.

ಸೊಗಸುಂಟು ಕನ್ನಡ ನುಡಿಯಲ್ಲಿ
ಪರಭಾಷೆಗಳೆಲ್ಲಾ ಇದರಡಿಯಲ್ಲಿ.
ಬರೆಯುವ ಕೈಗಳು
ಕನ್ನಡದ ಕಳಸ ಹೊತ್ತ ಕರಗಳಾಗಲಿ.

ಕನ್ನಡ ಕಲಿಯುವ ನಾಲಿಗೆ
ಸದಾ ಪಾವನ,
ಕನ್ನಡ ನುಡಿಯುವ ನಾಲಿಗೆ
ಸದಾ ಚಂದನ.

ಕನ್ನಡಕ್ಕೆ ಕೊನೆಯಿಲ್ಲ,
ಕನ್ನಡಿಗರಿಗೆ ಭಯವಿಲ್ಲ.
ಕನ್ನಡದ ಕೋಗಿಲೆಗಳು ನಾವೆಲ್ಲ.
ಹಾಡುವೆವು ಸದಾ ಆನಂದದಿ
ಪರಮಕನ್ನಡದ ಮಡಿಲಲ್ಲಿ.

ಗಂಧದ ನಾಡಲ್ಲಿ, ಶಿಲ್ಪಿಗಳ ಬೀಡಲ್ಲಿ
ಕಣಿಯುತ, ನಲಿಯುತಾ,
ಕನ್ನಡದ ಕಂಪಿನ ಕುಸುಮಗಳು ನಾವಿಲ್ಲಿ.
ಸಾಗಿಹುದು ಭರವಸೆಯ ಬೆಳಕಲಿ,
ನಮ್ಮೀ ಜೀವನ ಕನ್ನಡದ ಮಡಿಲಲಿ.

ಕನ್ನಡದ ಕವಿಗಳು ಹಾಡಿಹೊಗಳಿದ
ಭಾಷೆ ನನ್ನವ್ವನ ನುಡಿ.
ಅನವರತ ಆಹ್ವಾನ ಕನ್ನಡದ ಕಲಿಕೆಗೆ.
ಅನವರತ ಗುಣಗಾನದ ನುಡಿ ಕನ್ನಡ.

ಕನ್ನಡ ಸಾಹಿತ್ಯ ಸಂಪದರ ಸುಮಧುರ ನುಡಿ.
ಷಟ್ಪದಿಯ ಬ್ರಹ್ಮ ರಾಘವಾಂಕನ ಬೀಡು.
ವಚನಶಾಸ್ತ್ರ ಪಿತಾಮಹ ಹಳಕಟ್ಟಿ ಯ ನಾಡು.
ರಗಳೆಗಳ ಜನಕ ಹರಿಹರ ಜನಿಸಿದಾ ನೆಲೆವೀಡು.
ಕನ್ನಡ ಕಬೀರ್ ಶಿಶುನಾಳ ಶರೀಫರ ನಾಡು.
ತ್ರಿಪದಿ ಜನಕ ಸವ೯ಜ್ಞನ ಬೀಡು.

ಕವಿಚಕ್ರವರ್ತಿ ರನ್ನನ ಸಾಹಿತ್ಯದ ಕನ್ನಡ ನುಡಿ.
ಆದಿಕವಿ ಪಂಪನ ಮರುಜನ್ಮ ಬೇಡಿದ ನಾಡು.
ಉಭಯಕವಿಚಕ್ರವತಿ೯ ಪೊನ್ನನ ಕನಸಿನ ನುಡಿ.
ವರಕವಿ ಬೇಂದ್ರೆಯವರ ಹುಟ್ಟಿದ ನಾಡು.

ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿಯ ನುಡಿ.
ಚಲಿಸುವ ವಿಶ್ವಕೋಶ ಶಿವರಾಮ ಕಾರಂತರ ನುಡಿ.
ಚಲಿಸುವ ನಿಘಂಟು ಡಿ. ಎಲ್ ನರಸಿಂಹಾಚಾರ್ ನುಡಿ.

ದಲಿತಕವಿ ಯ ಸಿದ್ದಲಿಂಗಯ್ಯರ ಭಾಷೆಯ ನುಡಿ.
ಕನ್ನಡ ಸಾಹಿತ್ಯದ ವಿಲಿಯಮ್ ವಡ೯ಸ್ವತ್ ಕುವೆಂಪು
ಮಾತನಾಡಿದ ಕನ್ನಡ ನುಡಿ.

ಕನ್ನಡ ಸಾಹಿತ್ಯ ಸದಾ ತುಂಬಿದ ಕೊಡ.
ನನ್ನವ್ವನ ನುಡಿ ವಿಶ್ವ ನುಡಿ ಯಾಗುವ ಕನಸು.
ಭೂಪಟದಲ್ಲಿ ಮಿನುಗಲಿ ಕನ್ನಡ ನಾಡು
ಎಲ್ಲರ ಮನೆಯನು ಬೆಳಗಲಿ ಕನ್ನಡ ನುಡಿ.
ಎಲ್ಲರ ನಾಲಿಗೆ ಮೇಲೆ ಕುಣಿಯಲಿ ಕನ್ನಡ ನುಡಿ.

---------ಖಾಜಾ

- ಖಾಜಾ

06 Oct 2020, 08:34 am

ಹಣೆಬರಹ

ಯಾರ ಹಣೆಬರಹವು
ಯಾರ ಕೈಯಲ್ಲಿಯು ಇಲ್ಲ
ಯಾಲ್ಲರ ಹಣೆಬರಹ
ಅವರವರ ಕೈಯಲ್ಲಿರುವುದು
ಆದ ತಿಳಿದವನು
ಮುಂದೆ ಮುಂದೆ ಸಾಗುವನು
ತಿಳಿಯಾದವನು
ಅಲ್ಲೇ ಸುತ್ತಿ ಸುತ್ತಿ ಸಾಯುವನು

- ರಾಜು ಹಾಸನ

05 Oct 2020, 11:41 pm

ವಾಸ್ತವ

ನೀ ಅಳುತ್ತಾ ಕುಳಿತಿದ್ದಾಗ
ನಿನ್ನ ನೋಡಿ ನಗುವ ಜನ
ನೀ ನಗು ನಗುತಾ ಇದ್ದಾಗ
ನೋಡಿ ಉರಿದುಕೋಳ್ಳುವ ಜನ
ಸತ್ತಾಗ ಬಂದು ಗೋಳಾಡಿ
ಕಣ್ಣೀರಿಟ್ಟರೇನು ಫಲವಯ್ಯ

- ರಾಜು ಹಾಸನ

05 Oct 2020, 11:26 pm

ತಾರೆಯರಲ್ಲಿ ತಾರೆ

ತಾರೆಯರಲ್ಲಿ ಮಿನುಗುತಾರೆ
ನನ್ನವಳು.
ನಕ್ಷತ್ರಗಳಲ್ಲಿ ಹೊಳೆವ ದೃವತಾರೆ
ನನ್ನವಳು.

ಯಾರಿಗೇನೂ ಕಡಿಮೆಯಿಲ್ಲ
ಮೈಮಾಟದಲ್ಲಿ,
ಯಾರಿಗೇನೂ ಕಡಿಮೆಯಿಲ್ಲ
ಸೌಂದಯ೯ದಲ್ಲಿ.

ಬಿಸಿಲಿಗೆ ಬಾಡದ ಗ್ಲಾಮರ್
ನನ್ನವಳ ಫೇರ್ನೆಸ್,
ಮಲೆನಾಡ ಸೊಬಗಿನ ಸಿರಿ
ನನ್ನವಳ ಪರಿ.

ಕೋಗಿಲೆಯ ಕಂಠ ನುಡಿಯಲ್ಲಿ
ಹಂಸದ ಬಳುಕು ನಡೆಯಲ್ಲಿ
ತಾವರೆಯ ಅಂದ ನಗುವಿನಲ್ಲಿ
ಮನಸೆಳೆವ ನೋಟ ಕಣ್ಣಲ್ಲಿ.

ಎಲ್ಲರಂತಹವಳಲ್ಲ ಸಂಸಾರದಲ್ಲಿ
ಅಸಮಾನ್ಯಳಿವಳು ಸಿಂಗಾರದಲ್ಲಿ
ಕೋಮಲ ಮನಸು ಹೃದಯಲ್ಲಿ
ನನ್ನವಳ ರೂಪ ಸದಾ ಕಣ್ಣಲ್ಲಿ.

ನನ್ನ ಜೀವನದ ರಂಗನಾಯಕಿ
ನನ್ನೊಲವಿನ ಗಾಯಕಿ
ನನ್ನೊಳಗಿನ ಪ್ರೇಮಾಂಜಲಿ
ಬಳಿಯಲ್ಲಿರಲು ಕನಕಾಂಬರಿ.

ಮೋಡಗಳ ಮರೆಯಲ್ಲಿ
ಶಶಿಯೂ ನಾಚುವ ಅಂದಗಾತಿ,
ನನಗಾಗಿ ಧರೆಗಿಳಿದ ರೂಪವತಿ,
ತುಂಗಾ ತೀರದ ಸೇವಂತಿ,
ಸರಸಾಟದ ಮೋಹಕ ರತಿ.

ಆಗಸದಲ್ಲಿ ಮಿನುಗುವ ತಾರೆ
ನನ್ನ ಸಂಸಾರದ ಸಿನಿಮಾ ತಾರೆ
ನನ್ನ ಜೀವನದ ಸಮಯದ ಗೊಂಬೆ
ನನ್ನ ಪ್ರೀತಿಯ ಚಂದನದ ಗೊಂಬೆ
ನನ್ನವಳು.
ಖಾಜಾ
-----------------------/---------/-----




------- ಖಾಜಾ.

- ಖಾಜಾ

05 Oct 2020, 10:35 pm

ಮನದಾಳದ ನೋವು ಮುಚ್ಚಿ

ನಕ್ಕುಬಿಡು ಅಕ್ಕಯ್ಯ ಚಿಕ್ಕ ನಾ ಕೇಳುವೆ
ನನ್ನಕ್ಕ ನನ್ತಂಗಿ ನಮ್ಮಣ್ಣರು ನಗುವರು
ಸುಸ್ತಾದ ಕೈಗಳಲ್ಲಿ ಸೈಕಲ್ ಹಿಡಿದು
ಮತ್ತೆತ್ತ ಪಯಣ ತಾಯೆ ನಕ್ಕು ಬಿಡಮ್ಮ //

ಅಪ್ಪ ಕೂಡಿಡಲಿಲ್ಲ ಅಮ್ಮನು ಉಳಿಸಿಲ್ಲ
ಒಂದೊತ್ತಿನ ತುತ್ತಿಗಾಗಿ ಪರದಾಡುತ
ಬದುಕನ್ನು ತಲೆಮೇಲೆ ಹೊತ್ತು ತಿರುಗುತ
ಒಡಲಾಳದ ನೋವು ಮರೆತು ನಕ್ಕುಬಿಡು //

ಹಾದಿ ಗುಂಟೆಲ್ಲ ಹರಿದಾಡ್ವ ಮುಳ್ಳುಗಳು
ಹಾಲ್ಗೆನ್ನೆ ಹಿಮ್ಮಡಕೆ ಚುಚ್ಚಿದನ ಮರೆತು
ಬೀದಿನಾಯಿಗಳು ಬೋಗಳುವುದ ಸಹಿಸಿ
ಮನಬಿಚ್ಚಿ ಒಮ್ಮೆ ನಕ್ಕು ಬಿಡು ನನ್ನಕ್ಕ //

ಅಕ್ಕರೆಯಿಂದಲಿ ಮುದ್ದು ಮಕ್ಕಳು ಎಲ್ಲ
ನಿನ್ನ ನೋವನು ಕಂಡು ಕೊರಗುತಲಿಹವು
ಸಕ್ಕರೆಯ ಮಾತ್ನಾಡಿ ಮುದ್ದಿಕ್ಕುತಾ ತಾಯೆ
ನಕ್ಕು ಬಿಡು ಅಕ್ಕಾ ನೀನೊಮ್ಮೆ ನಕ್ಕುಬಿಡು //

ಸಣ್ಣವ್ವನು ನುಡಿದ ಕಹಿಮಾತು ಕಡೆಗಣಿಸಿ
ಸುಣ್ಣದ ಕಲ್ಮೇಲೆ ಒಮ್ಮೆ ತಣ್ಣೀರು ಬಿದ್ದಾಗ
ಮಲ್ಲಿಗೆಯ ಹೂವುಗಳು ಅರಳಿ ನಗುವಂತೆ
ಚಿಕ್ಕ ನಾ ಕೇಳುವೆ ಅಕ್ಕಯ್ಯ ನಕ್ಕುಬಿಡು //


ಕಲ್ಮೇಶ ಬಡಿಗೇರ
9743539657
.......ಬಾದಾಮಿ........

- Kalmesh Badiger

05 Oct 2020, 07:49 pm

ಬದಲಾಗಿರೋದು ನಿಜಾನೇ...!

ನೀವು ಹೇಳುತ್ತಿರುವುದು ನಿಜಾನೆ
ನಾನು ಬದಲಾಗಿದ್ದೇನೆ.
ಅದ್ಯಾರೋ ತೀರಿಹೋದರು ಮರಗುತ್ತಿದ್ದೆ
ಹೀಗೀಗಾ ಹೆಚ್ಚು ಮರಿಯುತ್ತಿದ್ದೇನೆ,
ಎಲ್ಲಾ ನಮ್ಮದು, ನಮ್ಮವರು ಎಂಬ ಭ್ರಮೇಲಿ ಬದುತ್ತಿದ್ದೆ..
ಹೀಗಿಗಾ ಎಲ್ಲವೂ ಕ್ಷಣಿಕ ಅನ್ನೋ ಸತ್ತ್ಯವನ್ನು ಅರಿತಿದ್ದೇನೆ..

ನಾನು ಬದಲಾಗಿರೋದೂ ನೀಜಾನೆ!
ಹಾಗಾಗ ಮೂಡುತ್ತಿದ್ದ ನೋವಿನ ಕಂಬನಿಯನ್ನ..
ಮುಗುಳುನಗೆಯೊಂದಿಗೆ ಮರೆಮಾಚಿರುವೆ..
ನೋವನ್ಯಾರು ಕೇಳುವರು ಹೇಳಿ! ನಗುವಿದ್ದರೆ ಮುಖದಲ್ಲಿ ..

ಪರಿಚಿತವಾದರು ಅಪರಿಚಿತ
ನನ್ನದೇ ಇದ್ದರೂ ನನ್ನದಲ್ಲದ ಭಾವ..
ದಾರಿ ಗೊತ್ತಿದ್ದರೂ ನಕ್ಷೆಯ ಹುಡುಕಾಟ
ನನ್ನದೇ ಬದುಕು ನನ್ನದಲ್ಲದ ಪಯಣ
ಗುರಿಯಿದ್ದರೆ ಗುರು ಹುಡುಕುವ ಯತ್ನ
ಗುರು ಸಿಕ್ಕರೂ ಗುರಿಯನ್ನೆ ಬದಲಾಯಿಸುವ ಆತುರ
ಬದುಕಿನ ದಾಹಕ್ಕೆ ಮನಸ್ಸಿನ ಕುಣಿತಕ್ಕೆ
ಬೇಕೇನಿಸುವುದು ಬೇಡಗಳೆಲ್ಲವೂ
ಮರುಭೂಮಿಯಲ್ಲಿ ನೀರು ಇದ್ದಂತೆ/ಸಿಕ್ಕಂತೆ..
ಕಾಲಾ ಎಲ್ಲವನ್ನೂ ಎಲ್ಲರಿಗೂ ಕಲಿಸುತ್ತದೆ
ಕಾಯಬೇಕಷ್ಟೇ...

ಏನೇ ಹೇಳಿ
ನಾ ಬದಲಾಗಿರುವುದು ನಿಜಾನೆ!
ಇದು ನಿಮಗೂ ಗೊತ್ತು
ಯಾಕಂದ್ರೆ ಬದಲಾವಣೆಗೆ
ಕಾರಣ ನೀವೇ ತಾನೇ!..

- saahithi

05 Oct 2020, 02:10 am

ವಿಫಲ ಪ್ರೇಮ

ಯಾರಿಗೆ ಯರು ಸಿಗ್ತಾರೇ ಅಂತ ಗೊತ್ತಿರೋ ಆ ಬ್ರಹ್ಮ... ಅವರಿಬ್ಬರ ಮಧ್ಯೆ ನೇ ಯಾಕೆ ಪ್ರೀತಿ ಹೂಟ್ಟೀಸೊಲ್ಲ, ಅವರಿಗೆ ಅವರ ಜೊತೆ ಪ್ರೀತಿ ಹುಟ್ಟಿಸಿದ್ದರೆ,ಪ್ರೀತಿಯು ಸೋಲುತ್ತೀರಲಿಲ್ಲಾ, ಪ್ರೇಮಿಯು ಸಾಯುತ್ತೀರಲಿಲ್ಲಾ...
✍️.ಸಂಜು

- ಸಂಜು

05 Oct 2020, 12:11 am