Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41
ಹೆಜ್ಜೆಗಳೇ ತಾಳಕ್ಕೆ ತಕ್ಕಂತೆ
ಸಂಗೀತದಲಿ ಮುಳುಗಿ ಕುಣಿಯದಿರಿ
ನಿನ್ನ ಕುಣಿತಕೆ ಮನದಾಳದಲಿ
ತಾಳ ತಪ್ಪಿದಂತಾಯಿತು
ಕಾಲ್ ಗೆಜ್ಜೆಗಳೆ
ಸುಮ್ಮನೇ ನಲಿಯದಿರಿ
ನಿಮ್ಮ ಗಲ್ ಗಲ್ ಶಬ್ದವು
ಮನಸ್ಸಲಿ ಸೇರಿ ಮನಸೇ
ಚಂಚಲವಾದಿತು
ಮಲ್ಲಿಗೆಯ ಹೂವುಗಳೆ
ನಿಮ್ಮ ಕಂಪನು ಬೀರದಿರಿ
ಆ ಕಂಪಲ್ಲಿ ಮನಸ್ಸಿನಾ ಮನಸನ್ನು
ಸೆಳೆಯುವಂತಾಯಿತು
ಕಂಗಳೆ ಸುಮ್ಮನೆ ಮಾತಡಬೇಡಿ
ನಿಮ್ಮ ಮೌನದ ಮಾತುಗಳ
ಅರಿಯಾಲಾಗದೆ
ಹೊಸದಾದ ಭಾಷೆಯೊಂದನು
ಕಲಿಯುವಂತಾಯಿತು
ಅಲಂಕರಿಸಿದ ಅಂದದ ಐಸಿರಿಯೇ
ಮೆಲ್ಲ ಮೆಲ್ಲನೆ ಆಕರ್ಷಿಸದಿರು
ನಿನ್ನ ಆಕರ್ಷಣೆಗೆ
ಜೀವ ಎಲ್ಲಿ ಜಾರುವುದೊ
ತಿಳಿಯದಾಗಿದೆ
ಎಲ್ಲಿರಿವೆ ಹೃದಯದ ಚೋರಿ..!
ಹೆಗಿರುವೆ ಮನ ಮೆಚ್ಚಿದ ನಾರಿ..!ನಿನ್ನ ವೈಯಾರದ ಸೀರೆಯ ಸೆರಗಿನಲ್ಲಿ ನಿನ್ನ ಮೊಗವನ್ನು ಕಂಡೆ ಕನಸ್ಸಿನಲಿ..!ನೀನು ನಗುವಿನಲ್ಲಿ ಸದ್ದಿಲ್ಲದೆ ನನ್ನ ಮನಸ್ಸು ಕದ್ದೆ..!ನೀನು ಮೊಗವನ್ನು ತೋರಿಸದೆ ಹೊದೆ..!ಯಾರೇ ನೀ ಮದನಾರಿ..!ಈ ಭುವನದಲಿ ಎಲ್ಲೇ ಅಡಗಿದ್ದರೂ ನಿನಗಾಗಿ ನನ್ನ ಹೃದಯದ ಅಂಭಾರಿಯನ್ನು ಕಳಿಸಿ ಕೊಡುವೆ..!ನನಗಾಗಿ ಕುಳಿತು ಬಿಡು..!ನಿನ್ನ ಮನಸ್ಸನ್ನು ನನಗೆ ಕೊಟ್ಟು ನೋಡು..!ನಿನ್ನನ್ನು ಪ್ರೀತಿಯಿಂದ ಸ್ವಾಗತಿಸುವೆ..!ಹೃದಯದ ದೇವತೆ ನಿನಗಾಗಿ ಕದಿರುವೆ..!ನಿನಗಾಗಿ ಬರೆದಿರುವೆ ಈ ಸಾಲೂಗಳನು..
- Dyamanna Talawar
15 Nov 2025, 09:44 am
- Dyamanna Talawar
15 Nov 2025, 08:59 am
ಕಳೆದು ಹೋಗಿರುವೆ ನಾನು,
ಭಾವನೆಗಳ ಸುಳಿಗೆ ಸಿಲುಕಿ
ತಡಕಾಡಿದೆ ನನ್ಅಂತರಂಗವನ್ನು,
ಕದ್ದವರು ಯಾರೆಂದು...?
ನಿಮ್ಮಲ್ಲಿ ಯಾರಾದರೂ ಕಂಡಲ್ಲಿ ಹುಡುಕಿಕೊಡಿ..
ಒಂದಿಷ್ಟು ಉಡುಗೊರೆಯ ಆಸೆಗಾದರೂ..
ತಡವರಿಸುತಿದೆ ಮನಸು ಗಾಳಕ್ಕೆಸಿಕ್ಕ ಮೀನಂತೆ.
ಹೊಯ್ದಟಾದಲ್ಲೇ ಉಸಿರುಚೆಲ್ಲಬಹುದು
ಕದ್ದವರು ಯಾರೆಂದು?
ಕದ್ದದ್ದು ಬೇರೇನಲ್ಲ.. ನಿಮ್ಮೊಂದಿಗೆ ಕಳೆದ ನೆನಪಿನ ಬುತ್ತಿಯನ್ನು..
ಹುಡುಕಿಕೊಡಿ ನಿಮ್ಮಲ್ಲಿ ಯಾರೆಂದು. ?
- Shridevi
14 Nov 2025, 12:31 pm
ಅವಳು :- ನಾನು ನಿನ್ನ ಕಾಡಿದರು ನೀನೇಕೆ ಸುಮ್ಮನಿರುವೆ...
ನಾನು :-
ಹುಣ್ಣಿಮೆಯ ರಾತ್ರಿ....!
ಚಂದ್ರನನ್ನು.... ನಕ್ಷತ್ರಗಳೇ ಕಾಡುವಾಗ....
ಚಂದಿರನ ಮಗಳಿಂತಿರುವ....!
ನೀ ನೇಕೆ....?
ನನ್ನ ಕಾಡಬಾರದು....!
insta:- unique_abhyaa
- abhi.s.j
12 Nov 2025, 08:14 pm
ಮೃದು ಮನದವಳು...
ಪ್ರತಿ ಕವನಕ್ಕೆ
ಸ್ಫೂರ್ತಿ ನನ್ನವಳು
ಅವಳ ನಗುವಿಗೆ
ಸಾಟಿ ಯಾವುದಿದೆ
ಮುಗ್ದ ಮನದೊಳಗೆ
ಕವಿ ಪಟ್ಟ ಕೊಟ್ಟವಳು
ಹೂ ನಗೆಯ ಚೆಲ್ಲಿ
ಕವನ ಕಟ್ಟಿಸುತಿಹಳು
ಅಪ್ಸರೆಯನ್ನು ಮೀರಿಸಿದವಳು
ಮೃದು ಮನಸ್ಸನ್ನು ಹೊಂದಿಹಳು
ಸಹನೆ ಅವಳ ಗುಣವು
ಸಂಯಮವೇ ಅವಳ ಆಭರಣವು
ತಾರೇಯೊಡತಿ ಇವಳು
ನನ್ನೊಡತಿಯ ಸ್ಥಾನ ಪಡೆದಿಹಳು
ನಾ ಮೆಚ್ಚಿ ಬರೆದ ಕವಿತೆಯ
ಸೊಗಸಾದ ಭಾವ ನನ್ನವಳು.
insta:- unique_abhyaa
- abhi.s.j
12 Nov 2025, 08:09 pm
ನಲ್ಲೆ ನೀನೆಷ್ಟು ಮಾಯೆ ಕಣೆ...
ಪ್ರೀತಿಸುವ ಮುನ್ನ ಹಿಂದೆ ತಿರುಗಿ ತಿರುಗಿ ಗಲ್ಲಿಯ ಹವಾಲ್ದಾರನಾದೆ.
ನೀ ನನ್ನ ಒಪ್ಪಿಕೊಂಡಾಗ ನೀ ಹೇಳುವ ಮಾತಿಗೆಲ್ಲಾ ಹುಂ ಎನ್ನುವ ಜವಾನನಾದೆ.
ನಲ್ಲೆ ನೀನೆಷ್ಟು ಮಾಯೆ.. ನಲ್ಲೆ ನೀನೆಷ್ಟು ಮಾಯೆ.
ಪ್ರೀತಿಯ ಸಾರಾಯಿ ಎಂಬ ಮತ್ತಿನಲ್ಲಿ ನಿಶೆಯಾಗಿ,
ಬಿದ್ದು ಹೊರಳಾಡುತ್ತಿರುವೆ ನಿನ್ನ ಹೃದಯ ಮಂದಿರ ಎಂಬ ತಾನದಲ್ಲಿ.
ನಲ್ಲೆ ನೀನೆಷ್ಟು ಮಾಯೆ.
ಮಾಯೆ ಎಂದು ಕರೆಯಲೇ,
ಚಂಚಲೆ ಎಂದು ಕರೆಯಲೇ ಎಂಬ ಗೊಂದಲದಲ್ಲಿ ಸಿಲುಕಿ ನರಳಾಡುತ್ತಿರುವೆ.
ನಲ್ಲೆ ನೀನೆಷ್ಟು ಮಾಯೆ
ಪ್ರೀತಿ ಮಾಡಿ ಮದುವೆಯಾದ ಮೇಲೆ ಮನೆಯ ಮುಂದೆ ಕಾವಲುಗರನಾದೆ..
ನನಗೆ ನೀನೇ ಎಲ್ಲವು, ನಿನಗೆ ನಾನೇ ಎಲ್ಲವು ಎಂದುಕೊಂಡು ಮಧುರವಾಗಿದ್ದು ಆ ನಮ್ಮ ಸಂಭ್ರಮದ ಕ್ಷಣಗಳಿಂದು ಎಲ್ಲಿ ಮಾಯೆಯಾಗಿವೆ.
ನಲ್ಲೆ ನೀನೆಷ್ಟು ಮಾಯೆ
ಕಣ್ಣು ಮುಚ್ಚಿದರು ನೀನೇ ಕಣ್ಣು ತೆಗೆದರು ನೀನೇ,
ನೀ ನನ್ನ ಬಿಟ್ಟು ಹೋದ ಆ ಕ್ಷಣದಿಂದ ಹೃದಯ ದೇವರೇ ಇಲ್ಲದ ಮಂದಿರವಾಗಿದೆ.
ಪ್ರೀತಿ ಮಾಯೆ, ಹುಡುಗಿಯು ಮಾಯೆ ಎಂದು ತಿಳಿಯುವ ಮುನ್ನವೇ ಹುಚ್ಚನಾದೆ.
insta:- unique_abhyaa
- abhi.s.j
12 Nov 2025, 08:04 pm
ಪದಗಳಲ್ಲಿ ಬೇರೆತ ಈ ನನ್ನ ಕವಿತೆ
ನಿನಗಾಗಿ ಅದನ್ನು ನಾನಿಂದು ಬರೆದೆ
ಏನೆಂದು ವರ್ಣಿಸಲಿ, ಹೇಗೆ ವರ್ಣಿಸಲಿ
ಪದಗಳೇ ಸಾಲದು ನಿನ್ನ ಬನ್ನಿಸಲು..
ಆ ನಿನ್ನ ಮುಂಗುರುಳು ಆ ನಿನ್ನ ನಯನ
ನಿನ್ನ ನೋಡಿದಾಗ ನನ್ನ ಬದುಕಾಯ್ತು ಪಾವನ
ಹಾಡಬೇಕೆನಿಸುತ್ತದೆ ನಿನಗಾಗಿ ಗಾಯನ...
ನನ್ನಲ್ಲೇ ಅಡಗಿರುವ ಈ ನನ್ನ ಪ್ರೀತಿಯ ಹೇಗೆ ಹೇಳಲಿ
ನನ್ನಲ್ಲೇ ಬಚ್ಚಿಡಲಾ ಅಥವಾ ನಿನ್ನಲ್ಲಿ ಹೇಳಲಾ...
ಓ ಗೆಳತಿ ನಿನಗಾಗಿ ಹಾಡುವೆ ಇಂದು
ನನ್ನ ಪ್ರೀತಿಯ ಸ್ವೀಕರಿಸು ನೀ ಬಂದು
ಒಮ್ಮೆ ಒಪ್ಪಿಕೊ ನನ್ನ ನೀನಿಂದು
ನೀನೇ ನನ್ನ ಪ್ರೀತಿಯ ಸಿಂಧು
ನಾನೇ ನಿನ್ನ ನೆಲ್ಮೆಯ ಬಂಧು..