Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ

ಕಣ ಕಣದಲ್ಲೂ ಕನ್ನಡ

ದೇಶವ ಸುತ್ತುತ್ತಾ ,
ಘೋಷವ ಕೂಗುವೆ.
ಕನ್ನಡಕ್ಕಾಗಿ ಜನನ.
ಕನ್ನಡಕ್ಕಾಗಿ ಮರಣ,
ಭಾರತಾಂಬೆಯ
ಸೆರಗಿನಾಸರೆಯಲ್ಲಿ
ನಮ್ಮೆಲ್ಲರ ಜೀವನ.
ಕಾವೇರಿ ನೀರನ್ನು
ಸವಿದರೆ ನಮ್ಮಯ
ಜೀವನ ಪಾವನ.
ಕನ್ನಡ ತಾಯಿಗೆ
ದ್ರೋಹವ ಬಗೆದರೆ
ವೈರಿಗಳಿಗೆ ಸಿದ್ಧವಿದೆ
ನಮ್ಮ ರಾಮಬಾಣ
ಕ್ಷಣಮಾತ್ರದಲ್ಲಿ ಉರುಳಲಿ
ದ್ರೋಹಿಗಳ ಪ್ರಾಣ.
ನಾಡುನುಡಿಗೆಂದೆ ಬರೆದೆ
ನನ್ನ ಅಭಿಮಾನದ ಕವನ
ಕೇಳುಗರ ಕಿವಿಗಳಿಗಿಂಪು
ಬದುಕಾಗಲೀ ಪಾವನ
ಕನ್ನಡಾಂಬೆಯ ಪಾದಕ್ಕೆ
ಈ ಕೆಚ್ಚೆದೆಯ ಕನ್ನಡಿಗನ ನಮನ.
ಜೀತು

- ಸಂತೋಷ್//ಜೀತು

22 Oct 2020, 09:10 am

*ಅಗಲಿಕೆಯ ನೋವು*

*ಅಗಲಿಕೆಯ ನೋವು*
~~~~~~~~~~~~~
ತನುವೆರಡು ಮನ ಒಂದಾಗಿದ್ದೆವು
ನಾನು ನೀನು
ಹೃದಯಗಳು ಒಡೆದು ಚೂರುಗಳಾದೆವು
ನೀನು ನಾನು

ಒಂದಾಗಿ ಬಾಳಬೇಕೆಂದು ಒಂದಾದೆವು
ನಾನು ನೀನು
ವಿಧಿಯಾಟದಲ್ಲಿ ಒಬ್ಬಂಟಿಯಾಗಿರಬೇಕಾಯಿತ್ತು
ನೀನು ನಾನು...

ಮರವಾಗಿ ಬೆಳೆದು ಬೇರೆಯವರಿಗೆ ನೆರಳಾಗಬೇಕೆಂದಿದ್ದೆವು
ನಾನು ನೀನು...
ಮೊಳಕೆಯಲ್ಲೆ ಮೊಟಕಾದೆವು
ನೀನು ನಾನು…..

ಬಾಳ ಬೆಳದಿಂಗಳಾಗಬೇಕು ಎಂದಿದ್ದೆವು
ನಾನು ನೀನು...
ಅಮಾವಾಸ್ಯೆ ಕತ್ತಲಾಗಿಬಿಟ್ಟೆವು
ನೀನು ನಾನು……

ಸದಾ ಹರಿಯುವ ನದಿಗಳಾಗಬೇಕೆಂದಿದ್ದೆವು
ನಾನು ನೀನು...
ಎಂದೂ ಸೇರದ ಸಾಗರದ ತೀರಗಳಾದೆವು
ನೀನು ನಾನು.....

ಈ ನಾನು ಆ ನೀನು ನಮ್ಮೊಳಗೆ ಸೇರಿಕೊಂಡು
ನೀನು ನೀನಾದೆ.... ನಾನು ನಾನಾದೆ...
ಬದುಕೆಲ್ಲ ಬಸವಳಿದು ಬೆಂಡಾದೆ....

✍️ *ಶಿವಣ್ಣ ಕೆ ಕೆರೆಕೋಡಿ….*
~~~~~~~~~~~~~~

- Shivanna K

21 Oct 2020, 09:28 am

ಈ ಮನುಷ್ಯ ಹೀಗ್ಯಾಕೆ

*ಈ ಮನುಷ್ಯ ಹೀಗ್ಯಾಕೆ*

ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳ
ನಡುವಿನ ಕೊಂಡಿ ಹೀಗ್ಯಾಕೆ ಕಳಚುತ್ತಿದೆ
ಬದುಕೇಂಬ ಒಡಲಿನಲ್ಲಿ ಹುಟ್ಟಿದ ನಾವು
ಬೇರಾವರ ಬದುಕನ್ನು ನುಂಗಲು ಹಂಬಲಿಸುವುದೇಕೆ.

ಮನಸಿನಲ್ಲಿ ಅಡಗಿರುವ ಕಿಚ್ಚನ್ನು
ಕೋಪದಲ್ಲಿ ಪರರ ಮೇಲೆ ತೋರುವುದೇಕೆ
ನಿಸ್ವಾರ್ಥದ ಪ್ರೀತಿ ಬಾರದೇಕೆ

ಆ ದೇವರ ಸನ್ನಿಧಿಯಲ್ಲಿ
ಯಾವ ವರ್ಗವಿಲ್ಲ ವರ್ಣವಿಲ್ಲ
ಜಾತಿಭೇದವಿಲ್ಲ ಬಡವ ಬಲ್ಲಿದನೆಂಬುದಿಲ್ಲ ಆದರೂ
ಈ ಜಗದಲ್ಲಿ
ಈ ಮನುಷ್ಯ ಹೀಗ್ಯಾಕೆ

ಈ ಭೂಮಿಯಲ್ಲಿ ಮನುಷ್ಯರು
ಹುಟ್ಟುತ್ತಾರೆ ಸಾಯುತ್ತಾರೆ
ಕೆಲವರು ಉಪಕಾರ ಮಾಡುತ್ತಾರೆ
ಇನ್ನೂ ಕೆಲವರು ಹಿಂಬದಿಯಿಂದ ಬೆನ್ನಿಗೆ ಚೂರಿ ಹಾಕಿ ಹೋಗುತ್ತಾರೆ
ಕೆಲವರು ಸಂತಸ ನೀಡುತ್ತಾರೆ
ಕೆಲವರು ನೊಯಿಸಿ ನೋವನಿಟ್ಟು ಹೋಗುತ್ತಾರೆ
ಕೆಲವರು ಜೀವನ ಬದುಕನ್ನೆ ಕಿತ್ತುಕೊಳ್ಳುತ್ತಾರೆ
ಈ ಮನುಷ್ಯ ಹೀಗ್ಯಾಕೆ

ಜೀವನ ಎನ್ನುವುದೇ ಅಚ್ಚರಿಗಳ ಕಂತೆ
ಕೆಲವರಿಗೆ ಶ್ರೀಮಂತಿಕೆಯ ಚಿಂತೆ
ಇಲ್ಲಿ ಅಯಸ್ಸಿಗೆ ಯಾವುದೇ ಗ್ಯಾರಂಟಿ ಇಲ್ಲ
ವಾರಂಟಿ ಇಲ್ಲ

ಆದರೂ ಈ ಮನುಷ್ಯ ಹೀಗ್ಯಾಕೆ

ನೂರು ಮನಸ್ಸುಗಳ ನೊಯಿಸಿ
ನೂರು ದೇವರುಗಳಿಗೆ
ನೂರು ದೀಪಗಳನ್ನು ಹಚ್ಚಿ ಸಂಭ್ರಮಿಸುವ
ನೂರು ಜನರಿಗೆ ಅನ್ನಹಾಕಿ ಸಂಭ್ರಮಿಸಲಾರ

ಈ ಮನುಷ್ಯ ಹೀಗ್ಯಾಕೆ…….

*ಶಿವಣ್ಣ ಕೆ ಕೆರೆಕೋಡಿ*

- Shivanna K

21 Oct 2020, 09:17 am

ನೀನು!!!

ನಿನಗಾಗಿ ಕಾದು ಕುಳಿತ ಶಬರಿ ನಾನು
ಬರೊಲೊಲ್ಲೆಯೇಕೆ ನೀನಿನ್ನೂ
ಅಹಲ್ಯೆಯಂತೆ ಕಲ್ಲಾದರೂ ಸರಿಯೇ
ಈ ಕಾಯುವಿಕೆಯ ನಿಲಿಸಲೊಲ್ಲೆ!

- Dima

20 Oct 2020, 06:09 pm

ಅರಿವು

ದೇವರು ಇದ್ದಿದ್ದರೆ
ಯಾರು ಅಳುತ್ತಿರಲಿಲ್ಲ
ಸಾಯುತ್ತಿರಲಿಲ್ಲ
ಹಸಿವಿನಿಂದ ಬಳಲುತ್ತಿರಲಿಲ್ಲ
ರೋಗ ರುಜನೇ ಬಂದರು
ಹೋಗುತ್ತಿರಲಿಲ್ಲ ದವಾಖನೆಗೆ
ಅಲೆದಾಡುತ್ತಿರಲಿಲ್ಲ
ಕಾಡು ಮೇಡು ಬೆಟ್ಟಗುಡ್ಡ
ಸುತ್ತುತ್ತಿರಲಿಲ್ಲ ಆ ಕ್ಷೇತ್ರ
ಈ ಕ್ಷೇತ್ರ ಪುಣ್ಯ ಕ್ಷೇತ್ರ
ಯಾರು ಯಾರಿಗಾಗಿಯು
ಕಾಯುತ್ತಿರಲಿಲ್ಲ
ನಿಮಗಾಗಿ ನೀವೇ ಹೊರೆತು
ನಿಮಗಾಗಿ ದೇವರಲ್ಲ
ಮೂಢರ ಮುಂದೆ
ಕಿನ್ನರಿ ಬಾರಿಸುವುದು ಒಂದೇ
ಹುಚ್ಚರ ಜಾತ್ರೆಯಲ್ಲಿ
ತಮಟೆ ಬಾರಿಸಿ
ಸಂಭ್ರಮಾಚರಣೆ
ಮಾಡುವುದು ಒಂದೇ

- ರಾಜು ಹಾಸನ

19 Oct 2020, 01:58 pm

ಬದುಕಿನ ಬಂಡಿ

ಮಣ್ಣಲ್ಲಿ ಬೆಳೆದ
ಅನ್ನವ ತಿಂದು ತೆಗುವುದು
ನಾವು ಸಾಯುವ ತನಕ
ಸತ್ತ ಮೇಲೆ ನಮ್ಮನ್ನೆ
ತಿಂದು ತೆಗುವುದು ಮಣ್ಣು
ಮಸಾಣದ ಹೆಣವಾಗಿ

ಉಚಿತವಾದ ಈ ಜನ್ಮ
ಕಚಿತವಲ್ಲದ ಈ ಬದುಕು
ಶಾಶ್ವತವಲ್ಲದ ಈ ದೇಹ
ಮಣ್ಣಾಗುವುದು ನಿಶ್ಚಿತ

ಇದ್ದಷ್ಟು ದಿನ
ಇರಬೇಕು ನಗು ನಗುತ್ತಾ
ದುಃಖ ಮರೆತು
ನೆಡೆಸಬೇಕು ಪಯಣ
ಯಾರು ನಮ್ಮವರಲ್ಲ
ಎಲ್ಲಾರು ನಮ್ಮವರೆಂದು
ಮುಂದೆ ಮುಂದೆ ಸಾಗಬೇಕು
ಬದುಕಿನ ಬಂಡಿ ತಳ್ಳುತ್ತಾ

- ರಾಜು ಹಾಸನ

17 Oct 2020, 05:55 pm

ಎಲ್ಲರೂ ಒಂದೇ

ಹಣ ಅಂತಸ್ತು
ನೋಡಿ ಬರುವ
ಸಂಬಂಧಗಳಿಗಿಂತ
ಗುಣ ನೋಡಿ ಬರುವ
ಬಂಧು ಮಿತ್ರರೆ
ಬಲು ಚಂದವಯ್ಯ
ಪ್ರಾಣಿ ಪ್ರಾಣಿಗಳ
ನಡುವೆ ಇಲ್ಲದ ದ್ವೇಷ
ಮನುಷ್ಯ ಮನುಷ್ಯರ
ನಡುವೆ ಇರುವುದಯ್ಯ ದ್ವೇಷ
ಪ್ರಾಣಿಗಳು ಜನರ
ಪ್ರೀತಿ ಗಳಿಸಿದರೆ
ಜನರು ಸಾದಿಸುವರಯ್ಯ
ಜನ ಜನರ ನಡುವೆ ದ್ವೇಷ

ಏನಿದ್ದರೇನು
ಏನು ನನ್ನದಲ್ಲದ
ಈ ಬದುಕು
ಬಿಟ್ಟು ಹೋಗುವುದು
ಒಂದಲ್ಲ ಒಂದು ದಿನ
ಈ ದೇಹ ಈ ಉಸಿರು
ಎಲ್ಲ ಬಿಟ್ಟು ಎಲ್ಲ ಮರೆತು
ಕೈಗೆಟುಕುದ ನಕ್ಷತ್ರ ವಾಗಿ

ಜಾತಿ ಮತ
ಭಾಷೆ ಸಂಸ್ಕೃತಿ
ಲಿಂಗ ಧರ್ಮ
ಭಿನ್ನವಾದರೇನು
ನರ ಮಾನವನಿಗೆ
ಇರುವುದು ಒಂದೇ
ಭಿನ್ನ ಬಿಕ್ಕಣವಿಲ್ಲದ
ಮನುಷ್ಯತ್ವ ಧರ್ಮ

- ರಾಜು ಹಾಸನ

16 Oct 2020, 11:00 pm

ನಿರಂತರ

ಪ್ರೀತಿ ಇದ್ದರೆ
ಬದುಕು ಬಂಗಾರ
ಸ್ನೇಹವಿದ್ದರೆ
ಬದುಕು ಸುಂದರ
ಬಂಧುವಿದ್ದರೆ
ಬದುಕು ಸಿಂಗಾರ
ಸಂಬಂಧವಿದ್ದರೆ
ಬದುಕು ನಿರಂತರ

- ರಾಜು ಹಾಸನ

16 Oct 2020, 01:53 pm

ನೆಮ್ಮದಿ

ನರ ಮಾನವ
ಪರದಾಡುವನಯ್ಯ
ನೆಮ್ಮದಿ ನೆಮ್ಮದಿಯೆಂದು
ನೆಮ್ಮದಿಯ ಹುಡುಕುತ್ತಾ
ವಜ್ರ ವೈಢೂರ್ಯವಿದ್ದರು
ಕೊಳ್ಳಲಾಗದಯ್ಯ ನೆಮ್ಮದಿ
ಕೊಳ್ಳುವ ಮಾರುವ
ಮರದ ದಿಮ್ಮಿಯಲ್ಲ
ಕೈ ಗೆ ಸಿಗುವ
ಪಂಜರದ ಹಕ್ಕಿಯಲ್ಲ
ನೆಮ್ಮದಿಗೆ ಬೇಕಾಗಿಲ್ಲ
ಸಿರಿ ಸಂಪತ್ತು ಹಣ ಅಂತಸ್ತು
ಹಿತ ಮಿತವಾದ ಆಸೆ
ಆಲೋಚನೆಗಳಿಂದರೆ
ದೊರಕುವುದಯ್ಯ ನೆಮ್ಮದಿ
ಓಡದಿರು ಮನುಜ
ನೆಮ್ಮದಿಯ ಹುಡುಕುತ್ತಾ
ನಿನ್ನಲ್ಲಿಯೇ ಇರುವುದು ನೆಮ್ಮದಿ
ನಿನ್ನ ಕಾಯಕವೇ
ನಿನ್ನ ನೆಮ್ಮದಿಯ ತಾಣವಯ್ಯ

- ರಾಜು ಹಾಸನ

15 Oct 2020, 11:51 pm

ನನ್ನ ಪ್ರೀತಿಯ ಅರಸಿ

ನನ್ನೊಲವೆ ನನ್ನೊಲವೇ
ಚಂದವಳ್ಳಿಯ ಚಲುವೆ
ನೀ ಎಷ್ಟು ಚಂದ
ನನ್ನೊಲವಿನ ಅರಸಿ
ಮುಗಿಲ ಮಲ್ಲಿಗೆಯೇ
ನಗುವ ಕೆಂದಾವರೆ ಹೂವೆ
ನಲಿವ ಕೆಂಪು ಗುಲಾಬಿಯೇ
ಅರಳೋ ಕೆಂಡ ಸಂಪಿಗೆಯೇ
ನಿನ್ನ ಹರಸಿ ಬಂದಿರುವೆ
ನಿನ್ನ ಅರಸ ನಿನ್ನಲ್ಲಿಗೆ
ನಿನ್ನ ಪ್ರೀತಿಯ ಹರಸಿ
ನನ್ನ ಪ್ರೀತಿಯ ಅರಸಿ

- ರಾಜು ಹಾಸನ

15 Oct 2020, 03:10 pm