Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಂಗ ಮಾಯ

ದೇವರೆಂದರೆ
ಇರಬೇಕು ಹಸುವಿನ ತರ
ಬಾ ಎಂದರೆ ಬರಬೇಕು
ಹೋಗು ಎಂದರೆ ಹೋಗಬೇಕು
ತಂದು ಮುಂದಿಟ್ಟರುವ
ಹಣ್ಣು ಕಾಯಿ ತಿನ್ನೆಂದರೆ ತಿನ್ನಬೇಕು
ಇಲ್ಲದಿದ್ದರೆ ಸುಮ್ಮನೆ
ಬಿದ್ದಿರಬೇಕು ಬೀದಿಯ ಕಲ್ಲಗಿ

ಕರೆದರು ಬರುವುದಿಲ್ಲ
ತಿನ್ನಲು ಕೊಟ್ಟರು ತಿನ್ನುವುದಿಲ್ಲ
ಇದ್ಯಾವ ಸೀಮೆಯ ದೇವರಯ್ಯ
ಇದೆಂತಹ ಮೂಕ ದೇವರಯ್ಯ

ಜನರು ಕಷ್ಟವೆಂದರೆ
ಓಡಿ ಓಡಿ ಹೋಗುವುದಯ್ಯ
ಈ ಬಂಡೆ ದೇವರು
ಪೊದೆಯ ನೆರಳ ಮರೆಗೆ

ಹಬ್ಬವೆಂದರೆ
ಓಡಿ ಓಡಿ ಬರುವುದಯ್ಯ
ಹಾದಿ ಬೀದಿಗೆ
ತಮ್ಮಟೆ ಪೀಪಿ ಸದ್ದಿಗೆ
ಸಂಧಿ ಗುಂಧಿಯಲ್ಲಿ
ತಿಪ್ಪೆ ಗುಂಡಿಯಲ್ಲಿ ಬಿದ್ದಿರುವ ಕಲ್ಲು

ನಾನು ಆ ದೇವರು
ನಾನು ಈ ದೇವರು ಎನ್ನುವುದಯ್ಯ
ಹಬ್ಬ ಮುಗಿದ ಮೇಲೆ
ಯಾವ ದೇವರು ಇಲ್ಲವಲ್ಲಯ್ಯ
ಎಲ್ಲವೂ ಮಂಗ ಮಾಯಾವಯ್ಯ
*********ರಾಜು ಹಾಸನ*********

- ರಾಜು ಹಾಸನ

28 Oct 2020, 03:08 pm

ಪ್ರೀತಿ ಪ್ರೇಮ

ಕಳ್ಳಿ ಮಳ್ಳಿ ಮಿಂಚುಳ್ಳಿ
ಮನಸು ಕದ್ದ ಚೆಂದುಳ್ಳಿ
ಕಾಡಿಸಬೇಡ ನೋಯಿಸಬೇಡ
ಕನಸಿನಲ್ಲಿ ಬಂದು ಕೊಲ್ಲಬೇಡ
ಮಿಂಚಿ ಮಾಯವಾಗಬೇಡ
ಕಂಡು ಮರೆಯಾಗಬೇಡ
ಮನಸು ಕದ್ದು ಓಡಬೇಡ
ಸೋತು ಸುಣ್ಣವಾಗಿರುವೇ
ಕಣ್ಣಾಮುಚ್ಚಾಲೆ ಆಟವೇಕೆ
ನನ್ನ ಕನಸು ಮನಸ್ಸು
ನೀನೇ ಆಗಿರುವಾಗ
ನಾಚಿಕೆಯಾಕೆ ಭಯವೇಕೆ
ಪ್ರೀತಿಯ ಮಾತು ನುಡಿಯಲು
ನನ್ನ ಪ್ರೀತಿಯ ಮಿಂಚುಳ್ಳಿ

- ರಾಜು ಹಾಸನ

28 Oct 2020, 12:33 pm

ಸ್ವಾರ್ಥವಿಲ್ಲದ ಮಾತೃಹೃದಯ

ಕಲ್ಮಶವಿಲ್ಲದ ಪ್ರೀತಿ ನಿನ್ನದು
ಸ್ವಾರ್ಥವಿಲ್ಲದ ಬದುಕು ನಿನ್ನದು
ಆಡಂಬರವಿಲ್ಲದ ಜೀವನ ನಿನ್ನದು

ಕಷ್ಟವನ್ನು ಮೆಟ್ಟಿ ನಿಂತು ಮಕ್ಕಳನು ಸಲಹಿದೆ
ಅಪಾರಾಧ ಇಲ್ಲದೆ ಶಿಕ್ಷೆ ಪಡೆದೆ
ಕಲ್ಲು ಜೀವದ ಜೊತೆ ಬದುಕಿದೆ

ದೇವರ ಕೃಪೆಇದೆ ಎಂದು ನಂಬಿದೆ
ಮಕ್ಕಳ ಶಿಕ್ಷಣಕ್ಕೆ ಶ್ರಮೀಸಿದೆ
ಬಾಂಧವ್ಯವಿಲ್ಲದ ಸಂಬಂಧಗಳೂಂದಿಗೆ ಜೀವನ

ಮಕ್ಕಳಿಗಾಗಿ ಜೀವ ಸವೆಸಿದೆ
ಧೈರ್ಯದಿಂದ ಜೀವಿಸಿದ
ಮಾತೃ ಹೃದಯ..

- Akshatha Shetty

26 Oct 2020, 08:48 pm

ವಿನಾಶದ ‌ಜಂಗಮವಾಣಿ

ವಿನಾಶದ ‌ಜಂಗಮವಾಣಿ


ಪದಗಳಲ್ಲಿ ವರ್ಣಿಸಲು ಅಸಾಧ್ಯವೇ ನೀನು
ಯುವ ಪೀಳಿಗೆಯನ್ನು ಬಳಿ ಪಡೆಯುವ ಮಾಯೆ
ಬದುಕುತಿದೆ ಸಮಾಜ ನಿನ್ನ ಗುಂಗಿನಲ್ಲಿ
ಮೌನವಾಗಿ ಮುಳುಗಿದೆ ನಿನ್ನ ನಶೆಯಲ್ಲಿ.


ಸಂಬಂಧಗಳು ಜಂಗಮವಾಣಿಗೆ ಸೀಮಿತವಾಗಿ
ಸೂರ್ಯನ ಬೆಳಕನ್ನು ಕಾಣದೆ ಶುಭೋದಯ
ನಿನ್ನ ಜಾಲವಿಲ್ಲದ ಮನೆ ಎಲ್ಲಿದೆ
ನಿನ್ನೂಂದಿಗಿರುವಷ್ಟು ಬಾಂಧವ್ಯ , ಸಂಬಂಧಗಳಲ್ಲಿ.


ಸಮಾಜದ ಸ್ವಾಸ್ಥ್ಯ ಹಾಳು ಮಾಡಿ
ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಬಿಟ್ಟು ಬಿಡದೆ ನಡೆಸುತ್ತಿರುವೇ
ಜೀವವಿಲ್ಲದ ನೀನು ಹಲವು ಜೀವ ಕಸಿದೆ.

- Akshatha Shetty

26 Oct 2020, 02:53 pm

ನಮ್ಮ ಅರಿವು

ನಮ್ಮತನವ ನಾವು ಮರೆತು
ಪುಂಗಿ ಉದೊ ದಾಸಯ್ಯ ಹಿಂದೆ
ಅಲೆಯುವಂತಾಗಿದೆ ಬದುಕು...
ಯಾಕೆಂದರೆ ನಮ್ಮೊಳಗಿನ ಅಂತರಾಳದ ಶಕ್ತಿ
ನಾವು ಅರಿತುಕೊಳ್ಳದೆ ......
ಬೇರೆವರು ಅರಿವರೇನಯ್ಯ....?
ಅರಿತು ನಡೆಯದೆ ಭಯದಿಂದ ಮೂಲೆಗುಂಪಾಗಿ
ಉಜ್ವಲ ಭವಿಷ್ಯದ ಆತ್ಮಸ್ಥೈರ್ಯವನ್ನ
ಕಳೆದುಕೊಳ್ಳುವಂತಹ ಮನೋಸ್ಥಿತಿ ಎದುರಾಗಿದೆ...!
ಇಂತಹ ಪರಿಸ್ಥಿತಿಯಲ್ಲಿ ಬಂಧುಗಳು ,ಸ್ನೇಹ ಸಂಬಂಧಿಗಳು,
ನೆರೆಹೊರೆಯವರು ,ಮನೋಸ್ಥಿಯನ್ನರಿತು ಬೆಲೆ ಕಟ್ಟಲಾಗದ ಮಾನವಿಯ ಮೌಲ್ಯಗಳನ್ನ ಉಣಬಡಿಸಿ ....ಆತ್ಮಸ್ಥೈರ್ಯವನ್ನ ತುಂಬುವಂತಹ ಮನಸ್ಸು ಮಾನವಿಯತೆಯ... ಸದೃಢರ ಸಂಕಲ್ಪ ನಮ್ಮದಾಗಬೇಕು .
ಅಂದಾಗ , ಮಾತ್ರ ಸಮಾಜದಲ್ಲಿ ನಮ್ಮಿಂದ ನೂರಾರು ....ಸಾವಿರಾರುಕ್ಕಿಂತ ಒಬ್ಬರು ತಮ್ಮ ಜೀವನದ ಶೈಲಿ ರೂಪಿಸಿಕೊಂಡು ಯಶಸ್ಸನ್ನ ಕಂಡರೆ ! ಅದೇ ಒಬ್ಬರಿಂದ ಇನ್ನೊಬ್ಬರ ಬದುಕಿಗೆ ದಾರಿದೀಪ.....

@ವಿಶು

- Wishu@

26 Oct 2020, 12:21 pm

ಕನ್ನಡ

ಕಣ ಕಣದಲ್ಲೂ ಕನ್ನಡ

ದೇಶವ ಸುತ್ತುತ್ತಾ ,
ಘೋಷವ ಕೂಗುವೆ.
ಕನ್ನಡಕ್ಕಾಗಿ ಜನನ.
ಕನ್ನಡಕ್ಕಾಗಿ ಮರಣ,
ಭಾರತಾಂಬೆಯ
ಸೆರಗಿನಾಸರೆಯಲ್ಲಿ
ನಮ್ಮೆಲ್ಲರ ಜೀವನ.
ಕಾವೇರಿ ನೀರನ್ನು
ಸವಿದರೆ ನಮ್ಮಯ
ಜೀವನ ಪಾವನ.
ಕನ್ನಡ ತಾಯಿಗೆ
ದ್ರೋಹವ ಬಗೆದರೆ
ವೈರಿಗಳಿಗೆ ಸಿದ್ಧವಿದೆ
ನಮ್ಮ ರಾಮಬಾಣ
ಕ್ಷಣಮಾತ್ರದಲ್ಲಿ ಉರುಳಲಿ
ದ್ರೋಹಿಗಳ ಪ್ರಾಣ.
ನಾಡುನುಡಿಗೆಂದೆ ಬರೆದೆ
ನನ್ನ ಅಭಿಮಾನದ ಕವನ
ಕೇಳುಗರ ಕಿವಿಗಳಿಗಿಂಪು
ಬದುಕಾಗಲೀ ಪಾವನ
ಕನ್ನಡಾಂಬೆಯ ಪಾದಕ್ಕೆ
ಈ ಕೆಚ್ಚೆದೆಯ ಕನ್ನಡಿಗನ ನಮನ.
ಜೀತು

- ಸಂತೋಷ್//ಜೀತು

22 Oct 2020, 09:10 am

*ಅಗಲಿಕೆಯ ನೋವು*

*ಅಗಲಿಕೆಯ ನೋವು*
~~~~~~~~~~~~~
ತನುವೆರಡು ಮನ ಒಂದಾಗಿದ್ದೆವು
ನಾನು ನೀನು
ಹೃದಯಗಳು ಒಡೆದು ಚೂರುಗಳಾದೆವು
ನೀನು ನಾನು

ಒಂದಾಗಿ ಬಾಳಬೇಕೆಂದು ಒಂದಾದೆವು
ನಾನು ನೀನು
ವಿಧಿಯಾಟದಲ್ಲಿ ಒಬ್ಬಂಟಿಯಾಗಿರಬೇಕಾಯಿತ್ತು
ನೀನು ನಾನು...

ಮರವಾಗಿ ಬೆಳೆದು ಬೇರೆಯವರಿಗೆ ನೆರಳಾಗಬೇಕೆಂದಿದ್ದೆವು
ನಾನು ನೀನು...
ಮೊಳಕೆಯಲ್ಲೆ ಮೊಟಕಾದೆವು
ನೀನು ನಾನು…..

ಬಾಳ ಬೆಳದಿಂಗಳಾಗಬೇಕು ಎಂದಿದ್ದೆವು
ನಾನು ನೀನು...
ಅಮಾವಾಸ್ಯೆ ಕತ್ತಲಾಗಿಬಿಟ್ಟೆವು
ನೀನು ನಾನು……

ಸದಾ ಹರಿಯುವ ನದಿಗಳಾಗಬೇಕೆಂದಿದ್ದೆವು
ನಾನು ನೀನು...
ಎಂದೂ ಸೇರದ ಸಾಗರದ ತೀರಗಳಾದೆವು
ನೀನು ನಾನು.....

ಈ ನಾನು ಆ ನೀನು ನಮ್ಮೊಳಗೆ ಸೇರಿಕೊಂಡು
ನೀನು ನೀನಾದೆ.... ನಾನು ನಾನಾದೆ...
ಬದುಕೆಲ್ಲ ಬಸವಳಿದು ಬೆಂಡಾದೆ....

✍️ *ಶಿವಣ್ಣ ಕೆ ಕೆರೆಕೋಡಿ….*
~~~~~~~~~~~~~~

- Shivanna K

21 Oct 2020, 09:28 am

ಈ ಮನುಷ್ಯ ಹೀಗ್ಯಾಕೆ

*ಈ ಮನುಷ್ಯ ಹೀಗ್ಯಾಕೆ*

ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳ
ನಡುವಿನ ಕೊಂಡಿ ಹೀಗ್ಯಾಕೆ ಕಳಚುತ್ತಿದೆ
ಬದುಕೇಂಬ ಒಡಲಿನಲ್ಲಿ ಹುಟ್ಟಿದ ನಾವು
ಬೇರಾವರ ಬದುಕನ್ನು ನುಂಗಲು ಹಂಬಲಿಸುವುದೇಕೆ.

ಮನಸಿನಲ್ಲಿ ಅಡಗಿರುವ ಕಿಚ್ಚನ್ನು
ಕೋಪದಲ್ಲಿ ಪರರ ಮೇಲೆ ತೋರುವುದೇಕೆ
ನಿಸ್ವಾರ್ಥದ ಪ್ರೀತಿ ಬಾರದೇಕೆ

ಆ ದೇವರ ಸನ್ನಿಧಿಯಲ್ಲಿ
ಯಾವ ವರ್ಗವಿಲ್ಲ ವರ್ಣವಿಲ್ಲ
ಜಾತಿಭೇದವಿಲ್ಲ ಬಡವ ಬಲ್ಲಿದನೆಂಬುದಿಲ್ಲ ಆದರೂ
ಈ ಜಗದಲ್ಲಿ
ಈ ಮನುಷ್ಯ ಹೀಗ್ಯಾಕೆ

ಈ ಭೂಮಿಯಲ್ಲಿ ಮನುಷ್ಯರು
ಹುಟ್ಟುತ್ತಾರೆ ಸಾಯುತ್ತಾರೆ
ಕೆಲವರು ಉಪಕಾರ ಮಾಡುತ್ತಾರೆ
ಇನ್ನೂ ಕೆಲವರು ಹಿಂಬದಿಯಿಂದ ಬೆನ್ನಿಗೆ ಚೂರಿ ಹಾಕಿ ಹೋಗುತ್ತಾರೆ
ಕೆಲವರು ಸಂತಸ ನೀಡುತ್ತಾರೆ
ಕೆಲವರು ನೊಯಿಸಿ ನೋವನಿಟ್ಟು ಹೋಗುತ್ತಾರೆ
ಕೆಲವರು ಜೀವನ ಬದುಕನ್ನೆ ಕಿತ್ತುಕೊಳ್ಳುತ್ತಾರೆ
ಈ ಮನುಷ್ಯ ಹೀಗ್ಯಾಕೆ

ಜೀವನ ಎನ್ನುವುದೇ ಅಚ್ಚರಿಗಳ ಕಂತೆ
ಕೆಲವರಿಗೆ ಶ್ರೀಮಂತಿಕೆಯ ಚಿಂತೆ
ಇಲ್ಲಿ ಅಯಸ್ಸಿಗೆ ಯಾವುದೇ ಗ್ಯಾರಂಟಿ ಇಲ್ಲ
ವಾರಂಟಿ ಇಲ್ಲ

ಆದರೂ ಈ ಮನುಷ್ಯ ಹೀಗ್ಯಾಕೆ

ನೂರು ಮನಸ್ಸುಗಳ ನೊಯಿಸಿ
ನೂರು ದೇವರುಗಳಿಗೆ
ನೂರು ದೀಪಗಳನ್ನು ಹಚ್ಚಿ ಸಂಭ್ರಮಿಸುವ
ನೂರು ಜನರಿಗೆ ಅನ್ನಹಾಕಿ ಸಂಭ್ರಮಿಸಲಾರ

ಈ ಮನುಷ್ಯ ಹೀಗ್ಯಾಕೆ…….

*ಶಿವಣ್ಣ ಕೆ ಕೆರೆಕೋಡಿ*

- Shivanna K

21 Oct 2020, 09:17 am

ನೀನು!!!

ನಿನಗಾಗಿ ಕಾದು ಕುಳಿತ ಶಬರಿ ನಾನು
ಬರೊಲೊಲ್ಲೆಯೇಕೆ ನೀನಿನ್ನೂ
ಅಹಲ್ಯೆಯಂತೆ ಕಲ್ಲಾದರೂ ಸರಿಯೇ
ಈ ಕಾಯುವಿಕೆಯ ನಿಲಿಸಲೊಲ್ಲೆ!

- Dima

20 Oct 2020, 06:09 pm

ಅರಿವು

ದೇವರು ಇದ್ದಿದ್ದರೆ
ಯಾರು ಅಳುತ್ತಿರಲಿಲ್ಲ
ಸಾಯುತ್ತಿರಲಿಲ್ಲ
ಹಸಿವಿನಿಂದ ಬಳಲುತ್ತಿರಲಿಲ್ಲ
ರೋಗ ರುಜನೇ ಬಂದರು
ಹೋಗುತ್ತಿರಲಿಲ್ಲ ದವಾಖನೆಗೆ
ಅಲೆದಾಡುತ್ತಿರಲಿಲ್ಲ
ಕಾಡು ಮೇಡು ಬೆಟ್ಟಗುಡ್ಡ
ಸುತ್ತುತ್ತಿರಲಿಲ್ಲ ಆ ಕ್ಷೇತ್ರ
ಈ ಕ್ಷೇತ್ರ ಪುಣ್ಯ ಕ್ಷೇತ್ರ
ಯಾರು ಯಾರಿಗಾಗಿಯು
ಕಾಯುತ್ತಿರಲಿಲ್ಲ
ನಿಮಗಾಗಿ ನೀವೇ ಹೊರೆತು
ನಿಮಗಾಗಿ ದೇವರಲ್ಲ
ಮೂಢರ ಮುಂದೆ
ಕಿನ್ನರಿ ಬಾರಿಸುವುದು ಒಂದೇ
ಹುಚ್ಚರ ಜಾತ್ರೆಯಲ್ಲಿ
ತಮಟೆ ಬಾರಿಸಿ
ಸಂಭ್ರಮಾಚರಣೆ
ಮಾಡುವುದು ಒಂದೇ

- ರಾಜು ಹಾಸನ

19 Oct 2020, 01:58 pm