ಇದು ಏನು ದೇವರು
ಇದು ಎಂತಾ ದೇವರು
ಹಣ್ಣು ಕಾಯಿ
ಮುರಿದು ಹೊಡೆದು
ಕೊಟ್ಟರು ತಿನ್ನದ
ಮೂಸಿ ನೋಡದ ದೇವರು
ಕುರಿ ಕೋಳಿ ಹಂದಿ
ಎಮ್ಮೆಯ ಬಲಿ ಕೊಟ್ಟರೆ
ಕುಡಿದು ತಿನ್ನುವುದೇ
ಕುರಿ ಕೋಳಿ ಹಂದಿ
ಎಮ್ಮೆಯ ಮಾಂಸರಕ್ತ
ಕೂಗಿ ಗೋಗರೆದು
ಬೆಂಕಿ ಕೆಂಡವಾ
ತುಳಿದು ನೆಡೆದರು
ಗುಡಿಯ ಸುತ್ತ
ಬಿದ್ದು ಹೊರಳಾಡಿ
ತಲೆ ಚಚ್ಚಿ ಬೇಡಿದರು
ಬಾರದ ದೇವರು
ತಮಟೆ ಪೀಪಿ ಸದ್ದಿಗೆ
ವಾಲಾಡಿ ತೇಲಾಡಿ
ಕುಣಿದು ಕುಪ್ಪಳಿಸಿ
ಬೊಬ್ಬೆ ಹೊಡೆದು
ಕೇಕೆ ಹಾಕಿ ಬರುವುದು
ಜನರ ಮೈ ಮೇಲೆ
ಇದು ಏನು ದೇವರು
ಇದು ಎಂತಾ ದೇವರು
*******ರಾಜು ಹಾಸನ*******
ದ್ವೇಷ ಅಸೂಯೆ
ಮಾದ ಮತ್ಸರ ತಾರತಮ್ಯ
ಅಧರ್ಮ ಅನ್ಯಾಯವೇ
ತುಂಬಿ ತುಳುಕುವ
ಕಟ್ಟು ಕಥೆಗಳ
ಚಿತ್ರ ವಿಚಿತ್ರವಾದ
ಪುಂಗಿ ಪುರಾಣಗಳೇ
ಮನುವಾದಿಗಳ
ಜಾತಿ ಧರ್ಮದ
ಗ್ರಂಥಗಳದರೆ
ಸ್ನೇಹ ಪ್ರೀತಿ ವಾತ್ಸಲ್ಯ
ಮಮತೆ ಸಮಾನತೆ
ನ್ಯಾಯ ನೀತಿ
ಧರ್ಮ ಪಾಠ ಕಲಿಸಿ
ಅನ್ಯಾಯ ಮೆಟ್ಟಿ
ನಿಂತು ಧೈರ್ಯದ
ಕಿಡಿ ಹೊತ್ತಿಸಿ
ಜ್ಞಾನ ದಿವ್ಯಜ್ಯೋತಿ
ಬೆಳಕು ಚೆಲ್ಲಿ
ಸ್ತ್ರೀ ಶೋಷಿತರ
ಬಡವ ಬಲ್ಲಿದರ
ರಕ್ಷಿಸಿದ ರಕ್ಷ ಕವಚ
ವಿಶ್ವದ ಏಕೈಕ ಗ್ರಂಥ
ಮಾನವ ಧರ್ಮ ಗ್ರಂಥ
ಬಾಬಾಸಾಹೇಬರು
ರಚಿಸಿದ ನಮ್ಮ ನಿಮ್ಮೆಲ್ಲರ
ಹೆಮ್ಮೆಯ ಧರ್ಮ ಗ್ರಂಥ
ಭಾರತದ ಸಂವಿಧಾನ
ನನ್ನ ಗೆಳಯ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ಪ್ರೀತಿ ಪ್ರೇಮದ ಚಿಟ್ಟೆ
ನೀ ಹಿಡಿಯಲು ಹೋಗಿ
ಕೈ ಕಾಲು ಮುರಿದು ಬಿದ್ದೆ
ಪ್ರೀತಿ ಪ್ರೇಮದ ಚಿಟ್ಟೆ
ಹಾರಿ ಹೋಯಿತು ನಿನ್ನ ಬಿಟ್ಟು
ನಿನ್ನೆದೆಯೊಳಗಿನ ನಿನ್ನೂಸಿರಿನ
ಚಿಟ್ಟೆ ಬಿಟ್ಟು ಹಾರಿ
ಹೋಗುವ ಮುನ್ನ
ಮರಳಿ ಬಂದು ಸೇರಿಕೋ
ನಿನ್ನ ಒಲವಿನ ಗೂಡು
ನನ್ನ ಗೆಳಯ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ನಿನ್ನ ಪ್ರೀತಿ ಪ್ರೇಮದ ಚಿಟ್ಟೆ
ಖುಷಿಯಾಗಿರುವುದು
ಪಂಜರದ ಗಿಣಿಯಾಗಿ
ನೀ ನಗು ನಗುತ್ತಾ ಬಾಳು
ನಿನ್ನವಳ ಪ್ರೀತಿಗೆ
ನೀ ಮುಳುವಾಗದೆ
ನನ್ನ ಗೆಳಯ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ನಿನ್ನ ಪ್ರೀತಿ ಪ್ರೇಮದ
ಮಾಯಾ ಜಿಂಕೆ ಕುಣಿ
ಕುಣಿದಾಡುತ್ತಿದೆ
ನಿನ್ನ ನೆನಪು ಮರೆತು
ನೀ ಮರುಗದೆ ಕೊರಗದೆ
ನೀ ವನದ ನವಿಲಿನಂತೆ
ಗರಿ ಬಿಚ್ಚಿ ನಲಿ ನಲಿದಾಡು
ನಿನ್ನ ಮನದ ನೋವು ಮರೆತು
ನನ್ನ ಗೆಳಯ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ನಿನ್ನ ಪ್ರೀತಿ ಪ್ರೇಮದ
ನಿನ್ನವಳ ಹೃದಯ
ನಿನ್ನಿಂದ ದೂರವಾದರು
ನೀ ಕೊಟ್ಟ ಪ್ರೀತಿ ಪ್ರೇಮವ
ಮುತ್ತು ಮರೆತು
ಬದುಕದು ನಿನ್ನವಳ ಜೀವಾ
ನಿನ್ನೆದೆಯ ನಿನ್ನೊಲವಿನ
ಸೊಜಿಗದ ಸೂಜಿ ಮಲ್ಲಿಗೆ
ದುಂಡು ಮಲ್ಲಿಗೆ
ಮುದುಡಿ ಬಾಡಿ ಹೋಗದಿರಲಿ
ನಗು ನಗುತಾ ಬದುಕಿ
ಬಾಳಲಿ ನಿನ್ನೊಲುಮೆ ಹೂವು
ನನ್ನ ಗೆಳಯ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
*********ರಾಜು ಹಾಸನ*********