Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನಿಲ್ಲದ ನಾನು ನೀರಿಲ್ಲದ ಭುವಿಯೆಂದೇನಿಸಿತು...!

ಮೋಡಗಳು ಅತ್ತು ಕಣ್ಣೀರಿಡಲು,
ಕೆರೆ ನೀರೇಕೋ ನಡುಗಿತು
ಹುಣ್ಣಿಮೆಯ ಚಂದ್ರ ನಿಂತಲ್ಲೇ ನಿಂತಿರಲು,
ಸಮುದ್ರದ ಅಲೆಗಳೇಕೋ ಕಂಪಿಸಿತು
ಕಾಲಿಯ ಕೊಡ ಮುಳುಗಲೆಂದು ಧುಮುಕಲು,
ಭಾವಿಯ ನೀರೇಕೊ ಹಾರ ಬಯಸಿತು
ನಿನ್ನ ನೆನಪಿನ ನೋಟದಲಿ ಇದ ನಾ ನೋಡಲು,
ನೀನಿಲ್ಲದ ನಾನು ನೀರಿಲ್ಲದ ಭುವಿಯೆಂದೇನಿಸಿತು...!

insta:- unique_abhyaa

- abhi.s.j

30 Sep 2025, 08:01 am

ಬರೆಯುವ ಮೊದಲೆ ಅಕ್ಷರವ ಕದಿಯೋಳು..

ಬರೆಯುವ ಮೊದಲೆ ಅಕ್ಷರವ ಕದಿಯೋಳು
ಬರೆದಾದ ಮೇಲೂ ನಿದ್ದೇನ ಕದ್ದವಳು
ನನ್ನೆದುರಿಗೆ ಬಂದಾಗ ಏನು ಮಾಡಲಿ
ಅವಳೇನಾದರೂ ಕೇಳಿದರೆ ಏನು ಹೇಳಲಿ?

ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು
ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು
ಮಾತಿಗೆ ಎದುರಾಡದೆ ನಿಂತಾಗ
ನಕ್ಕು ಓಡಿದರೆ ನಾನೇನೂ ಮಾಡಲಿ?

ಕದ್ದ ಮಾಲು ಪಡೆಯುವುದಾದರು ಹೇಗೆ
ಕದ್ದ ಕನಸು, ಮನಸು ಬರುವುದೇ ಹಾಗೆ
ನೀವಾದರೂ ಸ್ವಲ್ಪ ಹೇಳಿ ಅವಳಿಗೆ
ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ ಮನಸ್ಸು ಕೊಡಲಿ.

insta:- unique_abhyaa

- abhi.s.j

30 Sep 2025, 08:00 am

ಅಂದಗಾತಿ...

ಅಂದಗಾತಿಯೆ
ನಿನ್ನ ಕೋಮಾಲ ಸೌಂದರ್ಯಕೆ
ಆ ಚೆಂದ್ರಮನು ಕೂಡಾ
ನಿನ್ನಾ ನೋಡು ನೋಡುತಾ
ರಸಿಕನಾದ

ಚೆಂದಗಾತಿಯೆ
ನಿನ್ನ ಸೊಬಗಿನ ವೈಯಾರದ ಚೆಲುವಿಗೆ
ಮಾತುಗಳ ಬರದವನು ಕೂಡಾ
ಹಾಡುಗಾರನಾದ

ರೂಪಸಿಯೇ
ನಿನ್ನ ಮುದ್ದಾದ ಚೆಲುವಿನ ಸಿರಿಗೆ
ಕವಿಯು ಕೂಡಾ ಸುಮ್ಮನೆ ಬರೆದ
ವರ್ಣಿಸಲಾಗದ ಸಾಲುಗಳ

ಚೆಲುವೆಯೇ
ನಿನ್ನ ಚೆಲುವೆಲ್ಲಾ ನೋಡಿ
ಹೂಗಳೆಲ್ಲಾ ಅರಳೀ ನಗುವುದ
ಕಲಿಯುತ ನಲಿದಿವೆ

ಚೆಲುವನ್ನು ನೋಡಿ ಚೆಲುವೆಗಾಗಿ ಚೆಂದವಾಗಿ ಕಲ್ಪಿಸಿದ ಚೆಂದದ ಸಾಲುಗಳು...
insta- unique_abhyaa

- abhi.s.j

30 Sep 2025, 07:59 am

ಕಾಮೋ೯ಡ ಕವಿದಾಗ


ಕಾಮೋ೯ಡ ಕವಿದಾಗ ನನ್ನ ಮನದಲ್ಲೇಕೋ ತಲ್ಲಣ...
ತಿಳಿಯದೇ ನಾ ನೀಡಿದೆ ನಿನಗೊಂದು ಆಮಂತ್ರಣ...
ನನ್ನೆದೆಯಾಳಕೆ ನೀ ಬಿಟ್ಟ ಪ್ರೀತಿಯ ಬಾಣ...
ಅಂದಿನಿಂದ ನೀನಾದೆ ನನ್ನ ಪಂಚಪ್ರಾಣ...

ಕಾಮೋ೯ಡ ಕವಿದಾಗ ನತಿ೯ಸಲು ಕಾದಿಹುದು ನವಿಲು ಪ್ರತಿ ಕ್ಷಣ...
ಆಗ ಮೂಡುವುದು ನಿಸರ್ಗದಲ್ಲೊಂದು ಅಧ್ಬುತ ರಮಣೀಯ ತಾಣ...
ನನ್ನೆದೆಯಾಳದಿ ಮೂಡಿದ ಪ್ರತಿ ಭಾವನೆಗಳ ಪ್ರಾಣ...
ಕ್ಷಣ ಕ್ಷಣವೂ ಕೂಗುತಿವೆ ನೀನೇ ಎಂದೆಂದಿಗೂ ನನ್ನ ರಮಣ...

ವಸಂತ ಕಾವ್ಯ

- Kavya Mari

29 Sep 2025, 08:44 pm

ಎಲ್ಲೆಲ್ಲೂ ನೀನೇ ಕಾಣುವೆ

ಬಾನಿನ ಮರೆಯಲ್ಲಿ ಮೋಡಗಳ ಸಮ್ಮಿಲನ
ಸಂಜೆ ಸೂರ್ಯನ ಹೊಂಬಣ್ಣದ ಬೆಳಕಿನಲಿ ಕಡಲ ಅಲೆಗಳ ಸಂಚಲನ...

ನವ ವಸಂತದ ತಂಗಾಳಿಯಲಿ ಕೋಗಿಲೆಗಳ ಗಾಯನ
ಚಿಗುರಿದ ಮಾಮರದ ಎಲೆಗಳಲಿ ಅರಳಲು ಸಜ್ಜಾಗಿರುವ ಕಾನನ...

ಕಾಮೋ೯ಡದ ಕಗ್ಗತ್ತಲಲಿ ಮಯೂರಗಳ ನತ೯ನ
ಸುರಿವ ವಷ೯ಧಾರೆಯಲಿ ಚಿಗುರುವ ಚೈತ್ರದ ಕವನ...

ಎದೆ ನಡುಗಿಸುವ ಗುಡುಗಿನ ನಡುವಲಿ ಝೇಂಕರಿಸುವ ಸಿಡಿಲಿನ ಗಾನ
ವೃಷ್ಠಿಯ ನಂತರದ ನಿಶ್ಶಬ್ದದಿ ಮೃಗಕಗಗಳ ಕಲರವದ ಗಾನ...

ಸುಡುವ ಕಡಲ ತೀರದಿ ನೀಲಿ ಮುಗಿಲ ತಪ್ಪಲಲಿ ನಡೆವ ದೋಣಿಯ ಯಾನ
ಇದೆಲ್ಲಕ್ಕೂ ಕಾರಣವು ವಸುಂಧರೆಯ ಪರಿಭ್ರಮಣೆಯ ಲಯದ ಚಲನ...

ವಸಂತ ಕಾವ್ಯ

- Kavya Mari

29 Sep 2025, 10:32 am

ಪ್ರೀತಿಯ ರಂಗೋಲಿ

ಕಣ್ಣೇ ಪ್ರೀತಿಗೆ ಸಾಕ್ಷಿ...
ಜನುಮ ಜನುಮಕೂ ಆತ್ಮ ಸಾಕ್ಷಿ...

ಗಲು ಗಲ್ಲೆನುವ ನಿನ್ನ ಗೆಜ್ಜೆಯಲಿ...
ನಾ ಕಂಡೆ ನಾಚುವ ಕೆಂಪೇರಿದ ಸೂರ್ಯನ ಅಂದ...
ಜಲ್ ಜಲ್ಲೆನ್ನುವ ನಿನ್ನ ಬಳೆಗಳಲ್ಲಿ...
ನಾ ಕಂಡೆ ಬೆಳದಿಂಗಳ ಪೂರ್ಣ ಚಂದ್ರನ ಚಂದ...

ಕಾದಿದೆ ನನ್ನೀ ಮನ ನಿನ್ನೇ ಸ್ವಾಗತಿಸಲು... ಕಾದಿದೆ ನನ್ನೀ ಕಂಗಳು ನಿನ್ನೇ ಕಾಣಲು...

ಕದ್ದು ಕದ್ದು ನಾ ನಿನ್ನ ಕಂಡಾಗ ನೀ ನನ್ನ ನೋಡಿದ ನೋಟ...
ನನ್ನ ಹೊಟ್ಟೆಯೊಳಗೆ ಬಿಟ್ಟಂತಾಗಿದೆ ರಂಗು ರಂಗಾದ ಚಿಟ್ಟೆಗಳ ಆಟ...

ಕಾದಿರುವೆ ನಿನಗಾಗಿ...
ನೀನೆಂದು ಬರುವೆ ನನಗಾಗಿ...
ಕಾದಿದೆ ನನ್ನೀ ಹೆಜ್ಜೆಗಳು ನಿನ್ನೊಡನೆ ಸಪ್ತಪದಿಯನ್ನಿಡಲು...
ಕಾದಿದೆ ನನ್ನೀ ಜೀವನ ನಿನ್ನ ಸಂಗಾತಿ ಯಾಗಲು...


ವಸಂತ ಕಾವ್ಯ

- Kavya Mari

29 Sep 2025, 10:26 am

ನನ್ನಪ್ಪ ತಂದ ಮಾವಿನ ಹಣ್ಣು

ಬೇಸಿಗೆ ರಜೆಯಲಿ ಮಾವಿನ ಸುಧೆಯಲಿ
ರುಚಿಕರ ಹಣ್ಣು ಸಿಗುತಹಲಿಹುದು.
ನನ್ನಯ ಅಪ್ಪನು ಹಣ್ಣನು ನೋಡಿ
ಬುಟ್ಟಿಯ ಹೊತ್ತು ಮನೆಯೆಡೆ ನಡೆದನು

ಹಣ್ಣನು ನೋಡಿ ಜೋಲ್ಲನು ಸುರಿಸಿ
ಚಪ್ಪರಿಸುತ್ತ ಹಣ್ಣನು ಸವಿದೆನು
ರುಚಿಕರ ಹಣ್ಣು ಗಮ ಗಮ ಹಣ್ಣು
ಎಷ್ಟು ಸವಿದರು ಆಸೆ ತೀರದ ಹಣ್ಣು

ಮಾವಿನ ಹಣ್ಣಿನ ಮಜವಿದು ನೋಡಿ
ಹೋಳಿಗೆ ಶಿಕರ್ಣಿ ಮಧುರ ಮಿಲನವ ನೋಡಿ
ಪುಟಾಣಿಗಳೆಲ್ಲ ಆಟವ ಆಡುತಾ ದಣಿವಾರಿಸಲು ಸವಿಯನು ಸವಿಯುತ ರಜೆಯನು ಕಳೆದೆವು ಅಮೃತದಿ.


- ಮೇಘಾ ಬೆಳಧಡಿ

28 Sep 2025, 12:48 am

ನನ್ನಜ್ಜಿ

ಕುದುರೆ ಏರಿ ಬಂದ ರಾಜಕುಮಾರ
ಅವನಿಗೆ ಮನಸೊತಳು ನನ್ನಜ್ಜಿ ಸರಳ
ಮದುವೆ ಸಂಸ್ಕಾರದ ಜೀವನ ನಡೆಸುತಲಿರಲು
ಬಿರುಗಾಳಿಯೇ ಬಿಸಿತೊಮ್ಮೆ ಜೀವನದ ಹಾದಿಯಲಿ.


ಊರು ಬಿಟ್ಟು ಊರಿಗೆ ನಾಲ್ಕು ಮಕ್ಕಳ
ಕಟಗೊಂಡು ಜೀವನಾ ನಡಸ್ತೀದಾಳ
ಹರಕ ಸಿರಿ ಹರಕ ಪೋಲಕಾ ತಿನ್ನಾಕ ಕೂಳಿಲ್ಲ
ಮಲಗಾಕ ಸೂರ ಇಲ್ಲ ಆದರೂ ಗಂಡೆದೆಯವಳು.

ಗಿರಣಿ ಮುಂದ ಕುಂತಾಳ ಹಿಟ್ಟ ಬೆಡ್ಯಾಳ
ತಂದ ಹಿಟ್ಟನ್ಯಾಗ ರೊಟ್ಟಿ ಮಾಡ್ಯಾಳ
ರೊಟ್ಟಿಯೊಳಗ ಅದೆಂತ ರುಚಿ ಅಂತೀರಿ
ಅಮೃತನು ಅಸುಯ್ಯಾ ಪಟ್ಕೊಳುಹಂಗಯಿತ್ತ.

ಪ್ರೀತಿ ಮಮತೆ ನೀಡ್ತಾನೆ ಮಕ್ಕಳಗೆ ಸಂಸ್ಕಾರ
ಕಲಸ್ಯಾಳ, ಮುತ್ತಿನಂತ ಮಕ್ಕಳೀಗ ಮುದಕಿನ ದುರತಳ್ಳ್ಯಾರ ಕಸರಿಲ್ಲದ ಪ್ರೀತಿಯೊಳಗ ಕಲ್ಲ ಹುಡ್ಕೊ ಮಕ್ಳಿoದ ನೋವುಂಡು ಯಮನ ಪಾದಾ ಸೆರ್ಯಾಳ.

- ಮೇಘಾ ಬೆಳಧಡಿ

28 Sep 2025, 12:07 am

- Chaitra Patil

22 Sep 2025, 06:55 pm

ಆಯುರ್ವೇದ

ಹಾಳುಗೆಡದಿರು ಮನುಜ ಮಾಣಿಕ್ಯದಂತಹ ಬದುಕನ್ನು,
ತಾಳವಿಲ್ಲದ ಜೀವಕೆ ನವೀನತೆಯ ರಂಗುಚೆಲ್ಲಿ,
ಸೃಷ್ಟಿ ಸ್ಥಿತಿಗತಿಯ ಮರೆತೆಯೇನು?
ಸಸ್ಯ ಸಂಕುಲವ ತೊಳಿದು ನೀನು!
ದೇವ ಧನ್ವಂತರಿಯ ವರಪ್ರಸಾದವಿದು
ಆಚಾರ್ಯ ಚರಕರಿಂದ ಬಂದ ಬಳುವಳಿಯು ಇದುವು.
ಜೀವಸಂಕುಲಕೆ ಪರಮ ಅಮೃತವು ಇದುವು
ನವ ನವೀನತೆಯ ಲೇಪಹಾಕಿ ಹೊಸಿದು ಹಾಕದಿರು ಮನುಜ.
ಪರಂಪರಗತವಾಗಿ ಬಂದ ನಮ್ಮ ಈ ಸಂಸ್ಕೃತಿಯ,
ಜೀವ ಜ್ಯೋತಿ ಬೆಳಗುವ ಈ ಆಯುರ್ವೇದವ.
- ಶ್ರೀದೇವಿ ಉದಯ್ ಆತ್ರಾಡಿ

- Shridevi

20 Sep 2025, 06:26 am