Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಲಂಚ

ಹಣ್ಣು ಕಾಯಿ
ಹೋಳಿಗೆ ತುಪ್ಪ
ಹೂವು ಕಡ್ಡಿ
ಗಂಧದ ಕಡ್ಡಿ
ಒಡವೆ ವೈಢೂರ್ಯ
ಬಂಗಾರದ ಒಡವೆ
ಕಾಸು ಗಿಸು
ಚಿಲ್ಲರೆ ನೋಟು
ಲಂಚ ಗಿಂಚ
ಮಂಚ ಇಲ್ಲದೆ
ಒಲಿಯುವುದಿಲ್ಲ
ಚಿತ್ರ ವಿಚಿತ್ರವಾದ
ಗೊಂಬೆ ದೇವರು
ಲಂಚ ಗಿಂಚ
ಮಂಚ ಕೊಟ್ಟರೆ
ಒಲಿಯುವುದೇ
ಕಳ್ಳ ದೇವರು
ಲಂಚ ದೇವರು

ಹಣ್ಣು ಕಾಯಿ ಇಲ್ಲದೆ
ದೇವರು ಒಲಿಯುವುದಿಲ್ಲ
ಚಿಲ್ಲರೆ ದಕ್ಷಿಣೆ ಇಲ್ಲಿದೆ
ಪೂಜೆ ಪುನಸ್ಕಾರವಿಲ್ಲ
ಲಂಚ ಮಂಚವಿಲ್ಲದೆ
ಅಧಿಕಾರವಿಲ್ಲ

- ರಾಜು ಹಾಸನ

07 Dec 2020, 02:13 pm

ಕಿಲಾಡಿ ದೇವರು

ದೇವರು ದೇವರು
ಇದು ಎಂತಾ ಯಾವ
ಸೀಮೆಯ ದೇವರೋ
ಆರು ಮೂರು ಕಾಸಿಗೆ
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ ಎನ್ನದೇ
ದುಡಿದು ಕೂಡಿಟ್ಟು
ಮುಚ್ಚಿಟ್ಟು ಅಡವಿಟ್ಟು
ಮಾಡುವರಯ್ಯ
ಹತ್ತಾರು ಕಾಸಿನ
ಮನೆ ಮುರುಕ
ದೇವರ ಹಬ್ಬ

ನೀ ಎಷ್ಟೇ ಏನೇ
ಜಾತ್ರೆ ಪಾತ್ರೆ
ಹಬ್ಬ ಹರಿದಿನ
ಮಾಡಿದರು
ಬರುವುದಿಲ್ಲ
ಬಂದು ಕಟ್ಟುವುದಿಲ್ಲ
ನಿನಗೊಂದು ಗುಡಿ
ನೀನೇ ದುಡಿದು
ಕಟ್ಟಬೇಕು
ಗುಡಿಯ ಮೇಲೆ ಗುಡಿ
ದೇವರಿಗೊಂದು
ದೇವರ ಗುಡಿ

ಬಿದ್ದು ಬೆಡಿದರು
ಉರುಳಿ ಹೊರಳಾಡಿ
ಜಪ ತಪ ಮಾಡಿ
ಉಪವಾಸ ಬಿದ್ದರು
ತುಂಬುವುದಿಲ್ಲ
ನಿನ್ನ ಜೇಬು ಚಡ್ಡಿ ಜೇಬು
ನೀನೇ ತುಂಬಿಸಬೇಕು
ಕೂಲಿ ನಾಲಿ ಮಾಡಿ
ದೇವರ ಮುಂದಿನ
ದೇವರ ಹುಂಡಿ

ಹೇಳಿ ಕೇಳಿ ಬಂದು
ಕೊಡುವುದಿಲ್ಲ
ಕುಡಿಯಲು ತಿನ್ನಲು
ಅನ್ನ ನೀರು ಹಣ್ಣು
ನೀನೇ ಹೋಗಿ
ಕೊಡಬೇಕು
ದೇವರಿಗೆ ಹಣ್ಣು
ಕಾಯಿ ನೀರು

ಬೆಳಗು ಬಾ
ಬೆಳಗು ಬಾ
ನನ್ನ ಮನೆ
ಮಠವಾ ತೊಳೆದು
ಹಚ್ಚು ಬಾ ದೀಪ
ಎಂದರು ಅಂದರು
ಬಂದು ಹಚ್ಚುವುದಿಲ್ಲ
ನಿನ್ನ ಮನೆಯ ದೀಪ
ನೀನೇ ಹೋಗಿ
ತೊಳೆದು ಹಚ್ಚಬೇಕು
ದೇವರ ಮನೆಯ ದೀಪ
ದೇವರು ದೇವರು
ಇದು ಯಾವ ಎಂತಾ
ಸೀಮೆಯ ದೇವರೋ

- ರಾಜು ಹಾಸನ

07 Dec 2020, 08:46 am

ವರ್ಣನೆ

ಮುಸ್ಸಂಜೆ ಮಬ್ಬಿನಲಿ
ನಲ್ಲನ ನೆನೆಯುತ
ಕುಂತಿಹಳು ನಲ್ಲೆ ಮೇಜಿನಲಿ
ಕಾರ್ಗತ್ತಲಲಿ ಹೋಳೆವ
ಚುಕ್ಕಿ ಚಂದ್ರಮನಂತೆ
ನೈಜ ಪ್ರಪಂಚವ ಮರೆಮಾಚಿ
ಗಲ್ಲಕೆ ಕೈಯನ್ನೂರುಗೋಲಾಗಿಸಿ

ಮನದನ್ನನ ಜೊತೆಗೂಡಿ ಹಾಡಿ ಪಾಡಿ ವಿಹರಿಸುತ್ತಿಹಳು ಮನದನ್ನೆ
ಸಹಸ್ರ ಕನಸ್ಸುಗಳ ಲೋಕದಿ
ಕಲ್ಪನೆಯ ಭ್ರಮರವನ್ನೇರಿ

ಪ್ರಿಯ ಕರನ ನೆನಪುಗಳು
ರಂಗೀರಿಸಿವೆ ಮಬ್ಬುಗತ್ತಲೊಳಗೆ
ಪ್ರಿಯತಮೆಯ ವದಕ್ಕೆ
ನಭದಿ ಹಾಲ್ಗರೆವ ಚಂದ್ರಮನಂತೆ

- HarishKumarm

06 Dec 2020, 06:42 pm

ರಂಗ ಕಲಾವಿದ

ಹೊಸಬಣ್ಣ ಹಳೆ ರೂಪಗಳ ಹೊದ್ದು
ಸೂತ್ರಧಾರನು ಆಡಿಸುವ ನಾಟಕಗಳ
ಆಳ ಅಗಲಕ್ಕಿಳಿದು ಆಟವ ಆಡುವ
ರಂಗ ಕಲಾವಿದನೆ ನಿನಗೆ ಶರಣಯ್ಯ

ಬದುಕು ಕಟ್ಟಲು ಜಗವನು ನಗಿಸುವೆ
ಒಮ್ಮೊಮ್ಮೆ ಕಣ್ಣೀರ ಹರಿವಂತೆಯು
ಸುರ ಅಸುರರ ಪಾತ್ರಗಳ ನಿರ್ವಹಿಸಿ
ಬದುಕಿನಲಿ ನೈಜತೆಯ ಮೆರೆದಿರುವೆ

ಹುಟ್ಟು ಸಾವ ಗೆದ್ದು ಬಂದ ದೊರೆ
ಒಂದು ದೇಹದ ವಿವಿದ ಪಾತ್ರಧಾರಿ
ಆಳು ಅರಸ ನವರಸಗಳ ನಾಯಕ
ಅದೆಷ್ಟು ಹೊಗಳಿದರು ಕಡಿಮೆ ನಿನಗೆ

ಆದರೂ ಒಂದೋತ್ತಿನ ಊಟಕ್ಕಾಗಿ ಪರದಾಡಿ ಕಾಡಿ ಬೇಡಿ ಅಭಿನಯಿಸಿ
ಕೈ ಮುಗಿದು ಸಂಸಾರದ ತೇರೆಳೆದು
ಜೀವನದ ನೌಕೆಯನ್ನು ನುಕುತಿರುವೆ

ಕೋರೋಣ ಮಹಾಮಾರಿಯಿಂದಾಗಿ
ಕಂಗಾಲಾಗಿ ಜೀವನವ ಗಟ್ಟಿ ಮಾಡಿ
ಹೊಲ ಗದ್ದೆ ಗಳಲಿ ದುಡಿದು ಉಂಡ
ಸಾಕಾರ ಮೂರ್ತಿಯೇ ನಿನಗೆ ಶರಣು

ಕಲ್ಮೇಶ ಬಡಿಗೇರ
......... ಬದಾಮಿ......

- Kalmesh Badiger

06 Dec 2020, 04:46 pm

ಮಹಾ ಪರಿನಿರ್ವಾಣ ದಿನ

ಇಡೀ ಜಗತ್ತೇ
ತಲೆ ತಗ್ಗಿಸಿ ಬಗ್ಗಿಸಿ
ಕಂಬನಿ ಮಿಡಿದ ದಿನ
ಬಡವ ಬಲ್ಲಿದ ಸ್ತ್ರೀ
ಶೋಷಿತ ಮಕ್ಕಳು
ಕಂಗೆಟ್ಟು ದಿಕ್ಕೆಟ್ಟು
ಗೊಳಾಡಿ ಮರುಗಿ
ಕಣ್ಣೀರಿಟ್ಟ ದಿನ
ಮಾನವ ಕುಲಕ್ಕೆ
ಬರಸಿಡಿಲು ಬಡಿದು
ಕಾರ್ಮೋಡವೇ
ಆವರಿಸಿದ ದಿನ
ಮಹಾ ಸಾಗರದಂತೆ
ಜನ ಸಾಗರವೇ
ತುಂಬಿ ತುಳುಕಿ
ಉಕ್ಕಿ ಹರಿದು
ಬಂದ ದಿನ
ನಮ್ಮ ನಿಮ್ಮೆಲ್ಲರ
ಜೀವಾ ಜೀವನದ
ಜೀವನಾಡಿ ಮಿಡಿತ
ದೀನ ದಲಿತರ
ನಾಯಕ ಬಂಧು
ಮಹಾ ನಾಯಕ
ನನ್ನ ಒಡಯ
ಬಾಬಾ ಸಾಹೇಬ್ ರ
ಪರಿನಿರ್ವಾಣ ದಿನ

- ರಾಜು ಹಾಸನ

06 Dec 2020, 12:59 pm

ಮೊದಲು ಮಾನವನಾಗು

ಹುಟ್ಟಿ ಬೆಳೆದು ಆಟವಾಡಿ
ಕುಡಿದು ತಿಂದು ಸೇವಿಸಿ
ಸತ್ತು ಸಮಾಧಿಯಾಗುವುದು
ಒಂದೇ ನೆಲದ ಜಲ
ಗಾಳಿ ಅನ್ನವಾದರು
ಭಿನ್ನ ಬಿಂಕ್ಕಣ ಯಾಕೆ
ಜಾತಿ ಧರ್ಮದ ಮಾದ ಯಾಕೆ
ಮೇಲು ಕೀಳಿನ ಅಂತರ ಯಾಕೆ
ಬಡವ ಶ್ರೀಮಂತನ ತಾರತಮ್ಯ ಯಾಕೆ
ಗಂಡು ಹೆಣ್ಣಿನ ಧೋರಣೆ ಯಾಕೆ
ಎಲ್ಲಾ ಬಿಟ್ಟು ಎಲ್ಲಾ ತೊರೆದು
ಮೊದಲು ಮಾನವನಾಗು

- ರಾಜು ಹಾಸನ

06 Dec 2020, 09:13 am

ಮೂರ್ಖತನ

ಹಾದಿ ಬೀದಿ
ಊರು ಕೇರಿ
ಜಾತಿ ಜನಾಂಗ
ಮತ ಧರ್ಮದ
ನೂರೆಂಟು
ಸಾವಿರಾರು
ಮುಕ್ಕೋಟಿ
ದೇವರುಗಳಿದ್ದರು
ಕಟ್ಟಿ ಕೊಡುವುದಿಲ್ಲ
ನಿನ್ನಗೆ ಮನೆ ಮಠ
ಸೂರು ನೀರು
ಬದುಕು ಬಾಳು
ಆದರೂ ನಿಂತಿಲ್ಲ
ಕಲ್ಲು ಕಂಬವ
ದೇವರೆಂದು
ಪೂಜಿಸುವುದು
ಇದು ಎಂತಹ
ಮೂರ್ಖತನವೋ


ನಿನ್ನಂತೆ ನೀ
ನಿನ್ನ ಇಷ್ಟಕ್ಕೆ ನೀ
ಬದುಕಿ ಬಾಳಲು
ಸೂರು ನೀರು
ಮನೆ ಮಠ
ಕಟ್ಟಿ ಕೊಟ್ಟಿದ್ದು
ಗುಡಿಯೊಳಗಿನ
ಕಲ್ಲ ಕಂಬವಲ್ಲ
ಬಾಬಾ ಸಾಹೇಬ್ ರು
ಬರೆದ ಸಂವಿಧಾನ
******ರಾಜು ಹಾಸನ******

- ರಾಜು ಹಾಸನ

05 Dec 2020, 11:57 pm

ಚೆಂದಾಮಾಮ

ಸದ್ದಿಲ್ಲದೆ ಬಾನಂಗಳದಲಿ ಉದಯಿಸುವನು ರವಿಮಾಮ
ಮುತ್ತಿನಚೆಂಡಿನಂತೆ ಹೊಳೆತಿಹನು ರವಿತೇಜ !

ಮೇಲೆರುತ ಜಗಕೆ ಬೆಳಕನು ಮೊಡಗಳ ಮರೆಯಲಿ ನಾಚುತ ನಯನದಿ ಉತ್ತುಂಗಕ್ಕೆರುವನು ಮನ್ಮತರಾಜ !

ನಲಿಯುವ ಮಕ್ಕಳಿಗೆ ಚಂದಾಮಾಮನಾಗಿ ಎಷ್ಟು ದೂರಹೋದರೂ ನನ್ನ ಜೊತೆಗೆ ಬಂದಂತೆ ಭಾಸವಾಗುವ ಮಂದಹಾಸದಕಣಜ !

ನೆಸರದಲಿ ಇಳಯರಾಜ ಕುಮಾರನಾಗಿ ಹುಣ್ಣುಮೆಯ ದಿನ ಜಗಜಗಿಯವ ಜಗದೆಕಮಲ್ಲನಾಗಿ ಬೆಳಕನು ಪ್ರತಿಬಿಂಬಿಸುವ ಮದಗಜ !

ಯಲ್ಲಪ್ಪ ಎಸ್ ಮನ್ನಿಕಟ್ಟಿ
೯೫೯೧೨೦೦೦೪೨
........ಗುಳೇದಗುಡ್ಡ....

- Guru

05 Dec 2020, 04:26 pm

ಮುಗ್ಧರು

ನಿನ್ನ ಕಾಯುವುದು
ಗುಡಿಯೊಳಗಿನ
ಕಲ್ಲು ಕಂಬದ
ಮರದ ದಿಮ್ಮಿಯ
ಮಣ್ಣು ಮುದ್ದೆಯ
ಗೊಂಬೆ ದೇವರಲ್ಲ
ಬಾಬಾ ಸಾಹೇಬರು
ಬರೆದ ಸಂವಿಧಾನ
ಅವರೆ ನಮ್ಮ
ನಿಮ್ಮ ದೇವರು
ತಿಳಿದು ಬಾಳಿರಿ
ಮುಗ್ಧ ಮನಸಿನ
ಮುಗ್ಧ ಜನಗಳೇ
ವಿಶ್ವ ಮಾನವರೇ
******ರಾಜು ಹಾಸನ******

- ರಾಜು ಹಾಸನ

05 Dec 2020, 12:00 am

ಭೀಮ್ ರಾವ್

ಜಂಬ ಗಿಂಬ ಬೇಡ
ಅಹಂಕಾರ ಅಹಂ ಬೇಡ
ಹುಟ್ಟಿ ಸಾಯಬೇಕು
ಬದುಕಬೇಕು ಬಾಳಬೇಕು
ಸಂವಿಧಾನದ ಸೂರಿನಡಿ
ಬಾಬಾ ಸಾಹೇಬ್ ರ ಪಾದದಡಿ

ಯಾರೇ ಏನೇ ಎಷ್ಟೇ
ಸಂಪಾದನೆ ಮೇಲೆ
ಸಂಪಾದನೆ
ಮನೆ ಮೇಲೆ ಮನೆ
ಸಿರಿ ಸಂಪತ್ತಿನ ಮೇಲೆ
ಸಿರಿ ಸಂಪತ್ತು
ಕೂಡಿಟ್ಟು ಬಚ್ಚಿಟ್ಟು
ಹುತ್ತಿಟ್ಟು ಮುಚ್ಚಿಟ್ಟು
ಸಿರಿವಂತನಾದರು
ಬಾಬಾ ಸಾಹೇಬ್ ರ
ಕಾಲ ಧೂಳಿಗು
ಸರಿ ಸಮ ಯಾರು ಇಲ್ಲ
ಇಂದು ಇಲ್ಲ ಮುಂದೆನೂ
ಹುಟ್ಟಿ ಬರೋದು ಇಲ್ಲ

- ರಾಜು ಹಾಸನ

04 Dec 2020, 11:24 pm