Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೊದಲು ಮಾನವನಾಗು

ಹುಟ್ಟಿ ಬೆಳೆದು ಆಟವಾಡಿ
ಕುಡಿದು ತಿಂದು ಸೇವಿಸಿ
ಸತ್ತು ಸಮಾಧಿಯಾಗುವುದು
ಒಂದೇ ನೆಲದ ಜಲ
ಗಾಳಿ ಅನ್ನವಾದರು
ಭಿನ್ನ ಬಿಂಕ್ಕಣ ಯಾಕೆ
ಜಾತಿ ಧರ್ಮದ ಮಾದ ಯಾಕೆ
ಮೇಲು ಕೀಳಿನ ಅಂತರ ಯಾಕೆ
ಬಡವ ಶ್ರೀಮಂತನ ತಾರತಮ್ಯ ಯಾಕೆ
ಗಂಡು ಹೆಣ್ಣಿನ ಧೋರಣೆ ಯಾಕೆ
ಎಲ್ಲಾ ಬಿಟ್ಟು ಎಲ್ಲಾ ತೊರೆದು
ಮೊದಲು ಮಾನವನಾಗು

- ರಾಜು ಹಾಸನ

06 Dec 2020, 09:13 am

ಮೂರ್ಖತನ

ಹಾದಿ ಬೀದಿ
ಊರು ಕೇರಿ
ಜಾತಿ ಜನಾಂಗ
ಮತ ಧರ್ಮದ
ನೂರೆಂಟು
ಸಾವಿರಾರು
ಮುಕ್ಕೋಟಿ
ದೇವರುಗಳಿದ್ದರು
ಕಟ್ಟಿ ಕೊಡುವುದಿಲ್ಲ
ನಿನ್ನಗೆ ಮನೆ ಮಠ
ಸೂರು ನೀರು
ಬದುಕು ಬಾಳು
ಆದರೂ ನಿಂತಿಲ್ಲ
ಕಲ್ಲು ಕಂಬವ
ದೇವರೆಂದು
ಪೂಜಿಸುವುದು
ಇದು ಎಂತಹ
ಮೂರ್ಖತನವೋ


ನಿನ್ನಂತೆ ನೀ
ನಿನ್ನ ಇಷ್ಟಕ್ಕೆ ನೀ
ಬದುಕಿ ಬಾಳಲು
ಸೂರು ನೀರು
ಮನೆ ಮಠ
ಕಟ್ಟಿ ಕೊಟ್ಟಿದ್ದು
ಗುಡಿಯೊಳಗಿನ
ಕಲ್ಲ ಕಂಬವಲ್ಲ
ಬಾಬಾ ಸಾಹೇಬ್ ರು
ಬರೆದ ಸಂವಿಧಾನ
******ರಾಜು ಹಾಸನ******

- ರಾಜು ಹಾಸನ

05 Dec 2020, 11:57 pm

ಚೆಂದಾಮಾಮ

ಸದ್ದಿಲ್ಲದೆ ಬಾನಂಗಳದಲಿ ಉದಯಿಸುವನು ರವಿಮಾಮ
ಮುತ್ತಿನಚೆಂಡಿನಂತೆ ಹೊಳೆತಿಹನು ರವಿತೇಜ !

ಮೇಲೆರುತ ಜಗಕೆ ಬೆಳಕನು ಮೊಡಗಳ ಮರೆಯಲಿ ನಾಚುತ ನಯನದಿ ಉತ್ತುಂಗಕ್ಕೆರುವನು ಮನ್ಮತರಾಜ !

ನಲಿಯುವ ಮಕ್ಕಳಿಗೆ ಚಂದಾಮಾಮನಾಗಿ ಎಷ್ಟು ದೂರಹೋದರೂ ನನ್ನ ಜೊತೆಗೆ ಬಂದಂತೆ ಭಾಸವಾಗುವ ಮಂದಹಾಸದಕಣಜ !

ನೆಸರದಲಿ ಇಳಯರಾಜ ಕುಮಾರನಾಗಿ ಹುಣ್ಣುಮೆಯ ದಿನ ಜಗಜಗಿಯವ ಜಗದೆಕಮಲ್ಲನಾಗಿ ಬೆಳಕನು ಪ್ರತಿಬಿಂಬಿಸುವ ಮದಗಜ !

ಯಲ್ಲಪ್ಪ ಎಸ್ ಮನ್ನಿಕಟ್ಟಿ
೯೫೯೧೨೦೦೦೪೨
........ಗುಳೇದಗುಡ್ಡ....

- Guru

05 Dec 2020, 04:26 pm

ಮುಗ್ಧರು

ನಿನ್ನ ಕಾಯುವುದು
ಗುಡಿಯೊಳಗಿನ
ಕಲ್ಲು ಕಂಬದ
ಮರದ ದಿಮ್ಮಿಯ
ಮಣ್ಣು ಮುದ್ದೆಯ
ಗೊಂಬೆ ದೇವರಲ್ಲ
ಬಾಬಾ ಸಾಹೇಬರು
ಬರೆದ ಸಂವಿಧಾನ
ಅವರೆ ನಮ್ಮ
ನಿಮ್ಮ ದೇವರು
ತಿಳಿದು ಬಾಳಿರಿ
ಮುಗ್ಧ ಮನಸಿನ
ಮುಗ್ಧ ಜನಗಳೇ
ವಿಶ್ವ ಮಾನವರೇ
******ರಾಜು ಹಾಸನ******

- ರಾಜು ಹಾಸನ

05 Dec 2020, 12:00 am

ಭೀಮ್ ರಾವ್

ಜಂಬ ಗಿಂಬ ಬೇಡ
ಅಹಂಕಾರ ಅಹಂ ಬೇಡ
ಹುಟ್ಟಿ ಸಾಯಬೇಕು
ಬದುಕಬೇಕು ಬಾಳಬೇಕು
ಸಂವಿಧಾನದ ಸೂರಿನಡಿ
ಬಾಬಾ ಸಾಹೇಬ್ ರ ಪಾದದಡಿ

ಯಾರೇ ಏನೇ ಎಷ್ಟೇ
ಸಂಪಾದನೆ ಮೇಲೆ
ಸಂಪಾದನೆ
ಮನೆ ಮೇಲೆ ಮನೆ
ಸಿರಿ ಸಂಪತ್ತಿನ ಮೇಲೆ
ಸಿರಿ ಸಂಪತ್ತು
ಕೂಡಿಟ್ಟು ಬಚ್ಚಿಟ್ಟು
ಹುತ್ತಿಟ್ಟು ಮುಚ್ಚಿಟ್ಟು
ಸಿರಿವಂತನಾದರು
ಬಾಬಾ ಸಾಹೇಬ್ ರ
ಕಾಲ ಧೂಳಿಗು
ಸರಿ ಸಮ ಯಾರು ಇಲ್ಲ
ಇಂದು ಇಲ್ಲ ಮುಂದೆನೂ
ಹುಟ್ಟಿ ಬರೋದು ಇಲ್ಲ

- ರಾಜು ಹಾಸನ

04 Dec 2020, 11:24 pm

ಅಂಚೆ ಪೆಟ್ಟಿಗೆ

ಕಾಲ ಕಾಲಕ್ಕೆ ಸುದ್ದಿಯ ಕೊಡುತ್ತಲಿ
ತನ್ನೊಳಗೆ ಒಂದು ರಹಸ್ಯವ ಹೊತ್ತು
ದೂರದ ತಂದೆ ತಾಯಿಗೆ ನೆನಪಿಸಿದೆ
ಸ್ನೇಹ ಪ್ರೀತಿಯ ಓಲೆಯ ಒದಗಿಸಿದೆ

ಹಳ್ಳಿಯ ಜನರಿಗೆ ದೇವರೆ ನೀ ಆಗಿ
ರೈತನ ಜೊತೆಗೆ ನಿನ್ನಯ ಪೂಜಿಸಿ
ಮಳೆ ಚಳಿ ಬಿಸಿಲು ಗಾಳಿಗೆ ಹೆದರದೆ
ಮೈಯ್ಯನು ಒಡ್ಡಿ ಹೆದರದೆ ನಿಂತೆ

ಜನನ ಹಬ್ಬ ಹರಿದಿನಗಳ ತಿಳಿಸುತ್ತಾ
ಕಥೆ ಕವನ ಪುಸ್ತಕಗಳ ಒದಗಿಸುತ್ತಾ
ಪತ್ರಿಕೆ ಕಾಂಚಾಣ ಜನರಿಗೆ ನೀಡುತ್ತಾ
ಜಗದಲಿ ನೀನೆ ಮಹಾನಾಯಕ ನಾದೆ

ವೃದ್ದರಿಗೆಲ್ಲ ಪಿಂಚಣಿ ಒದಗಿಸುತ್ತಾ
ಅಂಗವಿಕಲರಿಗೆ ಜೀವನ ನೀಡುತ್ತಾ
ವಿಧವೆಯರ ಬಾಳಿಗೆ ದೀಪವು ಆದೆ
ಆಶಾಜ್ಯೋತಿ ಯೆ ಆಗಿರುವೆ ನೀನು

ಕೇಸರಿ ಇಂದಾ ಕೆಂಪಾಗಿರುವೆ ನೀನು
ಕಾಲನ ಹೊಡೆತಕ್ಕೆ ಮಂಕಾಗಿರುವೆ
ಮತ್ತೆ ಪುಟಿದೇಳು ಮೊದಲಿನ ಹಾಗೆ
ಅಂಚೆ ಪೆಟ್ಟಿಗೆ ಜನ ನೆನೆವರು ನಿನ್ನ

ಕಲ್ಮೇಶ ಬಡಿಗೇರ
೯೭೪೩೫೩೯೬೫೭
.......ಬಾದಾಮಿ.......

- Kalmesh Badiger

04 Dec 2020, 05:27 pm

ಹಳ್ಳಿ ಹಬ್ಬ

ಇದು ಏನು ದೇವರು
ಇದು ಎಂತಾ ದೇವರು
ಹಣ್ಣು ಕಾಯಿ
ಮುರಿದು ಹೊಡೆದು
ಕೊಟ್ಟರು ತಿನ್ನದ
ಮೂಸಿ ನೋಡದ ದೇವರು
ಕುರಿ ಕೋಳಿ ಹಂದಿ
ಎಮ್ಮೆಯ ಬಲಿ ಕೊಟ್ಟರೆ
ಕುಡಿದು ತಿನ್ನುವುದೇ
ಕುರಿ ಕೋಳಿ ಹಂದಿ
ಎಮ್ಮೆಯ ಮಾಂಸರಕ್ತ
ಕೂಗಿ ಗೋಗರೆದು
ಬೆಂಕಿ ಕೆಂಡವಾ
ತುಳಿದು ನೆಡೆದರು
ಗುಡಿಯ ಸುತ್ತ
ಬಿದ್ದು ಹೊರಳಾಡಿ
ತಲೆ ಚಚ್ಚಿ ಬೇಡಿದರು
ಬಾರದ ದೇವರು
ತಮಟೆ ಪೀಪಿ ಸದ್ದಿಗೆ
ವಾಲಾಡಿ ತೇಲಾಡಿ
ಕುಣಿದು ಕುಪ್ಪಳಿಸಿ
ಬೊಬ್ಬೆ ಹೊಡೆದು
ಕೇಕೆ ಹಾಕಿ ಬರುವುದು
ಜನರ ಮೈ ಮೇಲೆ
ಇದು ಏನು ದೇವರು
ಇದು ಎಂತಾ ದೇವರು
*******ರಾಜು ಹಾಸನ*******

- ರಾಜು ಹಾಸನ

03 Dec 2020, 11:35 pm

ಎಲ್ಲಿದೆ ಸ್ವರ್ಗ.....

ಎಲ್ಲಿದೆ ಸ್ವರ್ಗ.......
ಎಲ್ಲಿದೆ ಸ್ವರ್ಗ ಎಂಬುದು ನಿಗೂಢ
ಈ ಪರಿಕಲ್ಪನೆಯೇ ಒಂದು ಪವಾಡ
ಪುರಾವೆ ಇಲ್ಲದ ಸಮಾಚಾರ
ಕಲ್ಪನೆಗೂ ಮೀರಿದ ವಿಚಾರ

ನನಗನಿಸುವ ಪ್ರಕಾರ
ಸ್ವರ್ಗವು ಇರುವುದು
ಈ ಸುಂದರ ಜಗದಲ್ಲಿ
ರಮ್ಯ ಮನೋಹರ ಪ್ರಕೃತಿಯಲ್ಲಿ

ಕಾಣದ ಅಪ್ಸರೆಯರ
ಹುಡುಕುವ ಬದಲು
ನಾವೇ ಅಪ್ಸರೆಯರು
ಆಗಲು ಬಹುದು

ಕಾಮ ಕ್ರೋಧಗಳ ಬಿಟ್ಟರೆ ನಾವು
ದೇವರುಗಳು ನಾವೇ ಆಗುವೆವು
ಸನ್ಮಾರ್ಗದಲಿ ನಡೆದರೆ ನಾವು
ನೀರೂ ಅಮೃತವಾಗುವುದು

ಸ್ವರ್ಗವು ಬೇರೆ ಎಲ್ಲೂ ಇಲ್ಲ
ಈ ಧರೆಯಲ್ಲಿಯೇ ಇರುವುದು
ಸ್ವರ್ಗವ ಸೃಷ್ಠಿಯುವವರು ನಾವೇ
ಅಲ್ಲಿರಲು ಇಚ್ಚಿಸುವವರೂ ನಾವೇ

ಸೃಷ್ಟಿಸುತಾ ಸ್ವರ್ಗವ ಈ ಧರೆಯಲ್ಲಿ
ಬಾಳುವ ನಾವು ಸಂತಸದಲ್ಲಿ
ಮಾನವ ಜೀವನ ಪವಿತ್ರವಾದದು
ಮರೆಯಬಾರದು ನಾವು ಇದನು

ಸಮುಖ

- sabitha

03 Dec 2020, 02:55 pm

ನೆನಪಿರಲಿ

ಬರಬೇಡಿ ಬರಬೇಡಿ
ಸಂವಿಧಾನದ ತಂಟೆ
ಸುದ್ದಿಗೆ ಬರಬೇಡಿ
ಕೆಣಕಬೇಡಿ ಕೆಣಕಬೇಡಿ
ಮಾದ ಗಜಗಳ ಕೆಣಕಿ
ಧೂಳಿಪಟವಾಗಬೇಡಿ
ಸುಮ್ಮ್ ಸುಮ್ಮನೆ
ಕಾಲು ಕೆರೆದು ಬಂದರೆ
ಬಡಿದಪ್ಪಳಿಸುವುದು
ಮಾದ ಗಜಗಳ ಬರಸಿಡಿಲು
ಎಚ್ಚರ ಎಚ್ಚರವಿರಲಿ
ಸಂವಿಧಾನ ಮುಟ್ಟುವ
ಮನುವಾದಿಗಳಿಗೆ
ಸಿಂಹ ಸ್ವಪ್ನದ ಭಯವಿರಲಿ
ಭೀಮ ಘರ್ಜನೆಯ
ನೆನಪಿರಲಿ ನೆನಪಿರಲಿ
*********ರಾಜು ಹಾಸನ********

- ರಾಜು ಹಾಸನ

03 Dec 2020, 01:35 pm

ಧರ್ಮ ಗ್ರಂಥ

ದ್ವೇಷ ಅಸೂಯೆ
ಮಾದ ಮತ್ಸರ ತಾರತಮ್ಯ
ಅಧರ್ಮ ಅನ್ಯಾಯವೇ
ತುಂಬಿ ತುಳುಕುವ
ಕಟ್ಟು ಕಥೆಗಳ
ಚಿತ್ರ ವಿಚಿತ್ರವಾದ
ಪುಂಗಿ ಪುರಾಣಗಳೇ
ಮನುವಾದಿಗಳ
ಜಾತಿ ಧರ್ಮದ
ಗ್ರಂಥಗಳದರೆ

ಸ್ನೇಹ ಪ್ರೀತಿ ವಾತ್ಸಲ್ಯ
ಮಮತೆ ಸಮಾನತೆ
ನ್ಯಾಯ ನೀತಿ
ಧರ್ಮ ಪಾಠ ಕಲಿಸಿ
ಅನ್ಯಾಯ ಮೆಟ್ಟಿ
ನಿಂತು ಧೈರ್ಯದ
ಕಿಡಿ ಹೊತ್ತಿಸಿ
ಜ್ಞಾನ ದಿವ್ಯಜ್ಯೋತಿ
ಬೆಳಕು ಚೆಲ್ಲಿ
ಸ್ತ್ರೀ ಶೋಷಿತರ
ಬಡವ ಬಲ್ಲಿದರ
ರಕ್ಷಿಸಿದ ರಕ್ಷ ಕವಚ
ವಿಶ್ವದ ಏಕೈಕ ಗ್ರಂಥ
ಮಾನವ ಧರ್ಮ ಗ್ರಂಥ
ಬಾಬಾಸಾಹೇಬರು
ರಚಿಸಿದ ನಮ್ಮ ನಿಮ್ಮೆಲ್ಲರ
ಹೆಮ್ಮೆಯ ಧರ್ಮ ಗ್ರಂಥ
ಭಾರತದ ಸಂವಿಧಾನ

- ರಾಜು ಹಾಸನ

03 Dec 2020, 12:52 pm