Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೀವನಕ್ಕೊಂದು ಪಾಠ

ಪ್ರೀತಿ ಪ್ರೇಮದ ಚಿಟ್ಟೆ
ಹಾರಿ ಹೋಯಿತು ಬಿಟ್ಟು
ಪ್ರೀತಿ ಪ್ರೇಮವ ಕೊಟ್ಟು
ಮನಸಿಗೆ ಮನಸು ಕೊಟ್ಟು
ಹೃದಯಕ್ಕೆ ಹೃದಯ ಕೊಟ್ಟು
ಕಣ್ಣ್ ಗಳಿಗೆ ಕನಸು ಕಟ್ಟಿ
ಸಾವಿರಾರು ಆಸೆ ಇಟ್ಟು
ಬಿಟ್ಟು ಹೊರಟಿತ್ತು ಮರೆತು
ಎದೆಯಲ್ಲಿನಾ ಪ್ರೀತಿ
ಪ್ರೇಮವ ಉಳಿಸಿ ಬೆಳಸಿ
ಹೃದಯದ ಬಡಿತ ಹೆಚ್ಚಿಸಿ
ನನ್ನೆದೆಯೊಳಗಿನ ಪ್ರೀತಿ ಪ್ರೇಮವ
ಕೊಂದು ಸಾಯಿಸಿತು
ಬಿಟ್ಟು ಹೊರಟಿತ್ತು ಉಸಿರು ನಿಲ್ಲಿಸಿ
ಪ್ರೀತಿ ಪ್ರೇಮದ ಚಿಟ್ಟೆ
ಅಂತೂ ಇಂತೂ ಬಂದು
ಆಟವಾಡಿ ನಾಟಕವಾಡಿ
ಕಲಿಸಿತು ಜೀವನಕ್ಕೊಂದು ಪಾಠ

- ರಾಜು ಹಾಸನ

04 Jan 2021, 11:38 am

ದೀನ ದಲಿತರು

ಜಾತಿ ಧರ್ಮ
ಮೇಲು ಕೀಳು
ಮನುವಾದಿಗಳ
ಶೋಷಣೆಯ
ದ್ವೇಷಸುವುದರ
ಜೊತೆ ಜೊತೆಯಲಿ
ವಿದ್ಯೆ ಕಲಿತು
ಶಿಕ್ಷಿತರಾಗಿ
ಎಲ್ಲಾರು ಒಗ್ಗುಡಿ
ಸಂಘ ಸಂಘಟನೆ
ಕಟ್ಟಿಕೊಂಡು
ಹೋರಾಟ ನಡೆಸಿ
ಮುನ್ನೆಡೆದು
ದುಡಿದು ಮುಗಿಲೆತ್ತರಕ್ಕೆ
ಬೆಳೆದು ನಿಂತರೆ ಬೆಲೆ
ಇಲ್ಲದಿದ್ದರೆ ಬೆಲೆಯು ಇಲ್ಲ
ನೆಲೆಯು ಇಲ್ಲ
ಕಲೆ ಕಲೆ ಕಲೆ
ನಮ್ಮ ಬದುಕೇ
ಕೊಲೆ ಕೊಲೆ ಕೊಲೇ

- ರಾಜು ಹಾಸನ

02 Jan 2021, 11:56 pm

ಪ್ರೇಯಸಿ

ಆಸೆಗಳೇ ಇಲ್ಲದ
ಮರದ ಗೂಡಿಗೆ
ಬಂದಿತು ಹಕ್ಕಿಯು
ತಂದು ಕಟ್ಟಿತು
ಪ್ರೀತಿ ಪ್ರೇಮದ
ನೂರಾರು ಕನಸು
ಕನಸು ನನಸು ಆಗುವ
ಮುನ್ನವೇ ಬಿಟ್ಟು
ಹೊರಟಿತ್ತು ಬಾನಂಗಳಕ್ಕೆ
ಮತ್ತೆ ಮರಳಿ ನೆನೆದು
ಪ್ರೀತಿ ಹೊತ್ತ ಹಕ್ಕಿ
ಬರುವ ನಿರೀಕ್ಷೆ ಹೊತ್ತು
ಹೊತ್ತು ಕತ್ತಲಾದರು
ಮೋಡ ಕವಿದರು
ಕಾದು ಕುಳಿತಿದೆ
ಮರದ ಗೂಡು

- ರಾಜು ಹಾಸನ

02 Jan 2021, 11:19 pm

ನನ್ನ ದೇವರು

ಮನುವಾದಿ ಮೂಢರು
ದಿನಬೆಳಗಾದರೆ
ನೂರಾರು ಸಾವಿರಾರು
ಕಲ್ಲು ಬಂಡೆಯ
ದೇವರೆಂದು ಪೂಜಿಸಿ
ಆರಾಧಿಸಿದರು
ನಾ ಪೂಜಿಸಿ ಆರಾಧಿಸುವ
ದೇವರು ಒಬ್ಬರೇ ಒಬ್ಬರೇ
ಬಾಬಾ ಸಾಹೇಬ್
ಭೀಮ್ ರಾವ್
ಅವರೇ ಅವರೇ ನನ್ನ
ಎದೆಯೊಳಗಿನ ದೇವರು

- ರಾಜು ಹಾಸನ

02 Jan 2021, 02:30 pm

ಬಿಟ್ಟು ಹೋಗುವ ಬದುಕು

ನೀ ಸತ್ತು ಕೆಟ್ಟರೆ
ಬರುವುದಿಲ್ಲ ಹೋರುವುದಿಲ್ಲ
ನಿನ್ನ ಜಾತಿ ಧರ್ಮ
ನೀ ಸತ್ತು ಕೆಟ್ಟರೆ ಅತ್ತು ಕರೆದು
ಬಂದು ಹೋರುವರು
ನಿನ್ನ ನಂಬಿದ ಬಂಧು ಬಳಗ
ಇದ್ದಷ್ಟು ದಿನ ಮರವಾಗಿ
ನೆತ್ತಿಯ ಮೇಲಿನ ನೆರಳಾಗಿ
ಮರೆಯಾದೆ ನೆನೆಯುವ ಹೆಸರಾಗಿ
ಎಲ್ಲರೂ ನನ್ನವರು ತನ್ನವರೆಂಬ
ನಿನ್ನೆದೆಯ ಬಾವ
ಬದುಕಿನ ಪಯಣದಲ್ಲಿರಬೇಕು

ನಗು ನಗುತಾ ಬಾಳಬೇಕು
ಸಾಗಬೇಕು ಕಲ್ಲು ಮುಳ್ಳು ದಾಟಿ
ಎಡವಿ ನಡೆಯಬೇಕು
ಒಂಟಿ ಒಂಟಿ ಒಬ್ಬಂಟಿಯಾಗಿ
ಉಸಿರು ಬಿಟ್ಟು
‌‌ ದೇಹ ಬಿಟ್ಟು ಹೋಗಬೇಕು
ಎಲ್ಲ ಬಿಟ್ಟು ಎಲ್ಲ ಮರೆತು
ನಾಲ್ಕಾರು ದಿನ ಬದುಕಿ ಬಾಳಿ
ಬಿಟ್ಟು ಹೋಗುವ ಬದುಕಿಗೆ
ಜಾತಿ ಧರ್ಮದ ಪಟ್ಟ ಬೇಡ
ಮೇಲು ಕೀಳಿನ ಚಟ್ಟ ಬೇಡ
ಸ್ನೇಹ ಪ್ರೀತಿಯ ಚಪ್ಪರವಿರಲಿ

- ರಾಜು ಹಾಸನ

02 Jan 2021, 12:51 am

ಸಂಗಾತಿ

ಕ್ಷಣ ಕ್ಷಣದ ಕಷ್ಟಗಳನ್ನು
ಎದುರಿಸಲು ಸಿದ್ದ
ಜೊತೆಯಲ್ಲಿ ಇದ್ದವಳ
ಬಿಟ್ಟು ಬದುಕುವುದು
ತುಂಬಾ ಕಷ್ಟ
ಬದುಕಿ ಉಳಿದಿದ್ದು
ಸುಮ್ಮನೆ ನಷ್ಟ
ಯಾರಿಗೆ ಹೇಳೋದು
ಮನಸ್ಸು ಹೃದಯ
ಬಯಸಿದ ಇಷ್ಟ

ದಿನ ಬೆಳಗಾದರೆ ಕಣ್ಣ್
ತುಂಬಿಕೊಳ್ಳುವ ಆಸೆ
ನಗು ತುಂಬಿದ
ಕೆಂದಾವರೆ ಹೂವೆ
ಮುದ್ದು ಮುದ್ದು
ಮುದ್ದಿನ ಅರಗಿಣಿ
ಅರಳಿದ ಹೂ ಮಲ್ಲಿಗೆ
ಚಂದಿರನನ್ನೆ ನಾಚಿಸಿದ
ವೈಯಾರದ ಗೊಂಬೆ
ದಂತದ ಬೊಂಬೆ
***********ರಾಜು ಹಾಸನ********

- ರಾಜು ಹಾಸನ

01 Jan 2021, 11:33 pm

ಹೊಸ ವರುಷ

ಹಾಳೆ ಹಾಳೆ ಹಾಳೆ
ವರುಷ ಕಳೆದು
ಹೊಸ ವರುಷ ಬಂದಿದೆ
ಹರುಷವ ತಂದಿದೆ
ಎಲ್ಲರ ಮನೆ ಮನದಲ್ಲೂ
ಖುಷಿಯ ತಂದಿದೆ
ಚಿಲಿಪಿಲಿ ಚಿಣ್ಣರ
ಮೊಗದಲ್ಲಿ ಸಡಗರ
ಸಂಭ್ರಮ ತುಂಬಿದೆ
ಹದಿಹರೆಯದವರ
ಸದ್ದು ಗದ್ದಲ
ಮುಗಿಲು ಮುಟ್ಟಿಸಿದೆ

ಕಿಸೆ ಕಿಸೆ ಕಿಸೆ ತುಂಬಾ ಕಾಸಿದ್ದರೆ
ಹೊಸ ಹಾಡು ಹೊಸ ರಾಗ
ಹೊಸ ವರುಷ
ಕಿಸೆ ಕಿಸೆ ಖಾಲಿ ಕಿಸೆ ಇದ್ದರೆ
ಆದೇ ಹಾಡು ಆದೇ ರಾಗ
ಆದೇ ವರುಷ ಹಳೆ ವರುಷ

- ರಾಜು ಹಾಸನ

01 Jan 2021, 12:22 am

ಭೀಮ ಕೋರೆಂಗವ್

ಭೀಮ್ ಭೀಮ್
ಭೀಮ ಕೋರೆಂಗವ್
ಧೂಳ್ ಧೂಳ್ ಧೂಳ್
ಮಾದಗಜಗಳ ಆರ್ಭಟಕ್ಕೆ
ಮನುವಾದಿಗಳು
ಧೂಳ್ ಧೂಳ್ ಧೂಳ್

ಝಳ ಝಳ ಝಳಪಿಸುವ
ಜೈ ಭೀಮ್ ಸೈನಿಕರ ಕೈ ಕತ್ತಿಗೆ
ಮನುವಾದಿಗಳ ಕೈ ಕಾಲು ತಲೆ
ಮೈ ಮೂಳೆ ಪುಡಿ ಪುಡಿ ಹುಡಿ ಹುಡಿ

ರಣ ರಣ ರಣಹೇಡಿಗಳ
ಸಾಲು ಹೆಣಗಳ ಉರುಳಿಸಿ
ಗೆದ್ದು ಜಯಭೇರಿ ಬಾರಿಸಿದ
ರಣ ರಣ ರಣರಂಗದ
ಕೆಚ್ಚೆದೆ ಗಂಡುಗಲಿಗಳು
ದಲಿತ ಸೈನಿಕರ ನೆನಪಿರಲಿ

ಹಾರಾಟ ತೂರಾಟ
ಮನುವಾದಿಗಳ ಕಪ್ಪಟನಾಟಕ
ಭೀಮ್ ಘರ್ಜನೆಯ
ಸಿಡಿಲಬ್ಬರಕ್ಕೆ ಧೂಳಿಪಟ

ಕಿಚ್ಚು ಕಿಚ್ಚು ಕಿಚ್ಚು
ಜಾತಿ ಧರ್ಮದ ಬೆಂಕಿ ಹಚ್ಚಿ
ದೇಶವನ್ನೇ ಹೊತ್ತಿ ಉರಿಸಿದ
ಮನುವಾದಿಗಳ ಸಾಲು ಸಾಲು
ಹೆಣದ ರಾಶಿಗೆ
ಬೆಂಕಿ ಕೊಳ್ಳಿ ಇಟ್ಟ ಶೂರರು
ಧೀರರು ಸಿಡಿಲ ಸಿಂಹದ ಮರಿಗಳು
ಭೀಮ್ ಕೋರೆಂಗವ್ ಸೈನಿಕರು
********ರಾಜು ಹಾಸನ*********

- ರಾಜು ಹಾಸನ

31 Dec 2020, 10:30 pm

ಮುನ್ನುಡಿ

ಕಂಡವರ ಮಾತಿಗೆ ಮರುಳಗಬೇಡ
ಕಂಡವರ ಕಾಸಿಗೆ ಕೈ ಚಾಚಬೇಡ
ಕಂಡವರ ಕನಸಿಗೆ ಮುಳ್ಳಾಗಬೇಡ
ಕಂಡವರ ಆಸೆಗೆ ತಣ್ಣೀರು ಎರಚ ಬೇಡ
ಕಂಡವರ ಕಾಲು ಹಿಡಿಯಾಬೇಡ
ಕೈ ಹಿಡಿದು ಮುನ್ನೆಡೆಸುವ ನಾಯಕನಾಗು

ನಿನ್ನ ಕನಸು ಮನಸ್ಸು ಆಸೆಗೆ
ನೀನೇ ಹೊಣೆಯಾದರು
ನಿನ್ನ ರಟ್ಟೆಯಾ ಅನ್ನ
ನೀನೇ ದುಡಿದು ತಿಂದ್ದರು
ನಿನಗೆ ನೀನೇ ರಾಜ ರಾಣಿಯಾದರು
ಸಮಾನತೆಗೆ ಪಟ್ಟ ಕಟ್ಟಿ
ಅಸಮಾನತೆಗೆ ಚಟ್ಟ ಕಟ್ಟಿ
ನಿನ್ನ ಜೀವನಕ್ಕೆ ಜೀವ ಕೊಟ್ಟು
ನಿನ್ನ ಬುದುಕಿಗೆ ನೆರಳಾದ
ರಾಜ ಮಹಾರಾಜ ನನ್ನೊಡೆಯ
ಬಾಬಾ ಸಾಹೇಬರ
ಮರೆತು ಬಾಳಬೇಡ ಜೈ ಭೀಮ್

- ರಾಜು ಹಾಸನ

30 Dec 2020, 11:02 pm

ತನಕ

ನೂರು ಜನರ ಮಾತು
ಹೊತ್ತಾಗುವ ತನಕ
ಎದೆಯಲ್ಲಿನ ಪ್ರೀತಿ
ಮಣ್ಣಾಗುವ ತನಕ
ಮನದ ನೆನಪುಗಳು
ಕಣ್ಣ್ಮರೆಯಾಗುವ ತನಕ
ಓದಿ ಬರೆದು ಕಲಿತ ಜ್ಞಾನ
ಬದುಕಿರುವ ತನಕ
ಹೆಸರು ಗಳಿಸಿ ಊಸಿರದರೆ
ಅಚ್ಚಳಿಯದೆ ಉಳಿಯುವುದು
ಸೂರ್ಯ ಚಂದ್ರರು ಇರುವ ತನಕ
ಜೈ ಭೀಮ್ ಜೈ ಭೀಮ್

- ರಾಜು ಹಾಸನ

29 Dec 2020, 11:43 pm