Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಲವು

ವನದೋಳು ಹಕ್ಕಿಗಳ ಜೇಂಕಾರ,
ಬಳ್ಳಿಗಳಿಗೆ ಮರಗಳ ಸಹಕಾರ,
ಇದು ಪ್ರಕೃತಿಯ ವಲವಿನ ಮಹಪೂರ,
ಎರಡು ಹೃದಯಗಳು ಬೆರೆತಾಗ ಪ್ರೀತಿಯ ಸಾಕ್ಷಾತ್ಕಾರ, (ಸತೀಶ್ ಸಾರಗೋಡು )

- sathish

27 Dec 2020, 01:39 pm

ನಂಬಿಕೆ ಉಂಟು

ಹಾರುವೆ ಹಾರುವೆ
ಮುಗಿಲೆತ್ತರಕ್ಕೆ ಹಾರಿ
ಗುರಿ ಮುಟ್ಟುವೇ
ಒಂದಲ್ಲ ಒಂದು ದಿನ
ಸತ್ತು ಸಮಾಧಿ
ಮಣ್ಣಾಗುವ ಮುನ್ನ
ಕಿತ್ತು ತಿನ್ನುವ
ಕಡು ಬಡತನವಿದ್ದರೂ
ಕಾಸು ಇಲ್ಲದ
ಖಾಲಿ ಕಿಸೆ ಆದರೂ
ಛಲದ ಬಲ ಉಂಟು
ಜ್ಞಾನದ ಬೆಳಕೂಂಟು
ಸ್ವಾಭಿಮಾನದ
ಬದುಕೂಂಟು
ಓದು ಬರಹದ
ಅರಿವು ಉಂಟು
ಸಾಧನೆಯ ಸಾಧಿಸು
ಸಾವಲು ಉಂಟು
ಕನಸು ನನಸಿನಾ
ರೆಕ್ಕೆ ಪುಕ್ಕ ಕಟ್ಟಿ
ಹಾರುವ ಹಾರುವೇ
ಆಗಸಕ್ಕೆ ಹಾರುವ
ಮನಸ್ಸು ಉಂಟು
ಬೆಂಕಿ ಬಿರುಗಾಳಿ ಬಂದರು
ಎದುರಿಸಿ ದಡ ಸೇರುವ
ಭರವಸೆ ಉಂಟು
ಗುರಿ ಮುಟ್ಟುವ
ನಂಬಿಕೆ ಉಂಟು
*********ರಾಜು ಹಾಸನ*********

- ರಾಜು ಹಾಸನ

26 Dec 2020, 11:05 pm

ನಿನಗಾಗಿ ಈ ಹಾಡು


ನನ್ನೊಳಗೆ ನನ್ನ ಎದೆಯೊಳಗೆ
ಹುದುಗಿದ ಹಾಡಿದು ನಿನಗಾಗಿ
ಬದುಕಿನಲಿ ಈ ಬವಣೆಯಲಿ
ಸವೆಸಿದ ಜಾಡಿದು ನಿನಗಾಗಿ...

ತಿರು ತಿರುಗಿ ಮತ್ತೆ ಮರು ಮರುಗಿ
ಒರಗಿದೆ ನಿನ್ನೆದೆ ಗೂಡಿನಲಿ...
ಪ್ರೀತಿಯ ಅಪ್ಪುಗೆ ಆ ಸವಿ ನೆನಪಿಗೆ
ಮೆರಗನು ತಂದಿದೆ ನಾಡಿಯಲಿ..

ಕಾರಣ ನೂರಿದೆ ಮೌನದ ಹಂಗಿದೆ
ಸ್ವರವಿದು ತಗ್ಗಿದೆ ಕೊರಳಿನಲಿ
ಭಾರದ ಭಾವವು ಎದೆಯಲಿ ನಿಂತು
ಹೆರವಲು ಬಯಸಿದೆ ಧ್ವನಿಗಾಗಿ

ಆಡಿದ ಮಾತಿಗೆ ನಿಂತರೆ ಹೇಗೆ.?
ಕಾಡಿದೆ ದಿನವಿಡೀ ಮನಸಿನಲಿ
ಗೂಡನು ತೊರೆಯಲು ನಿಂತರೆ ಹೇಗೆ.?
ಬಡಿತವು ಏರಿದೆ ಹೃದಯದಲಿ..

ಕ್ಷಮೆಗಾಗಿ ಈ ಹಾಡು
ನಮಗೇಕೆ ಈ ಪಾಡು
ಜೋಡಿಯಲಿ ಹಾಡೋಣ
ಕೂಡಿ ನಲಿದಾಡೋಣ...

ಜಗದೀಶ ತಿಗರಿ ಹೊಳಗುಂದಿ

- Jagadeesh tigari

26 Dec 2020, 05:59 pm

ದುಡಿಯಿರಿ

ದುಡಿಯಿರಿ
ದಡಿಯಿರಿ
ದುಡ್ಡು ದುಡಿದು
ದೊಡ್ಡವರಾಗಿ
ಬೆಳೆಯಿರಿ ಬೆಳೆಯಿರಿ
ಮುಗಿಲೆತ್ತರಕ್ಕೆ
ಬೆಳೆದು ನೆರಳಾಗಿ
ನಿಲ್ಲಿರಿ ನಿಲ್ಲಿರಿ
ಮನುವಾದಿಗಳ
ಗುಲಾಮಗಿರಿಗೆ
ಸೆಡ್ಡು ಹೊಡೆದು
ಎದ್ದು ನಿಲ್ಲಿರಿ
ಏಟಿಗೆ ಏಟು
ತಿರುಗೇಟು ಕೊಟ್ಟು
ದುಷ್ಟ ಜನರ
ಹಿಮ್ಮೆಟ್ಟಿಸಿರಿ
ಬದುಕಿರಿ ಬದುಕಿರಿ
ಸ್ವಾಭಿಮಾನಿಯಾಗಿ
ಬದುಕಿ ಬಾಳಿರಿ
ಜೈ ಭೀಮ್ ಜೈ ಭೀಮ್

- ರಾಜು ಹಾಸನ

26 Dec 2020, 02:37 pm

ಯಾಕೆ ಹೀಗೆ

ಅಸೂಹೆ,ಅಹಂ ,ಆವೇಶಗಳು
ತಳ್ಳುತ್ತಲಿವೆ ಅಜ್ಞಾನದ ಕೂಪಕ್ಕೆ
ನೀಡುವ ಉಪದೇಶವ
ಪಾಲಿಸಲಾಗದ ಆವೇಶ
ಮಡಿಲ ಕೆಂಡವಾಗಿ
ಸುಡುತಿದೆ ಪ್ರತಿದಿವಸ
ಆವೇಶಕ್ಕೆ ಬಲಿಯಾಗದೆ
ಆಲೋಚಿಸಿ ನೋಡು
ಜೀವನದ ಮರ್ಮ ತಿಳಿಯುವುದು.

- ಶಕುಂತಲಾ

25 Dec 2020, 09:54 pm

ಸುನುಡಿ

ಮಾತಿಗಿಂತ ಕೃತಿ ಮೇಲು
ಕೃತಿಯಿಂದ ಚಂದ ಬಾಳು
ಮಾತಿಂದ ಮನೆ ಹಾಳು
ಮಾತಾಗಲಿ ಮುತ್ತಿನ ಹರಳು

ಮಾತೊಂದೇ ಸಾಧನೆಯಲ್ಲ
ಸಾಧನೆ ಮಾತಾಗಬೇಕಲ್ಲ
ಸತ್ತಾಗ ಇಹರೆಲ್ಲರ
ಮಾತಲಿ ಮುತ್ತಗಬೇಕಲ್ಲ

ಸದರ ಸಲಿಗೆಯಲಿ
ಸವಿನುಡಿಯು
ರಸನೆಯಲಿ ರಸವಾಗಿ
ಹೊರಚೆಲ್ಲಲಿ

ಘಮ ಘಮದಲಿ
ಹೊರಸೂಸುವ
ಸುಮಸುಗಂಧವಾಗಲಿ
ಸುನುಡಿಗಳ ಸಂಗೀತ...

ಜಗದೀಶ ತಿಗರಿ ಹೊಳಗುಂದಿ

- Jagadeesh tigari

25 Dec 2020, 09:46 am

ಓದು ಓದು

ಓದು ಓದು ಓದು
ಓದು ಬರಹ ಕಲಿತರೆ
ಜ್ಞಾನಿಯಾಗುವೇ
ಕಲಿಯದಿದ್ದರೆ
ಅಜ್ಞಾನಿಯಾಗುವೇ
ಓದು ಬರಹ ಕಲಿತು
ಜ್ಞಾನಿಯಾಗು
ಮನೆ ಬೆಳಗುವ
ದೀಪವಾಗು
ಓದು ಬರಹ ಕಲಿತರೆ
ಸ್ವಾಭಿಮಾನಿ
ಕಲಿಯದಿದ್ದರೆ ಗುಲಾಮ
ಓದು ಬರಹ ಕಲಿತರೆ
ರಾಜ ಮಹಾರಾಜನಾಗುವೆ
ಕಲಿಯದಿದ್ದರೆ
ಕಂಡವರ ಕೈ ಕಾಲಾಳಗುವೇ
******ರಾಜು ಹಾಸನ******

- ರಾಜು ಹಾಸನ

24 Dec 2020, 11:44 pm

ಜೈ ಭೀಮ್ ಜೈ ಭೀಮ್

ಜೈ ಭೀಮ್ ಎಂದರೆ ನನ್ನ ಛಲ
ಜೈ ಭೀಮ್ ಎಂದರೆ ನನ್ನ ಬಲ
ಜೈ ಭೀಮ್ ಎಂದರೆ ನನ್ನ ಜ್ಞಾನ
ಜೈ ಭೀಮ್ ಎಂದರೆ ನನ್ನ ಸೂರ್ಯ
ಜೈ ಭೀಮ್ ಎಂದರೆ ನನ್ನ ಪ್ರಾಣ
ಜೈ ಭೀಮ್ ಎಂದರೆ ನನ್ನ ಸ್ವಾಭಿಮಾನ
ಜೈ ಭೀಮ್ ಎಂದರೆ ನನ್ನ ನ್ಯಾಯ ನೀತಿ
ಜೈ ಭೀಮ್ ಎಂದರೆ ನನ್ನ ಬದುಕು
ಜೈ ಭೀಮ್ ಎಂದರೆ ನನ್ನ ಸ್ಪೂರ್ತಿ
ಜೈ ಭೀಮ್ ಎಂದರೆ ನನ್ನ ಶಾಂತಿ
ಜೈ ಭೀಮ್ ಎಂದರೆ ನನ್ನ ಕ್ರಾಂತಿ
ಜೈ ಭೀಮ್ ಎಂದರೆ ನನ್ನ ಗುರು
ಜೈ ಭೀಮ್ ಎಂದರೆ ನನ್ನ ದೇವರು
ಜೈ ಭೀಮ್ ಎಂದರೆ ನನ್ನ ತಂದೆ ತಾಯಿ

ಜೈ ಭೀಮ್ ಎಂದರೆ ಮನುವಾದಿಗಳಿಗೆ ಭಯ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಭೀತಿ
ಜೈ ಭೀಮ್ ಎಂದರೆ ಮನುವಾದಿಗಳಿಗೆ ನಡುಕ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಸಿಂಹ ಸ್ವಪ್ನ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಪರದಾಟ
ಜೈ ಭೀಮ್ ಎಂದರೆ ಮನುವಾದಿಗಳು ಓಟ
ಜೈ ಭೀಮ್ ಎಂದರೆ ಮನುವಾದಿಗಳ ಎದೆಯಲ್ಲಿ ಢವ ಢವ
ಜೈ ಭೀಮ್ ಎಂದರೆ ಮನುವಾದಿಗಳ ಜೀವ ಫುಕಾ ಫುಕಾ
ಜೈ ಭೀಮ್ ಎಂದರೆ ಗತ್ತು ಗಮ್ಮತ್ತು ತಾಕತ್ತು
ಜೈ ಭೀಮ್ ಎಂದರೆ ಇಡೀ ವಿಶ್ವಕ್ಕೆ ಗೊತ್ತು ಅವರು ಜ್ಞಾನ

- ರಾಜು ಹಾಸನ

24 Dec 2020, 11:17 pm

ಭಾವ ಸಂಗಮ

ಭಾವದೊಡೆಯ ಬಂದನಿಂತು
ಭುವಿಗೆ ಬೆಳಕು ಚೆಲ್ಲುತ್ತಾ
ಒಲವು ನಲಿವು ಚಿಗಿರಿಸುತಲಿ
ಭಾವ ವೀಣೆ ಮೀಟಿದಾ

ಹೊನ್ನಕಿರಣ ಹೊಮ್ಮಿಸುತಲಿ
ಸೂರ್ಯಕಾಂತಿ ನಗಿಸಿದ
ಹಸಿರು ಹೊದ್ದು ಉಸಿರ ನೀಡ್ವ
ಜಗವನಿವನು ಬೇಳಗಿದಾ

ಮನದ ದುಗುಡ ವೆಲ್ಲ ಅಳಿದು
ಸುಮದ ಕಂಪು ಸೂಸಿದ
ಧರೆಯ ದೊರೆಯ ಎಚ್ಚರಿಸುತ
ಕುಶಲೋಪರಿ ಕೇಳಿದಾ

ಪ್ರಾಣಿ ಪಕ್ಷಿ ಜೀವ ಜಂತು ಗಳಿಗೆ
ಮಂದಹಾಸ ಮೂಡಿಸಿದ
ಸುತ್ತ ಬೆಟ್ಟಗಳನು ಗಟ್ಟಿ ಮಾಡಿ
ತಾಯ ಕಾಯಲು ನಿಲ್ಲಿಸಿದ

ಭಾವಡೋಡೆಯ ನೀನು ಬರದೆ
ಭುವಿಯ ಆಟ ನಡೆಯದು
ಸುಖ ದುಃಖ ದುಮ್ಮಾನ ಮರೆಸಿ
ಮಗುವ ನಗುವು ನೀಡುವೆ

. ಕಲ್ಮೇಶ ಬಡಿಗೇರ
......ಬಾದಾಮಿ......

- Kalmesh Badiger

24 Dec 2020, 08:18 am

ಶಕ್ತಿ

ದೀನ ದಲಿತರ
ಶಕ್ತಿಯಾಗಿ
ನೊಂದ ಜನರ
ಉಸಿರಾಗಿ
ಭರವಸೆಯ
ಬೆಳಕಾಗಿ
ಜ್ಞಾನದ
ಕಿಡಿಯಾಗಿ
ಅಜ್ಞಾನವಾ
ತೊಲಗಿಸಿ
ದುಷ್ಟ ಜನರ
ಹೆಡೆಮುರಿ
ಕಟ್ಟಿದ
ಛಲ ಬಿಡದ
ಛಲವಾದಿ
ಧೀಮಂತ
ನಾಯಕ
ಭೀಮ್ ರಾವ್
******ರಾಜು ಹಾಸನ******

- ರಾಜು ಹಾಸನ

24 Dec 2020, 12:14 am