Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗಿಳಿರಾಯ

ಒಬ್ಬಳು ಹುಡುಗಿ ಗಿಳಿ ತಗೊಬೇಕು ಅಂತ ಅಂಗಡಿಗೆ ಹೋಗಿ Owner ನ ಕೇಳ್ತಾಳೆ

ಹುಡುಗಿ - ಸರ್ ಈ ಗಿಳಿಯ ವಿಶೇಷತೆ ಏನು

Owner - ಈ ಗಿಳಿ ಮಾತಾಡುತ್ತೆ

ಹುಡುಗಿ - ಓ.. ಹೌದಾ? ನಾನ್ ಮಾತಾಡ್ಸಲಾ?

Owner - ಸರಿ ಮಾತಾಡ್ಸಮ್ಮ

ಹುಡುಗಿ - ಹಾಯ್ ಗಿಳಿ ನಾನ್ ನೊಡೊಕೆ ಹೇಗ್ ಕಾಣಸ್ತಿನಿ?

ಗಿಳಿ - ಡಗಾರ್ ತರ ಕಾಣಸ್ತಿಯಾ!!

ಹುಡುಗಿ - (ಸಿಟ್ಟಿನಿಂದ) ಏನ್ರಿ Owner ಈ ಗಿಳಿ ಇಷ್ಟು ಕೆಟ್ಟದಾಗಿ ಮಾತಾಡುತ್ತೆ?

ಆಗ Owner ಆ ಗಿಳಿನ ನೀರಿನಲ್ಲಿ ಹಾಕಿ, ಇನ್ನೊಂದ್ಸಲ ಹೀಗೆ ಮಾತಾಡಿದ್ರೆ ಈ ಬಕೆಟಲ್ಲಿ ಮುಳಗ್ಸಿ ಸಾಯ್ಸಿತಿನಿ..

Owner - ಈಗ ಕೇಳಮ್ಮ

ಹುಡುಗಿ - ಅಕಸ್ಮಾತ್ ನಾನ್ ಮನೆಗೆ ಒಬ್ಬ ಹುಡುಗನ ಕರಕೊಂಡು ಬಂದ್ರೆ ನಿ ಏನ್ ತಿಳ್ಕೊತಿಯಾ?

ಗಿಳಿ - ನಿನ್ ಗಂಡ ಅಂತ..

ಹುಡುಗಿ - ಇಬ್ಬರು ಬಂದ್ರೆ?

ಗಿಳಿ - ನಿನ್ನ ಗಂಡ ಮತ್ತು ಫ್ರೆಂಡ್ ಅಂತ..

ಹುಡುಗಿ - ಮೂರು ಜನ ಹುಡುಗ್ರ ಜೊತೆ ಬಂದ್ರೆ?

ಗಿಳಿ - ನಿನ್ನ ಗಂಡ, ಗಂಡನ ಫ್ರೆಂಡ್, ಮತ್ತೆ ಅವ್ನ ಫ್ರೆಂಡ್...

ಹುಡುಗಿ - 4 ಜನ ಹುಡುಗರು ಬಂದ್ರೆ?

ಗಿಳಿ Owner ಕಡೆ ತಿರ್ಗಿ ಇವಳೌವನ್ ನಾನ್ ಆಗಲೆ ಹೇಳಿಲ್ವಾ ಇವಳು ದೊಡ್ಡ ಡಗಾರ್ ಅಂತ... ನನ್ನ ಕರ್ಮ ಆ ಬಕೆಟ್ ತಗೊಂಡು ಬಾ ಗುರು ನಾನೇ ಬಿದ್ದು ಸಾಯ್ತಿನಿ.. ??

INSTA || unique_abhyaa

- abhi.s.j

09 Oct 2025, 07:47 pm

ಅಪ್ಪ

ಮರೆಯಬೇಡ ಅಪ್ಪನ "ಋಣಭಾರವ” |

ನಿನ್ನ ಸುಖಸಂತೋಷಕ್ಕಾಗಿ "ಸಾಲಗಾರನಾದನವ” ||

ತನಗಾಗಿ ಎಂದಿಗೂ ಏನನ್ನು "ಬಯಸದವ" |

ಜೀವಮಾನವೆಲ್ಲಾ ನಿನಗಾಗಿ "ದುಡಿದವ" ||

ನೀನೆಷ್ಟೇ ಜನ್ಮವೆತ್ತಿದರು ತೀರಿಸಲಾಗುವುದಿಲ್ಲ ಅವನ "ಋಣವ" |

ಶರಣಾಗಿಬಿಡು ನಿನಗೆ ಸಲ್ಲುವುದು "ಗೌರವ" ||

- "ಅ"ಪರಿಚಿತೆ

08 Oct 2025, 06:55 pm

ದಿನವೆಲ್ಲಾ ಸಾಲದು ನನಗೆ

ದಿನವೆಲ್ಲಾ ಸಾಲದು ನನಗೆ ನಿನ್ನ ಬಣ್ಣಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಪೂಜಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ವರ್ಣಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಆರಾಧಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಅಲಂಕರಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಪ್ರಾರ್ಥಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಧ್ಯಾನಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಭಜಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಗೌರವಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಉಪಾಸನೆ ಮಾಡಲು...

ದಿನವೆಲ್ಲಾ ಸಾಲದು ನನಗೆ ನಿನ್ನ ಸ್ಮರಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಕೀರ್ತಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಶರಣಾಗಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಮಹಿಮೆ ಹಾಡಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಪ್ರೀತಿ ಸ್ವೀಕರಿಸಲು...
ದಿನವೆಲ್ಲಾ ಸಾಲದು ನನಗೆ ನಿನ್ನ ದಯೆ ಹೊಂದಲು...
ದಿನವೆಲ್ಲಾ ಸಾಲದು ನನಗೆ ನಿನ್ನ ರೂಪ ಕಾಣಲು...
ದಿನವೆಲ್ಲಾ ಸಾಲದು ನನಗೆ ನಿನ್ನ ಶಕ್ತಿ ಅರಿಯಲು...

ಆದರೂ ದಿನವೆಲ್ಲಾ ಬಣ್ಣಿಸಲು, ಪೂಜಿಸಲು, ವರ್ಣಿಸಲು, ಆರಾಧಿಸಲು, ಅಲಂಕರಿಸಲು, ಪ್ರಾರ್ಥಿಸಲು, ಧ್ಯಾನಿಸಲು, ಭಜಿಸಲು, ಗೌರವಿಸಲು, ಉಪಾಸನೆ ಮಾಡಲು, ಸ್ಮರಿಸಲು, ಕೀರ್ತಿಸಲು, ಶರಣಾಗಲು, ಮಹಿಮೆ ಹಾಡಲು, ಪ್ರೀತಿ ಸ್ವೀಕರಿಸಲು, ದಯೆ ಹೊಂದಲು, ರೂಪ ಕಾಣಲು, ಶಕ್ತಿ ಅರಿಯಲು ಒಂದೇ ಕ್ಷಣಮಾತ್ರದಲ್ಲಿ ನೀ ಭಕ್ತಿಗೆ ಒಲಿಯುವ ಕರುಣಾಮಯಿ ಕನ್ನಡಾಂಬೆ...

ವಸಂತ ಕಾವ್ಯ

- Kavya Mari

02 Oct 2025, 04:37 pm

???? ಸತ್ಯ????

ಊತು ಹಾಕಿದ್ದೇನೆ ಸತ್ಯ"ವನ್ನು
ಸುಳ್ಳಿನ ಬೂದಿಯಲಿ

- ಪುರುಷೋತ್ತಮ್ ಈ

02 Oct 2025, 03:56 pm

- ಪುರುಷೋತ್ತಮ್ ಈ

02 Oct 2025, 03:55 pm



"ಅವಳ ಮುಗ್ನ ನಗು ನೋಡುವು ? ಆ ರಾತ್ರೀ ಮಳಿಗೆ ಸೈರಲ್ಲ, ಮೂಲನಗಿ ಹಾವು, ದಸರಾ ಅನ್ಸಿ ಕೊಡು, ಸಿಮೆಂಟ್ ಚೀಲ, ಕೋಟಂಬರಿ ಸೊಪ್ಪು, ಕಿಟ್ಟಿ, ಜೋಸ್ನಾ, ಪ್ರೆಗ್ನೆಂಟ್ ಇರೋಳೆ ಸೊಳೆ ಉಗುರು, ಮೈಸೂರು ಹಿಟ್ಟ, ಹೀಗೆ ಎಲ್ಲವ್ರೂ ಕೂಡ ಕಾಯುತ್ತಿರ್ತವ್ವು!, ಆದರೆ ಅವಳು ಮಾಡಿದ ನಗಲೆ ಇಲ್ಲ!?, ನನಗೆ ಟೈಮ್ ಎಂಟಾದರು ಎಚ್ಚರೇ ಆಗಿಲ್ಲ"!,?

insta:- unique_abhyaa

- abhi.s.j

01 Oct 2025, 08:43 pm



ಕವಿಯ ಕಲ್ಪನೆಗೆ ನಿಲುಕದ
ಸೌಂದರ್ಯ ಸುಮ ರಾಷಿಯೇ
ನಿನ್ನ ವರ್ಣಿಸುವ ಕಲೆಯೊಂದು
ನನ್ನಲಿ ಸೇರಿ ನಿನಗಾಗಿಯೇ
ಹೊರಬಂದಿದೆ ಕೇಳುತಲಿ
ಕಲ್ಪನೆಯಲ್ಲಿಯೇ ನನ್ನ ಸೇರು ಬಾ
ಯಾರಿಗು ಹೇಳದೆ

ಯಾವ ಮಾಯಗಾರನ ಕೈಗಳಲ್ಲಿ
ಸೃಷ್ಟಿಯಾದೆಯೋ ಕಾಣೆ
ನಿನ್ನ ನೋಡಿದ ಕಂಗಳು ಸುಮ್ಮನೆ
ಆಸ್ವಾದಿಸುತ್ತ ಹೃದಯಕ್ಕೆ
ಸಂದೇಶವೊಂದನು ಕಳುಹಿಸಿ
ಅಪ್ಪಣೆಯ ಉತ್ತರಕ್ಕಾಗಿ ಕಾಯುತಿದೆ
ಉತ್ತರ ನೀಡು ಬಾ ಮೆಲ್ಲನೆ

ನಿನ್ನ ಸನಿಹಕ್ಕೆ ಹೃದಯ ಮಿಡಿತವು ಹೆಚ್ಚಾಗಿ
ನಿನ್ನನೆ ತುಂಬಾ ಇಷ್ಟ ಪಟ್ಟು
ಹೃದಯವು ಬಯಸಿದೆ ನಿನ್ನನೆ
ನಿನಗಾಗಿ ಹೃದಯವನ್ನೆ ನೀಡಲು
ತಯಾರಾಗಿದೆ ಸುಮ್ಮನೆ

ನಿನ್ನ ನಗುವಲ್ಲಿ ಅರಳುತ್ತಿರುವ
ಅಂದದ ಚೆಂದದ ಸೊಭಗಿಗೆ
ದೇವಲೋಕದ ಕಿನ್ನರಿಯರೆಲ್ಲಾ
ಒಟ್ಟಾರೆ ಸೇರಿ ಗಂದರ್ವ ಲೋಕದಿಂದಲೆ
ಮನಸಾರೆ ಹರಸುತ್ತಿಹರು ಸಂತಸದಿ

ಚೆಲುವಿನ ಅಂದವೆ ನಿನ್ನ ನೋಡಿದ
ಯಾವ ಕವಿಯೂ ಸುಮ್ಮನಿರಲಾರದೆ
ಹೊಚ್ಚ ಹೊಸ ಕಲ್ಪನೆಯಲ್ಲಿ
ಇನ್ನೂ ಚೆಂದವಾಗಿ ಅಂದವನ್ನು
ವರ್ಣಿಸುತ್ತಾ ಹೊಗಳುತ ಬರೆದನು
ಕವಿತೆಯ ಮನಸಾರೆ

ಚೆಲುವೆಯ ಹೊಳೆಯು ಚೆಲುವನ್ನು
ಕಣ್ಣಾರೆ ಕಂಡ ಆ ಚಂದ್ರಮನು
ಇನ್ನೂ ಹೆಚ್ಚಾಗಿ ಬೆಳದಿಂಗಳ ಚೆಲ್ಲುತಲಿ
ಬಾನಂಚಲ್ಲೆ ನಿನ್ನ ನೋಡುತ
ಮೈ ಮರೆತು ನಿಂದಿಹನು

ನನ್ನ ಕಲ್ಪನೆಯಲಿ‌ ಅರಳುತ್ತಿರುವ
ಒಲವಿನ ಮಂದಾರ

- abhi.s.j

01 Oct 2025, 08:35 pm

- Naveen

30 Sep 2025, 09:04 pm

ಮಲ್ಲಿಗೆ_ನೀನೆಷ್ಟು_ಅಂದವೆ...



ಚೆಂದದ ದುಂಡು ಮಲ್ಲಿಗೆಯೇ ,
ಎಲ್ಲೆಡೆ ಹರಡುತ್ತಿರುವ ನಿನ್ನ‌ಅ ಸುಗಂದಕ್ಕೆ ,
ಅದರ ಪರಿಮಳದ ಸೆಳತಕೆ ದುಂಬಿಯೂ ಬ್ರಮರಗೀತೆಯ ಹಾಡುತ್ತಾ ,
ಸಂತೋಷವಾಗಿ ಹಾಡುತ ತೇಲಾಡುತ
ಆತುರದಿ ಬರುತಿಹನು ....

ಮನಸ್ಸನೆ ಆಕರ್ಷಿಸುವ ಸೂಜಿ ಮಲ್ಲಿಗೆಯೇ ,
ನಿನ್ನಾ ಸೊಬಗಿನ ವೈಯಾರದ
ಆಕರ್ಷಣೆಗೆ ,
ಹದಿ ಹರೆಯ ರಸಿಕರ ಮನಗಳಲ್ಲಿ ಹೊಸದಾದ ಆಸೆಗಳಿಗೆ ಜೀವ ನೀಡಿದೆ ,
ಹೊಸ ಬಯಕೆಗಳಿಗೆ ರೆಕ್ಕೆಗಳು ತನ್ ತಾನೆ ಬಂದು ಹಾರಾಡಿವೆ ....

ಮುದ್ದು ಮುದ್ದಾದ ದುಂಡು ಮಲ್ಲಿಗೆಯೇ ,
ನಿನ್ನಾ ಅತಿಯಾದ ಚೆಂದದ ಚೆಲುವಿಗೆ ,
ಚೆಂದುಳ್ಳಿ ಚೆಲುವೆಯರೆಲ್ಲಾ ನಿನ್ನಾ ಮುಡಿದು ನಲಿದಾಡುತಲಿ ,
ಸಂತಸದಿಂದ ಬಿಂಕದ ಸಿಂಗಾರಿಯರಾಗಿ ಬಳುಕುತಾ
ನೆಡೆಯುತಾ ವೈಯಾರವು
ಹೆಚ್ಚಾದಂತಾಗಿದೆ ....

ದುಂಡು ಮಲ್ಲಿಗೆಯೇ
ನೀ ಅರಳೊ ಮುದ್ದಾದ ಚೆಲುವಿಗೆ ,
ಈ ಲೋಕದಾ ಚಂದುಳಿ ಚೆಲುವಿಯರೆಲ್ಲಾ ಒಟ್ಟಾಗಿ ,
ನಿನ್ನಾ ನೋಡುತಲೆ ಆಹಾ ಆಹಾ... ಎಂದು ಉದ್ಗಾರಿಸುತ್ತಾ ,
ನೀ ಚೆಲ್ಲುವಾ ಪರಿಮಳವ ಘಂ ಎನ್ನುವ ಪರಿಮಳವನ್ನೆ ಅಸ್ವಾಸುತ್ತಿರುವರು ...

ಮೈಸೂರು ಮಲ್ಲಿಗೆಯೇ ,
ಬೆಳ್ಳಗಿನ ನಿನ್ನ ಮೈ ಬಣ್ಣದ ಅಂದಕೆ
ಬೆಳ್ ಮುಗಿಲಲ್ಲಿ ನಕ್ಷತ್ರಗಳ ಮಿನುಗಿಸಿ,
ಬಾನ ತುಂಬೆಲ್ಲಾ ಬೆಳದಿಂಗಳ ಚೆಲುತ್ತಾ ಮೋಡಗಳ ಮೆರೆಯಲ್ಲಿ ನಿಂತು , ನಿನ್ನಂದವ ಮನಸಾರೆ ಕಣ್ತುಂಬಿಕೊಳ್ಳುತಿಹನು

ಸೂಜಿ ಮಲ್ಲಿಗೆಯೇ ನಿನ್ನಿಂದಾನೆ
ಆ ಸಾಗರಿಯು ಕೂಡಾ ಅಲೆಗಳಲ್ಲಿ ಅಪ್ಪಳಿಸುತ್ತಾ
ಬೆಳದಿಂಗಳನು ಎಳೆ ಎಳೆಯಾಗಿ ಸ್ವೀಕರಿಸುತ್ತಾ
ತುಂಬಾ ಆಸೆಯಿಂದ ಪ್ರೀತಿಸುತ್ತಾ ಸಂಬ್ರಮಿಸುತಿಹಳು ....

insta:- unique_abhyaa

- abhi.s.j

30 Sep 2025, 09:05 am

ಯಾರೆನೀನು ???

ಯಾರೆನೀನು ???

ಬೆಳಗಿನ ಜಾವದಲ್ಲಿ
ದೀರ್ಘ ನಿದಿರೆಯ ಹಿಂದೆ
ಓಡಿದ ನನ್ನ ಕಾಲ್ಗೆಜ್ಜೆ ಸಪ್ಪಳ ಮಾಡಿ
ಕನಸಿನಿಂದನೆ ನನಸಲ್ಲೆ ಎಚ್ಚರಿಸಿ
ಮುಂಜಾನೆಯ ಮಬ್ಬಿನಲಿ ಮರೆಯಾದ
ಮಂಜುಭಾಷಿನಿ ನಿನೆ ನಾ ?

ಕನಸಿನಾಚೆ ಬಂದು ಕಾಣೆಯಾದ
ನಿನ್ನ ಹುಡುಕಲು ಹಾತೊರೆಯುತ
ನೀ ಮುಡಿದ ಮಲ್ಲಿಗೆಯ
ಪರಿಮಳಕ್ಕೆ ಸೋಲುತ ನಿನ್ನನೆ
ಹಿಂಬಾಲಿಸುವಂತೆ ಮಾಡಿದ
ಚೆಲುವಿನ ಚೋರಿಯು ನೀನೆ ನಾ ?

ಮುಂಜಾನೆಯ ತಿಳಿ ಬಿಸಿಲಿನ
ಕಿರಣಗಳಿಂದ ಹೊಳೆಯುತ್ತಿರುವ
ಇಬ್ಬನಿಯ ಮುತ್ತುಗಳ ಸ್ಪರ್ಷಿಸಿ
ಅವುಗಳ ಜೋತೆ ಮಾತಡಿ ನಲಿದು
ನಾ ಬರುವ ಮೊದಲೆ ಕಣ್ಮರೆಯಾದ
ವರ್ಷಿಣಿಯು ನೀನೆನಾ ?

ನೀಳವಾದ ಕೇಶರಾಷಿಯ ಹರಡಿಕೊಂಡು
ಎಳೆ ಬಿಸಿಲಲ್ಲಿ ಒಣಗಿಸುತ್ತ ನಿಂತು
ಆ ಸೂರ್ಯನನ್ನೆ ಆವರಿಸಿಕೊಂಡ
ಛಾಯೆಯು ನೀನೆನಾ ?

ಸುಮ್ಮನೆ ಎದುರಿಗೆ ಪ್ರತ್ಯಕ್ಷವಾಗಿ
ಸೌಂದರ್ಯದ ರಾಷಿಯ ತೋರಿ
ದಿಗ್ಬ್ರಾಂತನಾಗಿ ಮಾಡಿ ಮನಸ್ಸನೆ
ಮೆಲ್ಲನೆ ಕದ್ದೊಯುದ
ಮಾಯಗಾತಿಯು ನೀನೆ ನಾ ?

insta:- unique_abhyaa

- abhi.s.j

30 Sep 2025, 08:04 am