ಯೌವನ ದಿನ ಆರಂಭವೀಗ ಕೂಡಿ ಬಂದಿತು ಮದುವೆ ಯೋಗ ರಾತ್ರಿಯೆಲ್ಲಾ ಕಣ್ ಮುಚ್ಚಲಿಲ್ಲಅವನನ್ನು ಬಿಟ್ಟರೆ ಬೇರೆ ಕನಸಿಲ್ಲ...........ನಾ ಮೆಚ್ಚಿದೆ ಆ ಗೆಳೆಯನ ಅವನಲ್ಲಿಗೆ ಸೆಳೆದವು ಕಣ್ಮನ ನಾನೀಗ ಗೃಹಲಕ್ಷ್ಮಿ ಆ ಮನೆಯ ಮಹಾಲಕ್ಷ್ಮಿ...........ನಾನೀಗ ತವರಿಂದ ನಿರ್ಗಮನ ಗಂಡನ ಮನೆಗೆ ಆಗಮನ ತಂದೆ- ತಾಯಿ ಕಣ್ಣಲ್ಲಿ ನೀರು ನನ್ನ ಹೊಸ ಜೀವನ ಶುರು..........ನನ್ನ ಬಾಳಿನ ಹೊಸ ಜೀವನ ಈಗ ಶುರು ಅದರ ಪಯಣ ಇದುವೇ ನನ್ನ ಪುಟ್ಟ ಸಂಸಾರ ನಾ ಹೊತ್ತೆ ಸಂಸಾರದ ಭಾರ...............
ನನ್ನ ನಿನ್ನ ಪರಿಚಯದ ಮೊದಲ ದಿನದ
ಇಲ್ಲಿಯ ತನಕ ಒಂದು ದಿನವೂ ನಿನಗೆ ಕೆಡಕನ್ನು
ಬಯಸಿದವನಲ್ಲ....
ನಿನ್ನ ಸಂತೋಷದಲ್ಲೇ ನನ್ನ ಸಂತೋಷವನ್ನು
ಕಂಡವನು, ನಿನಗೇಂದೂ ಮೋಸ ಮಾಡಿದವನಲ್ಲ...
ನಿನ್ನ ಜೀವನ ಸುಖವಾಗಿರಲ್ಲೆಂದು ಬಯಸಿದವನೆ
ಹೊರತು, ಕಷ್ಟಗಳು ಬರಲಿ ಎಂದು ಕನಸಲ್ಲಿಯೂ
ಯೋಚಿಸಿದವನಲ್ಲ.....
msbhovi......✍️
ಜೀವನದಲ್ಲಿ ಬಂದ ಹೊಸ ಹುಡುಗ ನನ್ನಲ್ಲಿ ತಂದ ಪ್ರೀತಿಯ ಅನುರಾಗ ನನ್ನ ಹೃದಯ ಈಗ ಒಪ್ಪುವ ಸ್ಥಿತಿ ಆದರೆ ಒಪ್ಪಲಿಲ್ಲ ಸಂಸ್ಕೃತಿ ..... ಜಗತ್ತಿನಲ್ಲಿ ವಿವಿಧ ಸಂಸ್ಕೃತಿ ಸಂಸ್ಕೃತಿಯಲ್ಲಿ ವಿವಿಧ ಜಾತಿ ಇದುವೇ ಬಿಡಿಸಿತು ಅವನ ಸಂಗ ನನಗಾಯಿತು ಪ್ರೀತಿಯ ಬಂಗ....... ಕಣ್ಣಿನಲ್ಲೇ ಶುರುವಾದ ಪ್ರೀತಿ ನನಗಾಗಲೆ ತಂದಿತ್ತು ಬೀತಿ ಆದರೂ ಒಪ್ಪಲಿಲ್ಲ ನನ್ನ ಮನ ಇದುವೇ ಕಾಪಾಡಿತು ನನ್ನ ಮಾನ...... ಪ್ರೀತಿ ಎನ್ನುವುದು ಯಾರನ್ನೂ ಬಿಟ್ಟಿಲ್ಲ ಆದರೂ ಪ್ರೀತಿಯಲ್ಲಿ ಜಾರಲು ಮನ ಒಪ್ಪಲಿಲ್ಲ ಪ್ರೀತಿಸುವ ಹುಡುಗ ಕೊನೆಗೆ ಸ್ನೇಹಿತನಾದ ಮುಳುಗಿತು ಪ್ರೀತಿಯ ಸಂಗೀತ ನಿನಾದ........ ಪ್ರೀತಿಯಿಂದ ಶುರುವಾದ ಈ ಸಂಬಂದ ಕೊನೆಯಾಗಿದ್ದು ಈ ಸ್ನೇಹದಿಂದ.......
ಈ ಮನಸ ಕದ್ದವನು ನನ್ನ ಪ್ರೀತಿಯ ಮುದ್ದಿವನು ಈ ಬಾಳಿನ ಕನಸಿವನು ಕನ್ನೋಟದಲ್ಲೆ ಸೆಳೆದವನು.....ಪ್ರೀತಿಯಿಂದ ಚಿನ್ನು ಎಂದು ಕರೆಯುವನು ದಿನ ಫೋನಿನಲ್ಲೇ ಗಂಟೆಗಟ್ಟಲೆ ಮಾತಾಡುವನು ನನ್ನ ಆಲಿಂಗನಕ್ಕಾಗಿ ತುದಿಗಾಲಲ್ಲಿ ಕಾಯುತಿರುವನು ನನ್ನ ಕಾಣದೆ ವರ್ಷಗಳೇ ಕಲೆಯುತಿರುವನು.....ನನ್ನ ಉಸಿರಲಿ ಬೆರೆತು ಹೋಗಿರುವ ಈ ಹೃದಯದ ಬಡಿತವಿವನು ನಿದ್ದೆಯಲ್ಲೂ ನನ್ನ ಕಾಡುವವನು ಈ ಮನದ ತುಡಿತವಿವನು.....ಅವನ ಹೃದಯದಲಿ ತೆರೆದಿರುವ ಪ್ರೀತಿಯ ಖಾತೆ ಆದರೂ ಪ್ರತಿನಿತ್ಯ ಜಗಳವಾಡುವನು ನನ್ನಯ ಜೊತೆ ಕೆಲವೊಮ್ಮೆ ಅತಿರೇಖವಾದ ನಮ್ಮೀ ಜಗಳ ಕೆಲವೊಮ್ಮೆ ಹರಿಸುವುದು ಕಣ್ಣ ಹನಿಗಳ.... ಮೂಗಿನ ತುದಿಯಲ್ಲೇ ಸಿಟ್ಟು ಕ್ಷಣ ಕೂಡ ಇರಲಾರ ನನ್ನ ಬಿಟ್ಟು ತನ್ನದೇ ಸರಿ ಎನ್ನುವ ನಮ್ಮ ವಾದ ಕೆಲವೊಮ್ಮೆ ಸೃಷ್ಟಿಸುವುದು ವಿವಾದ..... ಇಬ್ಬರ ಮನೆಯಲ್ಲೂ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ ಆದರೂ ಅವನನ್ನು ಬಿಡಲು ನನಗೆ ಮನಸಿಲ್ಲ ಹೇಗಾದರೂ ಮಾಡಿ ಒಪ್ಪಿಸಬಹುದು ಅವರನ್ನು ಆ ನಂಬಿಕೆಯಿಂದಲೇ ಅವನ ನೆನೆಯುತಿರುವೆನು.....ಭೂಮಿ-ಆಕಾಶ ಒಂದಾಗುವುದಿಲ್ಲ ಮುದ್ದು-ಚಿನ್ನು ಒಂದಾಗಬಹುದಲ್ಲ ಆ ಆಸೆಯಿಂದ ದಿನ ಕಲೆಯುತಿರುವೆನು ಅವ ಸಿಗಬಹುದೇನೋ ಎಂದು ಕಾಯುತಿರುವೆನು......ಬಲ್ಲವರಾರು ದೇವರ ಆಟವನು ಕೊನೆಗೊಂದು ದಿನ ಸಿಕ್ಕರೂ ಸಿಗಬಹುದವನು ಈ ಪ್ರೀತಿ ಕೊನೆವರೆಗೂ ಉಳಿವುದೋ? ಕಡಲ ಅಂಚಲ್ಲೆ ತೇಲಿ ಹೋಗುವುದೋ ?