ಒಲವು ಕನ್ನಡ
ಕುಲವು ಕನ್ನಡ
ನೆಲವು ಕನ್ನಡ
ಜಲವು ಕನ್ನಡ
ನಗುವು ಕನ್ನಡ
ಸೊಗವು ಕನ್ನಡ
ಹಸಿರು ಕನ್ನಡ
ಉಸಿರು ಕನ್ನಡ
ಶಕ್ತಿ ಕನ್ನಡ
ಯುಕ್ತಿ ಕನ್ನಡ
ಸ್ನೇಹ ಕನ್ನಡ
ಮೋಹ ಕನ್ನಡ
ನ್ಯಾಯ ಕನ್ನಡ
ಕಾಯ ಕನ್ನಡ
ಮಣ್ಣು ಕನ್ನಡ
ಹಣ್ಣು ಕನ್ನಡ
ಮಿಗವು ಕನ್ನಡ
ಖಗವು ಕನ್ನಡ
ನೀತಿ ಕನ್ನಡ
ಜಾತಿ ಕನ್ನಡ
ಸ್ಪೂರ್ತಿ ಕನ್ನಡ
ಕೀರ್ತಿ ಕನ್ನಡ
ಗುಡಿಯು ಕನ್ನಡ
ಕುಡಿಯು ಕನ್ನಡ
ಹಾದಿ ಕನ್ನಡ
ಆದಿ ಕನ್ನಡ
ಕೊನೆಯು ಕನ್ನಡ
ಹೊಣೆಯು ಕನ್ನಡ
ಹಗಲು ಕನ್ನಡ
ಮುಗಿಲು ಕನ್ನಡ
ಗಾನ ಕನ್ನಡ
ಪ್ರಾಣ ಕನ್ನಡ
ಗುರುವು ಕನ್ನಡ
ಅರಿವು ಕನ್ನಡ
ನೋಟ ಕನ್ನಡ
ಪಾಠ ಕನ್ನಡ
ಧಾರೆ ಕನ್ನಡ
ತಾರೆ ಕನ್ನಡ
ಅಲೆಯು ಕನ್ನಡ
ಹೊಳೆಯು ಕನ್ನಡ
ದೇವ ಕನ್ನಡ
ಕಾವ ಕನ್ನಡ
ವೀರ ಕನ್ನಡ
ಕ್ಷೀರ ಕನ್ನಡ
ಸರ್ವವೂ ಕನ್ನಡ ಮಯಾ
ಹೊಯ್ಸಳಾ ಹೈದೆರಾಬಾದಿ
- Kishor S
14 Dec 2025, 08:19 am
ಗೋರಿ ಮಾತಾಡುತಿದೆ..
ನನ್ನೊಳಗೆ ಗೊರಿಯೊಂದು
ಮಾತಾಡುತ್ತಿದೆ
ಅದೆಷ್ಟು ನೋವುಗಳು
ತಾನು ನೈತಿಕ ದಿವಾಳಿ ಎಂದೂ
ಕಪ್ಪು ಗೋರಿಗೆ ಬಿಳಿಯ
ಬಣ್ಣವ ಬಳಿಯುತಲಿದೆ
ನಾನು ಸುಮ್ಮನೆ ಜಡವಾಗುತ್ತೇನೆ..
ಎರಡು ಜೊತೆ ಜೊತೆಯಾಗಿ
ಹಣತೆಗಳು ಬೆಂಕಿಯಾಗಿ
ಉರಿಯುತಿದೆ ಶೋಷಣೆಯ
ಮಗ್ಗುಲಲ್ಲಿ ಮಲಗಿದ
ಪಿಂಡಗಳ ಸುಡುತ್ತಾ
ಇವೆಲ್ಲವ ಮರೆತಿದ್ದೇನೆ ಎನ್ನುವುದಕ್ಕಿಂತ
ಹಣತೆಯ ಬೆಂಕಿಗೆ
ಅಲಂಕಾರದ ವಸ್ತುವಾದ ಮಲ್ಲಿಗೆ
ಇಲ್ಲ್ರ ಅಡಗಿರುವ ದುರ್ನಾತವ
ಕಳೆದು ಬಾಡುತಿದೆ
ಗೊರಿಯ ದೀಪದ ಮೇಲೆ
ಈಗೀಗ ಬತ್ತಿಹೋಗಿರುವ
ಕಣ್ಣಿನ ಕಂಬನಿಗೆ
ಎಕ್ಕದ ಹಾಲಸುರಿದು
ತಿಥಿಯ ಹಬ್ಬಕ್ಕೆ ಕಡ್ಡಿಹಚ್ಚ ಬೇಕಿದೆ.
ಇನ್ನಾದರೂ ಚಿಗುರಬಹುದು
ಎಂದೂ ತಿಳಿದಾಗ
ಇಲ್ಲ ಬೇವಿನ ಕಹಿಗೆ
ಬೆಲ್ಲಸುರಿದು ಹಾಗೇ ಎನಿಸುತ್ತದೆ
ನಾನು ಗೊರಿಯೊಳಗೆಯ
ಒಬ್ಬನಾಗಿ ಬಿಡುತ್ತೇನೆ
ಗೊರಿಮಾತಾಡುವಾಗ..
Instagram:- unique_abhyaa
- abhi.s.j
11 Dec 2025, 10:44 am
ಮುಟ್ಟಿನಲ್ಲು ಮುಟ್ಟುವ,,,
ಓ ನೀಚ ಮನಸೇ.
ಒಂದು ಹೆಣ್ಣಿನ ಬಾರವ,,,,
ನೀ ಏಕೆ ಅರಿಯದೆ ಹೋದೆ.
ಮನಸ್ಸು ಒಪ್ಪುವುದಿಲ್ಲ,,,
ದೇಹ ಸ್ಪಂದಿಸುತ್ತಿಲ್ಲ,,,
ಹೃದಯ ಹಿಂಡುತಿದೆಯೆಲ್ಲ,,,
ಆದರೂ ನಿನಗೆ ನನ್ನ ಭಾವನೆ
ಅರ್ಥವಾಗಲೆ ಇಲ್ಲವಲ್ಲ.
ನತದೃಷ್ಟ ಬದುಕೇ,,,
ನಂದು ಇಂದು ಎಂದೆಂದು.
insta:- unique_abhyaa
- abhi.s.j
08 Dec 2025, 08:38 pm
ನನ್ನ ಪರಿಚಯ ಹೇಳುತ್ತಿದೆ ಆ ನಿನ್ನ ಕಣ್ಣುಗಳು ಹೃದಯದಲ್ಲಿ ಸುಡುತಿಹುದು ನಿನ್ನ ನೆನಪಿನ ಬೆಂಕಿಯಲ್ಲಿ
ನಿನ್ನ ಮೌನವು ನೂರು ಮಾತು ಹೇಳಿ ಹೇಳುತ್ತಿದೆನಗೆ ಯಾರ ಮಾತು ಕೇಳಿ ನನ್ನಿಂದ ಹೀಗೆ ದೂರವಾಗಿಯೇ ನೀ ನಿಂದು
ಇಲ್ಲಿ ಮರುಗುತ್ತಿದೆ ಮನಸ್ಸು ಮರೆತ ನಿನ್ನ ನೆನೆದು ಹೇಳುತ್ತಿದೆ ನಿನ್ನ ಕಣ್ಣೀರು ಅಲ್ಲಿ ಕೂಡ ಹೀಗೆ ನಿಂದು
ಒಡಲೊಳು ತುಂಬಿ ಅದು ಅಳಿಸಲಾಗದೆ ಪ್ರೇಮವು ತೋರದೆ ಬಚ್ಚಿಡುವ ನನ್ನಲ್ಲಿ ಏಕೆ ನಿನಗಿಂದು
ಮರೆಯ ಬಹುದೇ ನಿನ್ನ ನಾ ನನ್ನನೇ ಮರೆತು ಹೋದರು ಉಸಿರಾಟವನ್ನು ನಾವಿಲ್ಲಿ ಮರೆಯುವ ಮುನ್ನ ನೆನಪನ್ನು ಬಂದು ಬೇಗ ಸೇರೆ ನೀನು ನನ್ನನ್ನು