Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇಮರೆಡ್ಡಿ ಯಲ್ಲಮ್ಮ

ಯಲ್ಲಮ್ಮನ ಕರುಣೆಯಿಂದ
ಎಲ್ಲಾರು ಧನ್ಯರಮ್ಮ
ಹಲವಾರು ನಾಮದಿಂದ
ಅವತರಿಸಿದ ರೇಣುಕಾ ಯಲ್ಲಮ್ಮ

ಹುಟ್ಟಿದಳಮ್ಮ ಯಲ್ಲಮ್ಮ
ಕರುಣಾಡು ಮಣ್ಣಲ್ಲಿ
ಅವಳ ಮದುವೆ ಮಾಡಿ ಕೊಟ್ಟಾರವ್ವ
ಜಮದಾಗ್ನಿಗೆ ಯಲ್ಲವ್ವನ

ಸತ್ಯುಳ್ಳ ಶರಣೆ ಯಲ್ಲಮ್ಮ.....
ನಿತ್ಯ ಅವಳ ನೆನೆಯಬೇಕು ನಾವಮ್ಮ
ಜಮದಗ್ನಿ ಪರಿಕ್ಷಯಲ್ಲಿ
ಯಲ್ಲವ್ವನೆ ಪತಿವ್ರತೆಯವ್ವ

ಮರಳಲ್ಲಿ ಮಡಕೆಯ ಮಾಡಿ
ಹಾವಿನೆಡೆಯ ಸಿಂಬೆ ಮಾಡಿ
ಶಿವಪೂಜೆಗೆ ಗಂಗೆ ತಂದಾಳೊ....
ಯಲ್ಲವ್ವ ನಾಗಿ ಹುಚ್ಚೆಂಗಿ ಮಲ್ಲಮ್ಮನಾಗಿ

ಸವದತ್ತಿಲ್ಲಿ ಐಕ್ಯವಾಗಿ ತಲೆಮೇಲೆ ಕಡ್ಲಿಗೆ ಹೊತ್ತು
ಚೌಡ್ಕಿ ಎಂಬ ನಾದ ಸ್ವರದಲ್ಲಿ ಯಲ್ಲವ್ವನ ಹೊತ್ತು
ಭಕ್ತ ಜನರು ಉಘೇ ಉಘೇ ಎನ್ನುತ್ತಾರವ್ವ
ಯಲ್ಲವ್ವನ ಪವಾಡ ಗಂಡು ಜೋಗ್ತಿ ಯಲ್ಲವ್ವ

ಬೇವು ಭಂಡಾರದಲ್ಲಿ ಯಲ್ಲವ್ವನ ಮಹಿಮೆ ಇದೆ
ಹುಚ್ಚೆಂಗಿ ಬೆಟ್ಟದಲ್ಲಿ ಯಲ್ಲವ್ವನ ಅವತಾರಾವಿದೆ
ಕುಣಿಯುತ್ತ ಭಕ್ತಾ ಜನರ ಮನಸನ್ನು ಗೆದ್ದಳು ತಾಯಿ
ಪರಶುರಾಮನ ಜನ್ಮದಾತೆ ಏಳು ಕೊಳ್ಳದ.......
ಯಲ್ಲಮ್ಮ ತಾಯಿ

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- gtr

04 Jul 2021, 06:39 pm

ನನಗೆ ನಾನ್ಯಾರೋ

ನನಗೆ ನಾನ್ಯಾರೋ
ನಿನಗಾದೆ ನಾ ಸಹೋದರಿ!!
ಕಣ್ಣ ರಪ್ಪೆಗಳಂತೆ
ನಾವಿರುವ ಜೊತೆಯಲಿ!!

ಮನದ ಮುಗಿಲಲ್ಲಿ
ಮೂಡಿ ಮಿನುಗೋ ಚುಕ್ಕಿ!!
ಹಸಿರ ಬನದಲ್ಲಿ
ಆಡುವ ಜೋಡಿ ಹಕ್ಕಿ!!

ಅಕ್ಕರೆಯ ದಡದಲ್ಲಿ
ಹರಿಯುವ ನದಿಯು ನಾನು!!
ಸಕ್ಕರೆ ತುಂಬಿದ ಒಲವನು
ಬೆರೆಸಿ ಹರಿಸಿದೆ ನೀನು!!

ಕುದಿಯುವ ನೀರಲಿ ಅಕ್ಕಿ
ಆಡುತಲೇ ತಾ ಉಕ್ಕಿ!!
ಹಸಿವ ನೀಗುವುದು
ಬಿಸಿಯಲಿ ತಾ ಬೆಂದು!!

ಜೊತೆಯಲ್ಲಿ ನೀನಿರಲು
ಹಾಲು ಬೆಳಕಿನ ಕಡಲು!!
ಆಡಿ ಒಡನಾಡಲು ಯಾರಿಲ್ಲ
ಸಖಿ ನಿನಗಿಂತ ಮಿಗಿಲು!!





- ಪಿ.ಜಿ.ಜ್ಯೋತಿ

02 Jul 2021, 09:19 am

ಅಂಬರದ ಚುಂಬನ

ಹೇ ಅಂಬರದ ಚುಂಬನದ ಬೆಳಕ ಚೆಲುವೆ,
ನೀನೇಕೆ ಯಾರಿಗೂ ಕಾಣದಾಗಿರುವೆ.?
ಎಲ್ಲಿದ್ದರೂ, ಹೇಗಿದ್ದರೂ, ನಿನ್ನೇ ನಾ ಪ್ರೀತಿಸುವೆ,
ಓ ಕನಸಿನ ಕಲ್ಪನೆಯ ಚೆಲುವೆ......


ಇದು ಕೊನೆಯಿರದ ಸೌಂದರ್ಯ ಸಂಭಾಷಣೆ,
ನಿನ್ನ ಪ್ರತಿರೂಪ, ಗುಣದೀಪ ನನಗಾಸರೆ,
ನೂರು ಪದ ಸೇರಲು,
ಒಬ್ಬ ಕವಿಯಾಗಲು.....

ನಿನ್ನ ಸ್ಪರ್ಷವಿದೆ, ಹರ್ಷವಿದೆ ಕಣಕಣದಲೂ,
ನನ್ನೊಲವು ಮನೆಮಾಡಲಿ ನಿನ್ನೆದೆಯಲೂ,
ಎರಡೂ ಶ್ರುತಿ ಸೇರಲಿ,
ಪ್ರೀತಿ ನವಿರಾಗಲಿ......

- abhi

01 Jul 2021, 04:46 pm

ಅವಳನ್ನು ಸೀರೆಯಲ್ಲಿ ನೋಡಿದಾಗ ಏನೋ ಒಂಥರ ವಿಸ್ಮಯ.

ಜೀನ್ಸ್ ಪ್ಯಾಂಟ್ ಅಲ್ಲಿ ಕಂಡಾಗ ಮನಸ್ಸು ಬೆಂಕಿಯ ಆಲಯ.

ನೀಳ ಜಡೆಯ ನಲ್ಮೆ ಚಲುವೆ.

ನಿಲಮೇಘನಾದೆ ಒಲವೇ.

ಹೆಣ್ಣಂದರೆ ನನ್ನವಳು, ಹುಣ್ಣಿಮೆ ನಾಚಿಸುವವಳು.

ನಗುವಿನಲ್ಲೇ ನೆನೆಸಿ ಮನಸನು ಕೊಲ್ಲುವಳು.

ಕಣ್ಣಾಲೇ ಅಂಚಲ್ಲಿ ಪ್ರೀತಿಯ ಚರಣ.

ಅವಳ ಹೆಜ್ಜೆ ಕಾಯಿತಿಹೆ ನಾ ತಿಳಿಯದೆ ಕಾರಣ.

ಮರೆಯದೆ ನೆನಪಾಗುವಳು, ಇದು ಹುಚ್ಚು ಹೃದಯ.

ಅವಳೆಲ್ಲಿರುವಳೋ ಅದು ನನಗೆ ಇನ್ನೂ ತಿಳಿಯದ ವಿಷಯ

- abhi

01 Jul 2021, 04:08 pm

ಚಿಂತೆ ಏಕೆ

ಎಲ್ಲೆಯನ್ನು ಮೀರಿ "ಅಲ್ಲ"ನೇನಿಸಿಕೋಳುವುದೇಕೆ
ಇಲ್ಲ ಎನ್ನುವ ಚಿಂತೆಲಿ "ಗೊಲ್ಲ"ನಾಗುವೆಯಾಕೆ?

ವಿಶ್ವವನ್ನೇ ಗೆದ್ದ ಅಲೆಕ್ಸಾಂಡರ್ ಮಣ್ಣಗಿದಾನೆ
ಲೋಕವನ್ನೇ ಹೆದರಿಸಿದ ಲಾಡೆನ್ ಕರಕಲಾಗಿದನೆ
ಖಂಡವನ್ನೇ ದಂಡೆತ್ತಿದ ಖಿಲ್ಜಿ ಸೋತು ಸುಣ್ಣವಾದ
ಜಗತ್ತನ್ನೇ ನಿಬ್ಬೆರಗಾಗಿಸಿದ ಹಿಟ್ಲರ್ ನೇಣಿಗೇರಿದ

ಹಸಿರಿನಿಂದ ಕಂಗೊಳಿಸುವ ಎಲೆಗಳು ಒಣಗ್ತವೆ
ನುಣ್ಣಗೆ ಬಾಚಿದ ಕೂದಲುಗಳು ಉದರತವೆ
ಆಡಂಬರಡಿ ಮೆರೆದವ ಆಸ್ಪತ್ರೆ ಸೇರ್ತಿದಾನೆ
ಮೈಮಾಟದಿ ರಂಬೆಯಾದವಳೂ ಕನ್ನಡಿ ಹಿಡಿತಾಳೆ

ಧಮ್ ಇದೆ ಎಂದವನು ಟೊಳ್ಳು ಬಂಬ್ ಆಗ್ತಿದ್ದಾನೆ
ತಾಕತ್ ತೊಳಲ್ಲಿದೆ ಅಂದವನು ಹುಂಬ ಆಗ್ತಿದ್ದಾನೆ
ನೋಡಿಕೊಳ್ತಿನಿ ನಿಂನೆಂದವನು ಸುಂದ ಆಗ್ತಿದಾನೆ
ಸಿಗ್ತಿಯಾ ನೀನು ಎಂದವನು ಚೊಂಬು ಆಗ್ತಿದಾನೆ

ಅಕ್ಕರೆಯ ಮಾತಿನಲ್ಲಿ ಸಕ್ಕರೆಯ ಕೊಟ್ಟು
ಅಕ್ಕ-ಪಕ್ಕದವರನು ಬಿಕ್ಕದಂತೆ ಇಟ್ಟು
ನೆತ್ತಿಯ ಕೊಂಬನು ಬಿಂಬದಿ ಹೊತ್ತಿ
ಬಿದ್ದೋಗುವ ಮುನ್ನ ಇದ್ದನೆಂದಿನಿಸಿಕೊ!!!

ಸುಗ್ಗಿ..







- ಆರ್ ಎಸ್ ಸುಗ್ಗಿ.

27 Jun 2021, 09:54 pm

ಬದುಕು

ಆಗೆಲ್ಲಾ ಇರಲಿಲ್ಲ ಚಿಂತೆ..!!
ದೊಡ್ಡವರು ಆದಂತೆಲ್ಲಾ ಮಾಡಲು ಕಂತೆ ಕಂತೆ..!!
ದುಡಿಯುತ್ತಿರುವರು ಎಲ್ಲರು ಕತ್ತೆಯಂತೆ..!!
ಸಮಯವು ಮುನ್ನುಗ್ಗುತ್ತಿರಲು ಜಿಂಕೆಯಂತೆ..!!
ಜೀವನದ ಸ್ವಾದ ಸವಿಯದಂತೆ..!!
ವಯಸ್ಸಾದಂತೆ ನುಂಗುವರು ಬಿಪಿ ಸುಗರ್ ಮಾತ್ರೆ ಕಂತೆ ಕಂತೆ!!
ಇದು ಒಂದು ಬದುಕಂತೆ..?

- Harish Gowda

25 Jun 2021, 09:04 pm

ಸಿರಿ ರಕ್ಷೆ

ಹಕ್ಕಿಗಳ ಕೂಟದಲ್ಲಿ ನಾ ಮೈಮರೆತು ಕುಳಿತಿರಲು ಹಸಿರೆಲೆಯ ಮೇಲಿಂದ ಇಬ್ಬನಿಯ ಹನಿಯೊಂದು ನನ್ನ ಕೈಮೇಲೆ ಇಳಿದಿರಲು ನನ್ನ ಮನದ ಪರದೆ ಸರಿಸಿ ಹೃದಯ ಹುಡುಕಿತು ನಿಮ್ಮ ತೇಜಸ್ವಿ ಅಂತ ಮನವ ಸಿಗಲಿಲ್ಲ ಅಂದು ನೀವು ನನಗೆ ತಿಳಿಯಲಿಲ್ಲ ನಾ ಯಾರೆಂದು ನಿಮಗೆ ಶ್ರೀ ರಕ್ಷೆ ದಿನದಂದು ಪ್ರಣತಿಯ ಹಿಡಿದು ನಾ ಕಾಯಿ ದಿರಲು ಹೂವಂತ ಮನದ ವನು ಸಜ್ಜನಿಕೆ ಗುಣದವನು ಅಣ್ಣ ಎದುರಲ್ಲಿ ನಿಂತಿರಲು ಆರತಿಯ ಬೆಳಗಿದೆ ನೋ ಸಿಹಿ ತುತ್ತ ನೀಡಿದೆನು ಅಣ್ಣ ನನ್ನ ಶ್ವಾಸ ದಲ್ಲಿ ಉಸಿರಾಗಿ ನೆಲೆಸೆಂದು ಬೇಡಿದೆನು ಮನಸಿನ ಪ್ರವಾಹದ ಅಲೆಗಳ ದಾಟಿ ಶುದ್ಧ ಪ್ರೇಮದ ಹೃದಯ ತಂತಿಯ ಮೀಟಿ ರವಿಯ ಕಿರಣದ ಕಾಂತಿ ಅಣ್ಣನಲ್ಲಿ ಇರಲು ತಂಗಿಯ ಹೃದಯದ ನೆನಪು ಅದರೊಳಗೆ ಬೆಳಗುತಿರ ಲೂ ಅಮ್ಮ ಹಾರೈಸಿದರು ನಮಗೆ ವಾತ್ಸಲ್ಯಕ್ಕೆ ಸಸಿಯಾಗಿ ಪ್ರಶಂಸೆಗೆ ಹೆಸರಾಗಿ ಯುಗವು ಸ್ಮರಿಸಲಿ ನಿಮ್ಮ ತವರಿನ ಸ್ಪೂರ್ತಿಯಾಗಿ.

Download Kannada Kavana app : https://goo.gl/9ZnKGJ

- nagamani Kanaka

24 Jun 2021, 08:16 pm

ದುಡ್ಡು

ದುಡಿಯುವವನಿಗೆ
ದುಡಿದು ಬದುಕುವ ಚಿಂತೆ
ದುಡಿದು ತಿನ್ನುವ ಚಿಂತೆಯಾದರೆ
ದುಡ್ಡು ಇದ್ದವನಿಗೆ ದುಡಿಮೆಯ
ಚಿಂತೆಯಿಲ್ಲ ದುಡ್ಡು ಗಳಿಸಿ
ಉಳಿಸಿ ಸಾಯುವ ಚಿಂತೆ

- ರಾಜು ಹಾಸನ

23 Jun 2021, 12:16 pm

ನನ್ನವಳು

ಪ್ರೀತಿ ಕೊಟ್ಟ ಗೆಳತಿ
ವಿಷವಾ ಕೊಟ್ಟರು
ಕುಡಿದು ಮಲಗಬಹುದು
ಕಣ್ಣ್ ಮುಚ್ಚಿ
ಆರಡಿ ಮೂರಡಿ
ಗುಂಡಿಯೋಳಗೆ ಕನಸು ಕಾಣುತ್ತಾ
ಪ್ರೀತಿ ತುಂಬಿದ ಎದೆಗೆ
ಚೂರಿ ಚುಚ್ಚಿದರು
ತೆಡೆದುಕೊಳ್ಳಬಹುದು
ಎದೆಯ ಮೇಲಿನ
ಗಾಯದ ನೋವು ಆದರೆ
ಪ್ರೀತಿ ಪ್ರೇಮದ ರೆಕ್ಕೆ ಕಟ್ಟಿ
ಆಗಸದಲ್ಲಿ ಹಾರಾಡಿ
ಕುಣಿದು ಕುಪ್ಪಳಿಸಿದ
ಮನಸು ಹೃದಯದ
ನೋವು ತಡೆದುಕೊಳ್ಳುವುದು
ಬಹಳ ಕಷ್ಟ

- ರಾಜು ಹಾಸನ

22 Jun 2021, 09:56 pm

ಯೋಚನೆ

ಅವರು ಹಾಂಗೇ
ಇವರು ಹಿಂಗೇ ಅಂತಾ
ಯೋಚಿಸುವ ಬದಲು
ನಾವು ಹೇಂಗೆ ಅಂತಾ
ಆಲೋಚಿಸಿದರೆ
ಸಾಗುವುದು
ನಮ್ಮ ಜೀವನ
ಮುಂದೆ ಮುಂದೆ
ಇಲ್ಲದಿದ್ದರೆ
ನಿಂತ ನೀರಿನಂತೆ
ನಮ್ಮ ಜೀವನ
ಮುಗಿದು ಹೋಗುವುದು

- ರಾಜು ಹಾಸನ

21 Jun 2021, 09:58 pm