Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನಾ ಕೀ

ನನ್ನಾಕೀ ನೀ ಸಣ್ಣಾಕೀ
ಏನು ತಿಳಿಯದಾಕೀ
ಗಪ್ಪನೆ ಬಂದು ಹತ್ತಿರ ಕುಂತು
ಮುದ್ದನು ಕೊಡುವಾಕೀ

ಹುಚ್ಚು ಮರೆಯಲಿ
ನನ್ನ ನೋಡಿ ನಕ್ಕು ನಗುವಾಕೀ
ಮಾತು ಮಾತಿಗೆ ನನ್ನ ನಕ್ಕುನಗಿಸುವಾಕೀ
ಕಣ್ಣ ಸನ್ನಿಲೆ ನನ್ನ ಪ್ರೀತಿ ಮಾಡಿದಾಕೀ
ನಾ ಕಂಡರ ಬೆಳಕ್ಕಿಯಂಗ ಹಾರಿ ಬರುವಾಕೀ

ಸಿಟ್ಟು ಸಿಡಿವು ನನ್ನ ಎದೆಯಾಗ
ತುಂಬಿ ತುರುಕಿದಾಕೀ
ಪ್ರೀತಿ ಪ್ರೇಮ ಹಂಚಿ ನನ್ನ ಬೆಚ್ಚಿ ಬೀಳಿಸಿದಾಕೀ
ಗತ್ತು ಇಲ್ಲದಾಕೀ ನೀ ಸ್ವಚ್ಛ ಮನಸ್ಸಿನಾಕೀ

ಎಲ್ಲಿ ಹೋದರು ನೀ ಬಿಡದೆ ಇರುವಾಕೀ
ಬೆನ್ನುಹತ್ತಿದ ದೆವ್ವಿನ್ಹಾಂಗ ನನ್ನ ಹುಡುಕುವಾಕೀ
ಮಾತು ಮಾತಲಿ ನನ್ನ ಮರಳು ಮಾಡುವಾಕೀ
ಸೋಗು ಹಾಕುವಾಕೀ ನನ್ನ ಬಿಟ್ಟು ಇರುದಾಕೀ



- shankar gargi

30 Jul 2021, 11:50 am

ಪ್ರೀತಿ ಜೀವನ

ಪ್ರೀತಿನೇ ಜೀವನವೆಲ್ಲಾ
ಜೀವನವೇ ಪ್ರೀತಿ
ಪ್ರೀತಿ ಹಿಂದೆ ಓಡಿ
ಮರುಳಾಗಬೇಡ
ಜೀವನದ ಹಿಂದೆ ಓಡಿ
ಮಣ್ಣಾಗಬೇಡ
ಆಸೆಗೆ ಬಿದ್ದು
ಬಲಿಯಾಗಬೇಡ
ತಳಕ್ಕೆ ಗಾಳಕ್ಕೆ ಸಿಕ್ಕಿ
ಒದ್ದಾಡಬೇಡ
ಇದ್ದಷ್ಟು ದಿನ
ನಿನ್ನ ಇಷ್ಟದಂತೆ ಬದುಕು
ಆದರೆ ನಿನ್ನ ಇಷ್ಟ
ಕಂಡವರಿಗೆ ಕಷ್ಟವಾಗದಿರಲಿ
******ರಾಜು ಹಾಸನ******

- ರಾಜು ಹಾಸನ

29 Jul 2021, 11:45 pm

ಮನುಜ

ಹುಟ್ಟಿ ಬಂದ ಮೇಲೆ
ನೀ ಬದುಕಬೇಕು ಮನುಜ
ಸೋಲು ಗೆಲುವಿನ ಹಾದಿಯಲ್ಲಿ
ನೀ ಸಾಗಬೇಕು ಮನುಜ

ದೀಪದಂತೆ ಬೆಳಕು
ಬೆಳಗಬೇಕು ಮನುಜ
ಪ್ರೀತಿ ಪ್ರೇಮ ಹಂಚಿ
ನೀ ಬಾಳಬೇಕು ಮನುಜ

ಸುಖ-ದುಃಖ ಹಂಚಿ
ನೀ ನಡೆಯಬೇಕು ಮನುಜ
ಮೂರು ದಿನದ ಸಂತೆ
ನೀ ಮಾಡಬೇಕು ಮನುಜ

ತಿಳಿದು ನೋಡು ಮನುಜ
ತಿರು ತಿರುಗಿ ನೋಡು ಮನುಜ
ಬಾಳ ಪುಟದ ಬದುಕು
ಹಸನಾಗಬೇಕು ಮನುಜ


- shankar gargi

29 Jul 2021, 10:20 pm

ಬಾನಿನ ಹಾಸಿಗೆ

ಬಾನಿನ ಹಾಸಿಗೆ‌
ಆ ಚಂದಿರನ ಊರಿಗೆ!!
ಭುವಿಯ ಹಾಸಿಗೆ
ಇದು ನಮ್ಮ ಪಾಲಿಗೆ!!

ರಾತ್ರಿ ಕಳೆದ ಮೇಲೆ
ಹಗಲು ಬರುವುದಿಲ್ಲಿ ನಿತ್ಯ!!
ರವಿಯ ಕಿರಣ ಧರೆಗೆ
ಬೆಳಕ ನೀಡುವುದು ಸತ್ಯ!!

ಬದುಕು ಎಂಬ ಮಲ್ಲಿಗೆಯ
ಪರಿಮಳ ದಳ ಮಧ್ಯೆ!!
ತನ್ನ ನಂಬಿ ಬಂದವರಿಗೆ
ದಾರಿ ತೋರಿಸುವ ವಿದ್ಯೆ!!

ಸುತ್ತಲಿರುವ ಕತ್ತಲಲ್ಲೇ
ಬೆಳಗುವುದು ಹಣತೆ!!
ಸತ್ಯ ನಿಷ್ಠೆ ಯಿಂದ ನಡೆಯೆ
ಬೆಳೆಯುವುದು ಘನತೆ!!


- ಪಿ.ಜಿ.ಜ್ಯೋತಿ

29 Jul 2021, 06:45 pm

ಅಂಬೇಡ್ಕರ್

ದಿನ ದಿನಗಳು ಉರುಳಿ
ವರು ವರುಷಗಳು ಬಂದರು
ಬೀಸೊ ಗಾಳಿಯ
ದಿಕ್ಕು ಬದಲಾದರೂ
ಕ್ಷಣ ಕ್ಷಣಕ್ಕೂ ಜನರ
ಮನಸ್ಸು ಬದಲಾದರು
ಸೂರ್ಯ ಚಂದ್ರರು
ಇರುವ ತನಕ
ಅಚ್ಚಳಿಯದೆ ಉಳಿಯುವ
ಈ ದೇಶದ ಉಸಿರು ಬಡ ಜನರ
ಜೀವ ಬಾಬಾಸಾಹೇಬ
ಭೀಮ್ ರಾವ್ ಅಂಬೇಡ್ಕರ್

- ರಾಜು ಹಾಸನ

29 Jul 2021, 12:08 am

ಮನ ಮೆಚ್ಚುವವ

ಕೈ ಬೆರಳು ಖಾಲಿ ಇದೆ ನೀ ಇಡುವ ಉಂಗುರಕ್ಕಾಗಿ,
ಈ ನನ್ನ ಹೃದಯ ಸಿಂಹಾಸನವು ಕಾಯುತ್ತಿದೆ,
ಮನ ಮೆಚ್ಚುವ  ನಿನ್ನ ಆಗಮನಕ್ಕಾಗಿ,

ಮನದ ಭಾವನೆಗಳ ಒಡೆಯ ನೀನು,
ನಿನ್ನ ಕಾಣದೆಯೇ ಕನಸ ಕಟ್ಟಿರುವೆ ನಾನು,
ನನಗಾಗಿಯೇ ಹುಟ್ಟಿರುವವ ನೀನು,
ಆದಷ್ಟು ಬೇಗಾ ನನ್ನ ಕಣ್ಣಾ ಮುಂದೆ ಬಂದೆ ಬರುವೆ ನೀ ಎಂದು ಕಾಯುತ್ತಿರುವೆ ನಾನು.

   ಕನಸಿನ ಕೋಟೆಯನೇ ಕಟ್ಟಿದೆ ಈ ಮನ,
ನನ್ನ ಮನ ಮೆಚ್ಚುವವನ ಆಗಮನಕ್ಕಾಗಿ ಕಾಯುತ್ತಿದೆ
ಪ್ರತಿ ಕ್ಷಣ. 

- Veena

27 Jul 2021, 12:54 pm

ಪಯಣದ ಹಾದಿ

ಯಾರನ್ನೂ ನಂಬಿಯೂ
ನೆಡೆಯಬೇಡ ನುಡಿಯಬೇಡ
ಹೋಗಬೇಡ ಕೂರಬೇಡ
ಜೀವನ ಜೀವಂತವಾಗಿರುವಾಗ
ನಿಲ್ಲದೆ ನಿರಂತರವಾಗಿರುವಾಗ
ಜೀವ ಬಿಟ್ಟು ಹೋಗಬೇಡ
ಮನಸಿನ ಚಿಂತೆಯನ್ನು
ಛಲದ ಚಿತೆಯಲ್ಲಿಟ್ಟು
ಜ್ಞಾನದ ಬೆಳಕು ಹಚ್ಚಿ
ಗುರಿ ಮುಟ್ಟುವ ತನಕ
ಸಾಗಲಿ ಸಾಗಲಿ ಮುಂದೆ
ಮುಂದೆ ಸಾಗಿ ನೆಡೆಯಲಿ
ಪಯಣದ ಹಾದಿ

- ರಾಜು ಹಾಸನ

27 Jul 2021, 12:05 am

ಮನದ ಮಾತು

ನನ್ನ ಮನದ
ಸುಂದರ ಹೂವೆ
ನನ್ನ ನೋಡಿ
ನಗುವಿನ ಏಕೆ
ತಿಳಿಯದಾಗಿದೆ
ನಿನ್ನ ಮನದ ಆಸೆ
ಸಾಕಾಗಿದೆ ಈ
ಕಂಗಳ ಮಾತು
ಬಯಸುತ್ತಿದೆ
ನಿನ್ನ ಸೇರುವ ಆಸೆ
ಸೋತಿದೆ ಮನವು
ನುಡಿಯದ ಮಾತು
ಪ್ರಿಯೆ ಹೇಗೆ
ಹೇಳಲಿ ನಿನಗೆ
ಈ ಮನದ ಮಾತು

- shankar gargi

26 Jul 2021, 10:45 am

ಕುಣಿಯೋನು ಬಾರೆ

ಕುಣಿಯೋನು ಬಾರೆ
ಗೆಳತಿ ಕುಣಿಯೋನು ಬಾರೆ

ನಿನ್ನಂತೆ ನಾನಾಗಿ
ನನ್ನಂತೆ ನೀನಾಗಿ
ನಲಿಯೋಣ ಬಾರೆ

ಹೆಜ್ಜೆಗೆ ಹೆಜ್ಜೆ ಇಟ್ಟು
ತಾಳಕ್ಕೆ ತಕ್ಕಂತೆ
ಕುಣಿಯೋಣ ಬಾರೆ

ದುಃಖವ ಮರೆಯುತ
ಸಂತೋಷ ಪಡೆಯುತ
ಈ ಸಂಸಾರ ದುಡೋಣ ಬಾರೆ

ಕಣ್ಣಲ್ಲಿ ಕಣ್ಣಿಟ್ಟು
ಮನದಲ್ಲಿ ಮನವಿಟ್ಟು
ಮೈ ಮರೆಯೋಣ ಬಾರೆ

ತೆಂಗಿನ ವನದಾಗ
ಎಳೆನೀರು ಕುಡಿಯುತ
ತಂಪು ಗಾಳಿಯ ಜೊತೆಗೆ ಹಾರೋಣ ಬಾರೆ

ಹಸಿರು ಸಿರಿಯಲಿ
ಹೊಸತನವ ಕಾಣುತ
ಸಿರಿ ಹಿಗ್ಗಿ ಕುಣಿದಂತೆ ಕುಣಿಯೋನು ಬಾರೆ

ಕುಲ ಕುಲ ನಕ್ಕೊಂತ
ಸುಖ-ದುಃಖ ಹಂಚುತ
ಹಾಲ್ಜೇನು ಸವಿಯೋಣ ಬಾರೆ




- shankar gargi

26 Jul 2021, 10:38 am

ಸಂಕ್ರಾಂತಿ

ಹೊಸ ಚೈತನ್ಯ
ಮೂಡುತ್ತ
ರವಿಯು ಪಥವನು
ಬದಲಿಸುತ
ಮಾಗಿಯ ಚಳಿಯ
ಮರೆಸುತ
ಮತ್ತೆ ಬಂತು ಸಂಕ್ರಾಂತಿ

ಹೊಸ ಬಾಳಿಗೆ
ಹೊಸ ಬೆಳಕನು
ಹೊಸ ಜೀವಕ್ಕೆ
ಹೊಸ ಕಳೆಯನು
ಹೊಸ ವರುಷದಲ್ಲಿ
ಶುಭ ಕೋರುತ
ಮತ್ತೆ ಬಂತು ಸಂಕ್ರಾಂತಿ

ಎಳ್ಳು-ಬೆಲ್ಲದ
ಸವಿಯಿಲಿ
ಪ್ರೀತಿ-ಪ್ರೇಮ
ಹಂಚುತ
ಸವಿ ಮಾತಿನ
ಹಿತನುಡಿಯಲಿ
ಮತ್ತೆ ಬಂತು ಸಂಕ್ರಾಂತಿ

ಸುಗ್ಗಿ ಹಿಗ್ಗಿನಲ್ಲಿ
ಎಳ್ಳು ಬೆಲ್ಲವ ಹಂಚಿ
ಜಾತಿ ಮತವ ತೋರೆದು
ದ್ವೇಷ ಭಾವ ಮರೆತು
ಸ್ನೇಹ ಪ್ರೀತಿಯಲಿ
ಸುಖ-ದುಃಖವ ಹಂಚುತ
ಮತ್ತೆ ಬಂತು ಸಂಕ್ರಾಂತಿ






- shankar gargi

26 Jul 2021, 09:51 am