Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾರ್ಮೋಡದ ನಡುವಲಿ

ಕಾರ್ಮೋಡದ ಕತ್ತಲೆಯಲ್ಲಿ,
ಕಾಯುತಿರುವೆ. ಕಾಣದ ಕಾನನದ ದಾರಿಯಲ್ಲಿ,
ನೀ ಬರುವೆ ಎಂಬ ಆಸೆಯಲ್ಲಿ,
ಬೆಳಕ ಹುಡುಕುತ್ತಿರುವೆ ನಿನ್ನ ನಿರೀಕ್ಷೆಯಲ್ಲಿ.

- Veena

03 Aug 2021, 08:36 pm

ಮಿಸ್ ಕಾಲ್

ನಾನು ಬರೆಯುವ
ಈ ಕವನ ನಿನಗೆಂದು
ನೀನು ಯಾರು ಅಂತ
ನನಗೆ ಇನ್ನು ತಿಳಿದಿಲ್ಲ
ನೀನು ಎಲ್ಲಿ ಇರುವೆ ಅಂತ ಗೊತ್ತಿಲ್ಲ
ನಿನ್ನ ಹೆಸರು ಮಾತ್ರ ನೆನಪು
ಕಪ್ಪು ಬಿಳಿಯ ನಗುವ
ನಿನ್ನ ಭಾವಚಿತ್ರ ನನ್ನ ಮನದಲ್ಲಿ
ಹಾಗೆ ಉಳಿದಿದೆ
ನಾನು ಯಾರು ಅಂತ ನಿನಗೆ
ಈಗ ಗೊತ್ತಾಗಬಹುದು
ನಿನಗಾಗಿ ಈ ಕವನ ಬರೆದೆ
ನಿನಗೆ ನಾನು ಯಾರು ಅಂತ
ನಿನಗೆ ಗೊತ್ತಾದರೆ
ಈ ಚರ ಸಂಖ್ಯೆಗೆ ಒಂದು
ಮಿಸ್ ಕಾಲ್ ಮಾಡಿ ಅಷ್ಟೇ

- shankar gargi

03 Aug 2021, 08:01 pm

ಜೈ ಭೀಮ್

ವಿಶ್ವಕ್ಕೆ ಒಬ್ಬನೇ
ಸೂರ್ಯನೋಬ್ಬನೇ
ಜೈ ಭೀಮ್

ಈ ದೇಶದ ಉಸಿರು
ನಮ್ಮಯ ಜೀವ
ಜೈ ಭೀಮ್

ಬಡವರ ಬಂಧು
ದುಷ್ಟರ ಶತ್ರು
ಜೈ ಭೀಮ್

ದಿನ ದಲಿತರ ನಾಯಕ
ಮನುವಾದಿಗಳ ಸಂಹಾರಕ
ಜೈ ಭೀಮ್

ಶೋಷಿತರ ರಕ್ಷಕ
ಮನುವಾದಿಗಳ ಭಕ್ಷಕ
ಜೈ ಭೀಮ್

ಹಸಿದವರ ಶಕ್ತಿ
ಉಳ್ಳವರ ವಿರೋಧಿ
ಜೈ ಭೀಮ್

ಸಮಾನತೆಯ ನೇತಾರ
ಶಾಂತಿದೂತನ ಅವತಾರ
ಜೈ ಭೀಮ್

ವಿಶ್ಷ ಜ್ಞಾನದ ಹರಿಕಾರ
ಸಂವಿಧಾನದ ಹರಿಕಾರ
ಜೈ ಭೀಮ್



- ರಾಜು ಹಾಸನ

02 Aug 2021, 04:19 pm

ಮಧುರ‌ವೀ ಸ್ನೇಹ...

ಮಧುರವೀ‌ ಸ್ನೇಹ ಎಂದಿಗೂ ನಿಮ್ಮ ನೆನಪಲಿ
ಹೇಗೆ ಮರೆಯಲಿ ಆ ದಿನಗಳನು ಅನುರಣಿಸಿವೆ ಪ್ರತಿ ಕ್ಷಣಗಳ ಧ್ವನಿಯು...
ಈ ಸ್ನೇಹವೇ ಒಂದು ಸುಮಧರ ಭಾವವಾಗಿದೆ.
ಈ ಮನಸುಗಳ ನಡುವಿನ ಸಮನ್ವಯತೆಯೇ ನಮ್ಮ ಭಾಷೆಯಾಗಿದೆ...
ನಿಮ್ಮ ಪ್ರೀತಿಯೇ ನನ್ನ ಆಸ್ತಿ ಗೆಳೆಯರೆ...
ಈ ಸ್ನೇಹಕೆ ಮತ್ತೊಂದು ಅರ್ಥವೆ ನೀವು...

- Deenu Adi

01 Aug 2021, 07:35 pm

ಹೃದಯ ತೀರದಿ

ಹೃದಯ ತೀರದಿ ಹರೆಯ ನವಿಲು
ಗರಿಯ ಬಿಚ್ಚಿ ಕುಣಿಯುತಿರಲು!!
ಒಲವ ಸುರಿದ ನೀಲಿ ಮುಗಿಲು
ಸೇರಿತು ತನು ಮನದ ಕಡಲು!!

ಒಂಟಿ ಜೀವದ ಜಂಟಿ ಬಾವಕೆ
ಆಗಿ ಬಂದೆ‌ ನೀ ಒಲವ ಕಾಣಿಕೆ!!
ನಿನ್ನ ಮೋಹದ ಮೋಡಿ ಆಟಕೆ
ಉದಯವಾಯಿತು ನಾಚಿಕೆ!!

ಉಸಿರಿನಲ್ಲಿ ಹಸಿರ ಜೀವವು
ಹೆಸರ ಕೂಡಿ ಕರೆದ ಬಾವವು!!
ಅದರದಲ್ಲಿ ಕೊಂಚ ಮೌನವು
ಹೃದಯದಲ್ಲಿ ಪ್ರೇಮ ವಾದ್ಯವು!!

ಮಳೆಯ ರವಿಯ ಮಿಲನವಾಗಲು
ಏಳು ಬಣ್ಣದ ಜನನವಾಯಿತು!!
ಮನದಿ ನಿನ್ನ ರೂಪ ಮೂಡಲು
ಬದುಕ ಬಣ್ಣ ಹೊಸತೇ ಆಯಿತು!!




- ಪಿ.ಜಿ.ಜ್ಯೋತಿ

01 Aug 2021, 06:02 pm

ಮೊಗ್ಗಿನ ಜಡೆಯ ಬಯಕೆಯ ತಂಪು

ಹಿತ್ತಲಿನಲ್ಲಿತ್ತು ಒಂದು ಗೋವೆ ಮರವು
ಬಲು ಎತ್ತರವಾಗಿತ್ತು ಅದರ ಆ ನಿಲುವು!!
ಚಿತ್ತ ಸೆಳೆಯುವ ದುಂಡು ಮಲ್ಲಿಗೆ ಬಳ್ಳಿ
ಸುತ್ತಿಕೊಂಡಿತ್ತು ಮರದ ಕೊಂಬೆಗಳಲ್ಲಿ!!

ಮುತ್ತಿನ ಮೊಗ್ಗಲಿ ಬಾಲ್ಯದ ಮುಗ್ಧತೆ
ಅರಳಿದ ಹೂವಲ್ಲಿ ಬಯಕೆಯ ಪರಿಮಳ!!
ಬೀಸುವ ತಂಗಾಳಿ ಹೊತ್ತು ತಂದಿಹ ಘಮಕೆ
ಬೇಕೆನ್ನುವ ಬಯಕೆ ನನ್ನ ಎಳೆ ಮನಕೆ!!

ಅರಳಿದ ಹೂ ಬಳ್ಳಿ ಎಟುಕದ ಮರದಲ್ಲಿ
ಮುಡಿದುಕೊಳ್ಳುವ ಬಯಕೆ ನನ್ನ ಹೆರಳಲ್ಲಿ!!
ಅಪ್ಪನ ಕೈಯಲ್ಲಿ ಕಿರುಏಣಿಯ ಮಾಡಿಸಿ
ಬಿಡಿಸಿದ ಮೊಗ್ಗನ್ನು ಮಡಿಲಲಿ ತುಂಬಿಸಿ!!

ಚಿಗುರೆಲೆಗೆ ಹಸಿ ಸುಣ್ಣದ ಬೊಟ್ಟನ್ನು ಇಟ್ಟು
ಒಣಅಡಿಕೆ ಹೊಗೆಸೊಪ್ಪು ಸೇರಿಸಿ ಕುಟ್ಟು!!
ಕುಟ್ಟಾಣಿ ಹಿಡಿದಿರುವ ಅಜ್ಜಿಯ ಎದುರಲ್ಲಿ
ಮಡಿಲಲ್ಲಿ ತುಂಬಿದ ಮಲ್ಲಿಗೆಯ ನಾ ಚೆಲ್ಲಿ!!

ಮೊಗ್ಗಿನ ಮಾಲೆಯ ಮುಡಿಯಲ್ಲಿ ಮುಡಿದು
ಕುಣಿದಾಡಿದೆ ಅಂದು ಸಂತಸದಿ ನಲಿದು!!
ಹಬ್ಬದ ಹಾಗಿದೆ ಬಾಲ್ಯದ ಆ ನೆನಪು
ಮೊಗ್ಗಿನ ಜಡೆಯು ಬಯಕೆಯ ತಂಪು!!


- ಪಿ.ಜಿ.ಜ್ಯೋತಿ

01 Aug 2021, 05:59 pm

ಆಸೆ

ಏನೋ ಆಸೆ
ಅದು ಕಾಣುತ್ತಿಲ್ಲ
ಬೇಡಿದರೆ ಸಿಗುತ್ತಿಲ್ಲ
ಕೇಳಿದರೆ ಕೊಡುತ್ತಿಲ್ಲ
ಬಯಸಿದರೆ ಬರುತ್ತಿಲ್ಲ
ಅದೊಂದು ಹುಚ್ಚಾಸೆ

ಆ ಮಾತು
ನನ್ನ ಮನದ
ಸುಂದರ ಹೂವೆ
ನನ್ನ ನೋಡಿ
ನಗುವೆಯಾ ಏಕೆ
ತಿಳಿಯದಾಗಿದೆ
ನಿನ್ನ ಮನದ ಆಸೆ
ಸಾಕಾಗಿದೆ ಈ
ಕಂಗಳ ಮಾತು
ಬಯಸುತ್ತಿದೆ
ನಿನ್ನ ಸೇರುವ ಆಸೆ
ಸೋತಿದೆ ಮನವು
ನುಡಿಯದ ಮಾತು
ಪ್ರೀಯೆ ಹೇಗೆ
ಹೇಳಲಿ ನಿನಗೆ
ನನ್ನ ಮನದ ಮಾತು

- shankar gargi

01 Aug 2021, 09:23 am

ಸವಿ ಜೇನು

ಯಾವ ಶಿಲ್ಪಿಯ
ಕಥೆಯು ನೀನು
ಯಾರ ಮುಡಿಯ
ಹೂವು ನೀನು
ಯಾವ ದೇವನ
ಸೃಷ್ಟಿ ನೀನು

ಯಾರ ಬಾಳಿನ
ಹೊಂಗನಸು ನೀನು
ಯಾರ ಬದುಕಿನ
ಸವಿ ಜೇನು ನೀನು
ಯಾರ ಒಲವಿನ
ಉಡುಗರೆ ನೀನು

ಯಾರು ಕಣ್ಣಿನ
ಸೊಬಗು ನೀನು
ಯಾರ ಚೆಲುವಿನ
ಮೈಮಾಟ ನೀನು
ಯಾರ ಕನಸಿನ
ಶೃಂಗಾರವು ನೀನು

ಯಾರ ನುಡಿಯ
ಮುತ್ತು ನೀನು
ಯಾರ ಉಡಿಯ
ಸೊಬಗು ನೀನು
ಯಾರ ಜೀವದ
ಜೀವ ನೀನು

- shankar gargi

31 Jul 2021, 01:39 pm

ದಾಸ

ಕುಡಿ ಕುಡಿ
ನೀ ಸೆರೆ ಕುಡಿ
ಹೊಡಿ ಹೊಡಿ
ನೀ ಜೋಲಿ ಹೊಡಿ

ಹೊತ್ತು-ಗೊತ್ತುಇಲ್ಲದೆ ಕುಡಿ
ಊಟ ಗೀಟಾ ಬಿಟ್ಟು ಕುಡಿ
ಕಂಠಪೂರ್ತಿ ಕುಡಿ ಕುಡಿ
ಇರುವತನಕ ಕುಡಿ ಕುಡಿ

ಪ್ರೀತಿ ನಿನಗೆ ಕೈಕೊಟ್ಟತಾ
ನಂಬಿದವರು ನಿನ್ನ ಕೈ ಬಿಟ್ರಾ
ನನ್ನ ತನ್ನವರು ದೂರಾದ್ರಾ
ಮನಸ್ಸು ನಿನ್ನದು ಕೆಟ್ಟೋಹ್ಹಿತಾ

ತುತ್ತು ಕೊಟ್ಟವಳು ನೆನಪಿಲ್ಲ
ಹೆತ್ತು ಹೊತ್ತವರ ಅರಿವಿಲ್ಲ
ನನ್ನ ತನ್ನವರ ಮರೆತೆಲ್ಲಾ
ಮುಗಿದಂಗಾತು ನಿಂದೆಲ್ಲಾ

ಬೀದಿಬೀದಿಗಳೆ ನಿನ್ನ ಅಂಬಾರಿ
ಗುಡಿ ಗುಂಡಾರಗಳು ನಿನ್ನ ಮನೆ
ಏನಿದು ನಿನ್ನ ನಾಯಿಪಾಡು
ಹಾಳಾಗಿ ಹೋಯಿತು ನಿನ್ನ ಬಾಳು


- shankar gargi

31 Jul 2021, 01:25 pm

ಮಣ್ಣಿನ ಮಡಿಕೆ

ಉಟ್ಟ ಹೊದಿಕೆಯ ಬಿಚ್ಚಿ
ಬರಿ ಬೆತ್ತಲೆಯಾಗಿ
ಮಣ್ಣಲ್ಲಿ ಮಣ್ಣಾಗಿ ಹೋಗುವ
ಈ ಜೀವಕ್ಕೆ ಬದುಕುವ ಹಂಬಲವೇಕೆ

ಬರಿಗೈಯಲ್ಲಿ ಬಂದೆ
ಬರಿಗೈಯಲ್ಲಿ ಹೊರಟೆ
ಆಡಿಸುವವನು ಆತ
ಆಡುವವರು ನಾವು
ಮೂರು ದಿನದ ಸಂತೆಯಲಿ
ಬದುಕುವ ಹಂಬಲವೇಕೆ

ಪ್ರಾಣ ಇರುವ ತನಕ
ಪ್ರಯಾಣಿಕರು ನಾವು
ಮುಗಿದ ಬಳಿಕ ಇನ್ನಾರು
ಮಸಣದ ಹಾದಿಯಲ್ಲಿ
ಬೆಂದು ಹೋಗುವ ದೇಹಕ್ಕೆ
ಬದುಕುವ ಹಂಬಲವೇಕೆ

ಮಣ್ಣಿನ ಮಡಿಕೆಗೆ
ಜೀವವ ತುಂಬಿ
ಬದುಕಿನ ಬಂಡಿಯ
ಜೀವಂತ ಓಡಿಸಿ
ನನ್ನ ತನ್ನವರ ಗಾಳಿಗೆ ತೂರಿ
ಹೋಗುವ ಜೀವಕ್ಕೆ
ಬದುಕುವ ಹಂಬಲವೇಕೆ

- shankar gargi

31 Jul 2021, 01:04 pm