Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶಿಕ್ಷಕರ

ಬರೆವ ಅಕ್ಷರವು
ಅಕ್ಕರೆಯಾಗಲಿ,

ಕೂಗುವ ಧ್ವನಿಯು
ಧಮನಿಯ ತುಂಬಲಿ,

ಕಾಣುವ ದೃಷ್ಟಿಯು
ಒಲವ ಸೃಷ್ಟಿಸಲಿ,

ಕರಗುವ ಕಡಲು
ಕರಿ ಮೋಡವಾಗಲಿ,

ಸುರಿಯುವ ಹನಿಯು
ಹಸಿರಾಗಿ ಬೆಳೆಯಲಿ,

ಬೆಳೆದ ಹಸಿರು ಬಡವರ
ಉಸಿರಾಗಿ ಬದುಕಲಿ......

ಒಟ್ಟಿನಲಿ
ಕಲಿ - ನಲಿ ಯ ಬದುಕನಲಿ
ಕಲಿಯುವುದೆಲ್ಲವು
ನಿಸ್ವಾರ್ಥದಿಂದ ನಲಿಯುತಿರಲಿ......

- Gururaj Angadi

13 Aug 2021, 08:11 am

ಸ್ವಾತಂತ್ರ್ಯ

ಬಂತು ಬಂತು ಸ್ವಾತಂತ್ರ್ಯ
ಎಪ್ಪತೈದರ ಸ್ವಾತಂತ್ರ್ಯ
ಅದ್ದೂರಿ ವೈಭವದ ಸ್ವಾತಂತ್ರ್ಯ
ಸರ್ವ ಸಮಾನತೆಯ ಸ್ವಾತಂತ್ರ್ಯ
ಯಾರಿಗೂ ಬಗ್ಗದ ಸ್ವಾತಂತ್ರ್ಯ
ಯಾರಿಗೂ ಕುಗ್ಗದ ಸ್ವಾತಂತ್ರ್ಯ
ಸಾಕ್ಷರತೆಯ ಬೆಳಗಿಸುವ ಸ್ವಾತಂತ್ರ್ಯ
ದೇಶದ ಅಭಿವೃದ್ಧಿಯ ಸ್ವಾತಂತ್ರ್ಯ
ದೇಶದ ಪ್ರಬಲತೆಯ ಸ್ವಾತಂತ್ರ್ಯ
ಧೈರ್ಯ ತ್ಯಾಗದ ಸ್ವಾತಂತ್ರ್ಯ
ಸತ್ಯ ಶಾಂತಿಯ ಸ್ವಾತಂತ್ರ್ಯ
ಹಸಿರು ಸಮೃದ್ಧಿಯ ಸ್ವಾತಂತ್ರ್ಯ
ತ್ಯಾಗ ಬಲಿದಾನಗಳ ಸ್ವಾತಂತ್ರ್ಯ
ವೀರ ಶೂರರ ಸ್ವಾತಂತ್ರ್ಯ
ದೇಶಭಕ್ತರ ಸ್ವಾತಂತ್ರ್ಯ
ಭಾರತ ದೇಶದ ಸ್ವಾತಂತ್ರ್ಯ
ಎಪ್ಪತೈದರ ಸ್ವಾತಂತ್ರ್ಯ
ಅಮೃತ ಮಹೋತ್ಸವದ ಸ್ವಾತಂತ್ರ್ಯ
ಭಾರತಾಂಬೆಯ ಸ್ವಾತಂತ್ರ್ಯ

- shankar gargi

12 Aug 2021, 07:50 pm

ಮುಪ್ಪು

ಬಾಲ್ಯವ ಕಳೆದು
ಹರೆಯು ಕಮರಿ
ಮುಪ್ಪಿಗೆ ಬಂದು ನಿಂತೈತ್ಯೋ

ಅವ್ವನ ಮೊಲೆಯ ಚೀಪುತ
ಅಪ್ಪನ ಹೆಗಲ ಏರಿತ
ಮೋಜು ಮಸ್ತಿಯ ಮಾಡಿತ
ಎಲ್ಲರ ಚಿಂತೆ ಗೆಡಸೈತ್ಯೋ
ಜೀವಕ್ಕ ಬ್ಯಾಸರಾಗಿ
ಮುಪ್ಪಿಗೆ ಬಂದು ನಿಂತೈತ್ಯೋ

ಹರೆಯದ ಕಾಲಕ್ಕೆ
ಚಿಗುರು ಮೀಸೆಯ ತಿರುವುತ
ನೂರೆಂಟು ಕನಸವ ಕಟ್ಟಿ
ಈ ಜಗವ ಮೆಟ್ಟಿ ನಿಂತೈತ್ಯೋ
ಮುಪ್ಪಿಗೆ ಬಂದು ಕುಂತೈತ್ಯೋ

ನಡೆಯುತ ಬೆನ್ನು ಬಾಗಿ
ಕೈಯಲ್ಲಿ ಕೋಲನ್ನು ಹಿಡಿದು
ಮಂಕು ಮಂಕಾಗಿ ನಿಂತೈತ್ಯೋ
ನೂರೆಂಟು ಚಿಂತೆ ಮಾಡೈತ್ಯೋ
ಮುಪ್ಪಿಗೆ ಬಂದು ನಿಂತೈತ್ಯೋ

ಏನಪ್ಪ ಮಾಡಿದೀ
ನೀ ಅಂತ ಕೇಳಿದರೆ
ಮಾರಿ ಮಾರಿ ನೋಡೈತಿ
ಬಾಯಿ ಬಾಯಿ ಬಿಡತೈತಿ
ಕಣ್ಣಾಗ ನೀರು ತುಂಬೈತಿ
ಮಸಣದ ಹಾದಿಯ ಹಿಡದೈತಿ




- shankar gargi

11 Aug 2021, 02:24 pm

ಎಲ್ಲಿಗೆ ಪಯಣ

ಹುಟ್ಟು ಎಲ್ಲೊ
ಸಾವು ಎಲ್ಲೊ
ಬದುಕಿನ
ಪಯಣ ಎಲ್ಲಿಗೋ!

ಹುಟ್ಟಿದ
ಮೊದಲ ದಿನದಿಂದ
ಸಾಯುವ
ಕೊನೆಯ ದಿನದವರಿಗೆ
ದುಡಬೇಕು
ಬದುಕಿನ ಪಯಣ

ಹೊತ್ತು ಮುಳುಗಿ
ಕತ್ತಲಾಗುವ ತನಕ
ಕಳೆಯಬೇಕು
ನೋವು ನಲಿವಿನ ಪಯಣ

ಜೀವನದಲ್ಲಿ
ಗುರಿ ಇರಲಿ ಇಲ್ಲದಿರಲಿ
ಹುಟ್ಟಿದ ಮೇಲೆ
ಸಾವಿನ ದಡ ಸೇರುವುದು ನಿಶ್ಚಿತ

- ರಾಜು ಹಾಸನ

10 Aug 2021, 10:37 pm

ಕಂದ

ಪುಟ್ಟ ಪುಟ್ಟ
ಹೆಜ್ಜೆ ಇಟ್ಟು
ಬಾರೋ ನನ್ನ ಕಂದ
ಈ ಮನೆಯ ಆನಂದ

ತೊದಲು ನುಡಿಯಲ್ಲಿ
ಅಂಬೆಗಾಲು ಇಡುತ್ತ
ಕೇಕೆ ಹಾಕುತ್ತ
ಜೋಲಿ ಹೊಡೆಯುತ
ಆಡುವ ನನ್ನಪುಟ್ಟ ಕಂದ
ಈ ಮನೆಯ ಅಂದ

ದುಂಡನೆ ಮೊಗದಲ್ಲಿ
ಪಳ ಪಳ ಹೊಳೆಯುವ
ಕವಳೆಯ ಕಣ್ಣಿನ ಚಂದಿರ
ಬೆಳದಿಂಗಳ ನಗುವಲ್ಲಿ
ಅರಳುವ ಗಲ್ಲದ
ಚುಕ್ಕೆಯ ಸುಂದರ

ಮುಗ್ಧ ಮನಸ್ಸಿನ
ನನ್ನುಡಿಯ ಸಿರಿಯೆ
ಈ ಮಡಿಲ ಕರುಳೆ
ಈ ಮನೆಯಂಗಳದ
ಹೂವಿನ ಹೂನಲೆ
ಈ ಬದುಕಿನ ಮೂಗ ಸಿರಿಯೇ






- shankar gargi

08 Aug 2021, 09:21 pm

ದೂರ ದೂರ ತೀರಾ

ಸಾಗರದಾಚೆಯ ಪಯಣದಲ್ಲಿಂದು,
ಒಬ್ಬಂಟಿಯಾಗಿ ದೂರ ತೀರಾಚೆ,
ಗಡಿಯಾಚೆಗಿನ ಭುವಿಯೊಳಗೆ,
ಕವಲೊಡೆದ ದಾರಿಗಳೆಷ್ಟೋ,

ಹೆಜ್ಜೆ ಹೆಜ್ಜೆಗೂ ನೀರಿಕ್ಷೆಯಿಟ್ಟ ಕನಸಿನೊಳಗೆ,
ಮುಳುಗುವ ಭಾವನೆಗಳೆಷ್ಟೋ,
ಕೈ ಜಾರಿ ಹೋಗುವ ಬಚ್ಚಿಟ್ಟ ಮಾತುಗಳೆಷ್ಟೋ,
ಮೌನವಾಗಿ ಕುಳಿತ ಭಾವ ಬಂಧಗಳೆಷ್ಟೋ,
ಎಲ್ಲವೂ ಹಿಂದೆ ಸರಿದು
ಜಾರು ಬಂಡೆಯಾಗಿ ಹೋಗುತ್ತಿವೆ ದೂರ ದೂರ ತೀರಾ..!!

- Megha

08 Aug 2021, 11:30 am

ಕಣ್ಮರೆ..

ಕಣ್ಮರೆಯಾಗಿಬಿಟ್ಟೆ ನೀ, ಯಾವುದೋ ನೆಪದಲ್ಲಿ,
ನನ್ನ ನೆನಪೇ ನಿನಗೆ ಕಾಡುತ್ತಿಲ್ಲ ಏತಕೆ??
ನಾಟಕದ ಬದುಕೇ ಸಾಕಾಗಿದೆ ನನಗಿಲ್ಲಿ,
ಬಂದು ಸೇರಿಬಿಡು ಈ ಹೃದಯವ ಮರಳಿ,
ಕಳೆದುಹೋದ ನೆನಪುಗಳೇ ಕಾಡುತಿವೆ ನನಗಿಲ್ಲಿ,
ನೀನಿರದ ನನ್ನ ಬಾಳೇ ಮರೀಚಿಕೆ ಇಲ್ಲಿ,
ಮನ ಕರಗಿ ಹೋಗುತ್ತಿದೆ ನಿನ್ನದೇ ಕನವರಿಕೆಯಲ್ಲಿ,
ಕಾಯುತ್ತಿದೆ ನೀ ಬರುವ ಶುಭದಿನಕೆ,
ಕೇಳಲು ಬಯಸುತಿದೆ ನಿನ್ನ ಯ ಬಯಕೆ,
ಮುಡಿಪಿಡುವೆ ನಿನಗಾಗಿ ಈ ನನ್ನ ಬದುಕೇ..!

- Megha

08 Aug 2021, 11:24 am

ಯಾರಿವಳು ಚೆಲುವೆ

ಯಾರಿವಳು
ಚೆಲುವೆ
ನನಗೆ ಒಲಿದವಳೆ
ಹಾಲು ಗೆನ್ನೆಯ
ಚೆಲುವೆ
ಈ ಹೃದಯದ ಒಲವೇ

ಧ್ವನಿಯಲ್ಲಿ
ಕೋಗಿಲೆ ಕಂಠ
ಹೊಳಪಲ್ಲಿ
ಮುತ್ತಿನ ಹಾರ
ಕಂಪಿನಲಿ
ಮಲ್ಲಿಗೆ ಹೂವು

ಸುಖದಲ್ಲಿ
ಸಾಗರದಂತೆ
ಹೃದಯದಲ್ಲಿ
ದೇವತೆಯಂತೆ
ಚೆಲುವಿನಲಿ
ಅಪ್ಸರೆಯಂತೆ

ಸವಿ ಜೇನು
ಸಿಹಿಯು ನೀನು
ಈ ಬಾಳ ಬದುಕಿನ
ಶೃಂಗಾರ ನೀನು
ಈ ಒಕ್ಕಣೆಯ
ಕವಿ ಕನ್ನಿಕೆ ನೀನು



- shankar gargi

07 Aug 2021, 09:37 pm

ಪರಿಶುದ್ಧ

ಶುದ್ದ ದೇಹವಿದರೇನು ಬಂತು
ಪರಿಶುದ್ಧ ಮನಸ್ಸು ಇಲ್ಲದಿದ್ದ ಮೇಲೆ
ಓ ಮಂಕು ತಿಮ್ಮ

ಮೈ ಶುದ್ದವಿದ್ದರು
ಒಂದಲ್ಲ ಒಂದು ದಿನ
ಮಣ್ಣಗುವುದು
ಉಸಿರು ನಿಂತಮೇಲೆ

ಮನಸು ಇದ್ದರು
ಸತ್ತರು ಮಣ್ಣಾಗದು
ಮನದ ನೆನಪಾಗುವುದು

ಸುಟ್ಟರೆ ಬೂದಿಯಾಗುವುದು
ಮಾಂಸ ಖಂಡಗಳ ಈ ದೇಹ
ಇದ್ದರು ಸತ್ತು ಸುಟ್ಟರು
ಬೂದಿಯಾಗದಿರುವುದು
ಈ ಮನದ ಮನಸು

***ರಾಜು ಹಾಸನ***

- ರಾಜು ಹಾಸನ

06 Aug 2021, 11:25 pm

ಜಗ ಮೆಚ್ಚಿದ ನಾಯಕ

ಜೀವನದಲ್ಲಿ ನೋವು
ನಲಿವು ಏನೇ ಇರಲಿ
ಬರಲಿ ಹೋಗಲಿ
ದುಡಿಯುವ ಛಲ ಇರಬೇಕು
ಮುನ್ನುಗ್ಗುವ ಮನಸ್ಸಿರಬೇಕು
ಗುರಿ ಮುಟ್ಟುವ ನಂಬಿಕೆ ಇರಬೇಕು

ಹುಟ್ಟಿದ ಮೇಲೆ
ಸಾಯುವುದು ಸತ್ಯ
ಆದರೆ ಹುಟ್ಟಿ ಸಾಯುವುದರ ಮಧ್ಯೆ
ಸಾಧಿಸಿ ನಿಲ್ಲಬೇಕು ಜಗ ಮೆಚ್ಚಿದ ನಾಯಕ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೆ

- ರಾಜು ಹಾಸನ

04 Aug 2021, 01:15 am