Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಾರ ಬಣ್ಣಿಸಲಿ ನಾನು...
ಯಾರ ಬಣ್ಣಿಸಲಿ ನಾನು
ಯಾರ ಮೆಚ್ಚಿ ಬರೆಯಲಿ ನಾನು.
ನಿನ್ನ ಮುಂಗುರುಳು ಕಪ್ಪು
ಹೊಗಳಿದರೆ ನಾ
ನಿನ್ನ ಕಾಮನ ಬಿಲ್ಲಿನ
ಹುಬ್ಬುಗಳಿಗೆ ಅಸಮಾಧಾನ.
ನಿನ್ನ ಅರಳುಕಂಗಳ ಬೆರಗು
ಸವಿಯುವಾಗ
ಸಂಪಿಗೆಯ ನಾಸಿಕದ ತುದಿ
ತುಸುಕೆಂಪು.
ನಿನ್ನ ಕೆಂಗುಲಾಬಿ ಕೆನ್ನೆಯ
ಅಭಿನಂದಿಸೆ ನಾನು
ನಿನ್ನಧರದಲ್ಲಿ ಕೊಂಕು ನಗೆಯ
ಕಿಡಿಕೋಪ
ನಿನ್ನ ಮಧು ತುಂಬಿದ ತುಟಿಯ
ಬಣ್ಣಿಸಲು ನಾನು
‘ನಾನೇನು ಕಡಿಮೆ’
ನುಡಿಯಿತು ಬಿಂಕದ ಸಿಂಹ ಕಟಿ.
ನನ್ನ ಪೆಚಾಟವ ನೋಡಿ
ನಗುತಿಹುದು ನೀನಿಟ್ಟ
ಕುಂಕುಮದ ಬಿಂದು.
ಯಾರ ಬಣ್ಣಿಸಲಿ ನಾನು
ಯಾರ ಮೆಚ್ಚಿ ಬರೆಯಲಿ
‘ಕವನ’
ನಾನಿಂದು.
insta:- unique_abhyaa
- abhi.s.j
23 Nov 2025, 09:05 pm
ಬಿಂಕದಾಕಿ..
ಗೆಜ್ಜೆ ಗೀಲಕ್ಕ ಮಾಡಿ
ನನ್ನ ಮನಸ್ಸ ಕದ್ದಾಕಿ
ಚೆಂದನ ಹಸರ ಸಿರಿ ಉಟ್ಟು
ಮಂದ್ಯಾಗ ಬರಾಕಿ
ಜಡಿಗೆ ಮಲ್ಲಿಗೆ ಮಾಲಿ ಹಾಕಿ
ಘಮ್ ಅನ್ನಾಕಿ
ಮುಖದಗಾ ಕಂದಹಾಸ ಬೀರಿ
ಚೆಂದ ಕಾಣಕಿ
ಕಂಡಂಗ ಮಾಡಿ
ಕಾಣದಂಗ ಮಾಯವಾದಾಕಿ
ಸಂದ್ಯಾಗ ಹಾದು ಹತ್ರ ಬಂದ್ರ
ಓಡಿ ಹೋಗಾಕಿ
ಮಾತನಾಡದ ನಾಚಿಕೊಂಡ
ಮಾರಿ ಕಿಂಚಾಕಿ
ನನ್ನ ನೆಳ್ಳಿಗೆ ಬೆದರಿಕೊಂಡ
ತಿರುಗಿ ನಿಲ್ಲಾಕಿ
ಬಿಂಕದ ಮಾತಿಲೇ ಬೆರಗ್ಮಾಡಿ
ಒಲಸಿಕೊಂಡಾಕಿ
ನನ್ನ ಪೋರಿ ಸ್ವರ್ಗದೊಳಗಿನ
ಅಪ್ಸರೆ ಅಂತಾಕಿ
insta:- unique_abhyaa
- abhi.s.j
23 Nov 2025, 08:49 pm
ಅಂತೇ ಕಂತೆ...
ಬೆಳಿಗ್ಗೆನೇ ಸಿಕ್ಬಿಟ್ಲು address ಹೇಳ್ಬೇಕಂತೆ
ಕಾಣಿಸ್ಬಿಟ್ಲು ನಂಗವಳು 4G ಹುಡುಗೀಯಂತೆ
ನೋಡುತ್ತಾ ಮುಖವನ್ನ ಹೇಳ್ತಿದ್ದೆ adress ನಾ
ನಕ್ಬಿಟ್ಲು ಒಮ್ಮೆಲೇ... ಕೇಳಿದೆ ಯಾಕೋ ಚಿನ್ನ
ಹೇಳ್ತಿದ್ಲು leftನ್ನ ತೋರಸ್ತೀದ್ಲು rightನ್ನ
ಅಂತೇಳಿ ತಿರುಗಿ ನೋಡದೆ ಹೋಗ್ಬಿಟ್ಲು ಮುಖವನ್ನ
ನೋಡುತ್ತಾ ನಿಂತೆ ಮೈ ಮರೆತಂತೆ..
ನೆನಪಾಯ್ತು ಒಮ್ಮೆಲೇ ಎಡವಿ ಬಿದ್ದಂತೆ..
fullstop ಇಟ್ಬುಟ್ಟೆ ಕನಸಿಗೇ ಮನಸ್ಸಿಲ್ಲದಂತೆ...
- abhi.s.j
21 Nov 2025, 08:11 pm
ಮತ್ತೆ ಮತ್ತೆ ನಕ್ಕಳು...
ಅತ್ತೆ ಮಗಳು
ಸೀರೆಯಲ್ಲಿ
ಮೊದಲ ಬರಿ ಜಾತ್ರೆಯಲ್ಲಿ
ಕಂಡು ಕದ್ದಳು
ಮನವನ್ನು ಮೆಲ್ಲ ಹತ್ತಿರ ಬಂದಳು
ಮುದ್ದು ಮೊಗವ
ಮತ್ತೆ ಮತ್ತೆ ತೋರಿ
ನಾಚಿ ಕಣ್ಣಲ್ಲೇ
ಮನದ ತುಂಬಾ
ಆಸೆಯ ಬಿತ್ತಿದಳು
ಜಾತ್ರೆಗೊಂದು ಮೆರುಗು ಬಂತು
ಅವಳನ್ನು ಕಂಡು
ಮನಸ್ಸಿಗೆ ಖುಷಿಯು ಬಂತು
ಹರೆಯದ ಬಯಕೆಗೆ
ಕಳೆ ಬಂತು
ಮಾಡದಿಯಾಗಿ ಬೆಡಗಿ
ಎಂದು ಮನವು
ಬೇಡಿಕೆಯ ಇಟ್ಟಿತು..
insta:- unique_abhyaa
- abhi.s.j
21 Nov 2025, 08:01 pm
ನೀ_ಹಾಕೊ_ಹೆಜ್ಜೆಗೆ_ಎದೆ_ಜಲ್_ಎಂದಿದೆ
__________________________________
ಹೆಜ್ಜೆಗಳೆ ಗೆಜ್ಜೆ ಕಟ್ಟದೆ
ಎಲ್ಲಿಂದಲೋ ಬಂದಂತಹ
ರಾಗಕೆ ತಾಳಕೆ ಮನಸೋಲುತ್ತಾ
ಸಂಗೀತದಲ್ಲಿ ಮುಳುಗಿ ಕುಣಿಯದಿರಿ
ನಿಮ್ಮ ಕುಣಿತಕ್ಕೆ ಮನಸ್ಸು ಕೂಡಾ
ಮನಸಾರೆ ಕುಣಿದಾಡಿ ಬಿಡುವುದು
ಕಾಲ್ ಗೆಜ್ಜೆಗಳೆ ತಾಳಕ್ಕೆ ತಕ್ಕಂತೆ
ಸುಮ್ಮನೇ ನಲಿಯದಿರಿ
ನಿಮ್ಮ ಗಲ್ ಗಲ್ ಶಬ್ದವು
ಹೃದಯದಲ್ಲಿ ಸೇರಿ ಮನಸೇ
ಚಂಚಲವಾಗಿ ನಿಮ್ಮ ಹಿಂದೆಯೇ
ಹೆಜ್ಜೆ ಹಾಕುತ ಹಿಂಬಾಲಿಸುವುದು
ದುಂಡು ಮಲ್ಲಿಗೆ ಹೂವುಗಳೆ
ನಿಮ್ಮ ಪರಿಮಳವನ್ನು ಹೆಚ್ಚಾಗಿ ಭೀರದಿರಿ
ಆ ಕಂಪಲ್ಲಿ ಮನಸ್ಸಿನ ಮನಸ್ಸನ್ನು
ಹಿಡಿತದಲ್ಲಿ ಇಟ್ಟುಕೊಂಡರು
ಮಾಯವಾಗಿ ಬಿಡುವುದು
ಕಂಗಳೆ ಹೋರೆ ನೋಟದಲ್ಲಿ
ಸುಮ್ಮನೆ ಮಾತಡಬೇಡಿ
ನಿಮ್ಮ ಮೌನದ ಮಾತುಗಳ
ಅರಿಯಲಾಗದೆ ಮನಸ್ಸಲ್ಲಿ
ಬೇಡದ ಪ್ರಶ್ನೆಗಳು ಮೂಡಿ ಬರುವುದು
ಅಲಂಕರಿಸಿದ ಅಂದದ ಐಸಿರಿಯೇ
ಮೆಲ್ಲನೆ ನನ್ನನೆ ಸೆಳೆದು ಆಕರ್ಶಿಸದಿರು
ನಿನ್ನ ಆಕರ್ಷಣೆಗೆ ಕ್ಷಣಾರ್ಧದಲ್ಲಿ
ನಿನಗಾಗಿ ಎಲ್ಲಿ ಈ ಜೀವ
ಜಾರುವುದೊ ತಿಳಿಯದಾಗಿದೆ
insta:- unique_abhyaa
- abhi.s.j
21 Nov 2025, 07:52 pm
ಹೆಜ್ಜೆಗಳೇ ತಾಳಕ್ಕೆ ತಕ್ಕಂತೆ
ಸಂಗೀತದಲಿ ಮುಳುಗಿ ಕುಣಿಯದಿರಿ
ನಿನ್ನ ಕುಣಿತಕೆ ಮನದಾಳದಲಿ
ತಾಳ ತಪ್ಪಿದಂತಾಯಿತು
ಕಾಲ್ ಗೆಜ್ಜೆಗಳೆ
ಸುಮ್ಮನೇ ನಲಿಯದಿರಿ
ನಿಮ್ಮ ಗಲ್ ಗಲ್ ಶಬ್ದವು
ಮನಸ್ಸಲಿ ಸೇರಿ ಮನಸೇ
ಚಂಚಲವಾದಿತು
ಮಲ್ಲಿಗೆಯ ಹೂವುಗಳೆ
ನಿಮ್ಮ ಕಂಪನು ಬೀರದಿರಿ
ಆ ಕಂಪಲ್ಲಿ ಮನಸ್ಸಿನಾ ಮನಸನ್ನು
ಸೆಳೆಯುವಂತಾಯಿತು
ಕಂಗಳೆ ಸುಮ್ಮನೆ ಮಾತಡಬೇಡಿ
ನಿಮ್ಮ ಮೌನದ ಮಾತುಗಳ
ಅರಿಯಾಲಾಗದೆ
ಹೊಸದಾದ ಭಾಷೆಯೊಂದನು
ಕಲಿಯುವಂತಾಯಿತು
ಅಲಂಕರಿಸಿದ ಅಂದದ ಐಸಿರಿಯೇ
ಮೆಲ್ಲ ಮೆಲ್ಲನೆ ಆಕರ್ಷಿಸದಿರು
ನಿನ್ನ ಆಕರ್ಷಣೆಗೆ
ಜೀವ ಎಲ್ಲಿ ಜಾರುವುದೊ
ತಿಳಿಯದಾಗಿದೆ
insta:- unique_abhyaa
- abhi.s.j
18 Nov 2025, 09:13 pm
#ನೀ_ಹಾಕೊ_ಹೆಜ್ಜೆಗೆ_ಎದೆ_ಜಲ್_ಎಂದಿದೆ
__________________________________
ಹೆಜ್ಜೆಗಳೆ ಗೆಜ್ಜೆ ಕಟ್ಟದೆ
ಎಲ್ಲಿಂದಲೋ ಬಂದಂತಹ
ರಾಗಕೆ ತಾಳಕೆ ಮನಸೋಲುತ್ತಾ
ಸಂಗೀತದಲ್ಲಿ ಮುಳುಗಿ ಕುಣಿಯದಿರಿ
ನಿಮ್ಮ ಕುಣಿತಕ್ಕೆ ಮನಸ್ಸು ಕೂಡಾ
ಮನಸಾರೆ ಕುಣಿದಾಡಿ ಬಿಡುವುದು
ಕಾಲ್ ಗೆಜ್ಜೆಗಳೆ ತಾಳಕ್ಕೆ ತಕ್ಕಂತೆ
ಸುಮ್ಮನೇ ನಲಿಯದಿರಿ
ನಿಮ್ಮ ಗಲ್ ಗಲ್ ಶಬ್ದವು
ಹೃದಯದಲ್ಲಿ ಸೇರಿ ಮನಸೇ
ಚಂಚಲವಾಗಿ ನಿಮ್ಮ ಹಿಂದೆಯೇ
ಹೆಜ್ಜೆ ಹಾಕುತ ಹಿಂಬಾಲಿಸುವುದು
ದುಂಡು ಮಲ್ಲಿಗೆ ಹೂವುಗಳೆ
ನಿಮ್ಮ ಪರಿಮಳವನ್ನು ಹೆಚ್ಚಾಗಿ ಭೀರದಿರಿ
ಆ ಕಂಪಲ್ಲಿ ಮನಸ್ಸಿನ ಮನಸ್ಸನ್ನು
ಹಿಡಿತದಲ್ಲಿ ಇಟ್ಟುಕೊಂಡರು
ಮಾಯವಾಗಿ ಬಿಡುವುದು
ಕಂಗಳೆ ಹೋರೆ ನೋಟದಲ್ಲಿ
ಸುಮ್ಮನೆ ಮಾತಡಬೇಡಿ
ನಿಮ್ಮ ಮೌನದ ಮಾತುಗಳ
ಅರಿಯಲಾಗದೆ ಮನಸ್ಸಲ್ಲಿ
ಬೇಡದ ಪ್ರಶ್ನೆಗಳು ಮೂಡಿ ಬರುವುದು
ಅಲಂಕರಿಸಿದ ಅಂದದ ಐಸಿರಿಯೇ
ಮೆಲ್ಲನೆ ನನ್ನನೆ ಸೆಳೆದು ಆಕರ್ಶಿಸದಿರು
ನಿನ್ನ ಆಕರ್ಷಣೆಗೆ ಕ್ಷಣಾರ್ಧದಲ್ಲಿ
ನಿನಗಾಗಿ ಎಲ್ಲಿ ಈ ಜೀವ
ಜಾರುವುದೊ ತಿಳಿಯದಾಗಿದೆ
insta:- unique_abhyaa
- abhi.s.j
18 Nov 2025, 09:12 pm
ನೆಲದಾಳದಿ ಬೀಜ ವಿಟ್ಟು...
ಸಸಿಯಾಗಿ ಜೋಡಿಸಿದೆ ನೀ ಅಕ್ಕ
ಕಾಯಕವೆ ಕೈಲಾಸ ಎಂಬುದನ್ನು...
ನೀನು ಎಲ್ಲರಿಗೂ ನೆನಪಿಸಿದೆ ಅಕ್ಕ
ಮುಂಬರುವ ಪೀಳಿಗೆಗೆ...
ಹಸಿರವರ ವಸಿಯ ನೆಟ್ಟಿಸಿದೆ ನೀ ಅಕ್ಕ
ನಿತ್ಯವೂ ಹಸಿರು ಇರುವಲ್ಲಿ...
ನೆಲೆಯಾಗಿ ನಿಂತವಳೆ ನೀ ಅಕ್ಕ
ಸಹಸ್ರಾರು ಗಿಡ ಮರಗಳಿಗೆ...
ಜನ್ಮ ಕೊಟ್ಟಂತಹ ದೇವತೆ ನೀ ಅಕ್ಕ
ಹಸಿರು-ನೀಡಿ ಉಸಿರು-ಚೆಲ್ಲಿ ಹಗಲಿರುವ...
ನಿಮ್ಮಆತ್ಮಕ್ಕೆ ಶಾಂತಿ ದೊರೆಯಲಿ ಅಕ್ಕ
ನೀನು ಬೆಳೆಸಿರುವ ಮರಗಳು...
ನಿಮ್ಮ ನೆನಪಲ್ಲಿ ಸದಾ ಚಿಗುತಿರಲಿ ಅಕ್ಕ
✍️ವಿ. ಎಸ್ಸ್.ಎಚ್ಚ.......
- v.s.h
16 Nov 2025, 03:07 pm
ಎಲ್ಲಿರಿವೆ ಹೃದಯದ ಚೋರಿ..!
ಹೆಗಿರುವೆ ಮನ ಮೆಚ್ಚಿದ ನಾರಿ..!ನಿನ್ನ ವೈಯಾರದ ಸೀರೆಯ ಸೆರಗಿನಲ್ಲಿ ನಿನ್ನ ಮೊಗವನ್ನು ಕಂಡೆ ಕನಸ್ಸಿನಲಿ..!ನೀನು ನಗುವಿನಲ್ಲಿ ಸದ್ದಿಲ್ಲದೆ ನನ್ನ ಮನಸ್ಸು ಕದ್ದೆ..!ನೀನು ಮೊಗವನ್ನು ತೋರಿಸದೆ ಹೊದೆ..!ಯಾರೇ ನೀ ಮದನಾರಿ..!ಈ ಭುವನದಲಿ ಎಲ್ಲೇ ಅಡಗಿದ್ದರೂ ನಿನಗಾಗಿ ನನ್ನ ಹೃದಯದ ಅಂಭಾರಿಯನ್ನು ಕಳಿಸಿ ಕೊಡುವೆ..!ನನಗಾಗಿ ಕುಳಿತು ಬಿಡು..!ನಿನ್ನ ಮನಸ್ಸನ್ನು ನನಗೆ ಕೊಟ್ಟು ನೋಡು..!ನಿನ್ನನ್ನು ಪ್ರೀತಿಯಿಂದ ಸ್ವಾಗತಿಸುವೆ..!ಹೃದಯದ ದೇವತೆ ನಿನಗಾಗಿ ಕದಿರುವೆ..!ನಿನಗಾಗಿ ಬರೆದಿರುವೆ ಈ ಸಾಲೂಗಳನು..
- Dyamanna Talawar
15 Nov 2025, 09:44 am
- Dyamanna Talawar
15 Nov 2025, 08:59 am