Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನ ಅವಿಶ್ರಾಂತ ದುಡಿಮೆ


ಮನದಂಗಳದಿ ನೀವು ಪಡೆದು ಪೂಜಿಸಿದ ವೃತ್ತಿ,
ಸದಾ ಬಯಸುವುದು ನಿಮ್ಮಿಂದ ಕಲ್ಯಾಣ ಕಾರ್ಯಗಳ ಪಂಚಾಯ್ತಿಯ ಪ್ರಗತಿ.
ಭ್ರಾತೃತ್ವದ ದುಡಿಮೆಗೆ ಸಾಕ್ಷಿಯಾದ ನಿಮ್ಮ ಸಹಾನುಭೂತಿ ಸಹಕಾರ ತತ್ವ,
ಹಸಿರು ತುಂಬಿದ ಅಮೃತ ವನದಲ್ಲಿ
ಸಂಚರಿಸುವ ಜನರ ಹೃದಯಗಳು
ಪ್ರಶಾಂತತೆಯ ಸವಿಯ ಸವಿಯುತ
ಆಚರಿಸುತ್ತಿವೆ ಹಬ್ಬದ ಉತ್ಸವ.
ವಿಶ್ರಾಂತಿ ಬಯಸದ ನಿಮ್ಮ ಕಾಯಕ,
ಬಾನಂಗಳದಿ ಬೆಳಗುತಿದೆ
ಅಮೃತ ಗ್ರಾಮ ಪಂಚಾಯ್ತಿ ಎಂಬ ಹೆಸರಿನ ಫಲಕ.
ಸೂಕ್ಷ್ಮದಿ ಸಮಸ್ಯೆಯನರಿತು ಸರಳತೆಯಲ್ಲಿ ಜನಮನಕೆ ಸ್ಪಂದಿಸುವ ನಿಮ್ಮ ಸ್ನೇಹ ಸ್ವಭಾವ,
ಜನರ ಮನಗಳು ನೆನೆಯುವಂತೆ ಮಾಡಿದೆ ನೀವು ಕೊರತೆ ನೀಗಿಸಿರುವ ಕ್ಷಣವ.
ನಿಮ್ಮ ನೈಪುಣ್ಯತೆ ಜ್ಞಾನದಿಂದ ಗ್ರಾಮಗಳ ಸಮೃದ್ಧಿ ಗೊಳಿಸಲು ನೀವು ಕೈಗೊಂಡ ಕಾರ್ಯತಂತ್ರಗಳ ನೀತಿ,
ಸ್ಪೂರ್ತಿಯಾಗಿದೆ ನಮ್ಮೆಲ್ಲರಿಗೂ
ನಿಮ್ಮನ್ನ ಸರ್ಕಾರ ಆಮಂತ್ರಿಸಿರುವ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ.

- nagamani Kanaka

23 Oct 2021, 09:01 pm

ನೀನಾರೋ

ಯಾರೋ ನೀನು ಯಾರೋ
ಎಲ್ಲಿಂದ ಬಂದೆ ನೀನಾರೋ
ಸಾಯುವ ತನಕ ನೀನಗ್ಯಾರು
ಹೇಳು ಮನುಜಾ ನೀನಾರೋ.

ಮುಳ್ಳಿನ ಸಂಸಾರ ನಿನಗುಂಟು
ಕಷ್ಟ ಪಾಡುಗಳು ನಿನನಂಟು
ಎಲ್ಲೋ ಹುಟ್ಟಿ,ಎಲ್ಲೋ ಬೆಳೆದು
ಹೋಗುವ ಮನುಜ ನೀನಾರೋ.

ಬತ್ತಲೆಯ ಬದುಕಲ್ಲಿ ಬೆಳೆದು
ಕರಿನೆರಳಲ್ಲಿ ಜೀವನ ಸವೆದು
ಮಣ್ಣು ಗೂಡುವ ಜೀವಕ್ಕೆ
ಬದುಕುವ ಆಸೆ ಇನ್ನೇಕೋ.

ಹುಟ್ಟುತ ಬತ್ತಲೇ,
ಸಾಯುತ್ತ ಬತ್ತಲೇ
ಕೊಳೆತು ನಾರುವ ದೇಹಕ್ಕೆ
ಬದುಕುವ ಹಂಬಲ ಇನ್ನೇಕೋ
ತಿಳಿದು ನೋಡಲೆ ಮನುಜಾ
ನೀನಾರೋ.


ಶಂಕರ ಗಾರ್ಗಿ




- shankar gargi

23 Oct 2021, 08:06 pm

ಜೀವನ ರಾಗ

ಮನ-ಮನಗಳ ಮಿಲನ
ಹೃದಯ ಸಂಗಮ
ಹೊಸರಾಗ, ಹೊಸ ಭಾವ
ಬಾಳೆಲ್ಲ ಜೀವನ ರಾಗ.

ಜೀವ ಜೀವಗಳು ಬೆಸೆದು
ಕೈ ಹಿಡಿದು ನಡೆಯುತಲಿ
ಬಾಳಿನ ಹೊಸ ಬದುಕಲಿ
ಸಾಗುವ ನಾವು ನಲಿಯುತಲಿ
ಪ್ರೀತಿಯ ಸವಿಯ ಸವಿಯುತಲಿ.

ಸುಖ ದುಃಖದ ಹಾದಿಯಲಿ
ಜೊತೆಯಾಗಿ, ನೆರಳಾಗಿ
ಬಾಳುವ ಹೊಸ ಕನಸಲಿ
ಉಸಿರಿಗೆ ಉಸಿರನ್ನು ಬೆರೆಸುತ
ಬದುಕುವ ನಾವು ಅನುದಿನದಿ.

ಶಂಕರ ಗಾರ್ಗಿ

- shankar gargi

22 Oct 2021, 07:44 pm

ಕನ್ನಡದ ಮಣ್ಣು

ಈ ಕನ್ನಡದ ಮಣ್ಣು
ಬಲು ಅಂದ
ಈ ಕನ್ನಡದ ನುಡಿಯು
ಬಲು ಚಂದ
ಈ ಕನ್ನಡಕ್ಕೆ ಸಾಟಿ ಬೇರಿಲ್ಲ
ಈ ಕನ್ನಡದ ಮಣ್ಣಲ್ಲಿ ನಾವೆಲ್ಲ.

ತಾಯಿ ಕಾವೇರಿ,ತುಂಗೆಯ ನಾಡು
ಹಚ್ಚು ಹಸಿರಿನ ಬೀಡು
ಕವಿ ಕೋಗಿಲೆಯ ವರ ನಾಡು
ಸಾಧು-ಸಂತರ ನೆಲೆವೀಡು.

ಹನಿಹನಿ ನೀರಲ್ಲಿ
ಕನ್ನಡದ ಕಲರವ
ಸವಿ ಸವಿ ಕನ್ನಡ
ಸವಿ ರುಚಿಯ ಕನ್ನಡ
ಸವಿಯಾದ ಕನ್ನಡ.

ಕನ್ನಡ ತಾಯಿಯ
ಮಡಿಲ ಮಗುವಾಗಿ
ಕನ್ನಡದ ಕಣ ಕಣದಲ್ಲಿ
ಸಂತೋಷದ ಹೊನಲಾಗಿ
ಹುಟ್ಟಿದ ನಾವು ಪುಣ್ಯವಂತರು
ಈ ಕನ್ನಡದ ಮಣ್ಣಲ್ಲಿ.

ಶಂಕರ ಗಾರ್ಗಿ

- shankar gargi

22 Oct 2021, 01:28 pm

ಗೊಂಬೆ

ನೀನಾದೆಯೇನು ಜೀವವಿರದ ಗೊಂಬೆಯಂತೆ
ಜೀವವಿದ್ದರೂ ಇಲ್ಲದಂತೆ, ಕಂಡೂ ಕಾಣದಂತೆ
ಅಲಂಕರಿಸಿ ಕೂತವು ಗೊಂಬೆ ಯಾರದೋ ಕೈಚಳಕ ದಂತೆ
ತಾಳಕ್ಕೆ ಕುಣಿದವು ಗೊಂಬೆ ಅದರದೋ ಸೂತ್ರದಂತೆ


ಈ ಜೀವನ ಗೊಂಬೆ ಪ್ರದರ್ಶನವಲ್ಲ
ಗೊಂಬೆಯಾಟವೂ ಅಲ್ಲ
ಮತ್ತೆ ನೀನಾಗುವಯೇಕೆ ಮೌನ ತಾಳಿದ ಗೊಂಬೆಯಂತೆ?













ನೀನಾದೆಯೇನು ಜೀವವಿರದ ಗೊಂಬೆಯಂತೆ
ಜೀವವಿದ್ದರೂ ಇಲ್ಲದಂತೆ, ಕಂಡೂ ಕಾಣದಂತೆ
ಅಲಂಕರಿಸಿ ಕೂತವು ಗೊಂಬೆ ಯಾರದೋ ಕೈಚಳಕ ದಂತೆ
ತಾಳಕ್ಕೆ ಕುಣಿದವು ಗೊಂಬೆ ಅದರದೋ ಸೂತ್ರದಂತೆ


ಈ ಜೀವನ ಗೊಂಬೆ ಪ್ರದರ್ಶನವಲ್ಲ
ಗೊಂಬೆಯಾಟವೂ ಅಲ್ಲ
ಮತ್ತೆ ನೀನಾಗುವಯೇಕೆ ಮೌನ ತಾಳಿದ ಗೊಂಬೆಯಂತೆ?













- Asha H. S

15 Oct 2021, 04:13 pm

prem

ಕವಿಗಾರ ನಾನಲ್ಲ......
ಕವಿ ಚಿಂತೆ ಎನಗಿಲ್ಲ......
ಕಣ್ಣಿಗೆ ಎಟಕುವ ಕವಿತೆಯ
ಹೇಳಲೇ.......

ಕನಸೆಂಬ ಕನ್ನಡಿಗೆ.....
ಮನಸೆಂಬ ಮುನ್ನುಡಿ.....
ಮೊದಲ ಪಾಠ ಶಾಲೆ.....
ಮೊದಲ ಪಾಠ ಶಾಲೆ......
ಆರಂಭವಾದರೆ ಇದು ಅನುದಿನದ ಕಲೆ..
ಅಂತ್ಯವಾದರೆ ಇದು ಅನುಮಾನದ ಬಲೆ..





- PremkumarHarti

14 Oct 2021, 09:20 pm

ಅದೃಷ್ಟ

ಹುಟ್ಟಿಗೊಂದು ಅದೃಷ್ಟ
ನಲಿವಿಗೊಂದು ಬಾಲ್ಯ
ಕಲಿಕೆಗಾಗಿ ವಿದ್ಯೆ
ಗೆಲಿವಿಗೊಂದು ಪ್ರಯತ್ನ
ಬಾಳಿಗೊಂದು ಸ್ಫೂರ್ತಿ
ನೆನಪಿಗೊಂದು ಕಾರಣ
ಚಿಂತೆಗೊಂದು ಯೌವನ
ಪಡೆಯೊಂದು ಹುದ್ದೆ
ಜೀವನಕ್ಕೊಂದು ಸಂಗಾತಿ
ನೋವಿಗೊಂದು ಸಮಸ್ಯೆ
ಮುಪ್ಪಿಗೊಂದು ಚಿಂತೆ
ಕೊನೆಗೆ ದೇಹಕ್ಕೊಂದು ಚಿತೆ!!
#ಆಶಾ#

- Asha

30 Sep 2021, 08:41 pm

ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸ

ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸು
ನಿನ್ನನ್ನೇ ಕೋರಿದೆ,,
ಈ ಹೃದಯಕ್ಕೆ
ಬಂದು ಬಿಡು ಇಷ್ಟ ಇದ್ದರೆ ಇಲ್ಲವಾದರೆ ನಾನು ಒಟ್ಟಿಯಾಗಿ ಇರೋವೆ ನಿನ್ನ ಪ್ರೀತಿ ನ ಕಾಯುತ್ತ ನೀ
ಸಿಗೋವರೆಗೂ
ನನ್ನ ಪ್ರೀತೀ ನಿಷ್ಕಲ್ಮಶ ಪ್ರೀತಿಯಾದರೆ ಮತ್ತೊಂದು ಬಾರಿ ದೇವರು ನನ್ಗೆ ಜನ್ಮ ಕೊಟ್ಟರೆ ಆ ಲ್ಲಿಯೂ ನಿನ್ನ ಪ್ರೀತಿಗಾಗಿ ಕಾಯುತ್ತ ಇರುತ್ತೇನೆ
ಇಷ್ಟ ಇದ್ದಾರೆ ಹೇಳು ನಾನು ನಿನಗಾಗಿ ಈ ಪುಟ್ಟ ಬಡಪಾಯಿ ಮನಸ್ಸಿನಲ್ಲಿ ಪ್ರೀತಿಯ ಗುಡಿಸಲನ್ನೆ ಕಟ್ಟಿರುವೆ...

- karibasva

27 Sep 2021, 08:13 pm

ಬಯಕೆ

ಬೆಳಗುವ ಬಯಕೆ
ತುಂಬಿದೆ ಮನವನು
ಅಳಿಸದೆ ಉಳಿಸು ಓ ದೇವ

ಸ್ವಾರ್ಥ ಸಮಾಜದಲ್ಲಿ
ನಿತ್ಯದ ಸತ್ವ ಪರೀಕ್ಷೆಯಲ್ಲಿ
ಜಯವನು ನೀ ನೀಡು ಓ ದೇವ

ಆಡಂಬರದ ಅಂಧಕಾರದ
ಸೆರೆಯನು ನೀ ಬಿಡಿಸಿ
ಸನ್ಮಾರ್ಗವ ನೀ ತೋರು ಓ ದೇವ

ಬಾಳ ದೋಣಿಯಲಿ
ಏಳು ಬೀಳಿನಲಿ
ಸತ್ ಸಂಗಾತಿಯ ನೀ ನೀಡು ಓ ದೇವ







-ಶಾರದ

- ಶಕುಂತಲಾ

26 Sep 2021, 10:28 am

ಪ್ರೀತಿ

ಆಕಾಶಕ್ಕೆ ಏರಿದರೂ
ಭೂಮಿ ಸೇರಿದರೂ
ನಿನ್ನ ನನ್ನ ಪ್ರೀತಿ
ಮರೆಯಲಾಗದೇ ಗೆಳತಿ

ಸುಮ್ಮನಿದ್ದರು
ಒಮ್ಮೆಯಾದರೂ
ಕಾಡುವುದು ನಿನ್ನ
ಪ್ರೀತಿಯ ನೆನಪುಗಳು
ಕ್ಷಣ ಕ್ಷಣ ಪ್ರತಿಕ್ಷಣ

ತಂಗಾಳಿ ಬೀಸಿದರು
ಮುಸ್ಸಂಜೆ ಕಾವಿದರು
ಸುಡುವುದು ಮನ
ನಿನ್ನ ಪ್ರೀತಿಯ ಜ್ವಾಲೆಯಲ್ಲಿ

ನೀನೇ ನೀನೇ ನನ್ನ
ಪ್ರೀತಿಯ ಮಳೆ ಹನಿಯು ನೀ
ಏನೇ ಆದರೂ ಹೋದರೂ
ನನ್ನ ಜೀವನದ ಪುಟಗಳಲ್ಲಿ
ನೀ ಬರೆದ ಪ್ರೀತಿ ಪ್ರೇಮದ ಬರಹವ
ಅಳಿಸಲಾಗದು ಮರೆಯಲಾಗದು

- ರಾಜು ಹಾಸನ

23 Sep 2021, 05:07 pm