Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಗಾಗಿ

ಒಬ್ಬರಿಗೊಬ್ಬರು ಕಣ್ಣಾರೆ ನೋಡಿಲ್ಲ ತೋರುವ ಪ್ರೀತಿ ಕಾಳಜಿಗೇನು ಕಮ್ಮಿಯಿಲ್ಲ ನಮ್ಮ ಸ್ನೇಹ ಸಿಹಿಯಾದ ಕೆನೆ ಬೆಲ್ಲ
ರನ್ನನ ನಾಡಿನ ಚಿನ್ನದ ಗೆಳತಿ, ಅಂದದ ಮನಸಿನ ಸುಂದರ ಒಡತಿ,
ಪ್ರಕೃತಿ ಸುತ್ತಿ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಹವ್ಯಾಸಿ, ಪದಗಳು ಕೆತ್ತಿ ಕವನ ರೂಪ ಕೊಡುವ ಕಾವ್ಯ ಅರಸಿ.
ಹುಡುಗಿ ನಿನ್ನದು ಮಕ್ಕಳ ಮನಸಿನಂತಿರುವ ನಿಷ್ಕಲ್ಮಶವಾದ ಪ್ರೀತಿ

ಭಗತ್ ಸೂರ್ಯ ಬಿ

- PUNITH RAJ

06 Nov 2021, 09:39 pm

"ಉಸಿರು ಹಾರಿ ಹೋಗೊ ಮುನ್ನ...ಎದುರು ನಿಲ್ಲೇ!!"

"ನಿನ್ನ ಹುಡುಕಾಟದಲ್ಲಿ !
ಧೈರ್ಯದ ಕೊರತೆಯಲ್ಲಿ !
ನಿನ್ನ ಅನ್ವೇಷಣೆ ಸಾಗಿದೆ...ಇಂದಿಗೂ!
ಎಲ್ಲಿಹೆ ಸುಳಿವೆ ಇಲ್ಲ !
ಸೂಚನೆ ಸುಮವು ಇಲ್ಲ !
ಮೊಗವದು ಕಂಡೆ ಇಲ್ಲ !
ಬೇಟಿಯ ಮಾತೆ ಇಲ್ಲ !
ಉಸಿರು ಹಾರಿ ಹೋಗೊ ಮುನ್ನ...ಎದುರು ನಿಲ್ಲೇ!!"
"ಸರಿಹೊತ್ತಿನ ಕನಸಲು ಹುಡುಕಿಹೆ ನಿನ್ನನ್ನೆ !
ಹಗಲಲ್ಲಿನ ಬೆಳಕದು ತೋರದೆ ನಿನ್ನನ್ನೆ !
ಒಲವದು ನಿಜ ಇದ್ದರೆ !
ಭಾವವಿದು ಸ್ವಚದಾದರೆ !
ಕಾಲವೆ ದಾರಿ ತೋರೊ !
ಅವಳನ್ನು ಒಮ್ಮೆ ತೋರೊ !
ಉಸಿರು ಹಾರಿ ಹೋಗೊ ಮುನ್ನ...ಎದುರು ನಿಲ್ಲೇ!!"
ಎಮ್.ಎಸ್.ಭೋವಿ....✍️

- mani_s_bhovi

06 Nov 2021, 11:01 am

ಯಾರಿವಳು ಚೆಲುವೆ

ಯಾರಿವಳು
ಚೆಲುವೆ
ನನಗೆ ಒಲಿದವಳೆ
ಹಾಲು ಗೆನ್ನೆಯ
ಚೆಲುವೆ
ಈ ಹೃದಯದ ಒಲವೇ

ಧ್ವನಿಯಲ್ಲಿ
ಕೋಗಿಲೆ ಕಂಠ
ಹೊಳಪಲ್ಲಿ
ಮುತ್ತಿನ ಹಾರ
ಕಂಪಿನಲಿ
ಮಲ್ಲಿಗೆ ಹೂವು

ಸುಖದಲ್ಲಿ
ಸಾಗರದಂತೆ
ಹೃದಯದಲ್ಲಿ
ದೇವತೆಯಂತೆ
ಚೆಲುವಿನಲಿ
ಅಪ್ಸರೆಯಂತೆ

ಸವಿ ಜೇನು
ಸಿಹಿಯು ನೀನು
ಈ ಬಾಳ ಬದುಕಿನ
ಶೃಂಗಾರ ನೀನು
ಈ ಒಕ್ಕಣೆಯ
ಕವಿ ಕನ್ನಿಕೆ ನೀನು~ರವಿ ನಾಯಕ

- Ravi

04 Nov 2021, 04:49 pm

ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸ

ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸು
ನಿನ್ನನ್ನೇ ಕೋರಿದೆ,,
ಈ ಹೃದಯಕ್ಕೆ
ಬಂದು ಬಿಡು ಇಷ್ಟ ಇದ್ದರೆ ಇಲ್ಲವಾದರೆ ನಾನು ಒಟ್ಟಿಯಾಗಿ ಇರೋವೆ ನಿನ್ನ ಪ್ರೀತಿ ನ ಕಾಯುತ್ತ ನೀ
ಸಿಗೋವರೆಗೂ
ನನ್ನ ಪ್ರೀತೀ ನಿಷ್ಕಲ್ಮಶ ಪ್ರೀತಿಯಾದರೆ ಮತ್ತೊಂದು ಬಾರಿ ದೇವರು ನನ್ಗೆ ಜನ್ಮ ಕೊಟ್ಟರೆ ಆ ಲ್ಲಿಯೂ ನಿನ್ನ ಪ್ರೀತಿಗಾಗಿ ಕಾಯುತ್ತ ಇರುತ್ತೇನೆ
ಇಷ್ಟ ಇದ್ದಾರೆ ಹೇಳು ನಾನು ನಿನಗಾಗಿ ಈ ಪುಟ್ಟ ಬಡಪಾಯಿ ಮನಸ್ಸಿನಲ್ಲಿ ಪ್ರೀತಿಯ ಗುಡಿಸಲನ್ನೆ ಕಟ್ಟಿರುವೆ... ~ರವಿ ನಾಯಕ

- Ravi

04 Nov 2021, 04:44 pm

ಕನ್ನಡ ಹಬ್ಬ

ಹಬ್ಬಾ ಹಬ್ಬ
ಕನ್ನಡ ಹಬ್ಬ
ಕರುನಾಡ ಹಬ್ಬ
ಸಿರಿ ನುಡಿಯ ಹಬ್ಬ.

ಕರುನಾಡ ಜ್ಯೋತಿಯ
ಬೆಳಗುವ ಹಬ್ಬ
ಕರುನಾಡ ಕೀರ್ತಿಯ
ಸಾರುವ ಹಬ್ಬ.

ಕನ್ನಡದ ಉಸಿರಲಿ
ಹಸಿರಾಗೋ ಹಬ್ಬ
ಕನ್ನಡದ ಮಣ್ಣಲ್ಲಿ
ಕವಿ ಕೋಗಿಲೆಗಳ ಹಬ್ಬ.

ಕರುನಾಡ ಒಡಲು
ಕನ್ನಡದ ಹೊನಲು
ಕರುನಾಡ ಕಂಪು
ಕನ್ನಡದ ಇಂಪು.

- shankar gargi

02 Nov 2021, 12:12 pm

ಅಂಟು ನಂಟು

ಹುಟ್ಟು ಸಾವಿಗೆ ಇಲ್ಲದ
ಜಾತಿ ಮತಗಳ
ಭೇದ ಭಾವದ ಅಂಟು

ಬಿಟ್ಟು ಹೋಗುವ
ಮೂರು ದಿನದ
ಬದುಕಿಗೆ ಇರುವುದಯ್ಯ
ಜಾತಿ ಮತಗಳ
ಭೇದ ಭಾವದ ನಂಟು

ಗಾಳಿ ನೀರಿಗಿಲ್ಲದ ಬೇರು
ಜಾತಿ ಮತಗಳಿಗೆ ಇರುವುದಯ್ಯ
ನೂರೆಂಟು ಬೇರು

ಏನೇ ಇರಲಿ ಇಲ್ಲದಿರಲಿ
ಮನುಷ್ಯತ್ವವಿಲ್ಲದ
ಕುಲ ಕುಲವೇ ಅಲ್ಲ
ಧರ್ಮ ಧರ್ಮವೇ ಅಲ್ಲ


- ರಾಜು ಹಾಸನ

29 Oct 2021, 12:45 am

ಹೃದಯ ದೈವ ಡಾ: ಶರಣ.

ಏಕೋ ಕೆಲವು ದಿನಗಳಿಂದ
ನನ್ನ ಪುಟ್ಟ ಹೃದಯದಲ್ಲಿ
ಏನು ಕಸಿ ವಿಸಿಯ ಸದ್ದು
ಕೇಳಿ ಬರುತ್ತಿತ್ತು
ಹೃದಯಕ್ಕೆ ಎಲ್ಲೋ ಒಂದು ಚಿಕ್ಕ
ನೋವಿನ ಶಬ್ದ ಕೇಳಿ ಬಂತು
ಹೃದಯಕ್ಕೆ ಹುಟ್ಟಿದಾಗಿಂದ
ಎಷ್ಟು ನೋವಿನ ಶಬ್ದ ಕೇಳಿದ್ರೂ
ಕ್ಷಣ ಚಿಂತಿಸಿ ಸುಮ್ಮನಾಗುತಿತ್ತು
ಎಲ್ಲರೂ ತನ್ನವರು ಎಂದು
ಅಪ್ಪಿ ಮುದ್ದಾಡುತಿತ್ತು
ಈಗ ನನ್ನ ನೋವಿನ ಹೃದಯದ
ಶಬ್ದ ಚಿಂತೆ ಗೆಡೆಸಿ ಬಿಟ್ಟಿದೆ
ಕೆಲವೊಂದು ಕಪ್ಪುಚುಕ್ಕೆಗಳು
ಅಲ್ಲಲ್ಲಿ ಮನೆಮಾಡಿ
ಜೀವ ಹಿಂಡುತ್ತಾ ಇರುವಾಗ
ಮುಷ್ಟಿ ಎಷ್ಟು ಇರುವ ಚಿಕ್ಕ ಹೃದಯಕ್ಕೆ ಇಷ್ಟೊಂದು ಕಷ್ಟ ಕೊಟ್ಟವರು
ಯಾರು ಅಂತ ನನಗೆ ಇನ್ನೂ ತಿಳಿದಿಲ್ಲ
ಏನೇ ಇರಲಿ ನನ್ನ ವೈದ್ಯ ದೈವ
ಶ್ರೀ ಡಾಕ್ಟರ್ ಶರಣ ಮರುಜೀವ ನೀಡಿ,
ಎಚ್ಚರ ಅಂತ ಸಲಹೆ ಕೊಟ್ಟು
ಎದೆಯ ಮೇಲೆ ಕೈಯಾಡಿಸಿ,
ಮುಗುಳ್ನಗೆ ಮೂಡಿಸಿ ಮರುಜನ್ಮ
ನೀಡಿದ ಈ ಹೃದಯ ದೇವನಿಗೆ
ನನ್ನ ಪ್ರೀತಿಯ ಕೋಟಿ ಕೋಟಿ ನಮನಗಳು
ಈ ಹೃದಯದ ಇನ್ನೊಂದು ಹೆಸರೇ
ಹೃದಯದ ದೈವ ಡಾಕ್ಟರ್ ಶರಣ.

ಶಂಕರ ಗಾರ್ಗಿ

- shankar gargi

27 Oct 2021, 12:56 pm

ಪ್ರೀತಿ ಎಂದೆಂದೂ ಪವಿತ್ರ

ಪ್ರೀತಿ ಎಂದೆಂದೂ ಪವಿತ್ರ
ಪ್ರೀತಿಸುವವರು ಎಂದಿನಂತೆ ವಿಚಿತ್ರ
ನಾನು ನಿನ್ನ ಪ್ರೀತಿಗೆ ಕೊಡುವೆ ಜೀವ....
ನಿನ್ ನನ್ನ ಬಿಟ್ಟು ಒಗುತಿರುವೆ ಯಾರಿಗೆ ಎಳಲ್ಲಿ ನನ್ನ ನೋವ....
ಮರಳಿ ಬಂದರು ಬಂದು ಬಿಡು ಗೆಳತಿ
ನೀನು ಬಂದ್ರೆ ನನ್ನಗೆ ಸಿಕ್ಕಂತೆ ಕೀರ್ತಿ

- PUNITH RAJ

26 Oct 2021, 10:06 pm

ಮೌನರಾಗ

ನಿನ್ನ ನನ್ನ ನಡುವಿನ ಬಂಧನ
ಮಧುರ ಈ ಬಂಧನ
ನನ್ನ ನಿನ್ನ ಹೃದಯ ಸಂಗಮ
ಜನ್ಮ ಜನ್ಮದ ಅನುಬಂಧನ

ಏನು ಅರಿಯದ ಹೃದಯ
ನಿನ್ನ ಕರೆಯಿತು
ಮನಸ್ಸು ಮನಸ್ಸು ಬೆರೆತು
ಒಂದಾಗೋ ಬಯಸಿತು
ನಿನ್ನ ಚೆಲುವ ನೋಟ
ನನ್ನೆ ಮರೆಸಿತು.

ಎಂಥ ಸುಖವು ಎಂಥ ಗೆಲುವು
ನಿನ್ನೀ ಈ ಕಣ್ಣಲಿ
ಹೃದಯ ಮಿಡಿತ
ನಿನ್ನ ಬಯಸಿ ಕುಣಿಯಿತು
ಬಿಟ್ಟು ಇರದ ಜೀವ ನಿನ್ನ
ಮೌನರಾಗ ಹಾಡಿತು.

ಶಂಕರ ಗಾರ್ಗಿ




- shankar gargi

26 Oct 2021, 02:27 pm

ಕವನ ಅವಿಶ್ರಾಂತ ದುಡಿಮೆ


ಮನದಂಗಳದಿ ನೀವು ಪಡೆದು ಪೂಜಿಸಿದ ವೃತ್ತಿ,
ಸದಾ ಬಯಸುವುದು ನಿಮ್ಮಿಂದ ಕಲ್ಯಾಣ ಕಾರ್ಯಗಳ ಪಂಚಾಯ್ತಿಯ ಪ್ರಗತಿ.
ಭ್ರಾತೃತ್ವದ ದುಡಿಮೆಗೆ ಸಾಕ್ಷಿಯಾದ ನಿಮ್ಮ ಸಹಾನುಭೂತಿ ಸಹಕಾರ ತತ್ವ,
ಹಸಿರು ತುಂಬಿದ ಅಮೃತ ವನದಲ್ಲಿ
ಸಂಚರಿಸುವ ಜನರ ಹೃದಯಗಳು
ಪ್ರಶಾಂತತೆಯ ಸವಿಯ ಸವಿಯುತ
ಆಚರಿಸುತ್ತಿವೆ ಹಬ್ಬದ ಉತ್ಸವ.
ವಿಶ್ರಾಂತಿ ಬಯಸದ ನಿಮ್ಮ ಕಾಯಕ,
ಬಾನಂಗಳದಿ ಬೆಳಗುತಿದೆ
ಅಮೃತ ಗ್ರಾಮ ಪಂಚಾಯ್ತಿ ಎಂಬ ಹೆಸರಿನ ಫಲಕ.
ಸೂಕ್ಷ್ಮದಿ ಸಮಸ್ಯೆಯನರಿತು ಸರಳತೆಯಲ್ಲಿ ಜನಮನಕೆ ಸ್ಪಂದಿಸುವ ನಿಮ್ಮ ಸ್ನೇಹ ಸ್ವಭಾವ,
ಜನರ ಮನಗಳು ನೆನೆಯುವಂತೆ ಮಾಡಿದೆ ನೀವು ಕೊರತೆ ನೀಗಿಸಿರುವ ಕ್ಷಣವ.
ನಿಮ್ಮ ನೈಪುಣ್ಯತೆ ಜ್ಞಾನದಿಂದ ಗ್ರಾಮಗಳ ಸಮೃದ್ಧಿ ಗೊಳಿಸಲು ನೀವು ಕೈಗೊಂಡ ಕಾರ್ಯತಂತ್ರಗಳ ನೀತಿ,
ಸ್ಪೂರ್ತಿಯಾಗಿದೆ ನಮ್ಮೆಲ್ಲರಿಗೂ
ನಿಮ್ಮನ್ನ ಸರ್ಕಾರ ಆಮಂತ್ರಿಸಿರುವ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ.

- nagamani Kanaka

23 Oct 2021, 09:01 pm