ಯುವತಿಯೊಬ್ಬಳು ಹಿಗೆ ಬರೆದಿದ್ದಳು
"ತಂದೆ ತಾಯಿಯನ್ನು ನೋಡಿಕೊಳ್ಳುವ ಅಧಿಕಾರ
ಪುತ್ರಿಯರಿಗೆ ದೊರೆತರೆ ಇಡಿ ದೇಶದಲ್ಲಿ
ಒಂದೇ ಒಂದು ವ್ರುದ್ಧಾಶ್ರಮ ಇರಲಾರದು."
ಅದಕ್ಕೆ ಯುವಕನೊಬ್ಬ ಈ ರೀತಿ ಪ್ರತಿಕ್ರಯಿಸಿದನು:
"ಒಂದು ವೇಳೆ ಇದೆ ಪುತ್ರಿಯರು ಮದುವೆಯ
ನಂತರ ತಮ್ಮ ಅತ್ತೆ-ಮಾವಂದಿರನ್ನು
ತಮ್ಮ ತಂದೆ-ತಾಯಿಯಂತೆ ಕಂಡರೆ
ದೇಶದಲ್ಲಿ ಮಾತ್ರವಲ್ಲ ಇಡಿ ಜಗತ್ತಿನಲ್ಲಿ
ಒಂದೇ ಒಂದು ವ್ರುಧ್ಧಾಶ್ರಮ ಕಾಣಲಾರದು.."
ಎಮ್.ಎಸ್.ಭೋವಿ....✍️
ನಿನಗೆ ಕೊಡದೆ ಊಳಿದ ಪ್ರೀತಿ
ಹಾಗೆ ಉಳಿದಿದೆ ನನ್ನಲ್ಲಿ
ಎಂದಾದರೂ ಸಿಗು ಒಂದಿನ...
ತಂದು ಇಡುವೆ ನಿನ್ನ ಕೈಯಲ್ಲಿ
ಮೌನವಾಗಿ ಕೂತಿರುವೆ ಏಕೆ ಓ ನನ್ನ ನಲ್ಲೆ..
ಮುತ್ತೊಂದ ನೀಡುವೆ ಬಳಿ ಬಾ ನೀ ಇಲ್ಲೆ...
ತುಂತುರು ಮಳೆಯಲ್ಲಿ ನೆನೆದಿರುವೆ ನಾ ಇಲ್ಲಿ..
ನಡುಗು ಸೇರಿದೆ ನನಗೆ...
ಬೆಚ್ಚಗಿಡು ನನ್ನ ನಿನ್ನ ಅಂಗೈಯಲ್ಲಿ...
ಇನ್ನೆಷ್ಟು ಹೇಳುವುದು ನೀ ನನ್ನ ಹ್ರದಯವೆಂದು...
ಪ್ರತಿ ಬಡಿತಕ್ಕೂ ನೆನಪಾಗುತ್ತಿರುವೆ
ಬಂದು ನೋಡು ಇಂದು...
ಮಂಜು ತುಂಬಿದ ಈ ಮಂಜಾನೆಯಲ್ಲಿ
ಬಂಧಿಯಾಗುರಿವೆ ನಾ ನಿನ್ನ ಪ್ರೀತಿಯ
ಖಜಾನೆಯಲ್ಲಿ......
ಎಮ್.ಎಸ್.ಭೋವಿ...✍️
ಪ್ರೀತಿಸು ಪ್ರೀತಿಸು
ನೀ ಕನ್ನಡ
ಹಾಡು ಹಾಡು
ನೀ ಕನ್ನಡ
ನೋಡು ನೋಡು
ನೀ ಕನ್ನಡ
ನಡೆ ನಡೆಯಲಿ
ಈ ಕನ್ನಡ
ನುಡಿ ನುಡಿಯಲಿ
ಈ ಕನ್ನಡ
ಸಾರು ಸಾರು
ನೀ ಕನ್ನಡ
ಮನೆ ಮನದಲಿ
ಈ ಕನ್ನಡ
ಉಸಿರು ಉಸಿರಲಿ
ಈ ಕನ್ನಡ
ಹನಿ ಹನಿ ರಕ್ತದಲ್ಲಿ
ಈ ಕನ್ನಡ
ಎಲ್ಲೆಡೆ ಮೂಳಗಲಿ
ಈ ಕನ್ನಡ
ಸಿರಿ ಕನ್ನಡ ಸಿರಿ ಕನ್ನಡ.
ನೀ ಇಲ್ಲದ ಮ್ಯಾಲ
ನಾ ಹೆಂಗ ಇರಲಿ ಇನ್ನ
ಪ್ರೀತಿಯ ಕಡಲು
ನೀನಾಗಿದ್ದ
ಮಮತೆಯ ಮಡಿಲು
ನೀನಾಗಿದ್ದೆ
ಹೆಂಗ ಮರೆಯಲಿ
ಆಸರೆಯಾಗಿ ನೀ ಬಂದೆ
ಬಾಳಿಗೆ ಬೆಳಕು
ನೀ ತಂದೆ
ನಿನ್ನ ನೆನಪು ಬಂದಾಗ
ಬರ್ತಾವ ನೀರು
ಕಣ್ಣಾಗ
ಹೆಂಗ ಮರೆಯಲಿ
ನಾ ನಿನ್ನ
ಮಣ್ಣಲ್ಲಿ ಮಣ್ಣು ಆದೆ ನೀನು
ಮುಂದೇನು ನಾನು
ತಿಳಿಯದಾದೆ
ಹ್ಯಾಂಗ ಮರೆಯಲಿ
ನಾ ನಿನ್ನ.