Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಡೈತಿ ಅವಳ ನೆನಪು.

ಮುತ್ತಿನಂಥಾಕೀ ಇವಳು
ಬಲು ಚಂದ ಅವಳ ನಗುವು
ಇನ್ನು ಚಂದ ಅವಳ ಮೊಗವು
ಕಾಡತೈತಿ ಅವಳ ನೆನಪು.

ಕವಳೆಯಂತ ಅವಳ ಕಣ್ಣು
ಸಂಪಿಗೆಯಂತ ಅವಳ ಮೂಗು
ಚಂದಿರನಂತ ಅವಳ ಬೆಳಕು
ಹಾಲಿನಂತ ಅವಳ ಮನಸ್ಸು
ಕಾಡೈತಿ ಅವಳ ನೆನಪು.


ತಿದ್ದಿ ತೀಡಿ ಮಾಡಿದ ದೇಹ
ನೋಡಲೆಷ್ಟು ಚನ್ನ ಅದರ
ಸಿವಿ ನುಡಿಯ ಮುತ್ತಿನ ಮಾತು
ನೇರ ನೋಟದ ಚೆಲುವೆ ಅವಳು
ಕಾಡೈತಿ ಅವಳ ನೆನಪು.

ಕಂಗಳ ಕಣ್ಮಣಿ ಅವಳು
ಬದುಕಿನ ಶೃಂಗಾರ ಅವಳು
ಬಾಳಿನ ಬೆಳಕು ಅವಳು
ಹೃದಯದ ದೇವತೆ ಅವಳು
ಕಾಡೈತಿ ಅವಳ ನೆನಪು.

ಮಲೆನಾಡಿನ ಕೋಗಿಲೆಯ ಕಂಠ
ಮೈ ಮನ ತಣಿಸುವ ಸೂಬಗು
ಹುಚ್ಚು ಹಿಡಿಸುವ ಒಲವು
ಮೆಚ್ಚಿ ‌ಮುತ್ತಿಟ್ಟ ಸಿರಿಯು
ಕಾಡೈತಿ ಅವಳ ನೆನಪು.

ಸಾಗಿಹವು ದಿನಗಳು ದೂರ
ಅವಳ ನೆನಪು ಬರಿ ಅಮರ
ಕಲ್ಪನೆಯ ಕವಿತೆ ಅವಳು
ಮನೆ ಮೆಚ್ಚಿದ ಮಮತೆ ಅವಳು
ಕಾಡೈತಿ ಅವಳ ನೆನಪು.


ಶಂಕರ ಗಾರ್ಗಿ











- shankar gargi

30 Nov 2021, 09:23 pm

ಹ್ರುದಯದ ಪಿಸುಮಾತು

ಎಷ್ಟು ಮಾತಡಿದರು ಮಾತುಗಳು
ಮುಗಿಯುತ್ತಿದ್ದಿಲ್ಲ ಅಂದು,
ಎಷ್ಟೇ ಮಾತಾಡಿಸಿದರು ನಿನಗೆ
ಮಾತುಗಳೇ ಬರುತ್ತಿಲ್ಲ ಇಂದು...
ಭಾವನೆಗಳು ಇದ್ದಾಗ ಮಾತುಗಳು
ಬರುತ್ತಿದ್ದವು ಅಂದು,
ಭಾವನೆಗಳೇ ಸತ್ತಿದ್ದಾಗ ನಿನಗೆ
ಮಾತುಗಳು ಬರುವವೆ ಇಂದು...
ಮಾತುಗಳಿದ್ದಾಗ ಹೆಚ್ಚಾಗುತ್ತಿತ್ತು ನಿನ್ನ
ಮೇಲಿನ ಪ್ರೀತಿ ಅಂದು,
ನಿನ್ನ ಮಾತುಗಳಿಲ್ಲಿದ ನನಗೆ
ಮೌನವೇ ಆಸರೆ ಇಂದು...
ಎಮ್.ಎಸ್.ಭೋವಿ....✍️




- mani_s_bhovi

29 Nov 2021, 06:54 pm

ಜೀವನ

ಬದುಕಿನ ಪುಸ್ತಕದ ಪುಟಗಳಲಿ ಕೊನೆಯ ಪುಟಗಳನೂ ನಾ ಬರೆಯಬೇಕೇ ಇಲ್ಲ ವಿಧಿ ಬರೆದಿದೆಯೋ...
ವಿಧಿ ಬರೆದಿದ್ದಾರ ಜೊತೆಗೆ ನಾನು ಬರೆಯುತ್ತಾ...
ಕಳೆದು ಹೊದದ್ದೆಲ್ಲ ಮೆಲಕು ಹಾಕುತ್ತಾ... ಬೇಕಾಗಿರುವುದ ಪಡೆಯುತ್ತಾ...

ಈಗ ನಾ ಇರುವೆ ವತ್ಸವದ ಪುಟಗಳಲಿ...

✍️sanjayzivaa

- sanjays

29 Nov 2021, 05:20 pm

ಗುಲಾಮ

ಸುಡುವ ಬಿಸಿಲು
ಮೈ ಸುಟ್ಟರು
ಸುರಿಯುವ ಮಳೆ
ಕಣ್ಣೀರ ಮಳೆಯಾಗಿ
ಸುರಿದರು
ಕೊರೆಯುವ ಚಳಿ
ಮೈ ಕೊರೆದರೂ
ಮೂರು ಹೊತ್ತಿನ
ತುತ್ತುಗೆ ತಲೆಬಾಗಿದರು
ಸ್ವಾಭಿಮಾನಕ್ಕೆ
ತಲೆಬಾಗಲಾರ

ಗುಲಾಮ ಗುಲಾಮ
ಎನ್ನುವ ಉಳ್ಳವರು
ತಿಳಿಯಬೇಕು ಅರಿಯಬೇಕು
ಬಡವನ ನಿಜವಾದ
ಗುಲಾಮ ಗುಲಾಮ
ಉಳ್ಳವರೆಂದು

ಉಳ್ಳವರ ಬುಡ ಬಡವರೇ
ಹೋರೆತು ಬಡವರ
ಬುಡ ಉಳ್ಳವರಲ್ಲ
ತಿಳಿಯೋ ಮೂಢ






- ರಾಜು ಹಾಸನ

29 Nov 2021, 01:11 am

ರಾಜ ಮಹಾರಾಜ

ಜೀವನದಲ್ಲಿ ಯಾರೇ ಬರಲಿ ಹೋಗಲಿ
ನಿಂತಲ್ಲೇ ನಿಲ್ಲದೆ ಇರುವ ಈ ಜೀವನದಲ್ಲಿ
ಎಷ್ಟೇ ಆಸೆ ಕನಸುಗಳು ಇದ್ದರೂ
ಒಂದಲ್ಲ ಒಂದು ದಿನ
ಎಲ್ಲ ಬಿಟ್ಟು ಹೋಗಬೇಕು
ಈ ಮೂರು ದಿನದ ಬದುಕು

ಹುಟ್ಟಿ ಸಾಯುವ ನಡುವೆ
ಬಡಿದಾಡಿ ಗುದ್ದಾಡಿ
ಚಿಂತೆಯ ಚಿತೆಯಲ್ಲಿ
ಬೆಂದು ಮಣ್ಣಾಗುವ
ಈ ಮಾನವ ಜನ್ಮಕ್ಕೆ
ಯಾವ ಜಾತಿ ಧರ್ಮವಾದರೇನು
ಇದ್ದಷ್ಟು ದಿನ
ಪ್ರೀತಿ ಸ್ನೇಹ ಸೌಹಾರ್ದತೆ
ಸಮಾನತೆಯಿಂದ ಬದುಕಿದ್ದವನೇ
ಈ ಮಾನವ ಕುಲಕ್ಕೆ ನಿಜವಾದ
ರಾಜ ಮಹಾರಾಜ

- ರಾಜು ಹಾಸನ

28 Nov 2021, 12:26 am

ಮನುವಾದ

ಯಾವ ಕುಲವಾದರೇನು
ಯಾವ ಜಾತಿಯಾದರೇನು
ಯಾವ ಮತವಾದರೇನು
ಯಾವ ಧರ್ಮವಾದರೇನು
ಮನದೋಳಗೆ ಮಾನವಿಯತೆ
ಮನೆ ಮಾಡದ ದೇಹ
ಸ್ಮಶಾನದ ಗೂಡಲ್ಲವೇ
ಜೀವಂತ ಶವವಲ್ಲವೇ

ಬಡವನ ಬೆವರಿನ ಫಲ ಅನ್ನ
ಎಲ್ಲಾರ ಮನೆ ಮನೆಯ ದೇವರಾದರೆ
ಬ್ರಾಹ್ಮಣ್ಯ ಹೊತ್ತ ತಿರುಗುವ
ಪರದೇಶಿ ಮನುವಾದಿಗಳಿಗೆ
ಸಗಣಿ ಗಂಜಲವೇ ಮನೆಯ ದೇವರಯ್ಯ




- ರಾಜು ಹಾಸನ

27 Nov 2021, 11:52 pm

ಮನಸ್ಸ ಅರಿತ ಸ್ನೇಹಿತೆ

ನೀ ದೂರೆತೆ ನನ್ನ ಸ್ನೇಹಿತೆ
ಇನ್ನೂ ನನಗೆ ನಿನ್ನ ಚಿಂತೆ
ನಿನ್ನ ಮಾತಿಲ್ಲದೆ ದಿನ ಮುಗಿಯಲ್ಲ
ನಿನ್ನ ಮನಸ ನಾ ಅರಿಯಬಲ್ಲ...

ನನ್ನ ಮನಸ ನೀ ಅರಿಯಬಲ್ಲಳು
ನನ್ನ ನೋವ ನೀ ಮರೆಸಬಲ್ಲಳು
ನಿನಿದ್ದರೆ ನನ್ನೊಡನೆ ಎಂದೆಂದೂ
ಖುಷಿಯ ಜೀವನ ನನ್ನದಿಂದೂ....

ನನ್ನ ತಿದ್ದುವ ಹಕ್ಕಿದೆ ನಿನಗೆ
ನೋವಲ್ಲಿ ಜೋತೆಯಾಗಿರು ಹೀಗೆ
ನನ್ನ ದಿನದ ಪಯಣದಲ್ಲಿ ನೀನಿರು
ನನ್ನ ಬಿಟ್ಟು ಎಂದು ಹೊಗದಿರು....

ದಿನ ನಿನ್ನ ಕರೆ ಇರದೆ ಇರಲಾರೆ
ನಿನ್ನ ಸ್ನೇಹ ಎಂದಿಗೂ ಮರೆಯಲಾರೆ
ಮನದಾಳದಿಂದ ನಾ ಹೇಳುವೆ ಇಂದು
ನನ್ನ ಜೀವನದ ಪುಟದಲ್ಲಿ ನೀ ಎಂದೆಂದೂ

ನಮ್ಮ ಸ್ನೇಹ ಪಯಣವಿಂದು ಆರಂಭ
ನಗು ತುಂಬಿರಲಿ ನಿನ್ನ ಮನದ ತುಂಬ
ನನ್ನ ಸ್ನೇಹ ಎಂದು ಮರೆಯದಿರು
ಕೊನೆವರೆಗೂ ನನ್ನ ಜೋತೆಯಾಗಿರು.....


- vijay kumar

27 Nov 2021, 07:30 pm

ಅರೆಹುಚ್ಚು..

ಏನ್ ಹೇಳಲಿ ಹುಡಗಿ ನಿನ್ನ ಬಗ್ಗೆ...
ನನ್ನಲ್ಲೇ ನಾ ಕಳೆದು ಹೊಗಿರುವೆ,
ಕಂಡು ನಿನ್ನ ಮುಗುಳುನಗೆ...
ಆಗಾಗ ಕೋಪಿಸಿಕೊಳ್ಳಬೇಕು ನಿನು ಬೇಕಂತಲೇ...
ತುಂಬಾ ನಗಿಸಬೇಕು ನಿನ್ನ ನಾನು,ಬರೀ ಮುತ್ತಲೇ...
ಕನ್ನಡಿ ಎದುರು ನೀ ನಿಂತಾಗ,ಬೆನ್ಹಿಂದೆ ನಾ ನಿಂತು
ಮುದ್ದಿಸೋ ಹಾಗೆ ನಿನಗೆ ಭಾಸವಾಗಲಿ....
ನಿನ್ನ ಒಂಚೂರು ದಯೆಯಿಂದ ಇಂತಹ ಪೋಲಿ
ಹಗಲು ಕನಸೆಲ್ಲವೂ ನನಸಾಗಲಿ....
ಎಮ್.ಎಸ್.ಭೋವಿ...✍️

- mani_s_bhovi

26 Nov 2021, 09:38 am

ಸಂಜೆ

ದಣಿದ ಕಡಲ ತಣಿಸಲು
ಅಲೆಯು ಬಂದಿತು ಉಕ್ಕಿ....

ಕುಣಿದು ರೆಕ್ಕೆಯ ಬಡಿದು
ಒಡಲ ಸೇರಿತು ಹಕ್ಕಿ....

ತೂಗಿ ಆಡಿತು ಗಿಡಗಳು
ಸಂಜೆಯ ಮೋಹಕೆ ಸಿಕ್ಕಿ....

ಸಾಗಿ ಮುಳುಗಲು ಸೂರ್ಯನು
ನಗುವ ಬೀರಿತು ಚುಕ್ಕಿ....



.....

- sharin rao

23 Nov 2021, 10:40 am

ನಿತ್ಯ ಕನ್ನಡ

ಕಲಿತು ಕಲಿಯೋ ಕನ್ನಡ
ಕಲಿತು ಕಲಿಸೋ ಕನ್ನಡ
ಮೆಚ್ಚಿಕೋ ನೀ ಕನ್ನಡ
ಅಪ್ಪಿಕೋ ನೀ ಕನ್ನಡ.

ಭೇದವಿಲ್ಲದ ಕನ್ನಡ
ಬವ ಭಕ್ತಿ ತುಂಬುವ ಕನ್ನಡ
ಬವ ಭಾಷೆ ಮೀರಿದ ಕನ್ನಡ
ಕರುನಾಡ ನುಡಿಯೇ ಕನ್ನಡ.

ಕರುನಾಡ ಕೀರ್ತಿ ಕನ್ನಡ
ಕರುನಾಡ ಸೂಬಗು ಕನ್ನಡ
ಕರುನಾಡ ಹಿರಿಮೆ ಕನ್ನಡ
ಕರುನಾಡ ಜ್ಯೋತಿ ಕನ್ನಡ.

ಹಸಿರು ಹಸಿರಲಿ ಕನ್ನಡ
ಕಣ ಕಣದ ಮಣ್ಣಲೂ ಕನ್ನಡ
ಹೃದಯ ಹೃದಯದಲಿ ಕನ್ನಡ
ಸ್ವಚ್ಛ ಕನ್ನಡ, ನಿತ್ಯ ಕನ್ನಡ
ಎಂದಿಗೂ ಕನ್ನಡವಾಗಲಿ.


ಶಂಕರ ಗಾರ್ಗಿ

- shankar gargi

22 Nov 2021, 02:39 pm