Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಲೂಯಿಸ್ ಬ್ರೈಲರ ಸಾಧನೆ.

ಅಂಧರ ಬಾಳಿನ ಬೆಳಕಾಗಿ ಲೂಯಿ
ಫ್ರಾನ್ಸ್ ದೇಶದಿ ಜನಿಸಿದರು.
ಅವರ ಶಿಕ್ಷಣಕ್ಕೆ ಬ್ರೈಲ್ಲಿಪಿ ಸೃಷ್ಟಿಸಿ
ವಿಶ್ವ ಮಾನವರೇನಿಸಿದರು.

ಸಾಮಾನ್ಯ ಮಗುವಾಗಿ ಜನಿಸಿದ ಲೂಯಿ
ಸದಾ ಚಟುವಟಿಕೆಯಿಂದಿರಲು
ಮೂರೂ ವರ್ಷ ತುಂಬಿದ ಮುಗ್ಧ ಬಾಲಕ
ತಂದೆಯ ಕೆಲಸವ ನೋಡಿದನು.
ಚರ್ಮವ ತಾ ಹದ ಮಾಡಲು ಹೋಗಿ
ಕಬ್ಬಿಣ ಹಾರಿತು ಕಣ್ಣಿನಲ್ಲಿ,
ಉಳಿದೊಂದು ಕಣ್ಣಿಗೂ ಸೋಂಕು ತಗುಲಿ
ಸಂಪೂರ್ಣ ಅಂಧತ್ವ ಪಡೆದರು ಲೂಯಿ.

ತಂದೆಯು ಮಗನಿಗೆ ಮೊಳೆಗಳ ಜೋಡಿಸಿ
ಸ್ಪರ್ಶದಕ್ಷರ ಜ್ಞಾನವ ನೀಡಿದರು.
ಚಲ ಬಿಡದ ಲೂಯಿ ವಿಶೇಷ ಶಾಲೆ ಸೇರಿ
ಬಾರ್ಬಿಯರ್ ಲಿಪಿ ಕಂಡು ಮನದಲ್ಲಿ ಚಿಂತನೆ ನಡೆಸಿದರು.
ಇವರ ಹಗಲು ರಾತ್ರಿಗಳ ಪರಿಶ್ರಮದಿಂದ
ರೂಪಗೊಂಡ ನವ ಲಿಪಿ ಎಂತ ಚಂದ,
ಅಂಧರ ಕಲಿಕೆಗೆ ಕನ್ನಡಿಯಾಗಿದೆ 6 ಚುಕ್ಕಿಗಳ
ಲೂಯಿಸ್ ಬ್ರೈಲ್ಲಿಪಿ ಕೊಡುಗೆ.

- nagamani Kanaka

15 Jan 2022, 02:57 pm

ನನ್ನರಸ ಸುಮ್ಮನಿರಿ ಎಂದಳೇಕೆ?

ನನ್ನರಸ ಸುಮ್ಮನಿರಿ ಅಂದಳೇಕೆ?
 
ನಿತ್ಯ ಮುಸ್ಸಂಜೆಯಲಿ, ಮನೆ ಮುಂದಿನ ಬನದಲ್ಲಿ
ನನ್ನಾಕೆ, ನೆರೆಯಾಕೆ ಸೇರಬೇಕೇ?
 
ಸೂರ್ಯನತ್ತ ತೆರಳುವಲ್ಲಿ, ಕತ್ತಲೆಯ ಸೆರಗಲ್ಲಿ
ಅವರಿವರ ಮೇಲೆ ಬೆಳಕು ಚೆಲ್ಲಬೇಕೆ?
 
ವಿಷಯವೇ ಇಲ್ಲದಾಗ, ಮಾತಿನಂಗಳದಾಗ 
ಮತ್ತೊಂದು ಹುಟ್ಟಲೇ ಬೇಕೇ? ಇದಕೆ ಶಂಕೆ ಏಕೆ?
    
ನಮ್ಮವರೇ ಚಂದವೋ, ನಿಮ್ಮವರೇ ಚಂದವೋ
ಎಂದಿವಳು ಪಕ್ಕದವಳ ಚಕ್ಕನೇ ಕೇಳಬೇಕೇ?
 
ನಮ್ಮವರು ಬರಿ ಅಂದವು, ನಿಮ್ಮವರೇ ಬಲು ಚಂದವು
ಎಂದವಳು ತುಟಿಯ ತಾ ಕಚ್ಚುತ ಹೊಗಳಬೇಕೇ?
 
ನನ್ನವಳ ಕೆನ್ನೆಯದು, ಕಮಲದಂತೆ ಹಿಗ್ಗುತಿರಲು  
ಹುಸಿನಗುವ ಅವಳತ್ತ ತೂರಿ ತೋರಲೇಕೇ?
 
ಅವಸರದಿ ತಾ ಬೇಗನೆ, ನೆಪವ ಹೇಳಿ ಮೆಲ್ಲನೇ
ಸಂಶಯದಲಿ ಇವಳೋಡಿ ತಾ ಬಂದಳೇಕೇ?
 
ಅವಳ ಬಳಿ ನಿಮಗಿನಿತು ಇಂತದೊಂದು ಸಲಿಗೆಯೇಕೆ
ಎಂದೆನ್ನ ಕೇಳಿ ತನ್ನ ಬೆರಳ ತೋರಲೇಕೆ?
 
ಅವಳ ನೆರಳು ನಿಮ್ಮ ಮೇಲೆ, ನನ್ನರಸ ಬೇಡ ಜೋಕೆ
ಎಂದೆನ್ನ ಕೆನ್ನೆ ನನ್ನರಸಿ ಚಿವುಟಲೇಕೇ?
 
ಇವಳೇಕೋ ಮೌನಿಯಾಗಿ, ಅವಳಿಗೂ ತಿಳಿಯದಾಗಿ
ಕಣ್ಣೆಂಜಲು ಬಿದ್ದಿವರ ಮಾತು ನಿಲ್ಲ ಬೇಕೇ?
 
ನಮ್ಮವರೇ ಚಂದವೋ ನಿಮ್ಮವರೇ ಚಂದವೋ
ಎಂದು ಪಕ್ಕದವಳ ಕೇಳುತ ಮುನಿಯಲೇಕೆ?
 
ನೀನೇ ನನ್ನ ಮಲ್ಲಿಗೆ, ಅವಳೋ ಕೆಂಪು ಸಂಪಿಗೆ
ಅನ್ನಲು, ನನ್ನರಸ ಸುಮ್ಮನಿರಿ ಅನ್ನಬೇಕೆ.
 
ರಚನೆ: ಡಾ. ಪ್ರಭಾಕರ್ ಬೆಲವಾಡಿ
(ಕೆ.ಎಸ್.ಏನ್. ಅವರಿಗೆ ನಮಿಸುತ್ತಾ)
 
Sent from Mail for Windows
 






- ಡಾ. ಪ್ರಭಾಕರ್ ಬೆಲವಾಡಿ

14 Jan 2022, 06:59 pm

ಪ್ರೇಮಿಯ ಕಲ್ಪನೇ

ನಿನ್ನನ್ನು ನೋಡದೆ...
ನಿನ್ನ ಅಂದ ಚೆಂದ ವೈಯಾರವನ್ನು ಬಿಡಿಸಬಲ್ಲೆನು...
ನಿನ್ನನ್ನು ಕೇಳದೇ...
ನಿನ್ನ ನೋವು ಏನೆಂದು ಹೇಳಬಲ್ಲೆನು...
ಕೇಳಬೇಡ ಗೆಳತಿ ನನ್ನ ಪ್ರೀತಿಗೆ ಇಂತಹ ಶಕ್ತಿ ಇದೆಯಂದು...
ನಿನಗೆ ಅಳು ಬಂದರೇ...
ನಿನ್ನ ಕಣ್ಣೀರನ್ನು ನನ್ನ ಕಣ್ಣಲ್ಲಿ ಭರಿಸಬಲ್ಲೆನು...
ಎಲ್ಲಿರುವೆ ಪ್ರೇಯಸಿ ಬೇಗ ಬಂದು ಸೇರು ನನ್ನನ್ನೂ....

- prashant

12 Jan 2022, 05:55 am

" ಪ್ರೀತಿಯ ದೋಣಿ "

ಪ್ರೀತಿ ಹುಟ್ಪಿತ್ತು ನನಗೆ ಅವಳ ಮೇಲೆ
ಪ್ರೀತಿಯಿಲ್ಲವೆಂದು ಹೇಳಿದ್ದಳು ನನ್ನ ಮೇಲೆ..!
ಶುರುವಾಗಿತ್ತು ನಮ್ಮಿಬ್ಬರ ಒಡನಾಟ
ಹೆಚ್ಚಾಗುತ್ತಿತ್ತು ನನ್ನ ಪ್ರೀತಿಯ ಹುಚ್ಚಾಟ..!
ಹುಟ್ಟಿತ್ತು ಪ್ರೀತಿ ಅವಳಿಗೂ ನನ್ನ ಮೇಲೆ
ಜೊತೆಯಾಗಿರುವ ಆಣೆ ಮಾಡಿದಳು
ಪ್ರೀತಿಯ ಮೇಲೆ...!
ತುಂಬಾ ಸಂತೋಷದಿಂದ ಇದ್ದೆವು
ಎರಡು ದೇಹ ಒಂದು ಜೀವದಂತೆ,
ದಿನ ಕಳೆದಂತೆಲ್ಲಾ, ತೋರಿದ ಪ್ರೀತಿ,
ಕಾಳಜಿಯನ್ನು ಅನುಮಾನಿಸಿದಳು
ಅಮ್ರತದಲ್ಲಿ ವಿಷ ಹಾಕಿದಂತೆ.....!
ಎಮ್.ಎಸ್.ಭೋವಿ.....✍️

- mani_s_bhovi

11 Jan 2022, 10:09 pm

ಕಾಯಕ

ಓ ಮೂಢ
ದೇವಾಲಯದಲ್ಲಿ
ನಿನ್ನ ಕಿವಿ ಮುಡಿಗೆ ಇಟ್ಟ
ಹೂವಿನ ಎಸಳೇ
ನಿನಗೆ ಮುತ್ತಿನ ಹಾರ
ಬಂಗಾರದ ಕಿರೀಟವಾದರೆ

ನನಗೆ ನನ್ನ
ಹೆತ್ತವರ ಪ್ರೀತಿಯೇ
ನನಗೆ ಮುತ್ತಿನ ಹಾರ
ಬಂಗಾರದ ಕಿರೀಟ

ದೇವರ ಗುಡಿಯಲ್ಲಿ ಕೊಡುವ
ತೆಂಗಿನ ಕಾಯಿ ಚಿಪ್ಪೇ
ನಿನಗೆ ಪ್ರಸಾದವಾದರೆ

ನನ್ನ ಹಡೆದವಳು
ನನ್ನಗೆ ಕೊಟ್ಟ
ಕೈ ತುತ್ತಿನ ಅನ್ನವೇ
ನನಗೆ ಪಂಚಾಮೃತ

ಓ ಮೂಢ
ದೇವರು ದೇವರೆಂದು
ಓಡಾಡಿ ಸುತ್ತಾಡಿ
ಉರುಳಾಡಿ ಉರುಳು
ಸೇವೆ ಮಾಡಿದರೂ
ವ್ರಥ ಜಪ ಮಾಡಿ
ಉಪವಾಸ ಬಿದ್ದರು
ವರವ ಕೊಡುವುದು ಇಲ್ಲವೋ
ಯಾರು ಬಲ್ಲವರುಂಟು

ನಾ ಯಾವ ದೇವರ
ಗುಡಿಗು ಓಡುವುದಿಲ್ಲ
ಸುತ್ತುವುದಿಲ್ಲ ಉರುಳಾಡಿ
ಉಪವಾಸ ಮಾಡುವುದಿಲ್ಲ
ನನ್ನ ಎದೆಯ ದೇವರು
ನನ್ನ ಹಡೆದವರು ಅವರಿರುವ
ಜಾಗವೇ ನನ್ನ ದೇವಾಲಯ
ಅವರ ಪ್ರೀತಿ ಮಮತೆಯೆ
ನನಗೆ ಮುತ್ತಿನ ಹಾರ ವರ

ಕಲ್ಲು ಕಂಬದ ದೇವರಿಗೆ
ಕೈ ಮುಗಿದು ನಿಲ್ಲುವ
ಗುಲಾಮ ನಾ ಅಲ್ಲ
ನನ್ನ ಹಡೆದವರ
ಸೇವೆ ಮಾಡುವ ಸೇವಕ ನಾ
ನನ್ನ ಹಡೆದವರ ಸೇವೆಯೇ
ನನ್ನ ನಿರಂತರ ಕಾಯಕ





- ರಾಜು ಹಾಸನ

08 Jan 2022, 10:59 pm

ಕಂದಾಚಾರ

ಖರ್ಚು ವೆಚ್ಚವಿರುವ
ಬದುಕಿನ ಬಂಡಿ ಇರುವ
ಮನುಷ್ಯನಿಗೆ ಇಲ್ಲದ ಹುಂಡಿ
ಖರ್ಚು ವೆಚ್ಚವೇ ಇಲ್ಲದ
ಬದುಕಿನ ಬಂಡಿಯೇ ಇಲ್ಲದ
ದೇವರಿಗೆ ಏಕೆ ಬೇಕು
ದೇವರು ಹುಂಡಿ ಹುಂಡಿ

ತಿನ್ನದ ದೇವರಿಗೆ
ಹಣ್ಣು ತುಪ್ಪದ ಗೋಪುರ
ತಿನ್ನುವ ಮಾನವನ ಕೈಗೆ
ತೆಂಗಿನ ಕಾಯಿ ಚಿಪ್ಪು

ದೇವರು ಇರಲಿ
ದೇವಾಲಯವಿರಲಿ
ಶಾಂತಿಯ ತಾಣವಾಗಿರಲಿ
ಕಂದಾಚಾರದ
ಕಂದಕವಾಗದಿರಲಿ







- ರಾಜು ಹಾಸನ

06 Jan 2022, 11:50 pm

ಶಿಕ್ಷಣ

ದೇವರು ದೇವರೆಂದು
ದೇವರ ದೇವಲಾಯಕೆ
ಹೋದವನು ಮೂಢನಾದ

ಓದು ಬರಹವೆಂದು
ಶಾಲೆಗೆ ಹೋದವನು
ಜಾಣನಾದ ಜ್ಞಾನಿಯಾದ

ಮಂತ್ರ ತಂತ್ರ ಕಲಿತವನು
ಪರಾವಲಂಬಿಯಾಗುವನು
ಓದು ಬರಹ ಕಲಿತವನು
ಸ್ವಾವಲಂಬಿಯಾಗುವನು


ಮಂತ್ರ ತಂತ್ರ ತಲೆಯ ಕೆಡಿಸಿತು
ಮನೆಯ ಸುಟ್ಟಿತು
ಓದು ಬರಹ ತಲೆಯ ಜ್ಞಾನ ಹೆಚ್ಚಿಸಿತ್ತು
ಮನೆಯ ಬೆಳಗಿಸಿತು

- ರಾಜು ಹಾಸನ

06 Jan 2022, 11:26 pm

ಪ್ರೀತಿಯ ಗೆಳತಿ

ಕಾಯುತ್ತೀರುವೆ ನಾ ನಿನ್ನ ದಾರಿ
ಎದುರಿಗೆ ಬಾ ನೀನು ಒಂದು ಸಾರಿ
ನೋಡಿದರು ನೋಡದಂಗೆ ಇರುವೆ1
ನೀ ಎಷ್ಟು ಕ್ರೂರಿ
ನಿನ್ನ ಹಿಂದೆ ಬಿದ್ದು ಹಾಳಾಯಿತು ನನ್ನ ದಾರಿ

ಶಿವರಾಜ್ ಬುನ್ನಟ್ಟಿ

- ಶಿವರಾಜ ಬುನ್ನಟ್ಟಿ

31 Dec 2021, 11:39 pm

ಚಿಂತಿಸಿ ಯೋಚಿಸಿ

ಪೂಜೆ ಪುನಸ್ಕಾರ ಇಲ್ಲವೆಂದು
ಅಳುವುದಿಲ್ಲ ಕಲ್ಲು ಬಂಡೆಯ ದೇವರು
ಒಂದು ಹೊತ್ತು ಕೂಳು ಇಲ್ಲದಿದ್ದರೆ
ಅಳುವುದು ಒಡಲ ಚೀಲ

ಹಣ್ಣು ಕಾಯಿ ನೈವೇದ್ಯ ಇಲ್ಲದಿದ್ದರೂ
ಸಾಯುವುದಿಲ್ಲ ದೇವರು
ಮೂರು ಹೊತ್ತು
ದೇವರ ಉಪವಾಸವೆಂದು
ಉಪವಾಸಬಿದ್ದರೆ
ಬಾಳಲಿ ಸಾಯುವುದು
ಬಡಪಾಯಿ ಮನುಜನ ಜೀವ

ಹುಂಡಿ ಇಲ್ಲದಿದ್ದರೂ
ನೆಡೆಯುವುದು ದೇವರ ಜಾತ್ರೆ
ದುಡ್ಡಿಲ್ಲದಿದ್ದರೆ ನೆಡೆಯುವುದಿಲ್ಲ
ಮಾನವನ ಶವ ಯಾತ್ರೆ


- ರಾಜು ಹಾಸನ

31 Dec 2021, 11:34 pm

ದೇವರು

ನಾ ಹುಟ್ಟಿ
ನಾ ಸಾಯುವ
ದಿನಗಳು
ಹತ್ತಿರ ಬಂದರು
ನಾ ಕಾಣಲಿಲ್ಲ
ನನ್ನ ನೋವು ನಲಿವು
ಸುಖ ದುಃಖಗಳಲ್ಲಿ
ಒಂದೆ ಒಂದು ದೇವರು
ಆದರೆ
ನನ್ನ ಪ್ರತಿಯೊಂದು
ಸುಖ ದುಃಖ
ನೋವು ನಲಿವಿನಲ್ಲಿ
ನಾ ಕಂಡಿದ್ದು
ನನ್ನ ಹೆತ್ತವರು
ಎಂದಮೇಲೆ
ನಾ ಪೂಜಿಸುವ ದೇವರು
ನನ್ನ ಹೆತ್ತವರೇ
ಅಲ್ಲವೇ ಅಲ್ಲವೇ

ಈ ಪ್ರಪಂಚದಲ್ಲಿ
ಯಾರೇ ಏನೇ ಹೇಳಿದರೂ
ಏನೇ ಪೂಜಿಸಿದರು
ನಾ ಪೂಜಿಸುವ ದೇವರು
ತಂದೆ ತಾಯಿಯೇ ದೇವರು
ಈ ಪ್ರಪಂಚದಲ್ಲಿ
ತಂದೆ ತಾಯಿಗಳಿಗಿಂತ
ಮಿಗಿಲಾದ ದೇವರಿಲ್ಲ

- ರಾಜು ಹಾಸನ

31 Dec 2021, 12:33 am