ಜೀವಕಿಷ್ಟು ಪೂರ್ಣತೆ
ತಿಳಿದು ಅರಿಯೆ ಜೀವಿಸುವ ಅರ್ಥ
ಹುಟ್ಟಿಗೊಂದು ಸಾವಿಗೊಂದು ಅರ್ಥ
ಹುಟ್ಟಿಗೆ ಸಂತಸ ಖುಷಿಪಡುವ ಅರ್ಥ
ಸಾವಿಗೆ ದುಃಖ ಪಡುವ ನಾವೆಲ್ಲಾ
ಸಾವು ಹುಟ್ಟುವ ಮೊದಲೇ
ಬದುಕಿಗೆ ಅರ್ಥಜೀವನದ ಮೌಲ್ಯವೇ
ಅರ್ಥಗರ್ಭಿತ ಮೌಲ್ಯದ ಜೀವ ಕೃತಜ್ಞತೆ ಬದುಕುವ ಅವಕಾಶ.
@ಮಲ್ಲಿಕಾರ್ಜುನ ಸೊನ್ನದ
ಭೂ ತಾಯಿ ಋಣವ
ತೀರಿಸಲಾಗದೆದೆಂದೂ
ಭೂ ತಾಯಿ ಕೊಟ್ಟಳು ಸಾಕಷ್ಟು
ಅಂದು ಇಂದು
ಆದರೆ ನಾವೇನು ಕೊಟ್ಟೆವು
ಭೂ ತಾಯಿಗೆ ಇಂದು
ಆದರೂ ಸಹ ಭೂ ತಾಯಿ ನಮ್ಮನು ಕಾಪಾಡುವಳು
ಅಂದು ಇಂದು
ನಮ್ಮ ತಾಯಿಯನ್ನು
ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಿಂದು
ಹೇ ಎಲೆ ಮಾನವ ಇನ್ನೇನು ಬೇಕು
ನನ್ನ ಭೂ ತಾಯಿಯಿಂದ ಇಂದು
ನಗು ಮುಖದ ಸರದಾರ ನೀ
ನಿನ್ನ ನಗುವಿಗೆ ಸರಿಸಾಟಿಯಾದ ನಗು ಎಲ್ಲಿಹುದು
ನಿನ್ನ ಗೆಳೆತನಕ್ಕೆ ಏನೆಂದು ಹೆಸರಿಡಲಿ ನಾ
ನಿನ್ನ ನಿಷ್ಕಲ್ಮಶವಾದ ಪ್ರೀತಿನಾ ಏನೆಂದು ಬಣ್ಣಿಸಲಿ ನಾ
ಯಾವ ಜನುಮದ ಅಣ್ಣನೋ ತಮ್ಮನೋ ಗೆಳೆಯನೋ ಅರಿವಿಲ್ಲ
ಆದರೆ ಈ ಜನುಮದ ಮುದ್ದಾದ ಮನಸ್ಸು ನೀ
ನಿನ್ನನ್ನು ಏನೆಂದು ಬಣ್ಣಿಸಲಿ ನಾ
ಪದಗಳೇ ಸಿಗುತ್ತಿಲ್ಲ
ಬಣ್ಣಿಸಲು ಹೋದರೆ ಪದಗಳೇ ನಾಚುತಿಯಲ್ಲ
ಅಂತಹ ಅದ್ಭುತವಾದ ಜೀವ ನೀ
ಪ್ರೀತಿಸದೇ ಇದ್ದರೆ
ಭಾವನೆ ಹುಟ್ಟುವುದಿಲ್ಲ
ಪ್ರೀತಿಸದೇ ಇದ್ದರೆ
ತುಡಿತಕ್ಕೆ ಮನಮಿಡಿಯುತ್ತಿರಲಿಲ್ಲ
ಪ್ರೀತಿಸದೇ ಇದ್ದರೆ
ಬದುಕಿಗೆ ಬೆಳಕಿರುತ್ತಿಲಿಲ್ಲ
ಪ್ರೀತಿಸದೇ ಇದ್ದರೆ
ಬಯಕೆ ಭಾವ ತುಂಬಿಸುತ್ತಿರಲಿಲ್ಲ
ಪ್ರೀತಿಸದೇ ಇದ್ದರೆ
ಮನದ ಕಣ್ಣು ತುಂಬುತ್ತಿರಲಿಲ್ಲ
ಪ್ರೀತಿಸದೇ ಇದ್ದರೆ
ಬದುಕಿಗೆ ಅರ್ಥವಿರುತ್ತಿರಲಿಲ್ಲ
@ಮಲ್ಲಿಕಾರ್ಜುನ ಸೊನ್ನದ
ನೋವು ನುಂಗಿ ಸಾವು ಕಾಣು
ಸಾವಿಗಾಗಿ ಬದುಕಿತ್ತೀರುವೆ
ಹುಟ್ಟು ನೋವಿಗೆ ಸಾವಿದೆ
ಸಾವಿನ ಬದುಕಿಗೆ ನೋವಿದೆ
ಈ ನೋವು ಸಾವಿಗಾಗಿ
ಈ ಸಾವು ನೋವಿಗಾಗಿ
ಹುಟ್ಟು ಸಂಭ್ರಮಿಸು
ಸಾವು ನೋವು ಸ್ವಾಗತಿಸು
ಬದುಕುನೊಪ್ಪಿದ ನೋವು
ಸಾವು ಕಾಣದಂತ ನೋವು
ಸತ್ತು ಮಲಗಿದ ಶವ ನೀನಲ್ಲ
ಬದುಕಿತೋರಿದ್ದು ನಾನಲ್ಲ
ನೋವು ಕೊಟ್ಟೆ ಸಾವು ನನ್ನದೇ
ಸಾಯಿಸಿ ಬಿಟ್ಟೆ ನೋವಿಟ್ಟು ನೀನೇ
ನೀನು ದೂರ ಸರಿದು ಸುರಿಕೊಂಡೆ
ನೋವಿರುವ ಗಂಟು ಕಟ್ಟಲು
ಸಾವು ಬರುವ ತನಕ ಬದಲಾಗದು
ನಿಮ್ಮ ಹುಟ್ಟು ಗುಣ ಉಂಡು ತೆಗಿಗುವ
ಅನ್ಯರ ಅನ್ನ ಎಂಜಲು ಬಲು ರುಚಿ
ನೋವಿನ ಋಣ ಕಾಣುವ
ಸಾವಿನ ಮಣ್ಣಾಗು ತನಕ
ನಾವೇ ತಂದು ಕೊಳ್ಳುವ
ನೋವಿನ ಸಾವು
#ಮಲ್ಲಿಕಾರ್ಜುನ ಸೊನ್ನದ
ಸಾವಿಗಾಗಿ ಬರೀ ಯೋಚನೆಗಳಲ್ಲೇ ಕಳೆಯಬೇಡಿ
ನೋವು ನುಂಗಿ ಬದುಕಿರುವುದು ಕಳೆದುಕೊಳ್ಳಬೇಡಿ
ಸಾವು ಕಾಣುವ ತವಕ ಯಾರಿಗಿಲ್ಲ ನೋವು ತರುವ ಮನಸ್ಸಿನೊಳಗೆ ಹುಳುಕಿರುವವು ಮನದ ಹೀನತೆ ಕಾಣುವುದಿಲ್ಲ ಎನ್ನುವ ಭ್ರಮೆ ಕನಸಿನಲ್ಲಿಕೂಡಾ
ಸಾವಿನಲ್ಲಿ ಹೊರಗಣ್ಷಿಲ್ಲ ಎನ್ನುವ ಭ್ರಮೆ ಸಾವಿನಲ್ಲಿ
ಒಳಗಿನ ಹುಳುಕು ನೋವಿನಲ್ಲಿ ಕಾಣಬಹುದು ಸಾವು ಬೆಂಬಿಡದ ನೋವಿನಲ್ಲಿ ಪ್ರತಿಕ್ಷಣ ನುಂಗಬಹುದು ನೋವಿನಲ್ಲೊ ಪಾಪಪ್ರಜ್ಞೆ ಕಾಡುವ ಸಾವಿದೆ
ಸಾವಿನಲ್ಲೋ ಅಂತ್ಯ ನೋವಿನೊಳಗೆ ಸಾವಿದೆ. @ಮಲ್ಲಿಕಾರ್ಜುನ ಸೊನ್ನದ
ಜೀವಕಿಷ್ಟು ಪೂರ್ಣತೆ
ತಿಳಿಯದೆ ಅರಿಯದೆ
ಜೀವಿಸುವ ಅರ್ಥ
ಹುಟ್ಟಿಗೊಂದು ಅರ್ಥ
ಸಾವಿಗೊಂದು ಅರ್ಥ
ಹುಟ್ಟಿಗೆ ಸಂತಸ ಅರ್ಥ
ಖುಷಿಪಡುವ ಅರ್ಥ
ಸಾವಿಗೆ ದುಃಖ ಪಡುವ
ನಾವೆಲ್ಲಾ ಅಪೂರ್ವತೆ
ಸಾವು ಹುಟ್ಟುವ
ಮೊದಲೇ ಬದುಕಿಗೆ ಅರ್ಥ
ಜೀವನದ ಮೌಲ್ಯವೇ
ಅರ್ಥಗರ್ಭಿತ ವೈಚಾರಿಕತೆ
@ಮಲ್ಲಿಕಾರ್ಜುನ ಸೊನ್ನದ
ಚೆನ್ನಮಲ್ಲಿಕಾರ್ಜುನ ಇಲ್ಲದ ಜಗವಿಲ್ಲ
ಹೆಣ್ಣು ತನ್ನೊಳಗೆ ಗೂಡು ಕಟ್ಟಿದ
ಮನಸಿಗೆ ಕತ್ತಲೆ ಚೆಲ್ಲುವ ಬೆಳಕಿನ ಬಾಳು
ಅಕ್ಕನೇ ಜಗದ ಪ್ರಕೃತಿ ಅಕ್ಕ
ನೀ ಜಗದ ಕನಸು ಕಾಣು
ಚೆನ್ನ ಮಲ್ಲಿಕಾರ್ಜುನ ಸಂಗವೇ
ಪರಮಪೂಜ್ಯತೆ ಬದುಕುಳಿಯುವ
ಕಾಮ ಕ್ರೋಧ ಅನೀತಿ ಅಕ್ಕರೆಯ
ಭಕ್ತಿ ಅಕ್ಕರೆಯ ಶಕ್ತಿ ಭವಿಷ್ಯದ ಭಾವ
ಪ್ರದರ್ಶನ ವಲ್ಲ ಬದುಕಿ ದಾರಿ ಕಲಿಸಿದ್ದು
ಮರೆಯದೆ ಅಕ್ಕ ನಿರ್ಭಯಯಾಣದ
ಶಿಖರ ನೀ ಹೆಣ್ಣುಮಕ್ಕಳಿಗೆ ವಚನವಿತ್ತೇ
ಅಕ್ಕನ ಪ್ರವಚನ ಬದುಕು ಹಸಿವು ಬಾಯಾರಿಕೆ ಜೀವ ತನಿಸಿದೆ.@ಮಲ್ಲಿಕಾರ್ಜುನ ಸೊನ್ನದ