ಕೈ ಗೆ ಸಿಕ್ಕ ಚಿಟ್ಟೆ ಕೈಯಿಂದ
ಹಾರಿ ಹೋಗ ಬಾರದೆಂದು
ಅಂತ ಗಟ್ಟಿ ಯಾಗಿ ಹಿಡಿದರೆ
ಅದು ಅಂಗೈಯಲ್ಲೇ
ಪ್ರಾಣಬಿಡುತ್ತೆ
ತನ್ನ ಪಾಲಿನ ಪ್ರೀತಿ ತನ್ನಿಂದ
ದೂರಾಗ ಬಾರದೆಂದು
ಅಂತ ಅತಿ ಪ್ರೀತಿ ತೋರಿದರೆ
ಆ ಪ್ರೀತಿ ಹಿಂಸೆಯಾಗಿ
ತನ್ನಂತಾನೇ ಸತ್ತ ಹೋಗುತ್ತದೆ
ಚಿಟ್ಟೆಗೆ ಅತಿ ಬಂಧನ
ಉಸಿರು ನಿಲ್ಲಿಸುವುದು
ಪ್ರೀತಿಗೆ ಅತಿ ಸಲುಗೆ
ಉಸಿರು ಕಟ್ಟಿಸುವುದು
ಅತಿ ಯಾದರೆ ಅಮೃತವೂ
ವಿಷವಾಗುವುದಂತೆ
ಪ್ರೇಮಿಸುವ ಜೀವಕೆ
ಪ್ರೇಮಾಮೃತ ವಿಷವೆನಿಸುವುದೇ
ಚಿಟ್ಟೆಗೇನೋ ಮೊದಲೇ
ಆಯುಷ್ಯ ಕಡಿಮೆ
ಪ್ರೀತಿಯೇಕೆ ಕೊನೆಯಾಗೋದು
ಹೀಗೆ ಅರ್ಧದಲೇ?
@ಮಲ್ಲಿಕಾರ್ಜುನ ಸೊನ್ನದ
ಮೊದಲ ನೋಟದಲೇ
ಸೆಳೆದೆ ನೀನು
ಮೊದಲ ನಗುವಿನಲೇ
ಕಳೆದೋದೆ ನಾನು
ಬೆಚ್ಚನೆಯ ತೋಳ್ತೆಕ್ಕೆಯಲ್ಲಿ
ಕರಗಿಬಿಟ್ಟೆ
ಪ್ರೀತಿ ಬೆಳೆದಂತೆ
ಹುಚ್ಚಿಯಾಗಿಬಿಟ್ಟೆ
ನನಗಿನ್ನೂ ತಿಳಿಯುತಿಲ್ಲ
ಇದೆಂತಾ ಮಾಯೆಯೋ
ಅರೆಕ್ಷಣ ಬಿಟ್ಟಿರಲಾರದ
ಸೆಳೆತ ಜಗವನೇ ಮರೆಸುವೆ
ಪ್ರತಿನಿತ್ಯ ತನು,ಮನ,ಕಣದಲೂ
ಅಂಟಿಕೊಂಡ ಮೋಹ
ಗಾಳಿಗಿಂತಲೂ ತಣ್ಣನೆಯ
ಅನುಭವ
ಎಲ್ಲಾ ನೀನೇ ಎಂಬ ಭಾವ
ಆ ಭಾವದಲೇ ಮರೆಯುವೆನು ನೋವ
ಆತ್ಮಾತ್ಮಗಳೂ ಸೇರಿರುವ ಪ್ರೇಮವಿದು
ಒಂದು ಸಲ ನಿಜ ಹೇಳಿಬಿಡು.
@ಮಲ್ಲಿಕಾರ್ಜುನ ಸೊನ್ನದ
ಮನುಷ್ಯ ಒಳ್ಳೆಯ ದಾರಿಯಲ್ಲಿ
ನಡೆಯಲು ದೊಡ್ಡ ಅನುಭವ
ಮಹಾ ಪ್ರವಚನಗಳೇ ಬೇಕಿಲ್ಲ
ತನ್ನ ಬದಲಾವಣೆಗೆ ಚಿಕ್ಕದೊಂದು
ಸಂದರ್ಭ ಮಾತು ಸಿಕ್ಕಿದರೂ
ಬದಲಾಗುತ್ತಾನೆ ಮೂರ್ಖರು
ಎಂದೂ ಬದಲಾಗಲಾರರು
ಹಾಗಾಗಿ ಬುದ್ದಿವಂತರಿಗೆ
ಕೆಟ್ಟ ಅನುಭವ ಬೇಕಿಲ್ಲ
ಮೂರ್ಖರಿಗೆ ಹೇಳುವುದು
ತಿಳಿಯಲ್ಲ ಮಹಾರಾಜನಾದ
ಸಿದ್ದಾರ್ಥ ಬುದ್ಧನಾಗಲು
ನಾಲ್ಕು ನೋಟ ಸಾಕಾಯ್ತು
ಆದರೆ ಅಂತಹ ಶವ ರೋಗಿ
ಬಡವ ಇಂತಹವನ್ನು ದಿನಾ
ನೋಡುವ ನಾವ್ಯಾರು
ಬುದ್ಧನಾಗಿಲ್ಲ ಕೊನೆ ಪಕ್ಷ
ಯಾರಿಗೂ ವಂಚಿಸದೇ
ಮೋಸ ಮಾಡದೇ ಸಾರ್ಥಕ
ಬದುಕು ಸಾಗಿಸಿದರೆ ಸಾಕು
@ಮಲ್ಲಿಕಾರ್ಜುನ ಸೊನ್ನದ
ಪ್ರೀತಿಯ ಹೃದಯದ ಮೂಲೆಯಲ್ಲಿ
ಅವಿತಿರುವ ಭಾವನೆಗಳ ಒಡತಿ
ಒಂದೊಂದೇ ಪ್ರೀತಿಗೂ ಆಸೆಗಳು
ಹೂ ಅರಳುವಂತೆ
ಪ್ರೀತಿ ನಗುತಲೇ ಇರಲಿ ಅರಳಿ
ನಲಿಯುವ ಹೊಸತು
ಕನಸನ್ನು ಕಟ್ಟಿ ಪ್ರೀತಿಗೆ ಮನಸ್ಸಿದೆ
ಹೊಸೆಯುತಿರುವ ಮನದ ಬಯಕೆಗೆ
ನನಸಾಗಲೆಂದು ಮಾನದ ಪಿಸು ಮಾತಿದೆ
ಹರಡಿವೆ ಹರಕೆ ಹೊತ್ತು ಭಾವ ತುಂಬಿಸುವ
ಸಮಯದಲ್ಲಿಯೇ ಕವನದ ಪ್ರೀತಿ ಹಂಚಿಕೊಳ್ಳಲು
ಬರೆಯಲು ಈ ಮುಸ್ಸಂಜೆಯ ಕವನದಲ್ಲಿ ಮೌನದ ಪಿಸು ಮಾತು
@ಮಲ್ಲಿಕಾರ್ಜುನ ಸೊನ್ನದ
ನಿತ್ಯವೂ ಒಂದು ಹೋರಾಟ,.
ಬದುಕೆಂಬರಣರಂಗದಲ್ಲಿ ಭಾವನೆಗಳಹೋರಾಟ,.
ಬಣ್ಣ ಬಣ್ಣದ ಕನಸುಗಳ ಮಾರಾಟ,,,,
ಒಂದು ತುತ್ತು ಅನ್ನಕ್ಕಾಗಿ ಪರದಾಟ,,,.
ಇಟ್ಟ ಗುರಿ ತಲುಪಲು ಅಲೆದಾಟ,,,,.
ಪ್ರೀತಿ ದ್ವೇಷಗಳ ನಡುವೆ ಕಿತ್ತಾಟ,,,,
ಮದುವೆ ಮೋಹಗಳ ರಂಗಿನಾಟ,,,,
ಮಕ್ಕಳ ಪೋಷಣೆಗಾಗಿ ರಂಪಾಟ,,,,
ವಯಸ್ಸಾದ ಮೇಲೆ ಮಕ್ಕಳಂತೆ ಕಿರುಚಾಟ,,,
ಈ ಜೀವನವೇ ನಿತ್ಯವೂ ಒಂದು ಹೋರಾಟ,,,,,. ಸೋತರೂ ಗೆದ್ದರೂ ಸಾಗುತ್ತಿರಲಿ ಬದುಕಿನ ಆಟ,,.
@ಮಲ್ಲಿಕಾರ್ಜುನ ಸೊನ್ನದ
ಹೂವಿಗಿಂತ ಮಿಗಿಲಾದ ನಗು ನಿನ್ನದು
ಚಿನ್ನಕ್ಕಿಂತ ಅಸಲಾದ ಗುಣ ನಿನ್ನದು
ಮುತ್ತಿಗಿಂತ ಮಧುರವಾದ ಮಾತು ನಿನ್ನದು
ಚಂದಕ್ಕಿಂತ ಸೊಗಸಾದ ರೂಪ ನಿನ್ನದು
ಇದೆಲ್ಲವನ್ನು ಪ್ರೀತಿಸುವ ಹೃದಯ ನನ್ನದು
ಹೃದಯವನ್ನು ಪ್ರೀತಿಸುವ ಕರ್ತವ್ಯ ನಿನ್ನದು
ಆಕೆ ನನ್ನ ಮನದ ಮಹಾರಾಣಿ
ನಾ ಹೇಳಬೇಕಾಗಿಲ್ಲ ಅವಳಿಗೆ ಬುದ್ಧಿವಾಣಿ
ಪದೇ ಪದೇ ಅವಳೇ ಹೇಳ್ತಾಳೆ ಕಹಾನಿ
ಮುನಿದಾಗ ಆಕೆ ಆವೇಶದ ಅಗ್ನಿ
ಆದರೆ ಅವಳೇ ನನ್ನ ಮುದ್ದಿನ ಅರಗಿಣಿ
ನಿನ್ನ ಮೊಗದಲ್ಲಿ ಯಾವಾಗಲೂ
ನಗು ತುಂಬಿರಲಿ ಆ ನಗುವಿಗೆ
ಯಾವಾಗಲೂ ನಾ ಕಾರಣ ವಾಗಿರಲಿ.
@ಮಲ್ಲಿಕಾರ್ಜುನ ಸೊನ್ನದ