ಮೌನಕೆ ಸೆರೆಯಾದ
ಮಧುರ ಮಾತುಗಳ
ಅರ್ಥ ನಿನಗೆ ಹೇಳಲಿ
ನಾ ಹೇಗೆ..??
ಎದೆಯಾಳದ
ಬಡಿತದ ಆ ಸುಂದರ
ಭಾವನೆಗಳ ನಿನಗೆ ತಿಳಿಸಲಿ
ನಾ ಹೇಗೆ..??
ಕಣ್ಣುಗಳು ಕಟ್ಟಿದ
ಆ ಕನಸುಗಳ
ಕೋಟೆಯಲಿ
ನಿನ್ನನು ನಿನಗೆ ತೋರಿಸಲಿ
ನಾ ಹೇಗೆ..??
ಮನಸಿನ ನೋವನ್ನು
ನಿನ್ನ ನೆನಪಲ್ಲಿ
ಮರೆಯುತ
ನಗುತ ಮುಂದೆ ಸಾಗಲಿ
ನಾ ಹೇಗೆ..??
ಬದುಕು ಸುಂದರ ಉದ್ಯಾನವನದ ಹಾಗೆ. ಇಲ್ಲಿ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಮುಂತಾದ ಗಿಡಗಳಿವೆ. ಅದನ್ನು ನಾವು ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳು ವಿಶಾಲವಾಗಿರಬೇಕು. ಹಣವಿದ್ದರೆ ಫಲವಿಲ್ಲ, ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನು ಪ್ರೀತಿ ಎಂಬ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಹಣದೊಂದಿಗೆ ಅಂಟಿಕೊಂಡಿರುವ ದುರಂಹಕಾರ ನಮ್ಮನ್ನು ತಾಕದಂತೆ ಓಡಿಸಬೇಕು.
ಚೋರನಿಗೆ ಇತರರ ಧನ ಧಾನ್ಯದ ಆಸೆ
ಅಧಿಕಾರಿ ಗೇ ದರಿದ್ರ ಲಂಚದ ಆಸೆ
ರಾಜಕಾರಣಿಗೆ ಅದಿಕಾರದ ಜೊತೆಗೆ ಗಂಟ್ಟಿನ ಆಸೆ
ಹಸಿದ ಹೊಟ್ಟೆಗೆ ತುತ್ತು ಅನ್ನದ ಆಸೆ
ಈ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದು ಒಂದು ಆಸೆ
ಅದರೆ ಆ ಆಸೆಗೆ ಆಸೆ ಈ ನಿರಾಸೆ..
ಹುಟ್ಟಿನ ಜೊತೆಗೆ ಸಿಗುವುದು ಒಂದೇ ಈ ಆಸೆ ಜೊತೆಗೆ ನಿರಾಸೆ...
ಏಕೆ ಇಲ್ಲದ ಚಿಂತೆ
ಕೊನೆ ಮುಟ್ಟದ ರಗಳೆ?
ಅನಿಸಿ,
ತೆರೆ ಸರಿಸಲೆಣೆಸುತ್ತೇನೆ
ನಿನಗರ್ಥವಾಗದ
ನನ್ನತನವ
ತೊರೆಯಲೆತ್ನಿಸುತ್ತೇನೆ
ಭೂತದ ಛಾಯೆಯಡಿ,
ಭವಿತದ ಮಾಯೆಯ
ಹೊದರನೆಲ್ಲಾ ಮುದುರಿ,
ನಿನ್ನ
ವರ್ತಮಾನದ ಜತೆಗೆ
ನಡೆಯಲೆತ್ನಿಸುತ್ತೇನೆ
ಆಗ ನೀ
ವಿಚಿತ್ರವಾಗಿ ನೋಡುವೆ
ನಾ ಬೇಸರದಲಿ ನುಡಿವೆ
ಇದೆಲ್ಲ ನಿನಗರ್ಥವಾಗುವುದೇ ಇಲ್ಲಾ
ಮನದ ತುಂಬಾ
ಆವರಿಸಿದೆ
ಕಾರ್ಮೋಡ
ಎದೆಯೊಳಗೆ
ಹೇಳಲಾಗದ
ದುಗುಡ ಇಬ್ಬನಿ
ಕಳೆದ ಎಳೆಯ
ಚಿಗುರಿನಲಿ
ಹೊಸ ರಾಗ
ಮಿಡಿದ ಸುಳಿವಲಿ
ಮರೆತು ಹೋದ
ಮಾತೊಂದು
ಮಂಜಾಗಿ ಇಳಿದಿದೆ
ಗರಿಕೆಯಂಚಲಿ
ಹಿತವಾಗಿ ಬೀಸುತ್ತಿರುವ
ಗಾಳಿಯಲಿ
ಕಲಕುತ್ತಿದೆ ಏಕಾಂತವು
ಮೌನದ ಮರೆಯಲಿ
ಹೆಪ್ಪುಗಟ್ಟಿದ
ಬೇಸರವ ಕಂಡು
ಕರೆ ಕೊಟ್ಟಿದೆ
ತುಂತುರು ಹನಿ
ನೇಸರನ ಜೊತೆ ಸೇರಿ
ನಲಿವಿನಲಿ
ಜಗದ ನಿಯಮ
ಯಾವುದು ಇಲ್ಲಿ
ಇರುವುದಿಲ್ಲ
ನಿಯಮ ಮೀರಿ
ಎಲ್ಲರೂ
ಇರುವವರು
ಇಲ್ಲಿ ಎಲ್ಲವನ್ನು
ತಿಳಿದುಕೊಳ್ಳುವ
ಅವಶ್ಯಕತೆ ಇಲ್ಲ
ಎಲ್ಲರಿಗೂ
ಎಲ್ಲದಕ್ಕೂ
ಪ್ರತಿಕ್ರಿಯಿಸುವ
ಅವಶ್ಯಕತೆ ಇಲ್ಲ
ಎಲ್ಲರನ್ನು
ಮೆಚ್ಚಿಸುವ
ಅವಶ್ಯಕತೆ ಇಲ್ಲ
ಎಲ್ಲರನ್ನು
ಅರ್ಥಮಾಡಿಕೊಳ್ಳುವ
ಅವಶ್ಯಕತೆ ಇಲ್ಲ
ಎಲ್ಲರಿಗಾಗಿಯೂ
ಕಾಯುವ
ಅವಶ್ಯಕತೆ ಇಲ್ಲ
ಸಿಂಪತಿಗಾಗಿ ಬದುಕುವ ಮನುಷ್ಯ ನಾನಲ್ಲ
ಬದುಕಿಗಾಗಿ ಬುದುಕುವ ಮನುಷ್ಯ ನಾ
ಶ್ರೀಮಂತಿಕೆಗಾಗಿ ದುಡಿಯುವ ಮನುಷ್ಯ ನಾನಲ್ಲ
ಜೀವನಕ್ಕಾಗಿ ದುಡಿಯುವ ಮನುಷ್ಯ ನಾ
ಆಸೆಯಿದೆ ಅತಿಯಾಸೆ ಪಡುವ ಮನುಷ್ಯ ನಾನಲ್ಲ
ಹಾಸಿಗೆ ಇದ್ದಷ್ಟು ಕಾಲ್ ಚಾಚುವ ಮನುಷ್ಯ ನಾ
ನೀರಾಭಿಮಾನಕ್ಕೆ ತಲೆ ಬಾಗುವ ಮನುಷ್ಯ ನಾನಲ್ಲ
ಸ್ವಾಭಿಮಾನಕ್ಕೆ ತಲೆಬಾಗುವ ಮನುಷ್ಯ ನಾ